ಲಾಕಡೌನ್ ಮಧ್ಯೆ ವಿಜಯಪುರ ಜಿಲ್ಲಾಧಿಕಾರಿಗಳಿಂದ ಅಗತ್ಯ ವಸ್ತುಗಳ ಖರೀದಿಗೆ ಸಮಯ, ದರ ನಿಗದಿ

ಬಸವ ನಾಡು ವಿಜಯಪುರ- ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಲಾಕಡೌನ್ ಘೋಷಣೆ ಮಾಡಿದ್ದು, ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಕೂಡ ಆದೇಶ ಹೊರಡಿಸಿದ್ದಾರೆ.ಸಧ್ಯಕ್ಕೆ ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣಿ, ನೂಕುನುಗ್ಗಲು ತಪ್ಪಿಸಲು ಮೇ 2 ರಿಂದಲೇ ಅನ್ವಯವಾಗುವಂತೆ ಎಲ್ಲ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ. ಇದರ ಬದಲಿಗೆ ಪ್ರತಿದಿನ ಬೆ. 6 ರಿಂದ ಸಂ. 6.00 ಗಂಟೆಯವರೆಗೆ ಹಾಪಕಾಮ್ಸ್, ಎಲ್ಲಾ ಹಾಲಿನ ಭೂತಗಳು, ತಳ್ಳುವ ಗಾಡಿ ಮೂಲಕ ಹಣ್ಣು, ತರಕಾರಿಗಳನ್ನು ಮಾರುಕಟ್ಟೆಯ ಬೆಲೆಗನುಗುಣವಾಗಿ […]

ಶಾಸಕ ಯತ್ನಾಳ ಅವರಿಂದ ಕೊರೊನಾ ಲಸಿಕೆ ಅಭಿಯಾನ ಮುಂದುವರಿಕೆ

ಬಸವ ನಾಡು ವಿಜಯಪುರ- ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಂಡು ಕೊರೊನಾದಿಂದ ಮುಕ್ತರಾಗಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.ವಿಜಯಪುರ ನಗರದ ನಾನಾ ಕಡೆ ಕೊರೊನಾ ಲಸಿಕೆ ಅಭಿಯಾನ ಮುಂದುವರೆಸಿರುವ ಅವರು ನಾನಾ ಕಡೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಮನೆ- ಮನೆಗೆ ಉಚಿತ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮದ ಅಂಗವಾಗಿ ವಿಜಯಪುರ ನಗರದ ವಾರ್ಡ್ ಸಂಕ್ಯೆ 21ರ ಕನಕದಾಸ ಬಡಾವಣೆಯ ಶ್ರೀ ಹನುಮಾನ ಗುಡಿ ಹತ್ತಿರದ […]

ಬಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ ನಾನಾ ಕೊರೊನಾ ಲಸಿಕಾ ಕೇಂದ್ರಗಳಿಗೆ ಶಾಸಕ ಎಂ. ಬಿ. ಪಾಟೀಲ ಭೇಟಿ, ಪರಿಶೀಲನೆ

ಬಸವ ನಾಡು ವಿಜಯಪುರ- ಎಲ್ಲರೂ ಕೊರೊನಾ ಲಸಿಕೆ ಹಾಕಿಸಿ ಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್, ಸೈನಿಟೈಸರ್ ಬಳಸುವುದರಿಂದ ನಿಯಂತ್ರಣಕ್ಕೆ ಸಾಧ್ಯ. ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು, ಈ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ತಿಳಿಸಿದರು.ವಿಜಯಪುರ ಜಿಲ್ಲೆಯ ತಮ್ಮ ಸ್ವಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಕೊರೊನಾ ಲಸಿಕೆ ಅಭಿಯಾನ ಅಂಗವಾಗಿ ನಾನಾ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಮಮದಾಪುರದಲ್ಲಿ ಮಾತನಾಡಿದರು. […]

ರೆಮಿಡಿಸಿವಿರ್ ವಿತರಣೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ತಾರತಮ್ಮ – ಪ್ರಧಾನಿ, ಸಚಿವರಿಗೆ ಟ್ವೀಟ್ ಮೂಲಕ ಗಮನ ಸೆಳೆಯಲು ಶಾಸಕ ಎಂ. ಬಿ. ಪಾಟೀಲ ನಿರ್ಧಾರ

