ಲಸಿಕೆ ಅಭಿಯಾನ ಆಯ್ತು ಈಗ ಕೊರೊನಾ ವಾರಿಯರ್ಸ್ ಗೆ ನೆರವಿಗೆ ಧಾವಿಸಿದ ಶಾಸಕ ಯತ್ನಾಳ

ವಿಜಯಪುರ- ಕಳೆದ ಸುಮಾರು ಒಂದು ತಿಂಗಳಿಂದ ವಿಜಯಪುರ ಮತಕ್ಷೇತ್ರದ ಜನತೆಗೆ ಕೊರೊನಾ ಲಸಿಕೆ ಹಾಕಿಸಲು ಅಭಿಯಾನ ಕೈಗೊಂಡಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಗ ಕೊರೊನಾ ವಾರಿಯರ್ಸ್ ನೆರವಿಗೆ ಧಾವಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೊನಾ ಮಾಹಾಮಾರಿಯ ಎರಡನೇ ಅಲೆಯಲ್ಲಿ ಸಾಕಷ್ಟು ಜನರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹೆಚ್ಚಿನ ರೋಗಿಗಗಳಿಗೆ ಪ್ರಾಣವಾಯು, ವೆಂಟಿಲೇಟರ್ ಗಳನ್ನು ಅವಲಂಬಿಸಬೇಕಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿತಿಯಲ್ಲಿಯೂ ಕೂಡ ಜೀವದ ಹಂಗು ತೊರೆದು ವಿಜಯಪುರ […]

ಕೋವಿಡ್ ಸೇವಾ ನಿರತ ವಿಜಯಪುರ ವೈದ್ಯೆಯ ಜೊತೆ ಸಿಎಂ ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಾಲೋಚನೆ

ವಿಜಯಪುರ: ಕೋವಿಡ್-19 ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯದ ನಾನಾ ಜಿಲ್ಲೆಗಳಲ್ಲಿ ರೋಗಿಗಳ ಚಿಕಿತ್ಸೆಯಲ್ಲಿ ನಿರತ ವೈದ್ಯರ ಜತೆ ವರ್ಚುವಲ್ ಸಭೆ ಮೂಲಕ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ವಿಜಯಪುರದ ವೈದ್ಯೆ ಡಾ. ಮೀನಾಕ್ಷಿ ಮುತ್ತಪ್ಪನವರ ಈ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿರುವ ತಮ್ಮ ಗೃಹ ಕಚೇರಿ ಕೃಷ್ಣದಿಂದ ವರ್ಚುವಲ್ ಮೂಲಕ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ಡಾ.ಮೀನಾಕ್ಷಿ ಮುತ್ತಪ್ಪನವರಿಗೆ ಎಷ್ಟು ದಿನಗಳಿಂದ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಆಗ […]

4000 ಕೊರೊನಾ ವಾರಿಯರ್ಸ್, ಕೊವಿಡ್ ಕಾರ್ಯಪಡೆ ಪದಾಧಿಕಾರಿಗಳಿಗೆ ರೋಗ ನಿಯಂತ್ರಣ ಕುರಿತು ಯುಟ್ಯೂಬ್ ಮೂಲಕ ತಿಳಿವಳಿಕೆ

ವಿಜಯಪುರ: ಕೊರೊನಾ ಎರಡನೇ ಅಲೆ ಗ್ರಾಮೀಣ ಭಾಗಕ್ಕೆ ವ್ಯಾಪಕವಾಗಿ ಹರಡದಂತೆ ಬಸವ ನಾಡು ವಿಜಯಪುರ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಯ ಕೋವಿಡ್-19 ಕಾರ್ಯಪಡೆಯ ಸುಮಾರು 4000 ಜನ ಕೊರೊನಾ ವಾರಿಯರ್ಸ್, ಅಧ್ಯಕ್ಷರು ಮತ್ತು ಸದಸ್ಯರಿಗೆ ಯೂಟ್ಯೂಬ್ ಚಾನಲ್ ಮುಖಾಂತರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ಜಿ. ಪಂ. ಸಿಇಓ ಗೋವಿಂದ ರೆಡ್ಡಿ ಮತ್ತು ಆರೋಗ್ಯ ಇಲಾಖೆ ಹಿರಿಯ ತಜ್ಞ ವೈದ್ಯರ ನೇತೃತ್ವದಲ್ಲಿ ಏಕಕಾಲಕ್ಕೆ ತಿಳುವಳಿಕೆಯನ್ನು ನೀಡಲಾಯಿತು. ಕೊರೊನಾ ಎರಡನೇ ಅಲೆಯು ಹರಡದಂತೆ ಸರಪಳಿಯನ್ನು ತುಂಡರಿಸಲು ಈಗಾಗಲೇ ಸರಕಾರದಿಂದ ಕಟ್ಟುನಿಟ್ಟಾದ […]

