ವಿಜಯಪುರ ನಗರದ ಆದರ್ಶ ನಗರದಲ್ಲಿ ಕನೇರಿ ಮಠದ ಆರೋಗ್ಯ ವರ್ಧಕ ಔಷಧಿ ಉಚಿತವಾಗಿ ವಿತರಣೆ

ವಿಜಯಪುರ: ಕೊರೊನಾ ಸೋಂಕಿನ ವಿರುದ್ಧ ಮುನ್ನೆಚ್ಚರಿಕೆ ವಹಿಸಲು ಮತ್ತು ಆರೋಗ್ಯ ವರ್ಧಿಸಲು ಮಹಾರಾಷ್ಟ್ರದ ಕೊಲ್ಹಾಪುರದ ಕನೇರಿ ಮಠದ ಶ್ರೀ ಅದೃಷ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ನೀಡಿರುವ ಆರೋಗ್ಯ ವರ್ಧಕ ಔಷಧಿಯ ವಿತರಣೆ ಕಾರ್ಯ ವಿಜಯಪುರ ಜಿಲ್ಲೆಯಲ್ಲಿ ಮುಂದುವರೆದಿದೆ. ವಿಜಯಪುರ ನಗರದ ಆದರ್ಶ ನಗರದಲ್ಲಿರುವ ಶ್ರೀ ಹನುಮಾನ ಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ಆರ್ ಎಸ್ ಎಸ್ ಮುಖಂಡ ಚಂದ್ರಶೇಖರ ಕವಟಗಿ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿತ ಸದಸ್ಯರಾದ […]

ಭಕ್ತರಿಂದ ಲಾಕಡೌನ್ ಉಲ್ಲಂಘಿಸಿ ಅತಿರೇಕ- ಪೊಲೀಸರಿಂದ ಹೊಳೆಬಬಲಾದಿ ಸದಾಶಿವ ಮಠಕ್ಕೆ ಪೊಲೀಸ್ ಕಾವಲು

ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಸದಾಶಿವ ಮುತ್ಯಾನ ಮಠಕ್ಕೆ ಪೊಲೀಸ್ ಕಾವಲು ಹಾಕಲಾಗಿದೆ. ಮಠದ ಹೊರ ಆವರಣದಲ್ಲಿ ಬಿಗೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಭಕ್ತರ ಅತಿರೇಕ ಜಿಲ್ಲಾಡಳಿತ ಈ ನಿರ್ಧಾರಕ್ಕೆ ಕಾರಣವಾಗಿದೆ. ಘಟನೆಯ ಹಿನ್ನೆಲೆ: ವಿಜಯಪುರ ಜಿಲ್ಲೆಯ ಹೊಳೆ ಬಬಲಾದಿ ಸದಾಶಿವ ಮಠಾಧೀಶ ಮತ್ತು ಕಾರ್ಣಿಕರು ನುಡಿಯುವ ಭವಿಷ್ಯ ನಿಖರವಷ್ಟೇ ಅಲ್ಲ, ಇಲ್ಲಿನ ಭಕ್ತರಿಗೆ ವೇದವಾಕ್ಯವಿದ್ದಂತೆ. ಕೊರೊನಾ ಕುರಿತು ಕಾರ್ಣಿಕ ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ನುಡಿದ ಭವಿಷ್ಯ ಮತ್ತೆ ನಿಜವಾಗಿತ್ತು. ಈ ಹಿನ್ನೆಲೆಯಲ್ಲಿ ಭಕ್ತರ […]

ಪಿ ಮತ್ತು ಕೆ ರಸಗೊಬ್ಬರಗಳ ಎನ್ ಬಿ ಎಸ್ ದರ ಪರಿಷ್ಕರಣೆ- ಈಗ ನಿಗದಿಯಾದ ಬೆಲೆ ಎಷ್ಟು ಗೊತ್ತಾ?

ವಿಜಯಪುರ: ಕೇಂದ್ರ ಸರಕಾರವು ಮೇ 20 ರಂದು ಹೊರಡಿಸಿರುವ ಸೂಚನೆಗೆ ಅನುಗುಣವಾಗಿ ಪಿ ಮತ್ತು ಕೆ ರಸಗೊಬ್ಬರಗಳಎನ್ ಬಿ ಎಸ್) ದರಗಳನ್ನು ಪರಿಷ್ಕರಿಸಲಾಗಿದೆ ಎಂದು ವಿಜಯಪುರ ಪಿ. ಸುನೀಲ ಕುಮಾರ ತಿಳಿಸಿದ್ದಾರೆ. ಎಲ್ಲ ರಸಗೊಬ್ಬರ ಕಂಪನಿಗಳ ಡಿಎಪಿ ಮತ್ತು ಎನ್ ಪಿ ಮತ್ತು ಎನ್ ಪಿ ಕೆ ರಸಗೊಬ್ಬರಗಳ ದರಗಳು ಈ ಕೆಳಗಿನಂತಿವೆ. ಪ್ರತಿ ಚೀಲದ ಹೊಸ ದರ ಈ ರೀತಿ ಇದೆ. ನೀಮ್ ಕೋಟೆಡ್ ಯೂರಿಯಾ(45 ಕೆಜಿಬ್ಯಾಗ) ರೂ. 266 ರೂ. ಡಿಎ.ಪಿ- ರೂ. 1200 […]

18 ರಿಂದ 45 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರನ್ನು ಗುರುತಿಸಿ ಒಂದು ವಾರದೊಳಗೆ ಲಸಿಕೆ ನೀಡಿ- ಪಿ. ಸುನೀಲ ಕುಮಾರ ಸೂಚನೆ

ವಿಜಯಪುರ :ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 18 ರಿಂದ 45 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರನ್ನು ಗುರುತಿಸಬೇಕು. ಅದರಂತೆ 45 ವರ್ಷ ಮೇಲ್ಪಟ್ಟವರಿಗೂ ಒಂದು ವಾರದಲ್ಲಿ ಗುರುತಿಸಿ ಕೋವ್ಯಾಕ್ಸಿನ್ ಎರಡನೇ ಲಸಿಕೆ ನೀಡಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಸೂಚಿಸಿದ್ದಾರೆ. ವಿಜಯಪುರ ಜಿ. ಪಂ.‌ ಸಭಾಂಗಣದಲ್ಲಿ ಜಿಲ್ಲಾ ಮತ್ರು ತಾಲೂಕಯ ಮಟ್ಟದ ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಅವರು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಮೊಬೈಲ್) […]

ಜಿಲ್ಲಾವಾರು ಕೊರೊನಾ ಕೋವಿಡ್ ವಸ್ತುಸ್ಥಿತಿ ಆಧರಿಸಿ ಲಾಕಡೌನ್ ಸಡಿಲಿಕೆ ಬಗ್ಗೆ ಸಿಎಂ ನಿರ್ಧರಿಸುತ್ತಾರೆ- ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ: ಜಿಲ್ಲಾ ಮಟ್ಟದಲ್ಲಿ ಕೊರೊನಾ ಸೋಂಕಿನ ವಸ್ತುಸ್ಥಿತಿಯನ್ನು ಆದರಿಸಿ ಜೂ. 14ರ ನಂತರ ಯಾವ ರೀತಿ ಲಾಕಡೌನ್ ಸಡಿಲಿಕೆ ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಲಿರುವ ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಮಹತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಲಾಕಡೌನ್ ಸಡಿಲಿಕೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಲಹೆ-ಸೂಚನೆಗಳು ಬರುತ್ತಿವೆ ಎಂದು […]

ಸಂಭವನೀಯ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಿದ್ಧತೆ ಕೈಗೊಳ್ಳಲು ವಿಜಯಪುರ ಜಿಲ್ಲಾಧಿಕಾರಿ ಸೂಚನೆ

ವಿಜಯಪುರ: ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ವರ್ಷದ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಮುಂದಿನ ದಿನಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿಗಳನ್ನು ನಿರ್ವಹಿಸಲು ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳಬೇಕು. ಕೃಷ್ಣ ಮತ್ತು ಭೀಮಾ ಹಾಗೂ ದೋಣಿ ನದಿಗಳ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳುವಂತೆ […]

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ:: ವಿಜಯಪುರ ಜಿಲ್ಲೆಯ ಮದಬಾವಿ – ಬುರಣಾಪುರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣ ಮೊದಲನೇ ಹಂತದ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಇಂದು ಪರಿಶೀಲನೆ ನಡೆಸಿದರು. ವಿಜಯಪುರ ನಗರದ ವಿಮಾನ ನಿಲ್ದಾಣದ ಮೊದಲನೇ ಹಂತದಲ್ಲಿ ರೂ. 95 ಕೋ. ಕಾಮಗಾರಿ ಕೈಗೊಳ್ಳಲಾಗಿದ್ದು, ಉತ್ತಮ ದರ್ಜೆಯಲ್ಲಿ ಮತ್ತು ವ್ಯವಸ್ಥಿತವಾಗಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು. ವಿಮಾನ ನಿಲ್ದಾಣದ ರನ್ ವೇ ಒಟ್ಟು 2650 ಮೀಟರ ಉದ್ದವಿದ್ದು, 280 ಮೀಟರ ಅಗಲವಿರುತ್ತದೆ. ಅದರಲ್ಲಿ 1800 ಮೀ. ಉದ್ದ 280 ಮೀ. […]

1800 ಜನ ಕೊರೊನಾ ವಾರಿಯರ್ಸ್ ಗಳಿಗೆ ಆಹಾರ ಕಿಟ್ ನೀಡಿ ಕಡು ಬಡುವರು, ನಿರ್ಗತಿಕರಿಗೂ ನೆರವಾಗುತ್ತಿರುವ ಶಾಸಕ

ವಿಜಯಪುರ: ಕೊರೊನಾ ಎರಡನೇ ಅಲೆ ಮತ್ತು ಲಾಕಡೌನ್ ನಿಂದಾಗಿ ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ, ಈ ಸೋಂಕು ತಡೆಯಲು ಕೊರೊನಾ ವಾರಿಯರ್ಸ್ ಗಳು ಹಗಲಿರುಳೂ ತಮ್ಮ ಜೀವ ಪಣಕ್ಕಿಟ್ಟು ಜನಸೇವೆ ಮಾಡುತ್ತಿದ್ದಾರೆ. ಇನ್ನು ಲಾಕಡೌನ್ ನಿಂದಾಗಿ ಕಡು ಬಡುವರು ಮತ್ತು ನಿರ್ಗತಿಕರು ದಿನದೂಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ 1800ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್ […]

ಗಣೇಶ ಮೂರ್ತಿ ವಿಸರ್ಜನೆ ಜಾಗದಲ್ಲಿ ಕುಡಿಯುವ ನೀರಿನ ಘಟಕಕ್ಕೆ ವಿರೋಧ-ಅಗೆಯಲಾದ ತಗ್ಗು ಮುಚ್ಚಿಸಿದ ಗಜಾನನ ಮಂಡಳಿಗಳು

ವಿಜಯಪುರ: ವಿಜಯಪುರ ನಗರದ ಐತಿಹಾಸಿಕ ತಾಜಬಾವಡಿ ಆವರಣದಲ್ಲಿ ಶುದ್ಧ ನೀರಿನ ಬೃಹತ್ ಘಟಕ ನಿರ್ಮಾಣಕ್ಕೆ ವಿಜಯಪುರ ಮಹಾನಗರ ಪಾಲಿಕೆ ಮುಂದಾಗಿದೆ. ಈ ಕಾಮಗಾರಿಯನ್ನು 15 ನೇ ಹಣಕಾಸು ನಿಧಿಯಲ್ಲಿ ನಗರ ನೀರು ಸರಬರಾಜು ಮಂಡಳಿಗೆ ಮಂಜೂರಾದ ರೂ. 1 ಕೋ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಜೂ. 2 ಆರಂಭವಾಗಿದ್ದ ಈ ಕಾಮಗಾರಿಗಾಗಿ ಘಟಕ ನಿರ್ಮಾಣಕ್ಕೆ ಗುಂಡಿಯನ್ನು ಅಗೆಯಲಾಗಿತ್ತು. ಈ ವಿಷಯ ತಿಳಿದ ನಾನಾ ಗಜಾನನ ಮಂಡಳಿಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ತಾಜಬಾವಡಿಗೆ ಗಮನಿಸಿ ಆಕ್ಷೇಪ ವ್ಯಕ್ತಪಡಿಸಿದರು. […]

ಲಾಕಡೌನ್ ಸಂದರ್ಭದಲ್ಲಿ ಆಹಾರ ವಿತರಣೆ- ಪರಿಸರ ದಿನ ನೀರಿನ ಟ್ಯಾಂಕರ್ ಕೊಡುಗೆ- ಗಜಾನನ ಮಹಾಮಂಡಳದ ಸಮಾಜಮುಖಿ ಕಾರ್ಯ

ವಿಜಯಪುರ: ಗಜಾನನ ಮಂಡಳಿಗಳು ಕೇವಲ ಗಣೇಶೋತ್ವಸ ಆಚರಣೆಗೆ ಸೀಮಿತವಾಗುತ್ತವೆ. ಆದರೆ, ಬಸವ ನಾಡಿನ ಈ ಗಜಾನನ ಮಹಾಮಂಡಳ ಮಾತ್ರ ಕೊರೊನಾ ಮತ್ತು ಲಾಕಡೌನ್ ಸಂದರ್ಭದಲ್ಲಿ ಆಹಾರ ವಿತರಣೆ ಮಾಡುವುದಲ್ಲದೇ ಈಗ ವಿಶ್ವ ಪರಿಸರ ದಿನಾಚರಣೆ ದಿನ ಮತ್ತೋಂದು ಮಹತ್ವದ ಕಾರ್ಯ ಮಾಡಿದೆ. ವಿಜಯಪುರ ನಗರದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 40 ದಿನಗಳಿಂದ ಹಸಿದ ಸಾವಿರಾರು ಹೊಟ್ಟೆಗಳಿಗೆ ಅನ್ನದಾನ ಮಾಡಿ ಹಸಿವು ನೀಗಿಸುವ ಕಾರ್ಯ ಮುಂದುವರೆದಿರುವ ಮಧ್ಯೆಯೇ ಈಗ ಸಸಿಗಳು ಮತ್ತು ಗಿಡಗಳ ಸಂರಕ್ಷಣೆಗೂ ಮುಂದಾಗಿದೆ. ಪರಿಸರ […]