ಕೊರೊನಾ ಲಸಿಕೆ: ಈಗ ಲಸಿಕೆ ಪಡೆಯಲು ಯಾರೆಲ್ಲ ಅರ್ಹರು- ವಿಜಯಪುರ ಡಿಸಿ ನೀಡಿದ ಸೂಚನೆ ಏನು ಗೊತ್ತಾ?

ವಿಜಯಪುರ: ಕೊರೊನಾ ಲಸಿಕೆ ನೀಡುವ ಕುರಿತಂತೆ ಇಲಾಖಾವಾರು ನೋಡಲ್ ಅಧಿಕಾರಿಗಳನ್ನು ನೇಮಿಕ ಮಾಡಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆದೇಶ ಹೊರಡಿಸಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯುವ ಕುರಿತಂತೆ ಪಟ್ಟಿ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆರ್ ಸಿ ಎಚ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಅಭಿಯಾನದಡಿ ನಾನಾ ಹಂತಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ, […]

ರೈತರು ಕೃಷಿ ಉತ್ಪನ್ನಗಳನ್ನು ಸಾಗಿಸಲು ನಿರ್ಬಂಧವಿಲ್ಲ- ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ರೈತರು ತಮ್ಮ ಕೃಷಿ ಬೆಳೆಗಳ ಮಾರಾಟ ಮತ್ತು ಸರಬರಾಜಿಗೆ ಯಾವುದೇ ನಿರ್ಬಂಧವಿಲ್ಲ. ರೈತರು ತರುವ ತರಕಾರಿ,ಹಣ್ಣು, ಕೃಷಿ ಬೆಳೆಗಳನ್ನು ವರ್ತಕರಿಂದ ವ್ಯಾಪಾರಸ್ಥರಿಗೆ ಮಾರಾಟ ಮಾಡಲು ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸುವಂತೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೃಷಿ, ತೋಟಗಾರಿಕೆ, ಎಪಿಎಂಸಿ ಇಲಾಖೆ ಅಧಿಕಾರಿಗಳು ಹಾಗೂ ತರಕಾರಿ, ಹಣ್ಣು, ಲಿಂಬೆ ಹಣ್ಣು ವರ್ತಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರ ಪಾರಂಪರಿಕ ಕೃಷಿ ಬೆಳೆ ಸೇರಿದಂತೆ ಹಣ್ಣು, […]

ಬಸವ ನಾಡಿನಲ್ಲಿ ಉಚಿತವಾಗಿ ಬಡವರ ಹೊಟ್ಟೆ ತುಂಬಿಸುತ್ತಿರುವ ಇಂದಿರಾ ಕ್ಯಾಂಟಿನ್ ಗಳು

ವಿಜಯಪುರ: ರಾಜ್ಯಾದ್ಯಂತ ಈಗ ಕೊರೊನಾ ಎರಡನೇ ಅಲೆಯದ್ದೆ ಕಾಟ. ಹೀಗಾಗಿ ಮೂರನೇ ಈ ಅಲೆಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಲಾಕಡೌನ್ ವಿಸ್ತರಿಸಿದ್ದು, ನಾನಾ ವರ್ಗಗಳಿಗೆ ಪ್ಯಾಕೇಜ್ ಕೂಡ ಘೋಷಣೆ ಮಾಡಿದೆ. ಈ ಲಾಕಡೌನ್ ಸಂದರ್ಭದಲ್ಲಿ ಬಡವರು ಮತ್ತು ನಿರ್ಗತಿಕರಾರೂ ಉಪವಾಸದಿಂದ ಇರಬಾರದು ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಉಪಹಾರ ಮತ್ತು ಊಟ ನೀಡಲಾಗುತ್ತಿದೆ. ಈ ಇಂದಿರಾ ಕ್ಯಾಂಟಿನ್ ಗಳು ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಈಗ ಬಡವರ ಪಾಲಿಗೆ ಹೊಟ್ಟೆ ತುಂಬಿಸುವ ತಾಣಗಳಾಗಿವೆ. […]

ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣಕ್ಕೆ ಬೀಟ್ ಪೋಲಿಸರ ಭೇಟಿ ಹೆಚ್ಚಿಸಲು ಸಚಿವೆ ಜೊಲ್ಲೆ ಸೂಚನೆ

ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ‌ ಪೊಲೀಸ್ ಇಲಾಖೆಯ ಬೀಟ್ ಸಿಬ್ಬಂದಿಗಳು ನಿರಂತರ ಆಯಾ ಗ್ರಾಮದಲ್ಲಿ ಪರಿಶೀಲಿಸಬೇಕು. ಅಲ್ಲದೇ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆಗಳಿಗೆ ನೆರವಾಗುವಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಜಯಪುರದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕೊರೊನಾ ನಿಯಂತ್ರಣ ಕುರಿತು ಪರಿಶೀಲನೆ ಸಭೆ ನಡೆಸಿದ ಅವರು, […]

ಬಸವ ನಾಡಿನಲ್ಲಿ ಶ್ರೀ ಸಾಯಿ ಸೇವಾ ಸಮಿತಿಯಿಂದ ಸದ್ದಿಲ್ಲದೆ ನಡೆದಿದೆ ಕೊರೊನಾ ಸೋಂಕಿತರ ಸೇವೆ

ವಿಜಯಪುರ: ಬಸವ ನಾಡಿನಲ್ಲಿ ಸದ್ದಿಲ್ಲದೆ ಕೊರೊನಾ ರೋಗಿಗಳ ಸೇವೆ ಮಾಡುವ ಮೂಲಕ ಶ್ರೀ ಸಾಯಿ ಸೇವಾ ಸಮಿತಿ ಗಮನ ಸೆಳೆದಿದೆ. ಕೊರೊನಾ ಸಂಕಷ್ಟ ಸಮಯದಲ್ಲಿ ನಾನಾ ಸಂಘಟನೆಗಳು, ವ್ಯಕ್ತಿಗಳು ಹಲವಾರು ರೀತಿಯಲ್ಲಿ ತಮ್ಮದೇ ಆದ ಸಮಾಜ ಸೇವೆ ಮಾಡುತ್ತ ಜನಪರ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ಶ್ರೀ ಸಾಯಿ ಸೇವಾ ಸಮಿತಿ ಮಾತ್ರ ವಿನೂತನ ಕೊರೊನಾ ಸೋಂಕಿತರಿಗೆ ವಿಶೇಷ ಗಮನ ಹರಿಸುವ ಮೂಲಕ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಕಳೆದ ಒಂದು ವಾರದಿಂದ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ […]

ಸ್ವಾಮೀಜಿ ಆಡಿಯೋ ಅಪಾರ್ಥ ಮಾಡಿಕೊಂಡ ಜನ- ಮದ್ಯ ನೈವೇದ್ಯ ಅರ್ಪಿಸುವ ಹೆಸರಾಂತ ಮಠಕ್ಕೆ ಲಾಕಡೌನ್ ಮಧ್ಯೆ ಅಂಬಲಿಯೊಂದಿಗೆ ಗುಂಪಾಗಿ ಬಂದ ಭಕ್ತರು

ವಿಜಯಪುರ: ಇದು ಜನ ಮರಳೋ ಜಾತ್ರೆ ಮರಳೋ ಎಂಬುದಕ್ಕೆ ತಾಜಾ ಉದಾಹರಣೆ. ಜಾತ್ರೆಯ ಸಂದರ್ಭದಲ್ಲಿ ಮದ್ಯದ ನೈವೇದ್ಯ ಬೇಡ ಬೇಡ ಎಂದು ಕಾರ್ಣಿಕ ಹೇಳಿದರೂ ಕೇಳದ ಜನ ಈಗ ಕೊರೊನಾ ಲಾಕಡೌನ್ ಸಂದರ್ಭದಲ್ಲಿ ನಾನಾ ಗ್ರಾಮಗಳಿಂದ ಅಂಬಲಿಯೊಂದಿಗೆ ನೈವೇದ್ಯ ಅರ್ಪಿಸಲು ಬಂದು ಪೊಲೀಸರಿಂದ ಬುದ್ಧಿಹೇಳಿಸಿಕೊಂಡ ಕಥೆಯಿದು. ಅಷ್ಟಕ್ಕೂ ಆಗಿದ್ದೇನೆಂದರೆ, ಎರಡು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಸದಾಶಿವ ಮಠದ ಕಾರ್ಣಿಕ ಮತ್ತು ಸ್ವಾಮೀಜಿ ಸಿದ್ಧರಾಮಯ್ಯ ಹೊಳಿಮಠ ಅವರು ಭವಿಷ್ಯ ವೈದ್ಯರಿಗೂ ತಿಳಿಯದ ರೋಗ […]

ಕೊರೊನಾ ಗೆದ್ದವರು- ಒಂದೇ ಕುಟುಂಬದ ಐವರು

ವಿಜಯಪುರ: ಇದು ಬಸವ ನಾಡಿನಲ್ಲಿ ಒಂದೇ ಕುಟುಂಬದ ಐದು ಜನ ಕೊರೊನಾ ವಿರುದ್ಧ ಸೆಣಸಾಡಿ ಗೆದ್ದ ಸ್ಟೋರಿ. ಮೊದಲಿಗೆ ಮೂರು ಜನ ಸಹೋದರರಲ್ಲಿ ಮೂರನೇಯರಿಗೆ ಸೋಂಕು ತಗುಲಿ ಮನೆಯಲ್ಲಿಯೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆದು ಗುಣಮುಖರಾದರೆ. ಇನ್ನುಳಿದ ನಾಲ್ಕು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇದು ವಿಜಯಪುರ ನಗರದ ಜಲನಗರದಲ್ಲಿ ವಾಸಿಸುವ ಕುಮಾನಿ ಕುಟುಂಬದ ಕಥೆ. ಈ ಕುಟುಂಬದಲ್ಲಿ ಮೂರು ಜನ ಸಹೋದರರು ಮತ್ತು ಇಬ್ಬರು ಸೊಸೆಯಂದಿರಿಗೆ ಕೊರೊನಾ ಸೋಂಕು ತಗುಲಿತ್ತು. ಈಗ ಎಲ್ಲರೂ ಗುಣಮುಖರಾಗಿ […]