ಬಸವ ನಾಡು ವಿಜಯಪುರ- ಕರ್ನಾಟಕದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನ ದನೇ ಹೆಚ್ಚುತ್ತಿದ್ದರೂ, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ರೆಮಿಡಿಸಿವಿಯರ್ ಎಂಜೆಕ್ಶನ್ ಸರಬರಾಜು ಮಾಡದೇ, ಕೇಂದ್ರ ಸರಕಾರ ತಾರತಮ್ಯ ಎಸಗುತ್ತಿದೆ ಎಂದು ಮಾಜಿ ಸಚಿವ, ಬಿ. ಎಲ್. ಡಿ. ಇ ಸಂಸ್ಥೆ ಅಧ್ಯಕ್ಷ ಹಾಗೂ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ.ವಿಜಯಪುರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ವೈದ್ಯರ ಸಭೆ ನಡೆಸಿದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸಾ […]

ಕೊರೊನಾ ಜೊತೆಗೆ ಸಾಮಾನ್ಯ ರೋಗಿಗಳ ನೆರವಿಗೆ ಧಾವಿಸಿದ ಶಾಸಕ ಎಂ. ಬಿ. ಪಾಟೀಲ- ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಳು, ಚಿಕಿತ್ಸಾ ಶುಲ್ಕ ಕಡಿತ

ಬಸವ ನಾಡು ವಿಜಯಪುರ- ಸದಾ ಜನಪರ ತುಡಿತ ಹೊಂದಿರುವ ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಈಗ ಕೊರೊನಾ ಸಂಕಷ್ಟ ಕಾಲದಲ್ಲಿ ರೋಗಿಗಳ ನೆರವಿಗೆ ಧಾವಿಸಿದ್ದಾರೆ.ಕೊರೊನಾ 2ನೇ ಅಲೆಯಿಂದಾಗಿ ರೋಗಿಗಳು ತತ್ತರಿಸುತ್ತಿದ್ದು, ಉತ್ತಮ ಚಿಕಿತ್ಸೆ ಒದಗಿಸಲು ತಮ್ಮ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿಕಿತ್ಸಾ ಶುಲ್ಕವನ್ನೂ ಕಡಿಮೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಕರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ […]

ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಬೆಡ್‍ಗಳು ಕೊರೊನಾ ಸೋಂಕಿತರಿಗೆ ಮೀಸಲಿರುವಂತೆ ಖಚಿತಪಡಿಸಿಕೊಳ್ಳಿ- ಡಿಸಿ ಪಿ. ಸುನೀಲ ಕುಮಾರ

ಬಸವ ನಾಡು ವಿಜಯಪುರ- ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳು ಕೊರೊನಾ ದೃಢಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ತಾಲೂಕು ಮಟ್ಟದಲ್ಲಿ ಸರಿಯಾದ ರೀತಿ ಚಿಕಿತ್ಸೆ ನೀಡಿ ಅವಶ್ಯಕವಿದ್ದರೆ ಮಾತ್ರ ಜಿಲ್ಲಾ ಆಸ್ಪತ್ರೆಯ ಸಹಾಯವನ್ನು ತೆಗೆದುಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದ್ದಾರೆ.ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ನಡೆಸಿದ […]

ಶಾಸಕ ಎ. ಎಸ್. ಪಾಟೀಲ ನಡಹಳ್ಳಿ, ಅವರ ತಂದೆ ಇಬ್ಬರಿಗೂ ಕೊರೊನಾ ಪಾಸಿಟಿವ್

ಬಸವ ನಾಡು ವಿಜಯಪುರ- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಿಜೆಪಿ ಶಾಸಕ ಮತ್ತು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಹಾಗೂ ಅವರ ತಂದೆ ಇಬ್ಬರಿಗೂ ಕೊರೊನಾ ಸೋಂಕು ದೃಡಪಟ್ಟಿದೆ.ಸಧ್ಯ ಇಬ್ಬರನ್ನೂ ವಿಜಯಪುರದ ಸರಕಾರಿ ಕೋವಿಡ್ ಆಸ್ಪತ್ರೆಗೆ ಮುಂದಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ತಮ್ಮ ಸಂಪರ್ಕದಲ್ಲಿ ಬಂದವರು ಮುನ್ನೆಚ್ಚರಿಕೆಯಾಗಿ ಕೊರೊನಾ ತಪಾಸಣೆ ಮಾಡಿಸಿಕೊಳ್ಳಬೇಕು, ಸ್ವಯಂ ಹೋಂ ಕ್ವಾರೆಂಟೈನಗೆ ಒಳಗಾಗಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.

