ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರಿಂದ ರಸ್ತೆ, ಸೇತುವೆ ಕಾಮಗಾರಿ ಪರಿಶೀಲನೆ

ಬಸವ ನಾಡು ವಿಜಯಪುರ- ನಾಗಠಾಣ ಮತ್ತು ಮಿಂಚನಾಳ ಮಧ್ಯೆ ನಿರ್ಮಿಸಲಾಗುತ್ತಿರುವ 6 ಕಿ. ಮಿ. ರಸ್ತೆ, ಮತ್ತು 2 ಸೇತುವೆ ಕಾಮಗಾರಿಗಳನ್ನು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಪರಿಶೀಲನೆ ನಡೆಸಿದರು.ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಬಳಿಕ ಮಾತನಾಡಿ, ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ರಸ್ತೆ ಕಾಮಗಾರಿ ಈಗ ಪೂರ್ಣಗೊಂಡಿದೆ. ಒಂದು ಸೇತುವೆ ಕಾಮಗಾರಿ ಮುಗಿಯುವ ಹಂತದಲ್ಲಿದೆ. ನಾಗಠಾಣ ಬಳಿಯ ಸೇತುವೆ ಕಾಮಗಾರಿ ನಡೆಯುತ್ತದೆ ಎಂದು ತಿಳಿಸಿದರು. ಒಟ್ಟು ರೂ. 9 ಕೋ. ವೆಚ್ಚದಲ್ಲಿ ಮಿಂಚನಾಳ, […]

ಗುಮ್ಮಟ ನಗರಿಯಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನು ಮುಂದುವರೆಸಿದ ಶಾಸಕ ಯತ್ನಾಳ

ಬಸವ ನಾಡು ವಿಜಯಪುರ- ಗುಮ್ಮಟ ನಗರಿ ವಿಜಯಪುರದಲ್ಲಿ ಕೊರೊನಾ 2ನೇ ಅಲೆಯಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನೂ ಹೆಚ್ಚಿಸಲಾಗಿದೆ.ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡ ಸ್ವತಃ ನಾನಾ ಬಡಾವಣೆಗಳಲ್ಲಿ ಕೊರೊನಾ ಲಸಿಕೆ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಕೊರೊನಾ ಬಗ್ಗೆ ಜಾಗೃತಿಗೆ ಮುಂದಾಗಿದ್ದಾರೆ. ಈ ಮುಂಚೆ ವಿಜಯಪುರ ನಗರದಲ್ಲಿ ಶೇ. 4 ರಷ್ಟಿದ್ದ ಕೊರೊನಾ ಲಸಿಕೆ ಪಡೆದವರ ಸಂಖ್ಯೆ ಈಗ ಶೇ. 40ಕ್ಕೆ ಹೆಚ್ಚಾಗಿದೆ. ಸಾರ್ವಜನಿಕರು ಇನ್ನೂ […]

ಗುಮ್ಮಟ ನಗರಿಯಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಖಾಕಿ ಪಡೆಯಿಂದ ಜಾಗೃತಿ ಕಾರ್ಯಕ್ರಮ

ಬಸವ ನಾಡು ವಿಜಯಪುರ- ಕೊರೊನಾ 2ನೇ ಅಲೆ ಜೋರಾಗಿದ್ದು ಗುಮ್ಮಟ ನಗರಿ ವಿಜಯಪುರದಲ್ಲಿಯೂ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಈ ಮುಂಚೆ ಪ್ರತಿದಿನ ಎರಡಂಕಿಯೊಳಗೆ ಇರುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಈಗ ಶತಕದ ಗಡಿ ದಾಟುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಜನಜಾಗೃತಿ ಮೂಡಿಸಲು ವಿಜಯಪುರದಲ್ಲಿ ಖಾಕಿ ಪಡೆ ಮುಂದಾಗಿದೆ. ವಿಜಯಪುರ ಪೊಲೀಸರು ಎಸ್ಪಿ ಅನುಪಮ ಅಗ್ರವಾಲ ನೇತೃತ್ವದಲ್ಲಿ ವಿಜಯಪುರ ಗುಮ್ಮಟ ನಗರಿ ವಿಜಯಪುರದಲ್ಲಿ ಕೊರೊನಾ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಈ […]