ನಿಜವಾಗುತ್ತಿದೆ ಶಾಸಕ ಎಂ. ಬಿ. ಪಾಟೀಲ ನುಡಿದ ಭವಿಷ್ಯ- ಶಾಸಕರ ಸಲಹೆಯನ್ನು ಧನಾತ್ಮಕವಾಗಿ ಪರಿಗಣಿಸಿ ಕಾರ್ಯೋನ್ಮುಖವಾಗಿದೆ ಜಿಲ್ಲಾಡಳಿತ

ವಿಜಯಪುರ: ಗ್ರಾಮೀಣ ಭಾಗದಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ ಕೊರೊನಾ ಸೋಂಕಿನ ಲಕ್ಷಣವುಳ್ಳವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ವಿಜಯಪುರ ನಗರಕ್ಕಿಂತಲೂ ಗ್ರಾಮೀಣ ಭಾಗಕ್ಕೆ ಸೋಂಕು ಹೆಚ್ಚು ಹರಡಲಿದೆ ಎಂದು ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಮೇ 15 ರಂದು ನುಡಿದಿದ್ದ ಭವಿಷ್ಯ ಈಗ ನಿಜವಾಗುತ್ತಿದೆ. ಏಕೆಂದರೆ, ಈವರೆಗೆ ವಿಜಯಪುರ ನಗರದಲ್ಲಿ ಶೇ. 80 ರಷ್ಟು ಕಂಡು ಬರುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಈಗ ಶೇ. 15 ರಿಂದ ಶೇ. […]

ವಿಜಯಪುರ ಜಿಲ್ಲೆಯಲ್ಲಿ ಈಗ ಗ್ರಾಮೀಣ ಭಾಗದಲ್ಲಿಯೇ ಶೇ. 80 ರಷ್ಟು ಕೊರೊನಾ ಸೋಂಕಿತರು ಪತ್ತೆ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಈಗ ಜಿಲ್ಲೆಯಲ್ಲಿ ವಿಜಯಪುರ ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ ಎಂದು ತಿಳಿಸಿದರು. ಈ ಮುಂಚೆ ವಿಜಯಪುರ ನಗರದಲ್ಲಿ ಶೇ. 80 ರಷ್ಟು ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಿದ್ದವು. ಆದರೆ, ಈಗ ನಗರದಲ್ಲಿ ಈ ಪ್ರಮಾಣ ಸೇ. 15 ರಿಂದ 20ಕ್ಕೆ ಇಳಿದಿದೆ. ಈಗ ಪರಿಸ್ಥಿತಿ ಬದಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಶೇ. 80 ರಷ್ಟು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಮಾಹಿತಿ ನೀಡಿದರು. ವಿಜಯಪುರ […]

ಫ್ರೀ ಆಮ್ಲಜನಕ ಸಿಲಿಂಡರ್ ಸರಬರಾಜು ವ್ಯವಸ್ಥೆ ಮೂಲಕ 300ಕ್ಕೂ ಹೆಚ್ಚು ಜನರ ಜೀವ ಉಳಿಸಲು ನೆರವಾದ ಗುಮ್ಮಟ ನಗರಿಯ ಶಕೀಲ ಸುತಾರ ಆ್ಯಂಡ್ ಟೀಂ

ವಿಜಯಪುರ: ಕೊರೊನಾ ಎರಡನೇ ಅಲೆ ಗುಮ್ಮಟ ನಗರಿ ಖ್ಯಾತಿಯ ವಿಜಯಪುರ ಜಿಲ್ಲೆಯ ಜನರ ಪಾಲಿಗಂತೂ ನಾನಾ ಸಮಸ್ಯೆಗಳಿಗೆ ಕಾರಣವಾಗಿದೆ.  ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಒಂದೆಡೆಯಾದರೆ, ಮತ್ತೋಂದೆಡೆ ಆಕ್ಸಿಜನ್ ಸಮಸ್ಯೆ ಮತ್ತೋಂದೆಡೆ.  ಇಂಥ ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೊರೊನಾ ಸೋಂಕಿತರ ಪಾಲಿಗೆ ಗುಮ್ಮಟ ನಗರಿ ವಿಜಯಪುರದ ಯುವಕನೊಬ್ಬ ಆಪದ್ಭಾಂಧವನಾಗಿದ್ದಾನೆ.  ಈ ಯುವಕ ಸಮಾನ ಮನಸ್ಕ ಸ್ನೇಹಿತರ ಪಡೆ ಕಟ್ಟಿಕೊಂಡು ಕೊರೊನಾ ಸೋಂಕಿತರ ನೆರವಿಗೆ ಟೊಂಕಕಟ್ಟಿ ನಿಂತಿದ್ದಾನೆ. ವಿಜಯಪುರ ನಗರದ ಕೆ. ಸಿ. ಮಾರ್ಕೆಟ್ ಪೀಠೋಪಕರಗಳ ಖ್ಯಾತ ವ್ಯಾಪಾರಿ ಶಕೀಲ್‌ […]