ಶಾಸಕ ಎಂ. ಬಿ. ಪಾಟೀಲ ನಾಳೆಯಿಂದ ಒಂದು ವಾರ ವಿಜಯಪುರದಲ್ಲಿ ವಾಸ್ತವ್ಯ

ಬಸವ ನಾಡು ವಿಜಯಪುರ- ಮಾಜಿ ಸಚಿವ, ಬಬಲೇಶ್ವರ ಕಾಂಗ್ರೆಸ್ ಶಾಸಕ, ಎಂ. ಬಿ. ಪಾಟೀಲ ನಾಳೆಯಿಂದ ಒಂದು ವಿಜಯಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.ಬೆ. 10.30 ಗಂಟೆಯಿಂದ ಮ. 2.00 ಗಂಟೆಯರೆಗೆ ಬಿ.ಎಲ್.ಡಿ.ಇ.ಸಂಸ್ಥೆ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಲು ಲಭ್ಯ ಇರಲಿದ್ದಾರೆ. ಅನಿವಾರ್ಯ ಇದ್ದವರು ಮಾತ್ರ ಈ ಸಮಯದಲ್ಲಿ ಶಾಸಕರನ್ನು ಭೇಟಿ ಮಾಡಬಹುದು.ಇದನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಸಾರ್ವಜನಿಕರ ಭೇಟಿ ಇಲ್ಲ. ತೀವ್ರ ತುರ್ತು ಸಂದರ್ಭಗಳಲ್ಲಿ ಮಾತ್ರ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಬಬಲೇಶ್ವರ ಶಾಸಕ ಕಚೇರಿ ಪ್ರಕಟಣೆಯಲ್ಲಿ […]

ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್- ಎಂ. ಬಿ. ಪಾಟೀಲ ಫೌಂಡೇಶನ್ ನಿಂದ ಕೊರೊನಾ ಸಹಾಯವಾಣಿ ಆರಂಭ

ಬಸವ ನಾಡು ವಿಜಯಪುರ- ವಿಜಯಪುರ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಮತ್ತು ಎಂ. ಬಿ. ಪಾಟೀಲ ಫೌಂಡೇಶನ್ ಜಂಟಿಯ.ಾಗಿ ಕೊರೊನಾ ಸಹಾಯವಾಣಿ ಆರಂಭಿಸಿವೆ.ವಿಜಯಪುರ ಜಿಲ್ಲೆಯಲ್ಲಿಯೂ ಕೊರೊನಾ 2ನೇ ಅಲೇ ತೀವ್ರವಾಗಿ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಗಳು ಸಿಗದೆ, ಸೂಕ್ತ ಚಿಕಿತ್ಸೆಯೂ ದೊರೆಯದೆ ಬಹಳಷ್ಟು ಜನ ಆತಂಕದಲ್ಲಿದ್ದಾರೆ. ಇಂಥ ಕಠಿಣ ಸಂದರ್ಭದಲ್ಲಿ ಕೊರೊನಾ ಸೋಂಕಿತರಿಗೆ ಸೂಕ್ತ ಸಲಹೆ ಮತ್ತು ನೆರವು ನೀಡಲು ಎಂ. ಬಿ. ಪಾಟೀಲ್ ಫೌಂಡೇಶನ್ನಿನ […]

ಕೊರೊನಾ ಕೈಮಿರಿದೆ- ಜನ ಜಾಗೃತಿ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ- ಎಂಎಲ್‌ಸಿ ಸುನಿಲಗೌಡ ಪಾಟೀಲ ಎಚ್ಚರಿಕೆ

ಬಸವ ನಾಡು ವಿಜಯಪುರ- ಕೊರೊನಾ ಎರಡನೇ ಅಲೆ ಈಗಾಗಲೇ ತನ್ನ ತೀವ್ರತೆಯನ್ನು ತೋರಿದ್ದು, ಜನಸಾಮಾನ್ಯರು ತೀವ್ರ ಆತಂಕದಲ್ಲಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕೊರೊನಾ ಮೊದಲನೇ ಹಂತದಲ್ಲಿ ನಾವು ಕಲಿಯದ ಪಾಠಗಳನ್ನು ಎರಡನೇ ಅಲೆ ಸಂದರ್ಭದಲ್ಲಿ ಕಲಿಯಬೇಕಾಗಿತ್ತು. ಆದರೆ ನಾವು ನಮ್ಮ ನಿರ್ಲಕ್ಷದಿಂದ ಈ ಬಾರಿಯೂ ಮಾಸ್ಕ್ ಧರಿಸದಿರುವುದು, ಸ್ಯಾನಿಟೈಸರ್ ಬಳಸದಿರುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡದೆ ಸಂತೆ, ಮದುವೆ, […]