ಹುಣಸೆಗಿಡ ಕೋರ್ಟ್ ನಿಂದ ಬನ್ನಿಗಿಡ ಕೋರ್ಟ್ ವರೆಗಿನ ತಮ್ಮ ವೃತ್ತಿ ಜೀವನದ ನೆನಪಿನ ಬುತ್ತಿ ಬಿಚ್ಚಿಟ್ಟ ನ್ಯಾಯವಾದಿ ಅರ್ಜುನ ಮಿಸಾಳೆ

ಬಸವ ನಾಡು ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಗೂ ನ್ಯಾಯಾಂಗ ಇಲಾಖೆಗೂ ಅದರದೇ ಆದ ಇತಿಹಾಸವಿದೆ. ಹಿರಿಯ ನ್ಯಾಯವಾದಿ ಅರ್ಜುನ ಮಿಸಾಳೆ ಅವರು ತಾವು ನ್ಯಾಯವಾದಿಯಾಗಿ ಸೇವೆ ಸಲ್ಲಿಸಲು ಆರಂಭಿಸಿದಾಗಿನಿಂದ ಇಂದಿನವರೆಗಿನ ನ್ಯಾಯಾಲಯಗಳು ಮತ್ತು ಅವುಗಳ ಸ್ಥಳಗಳ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ.ನ್ಯಾಯವಾದಿ ಅರ್ಜುನ್ ಮಿಸಾಳೆ ಅವರ ಫೇಸ್ ಬುಕ್ ವಾಲ್ ನಿಂದ ಪಡೆಯಲಾದ ಮಾಹಿತಿ ಇಲ್ಲಿದೆ. https://m.facebook.com/story.php?story_fbid=1142085802903653&id=100013067313581 ವಿಜಯಪುರ ನ್ಯಾಯಾಲಯಗಳು- “ಹುಣಸೆಗಿಡ […]

ಕೊರೋನಾ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ವಿಜಯಪುರ ಜಿಲ್ಲಾಧಿಕಾರಿ ಸಭೆ

ಬಸವ ನಾಡು ವಿಜಯಪುರ- ವಿಜಯಪುರ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲೂಕುಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಸಿಂದಗಿಯಲ್ಲಿ ನಡೆದ ಈ ಸಭೆಯಲ್ಲಿ ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲೂಕುಗಳ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಕೊರೊನಾ ಕುರಿತು ಈಗಾಗಲೇ ನೀಡಲಾಗಿರುವ ಗಂಟಲು ದ್ರವದ ಮಾದರಿಗಳನ್ನು ನಿಗದಿಯಂತೆ ಸಂಗ್ರಹಿಸಬೇಕು. ಕ್ವಾರಂಟೈನ್ ವಾಚ್ ಆಪ್‍ನಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಪಿ. ಸುನೀಲ ಕುಮಾರ ಅಧಿಕಾರಿಗಳಿಗೆ […]

ಕೊರೊನಾ 2ನೇ ಅಲೆ ಹೆಚ್ಚಳ ಹಿನ್ನೆಲೆ ಮದುವೆ, ಗ್ರಂಥಾಲಯ, ಅಂಗಡಿ ಮುಂಗಟ್ಟುಗಳ ವ್ಯಾಪ್ತಿಯಲ್ಲಿ ಮುಂಜಾಗ್ರತೆ ಕೈಗೊಳ್ಳಿ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ಬಸವ ನಾಡು ವಿಜಯಪುರ- ಕೊರೊನಾ 2ನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾಗೃತಗೊಳ್ಳುವ ಜೊತೆಗೆ ಹೆಚ್ಚಿನ ಜನ ಸೇರುವಂಥ ಕಲ್ಯಾಣ ಮಂಟಪ, ಅಂಗಡಿ ಮುಂಗಟ್ಟುಗಳು ಮತ್ತು ಗ್ರಂಥಾಲಯಗಳ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ ನೀಡಿದ್ದಾರೆ.ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಾನಾ ಕಲ್ಯಾಣ ಮಂಟಪ, ಸಾರ್ವಜನಿಕ ಗ್ರಂಥಾಲಯ ಅಧಿಕಾರಿಗಳು ಮತ್ತು ನಾನಾ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿದ ಅವರು, ಕೊರೊನಾ 2ನೇ ಅಲೆ ಹೆಚ್ಚಾಗುತ್ತಿದ್ದು, ಈ ಕುರಿತು ಈಗಿನಿಂದಲೇ […]