ಮನೆ ಮನೆ ಸಮೀಕ್ಷೆ ನಡೆಸಿ ಚಿಕಿತ್ಸೆ ನೀಡಿದರೆ ವಿಜಯಪುರ ಜಿಲ್ಲೆ ಕೊರೊನಾ ಮುಕ್ತವಾಗಲು ಸಾಧ್ಯ- ಎಂ. ಬಿ. ಪಾಟೀಲ

ಬಸವ ನಾಡು ವಿಜಯಪುರ-: ಗ್ರಾಮೀಣ ಭಾಗದಲ್ಲಿ ಮನೆ-ಮನೆ ಸಮೀಕ್ಷೆ ಮಾಡಿ ಅನಾರೋಗ್ಯಕ್ಕೀಡಾದವರಿಗೆ ರೋಗ ಲಕ್ಷಣಗಳನುಸಾರ ಚಿಕಿತ್ಸೆ ನೀಡಲು ಪ್ರಾರಂಭಿಸಿದರೆ ವಿಜಯಪುರ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗುತ್ತದೆ ಎಂದು ಮಾಜಿ ಸಚಿವ, ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ, ಮನವಿ ಪತ್ರ ನೀಡಿ ಚರ್ಚೆ ನಡೆಸಿದ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಮೊದಲನೆ ಅಲೆಯಲ್ಲಿ ಅಷ್ಟಾಗಿ ಕಂಡು ಬರದ ಕೊರೊನಾ, ಈಗ 2ನೇ ಅಲೆಯಲ್ಲಿ ಹೆಚ್ಚಾಗಿ […]

ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿವಿ ಹಂಗಾಮಿ ಉಪಕುಲಪತಿಯಾಗಿ ಡಾ. ಆರ್. ಎಸ್. ಮುಧೋಳ ನೇಮಕ

ಬಸವ ನಾಡು ವಿಜಯಪುರ: ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಹಂಗಾಮಿ ಉಪಕುಲಪತಿಗಳಾಗಿ ಡಾ. ಆರ್. ಎಸ್. ಮುಧೋಳ ಅವರನ್ನು ನೇಮಕ ಮಾಡಲಾಗಿದೆ. ವಿಶ್ವವಿದ್ಯಾಲಯದ ಕುಲಪತಿ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಡಾ. ಆರ್. ಎಸ್. ಮುಧೋಳ ಅವರು ಮೂಲತಃ ವಿಜಯಪುರ ಜಿಲ್ಲೆಯ ಪಕ್ಕದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋವಳ್ಳಿ ಗ್ರಾಮದವರಾಗಿದ್ದಾರೆ. ವಿಜಯಪುರದ ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ಪಿಯು ಮುಗಿಸಿ, ಹುಬ್ಬಳ್ಳಿಯ […]

ಹಬ್ಬದಾಚರಣೆ ಬದಲು ಊರೆಲ್ಲ ಔಷಧಿ ಸಿಂಪಡಿಸಿ ಮಾದರಿಯಾದ ರಂಭಾಪುರ ಗ್ರಾಮಸ್ಥರು

ಬಸವ ನಾಡು ವಿಜಯಪುರ- ಬಸವ ನಾಡು ವಿಜಯಪುರ ಹೊರ ವಲಯದ ರಂಭಾಪುರ ಗ್ರಾಮಸ್ಥರು ಈ ಬಾರಿ ಹಬ್ಬದಾಚರಣೆಯ ಬದಲು ವಿನೂತನ ಕಾರ್ಯ ಮಾಡುವ ಮೂಲಕ ಕಾಯಕವೇ ಕೈಲಾಸ ಎಂಬಂತೆ ಇಡೀ ಊರಿಗೆ ಉಪಕಾರ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿಯೂ ಕೊರೊನಾ ಎರಡನೇ ಅಲೆ ಜೋರಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿಯೂ ಲಾಕಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಹಬ್ಬ, ಹರಿದಿನಗಳಿದ್ದರೂ ಮನೆಯಲ್ಲಿಯೇ ಆಚರಿಸಬೇಕು ಎಂದು ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಂಭಾಪುರ ಗ್ರಾಮಸ್ಥರು ಬಸವ ಜಯಂತಿಯನ್ನಂತೂ […]

ಬಸವ ನಾಡಿನಲ್ಲೊಂದು ಮಾದರಿ ವಿವಾಹ- ಈ ದಂಪತಿ ಮಾಡಿದ್ದೇನು ಗೊತ್ತಾ?

ಬಸವ ನಾಡು ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯಲ್ಲೊಂದು ಮಾದರಿ ವಿವಾಹ ನಡೆದಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾರ್ಗಸೂಚಿ ಪಾಲಿಸಿದ್ದಷ್ಟೇ ಅಲ್ಲ, ಈ ದಂಪತಿ ಇತರ ವಿವಾಹಗಳಿಗೂ ಸ್ಪೂರ್ತಿಯಾಗುವ ಕೆಲಸ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಅಂಬಿಕಾ ಮತ್ತು ಪ್ರಶಾಂತ ಜೋಡಿ ಇತ್ತೀಚೆಗೆ ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಆದರೆ, ಈ ಶುಭ ಸಂದರ್ಭದಲ್ಲಿ ಜನಸಾಮಾನ್ಯರೂ ಕೂಡ ಭೇಷ ಎನಿಸುವ ಮಾದರಿ ಕೆಲಸ ಮಾಡಿದೆ. ಇದು ಕೊರೊನಾ […]

ಅಣ್ಣನ ಜನ್ಮಸ್ಥಳದಲ್ಲಿ ಸರಳವಾಗಿ ಬಸವ ಜಯಂತಿ ಆಚರಣೆ

ಬಸವ ನಾಡು ವಿಜಯಪುರ- ಅಣ್ಣ ಬಸವಣ್ಣನವರ ತವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ‌ ಬಸವ ಜನ್ಮಸ್ಥಳದಲ್ಲಿ ಸರಳವಾಗಿ ಬಸವ ಜಯಂತಿಯನ್ನು ಆಚರಿಸಲಾಯಿತು. ಬಸವನ ಬಾಗೇವಾಡಿ ಪಟ್ಟಣದಲ್ಲಿರುವ ಬಸವ ಜನ್ಮ ಸ್ಮಾರಕದಲ್ಲಿ ಸಂಪ್ರದಾಯದಂತೆ ವಿರಕ್ತಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿರು. ಬಸವರಾಜ ಹಾರಿವಾಳ, ಶ್ವೇತಾ ಬಸವರಾಜ ಕಿಣಗಿ, ಸ್ಪಂದನಾ ರವೀಂದ್ರ ಕಿಣಗಿ ಅವರು ಸಾಮಾಜಿಕ ಅಂತರ ಕಾಯ್ದುಕೊಂಡು ಬಾಲ ಬಸವೇಶ್ವರರ ಬೆಳ್ಳಿಯ ಮೂರ್ತಿಯನ್ನು ತೊಟ್ಟಿಲಿನಲ್ಲಿ‌ ಹಾಕಿ ತೂಗಿ ನಾಮಕಾರಣ ಮಾಡುವ ಮೂಲಕ ತೊಟ್ಟಿಲೋತ್ಸವ ಕಾರ್ಯಕ್ರಮ ನೆರವೇರಿಸಿದರು. […]

ವಿಜಯಪುರದಲ್ಲಿ ಸರಳವಾಗಿ ಬಸವ ಜಯಂತಿ ಆಚರಣೆ

ಬಸವ ನಾಡು ವಿಜಯಪುರ: ಕೊರೊನಾ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತದ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಬೆಳಿಗ್ಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಎಸ್ಪಿ ಅನುಪಮ ಅಗ್ರವಾಲ, ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಮತ್ತು ಇತರ ಗಣ್ಯರು ಬಸವೇಶ್ವರ ಚೌಕಿನಲ್ಲಿರುವ ಶ್ರೀ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ […]

ಐಸಿಎಂ ಗೈಡಲೈನ್ಸ್ ಲಾಕಢೌನ್ ಬಗ್ಗೆ ಸಿಎಂ ನಿರ್ಧರಿಸುತ್ತಾರೆ- ಡಿಸಿಎಂ ಗೋವಿಂದ ಕಾರಜೋಳ

ಬಸವ ನಾಡು ವಿಜಯಪುರ- ಕೊರೊನಾ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿ ಮಾಡಬೇಕೆನ್ನುವ ಐಸಿಎಂಆರ್ ಸಲಹೆಯ ಕುರಿತು ಸಿಎಂ ನಿರ್ದಾರ ಕೈಗೊಳ್ಳಲಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.ವಿಜಯಪುರ ಜಿಲ್ಲೆಯ ಬುರಣಾಪುರ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಈ ಕುರಿತು ತಜ್ಞರೊಂದಿಗೆ ಚರ್ಚಿಸಿ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ ಸಿಎಂ ನಿರ್ಣಯ ಕೈಗೊಳ್ಳಲಿದ್ದಾರೆ. ಈ ಕುರಿತು ಈಗಲೇ ಹೇಳಲು ಸಾಧ್ಯವಿಲ್ಲ. ಸಾಧಕ ಬಾಧಕ ತಿಳಿದುಕೊಂಡು ತಜ್ಞರ ಅಭಿಪ್ರಾಯದಂತೆ‌ […]