ಬಸವ ನಾಡಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಅಂಗವಾಗಿ ಬಿಜೆಪಿ ವತಿಯಿಂದ ರಕ್ತದಾನ ಶಿಬಿರ

ಬಸವ ನಾಡು ವಿಜಯಪುರ- ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಅಂಗವಾಗಿ ವಿಜಯಪುರದಲ್ಲಿ ಬಿಜೆಪಿ ವತಿಯಿಂದ ರಕ್ತದಾನ ಶಿಬಿರ ನಡೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದೀನ, ದಲಿತರು, ಹಿಂದುಳಿದವರ ಉದ್ಧಾರಕ್ಕಾಗಿಯೇ ತಮ್ಮ ರಕ್ತ ಸುಟ್ಟುಕೊಂಡಿದ್ದಾರೆ. ಅವರ ಜಯಂತೋತ್ಸವವನ್ನು ರಕ್ತದಾನ ಮಾಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಸಮಾನತೆ ಸಾರಿ ದೇಶವನ್ನು ಒಂದು ಮಾಡಿದರು. ಅಂಬೇಡ್ಕರ ಅವರು ಕೇವಲ ದಲಿತ ನಾಯಕ […]

ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಆಚರಣೆ

ಬಸವನಾಡು ವಿಜಯಪುರ- ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ ಜಯಂತಿಯನ್ನು ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲಾಗುತ್ತಿದೆ. ಡಾ. ಬಿ. ಆರ್. ಅಂಬೇಡ್ಕರ ಅವರು ಸಂವಿಧಾನದ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಗಳು, ಅವರ ವಿಚಾರಧಾರೆಗಳು ಎಲ್ಲರಿಗೂ ದಾರಿದೀಪಗಳಾಗಿದ್ದು, ಸಮಾಜದ ಪ್ರತಿಯೊಬ್ಬರೂ ಅವರ ತತ್ವ, ಆದರ್ಶಗಳನ್ನು ಅರ್ಥಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕರೆ ನೀಡಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ […]

ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ ಅವರ ಜಯಂತಿ ಅಂಗವಾಗಿ ಬಸವ ನಾಡಿನ ಖ್ಯಾತ ವ್ಯಂಗ್ಯ ಚಿತ್ರಕಾರ, ಮಕ್ಕಳ ಸಾಹಿತಿ, ಶರಣು ಚಟ್ಟಿ ರಚಿಸಿರುವ ಕವನ

ಬಸವನಾಡು ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯ ಖ್ಯಾತ ವ್ಯಂಗ್ಯ ಚಿತ್ರಕಾರ, ಸಾಹಿತಿ, ಮಕ್ಕಳ ಕವಿ ಮತ್ತು ಶಿಕ್ಷಕರಾಗಿರುವ ಶರಣು ಚಟ್ಟಿ ಅವರು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ ಜಯಂತಿಯ ಅಂಗವಾಗಿ ರಚಿಸಿರುವ ಕವನ. ಶರಣು ಚಟ್ಟಿ ಅವರ ಫೇಸ್ ಬುಕ್ ವಾಲ್ ನಿಂದ ಪಡೆದದ್ದು.

ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಆಚರಣೆ

ಬಸವ ನಾಡು ವಿಜಯಪುರ- ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಜಯಂತಿಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಚರಿಸಲಾಯಿತು.ವಿಜಯಪುರ ನಗರದಲ್ಲಿರುವ ಪತ್ರಿಕಾ ಭವನದಲ್ಲಿ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಸಚೇಂದ್ರ ವೈ. ಲಂಬು ಪೂಜೆ ಸಲ್ಲಿಸಿ ಗೌರವಿಸಿದರು.ಬಳಿಕ ಮಾತನಾಡಿದ ಅವರು, ಅಂಬೇಡ್ಕರ ಅವರು ಶೋಷಿತ ಜನಾಂಗದ ಏಳಿಗೆಗಾಗಿ ಶೃಮಿಸಿ, ದೇಶದ ನೀರಾವರಿ, ರಿಸರ್ವ್ ಬ್ಯಾಂಕ, ಮಹಿಳೆಯರ ಏಳಿಗೆ, ಸಮಾನತೆ, ಮತ ಚಲಾವಣೆ ಹಕ್ಕು, ಬಾಣಂತಿಯರಿಗೆ ರಜೆ ಹೀಗೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು […]