ಏಪ್ರಿಲ್ ಒಳಗೆ ತೆರಿಗೆ ಪಾವತಿಸಿ ಶೇ.5 ರಷ್ಟು ರಿಯಾಯಿತಿ ಪಡೆಯಿರಿ- ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಸೂಚನೆ

ಬಸವ ನಾಡು ವಿಜಯಪುರ- ವಿಜಯಪುರ ಮಹಾನಗರ ಪಾಲಿಕೆಯ ಕರದಾರರು 2020-21 ನೇ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಏಪ್ರಿಲ್ ಮಾಸಾಂತ್ಯದೊಳಗೆ ಪಾವತಿಸಿದರೆ ಶೇ. 5 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷಾಶೆಟ್ಟಿ ತಿಳಿಸಿದ್ದಾರೆ.ಮೇ ಮತ್ತು ಜೂನ್ ತಿಂಗಳಲ್ಲಿ ಬಡ್ಡಿ ರಹಿತ ತೆರಿಗೆ ಪಾವತಿಸಲು ಅವಕಾಶವಿದೆ. ಆಸ್ತಿ ತೆರಿಗೆಯನ್ನು ಜೂ. 31 ರೊಳಗೆ ಪಾವತಿಸದಿದ್ದರೆ ಜು. 1 ರಿಂದ ಪ್ರತಿ ತಿಂಗಳು ಶೇ. 2 ರಷ್ಟು ದಂಡ ವಿಧಿಸಲಾಗುತ್ತದೆ. 2021-22 ನೇ ಆರ್ಥಿಕ […]

ಈ ತಿಂಗಳಾಂತ್ಯಕ್ಕೆ 24×7 ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನ ಪೂರ್ಣಗೊಳಿಸಲು ಶಾಸಕ ಯತ್ನಾಳ ಸೂಚನೆ

ಬಸವ ನಾಡು ವಿಜಯಪುರ- ವಿಜಯಪುರ ನಗರಕ್ಕೆ ನಿರಂತರ ನೀರು ಪೂರೈಸುವ 24×7 ಕುಡಿಯುವ ನೀರಿನ ಯೋಜನೆಯನ್ನು ಈ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೂಚನೆ ನೀಡಿದ್ದಾರೆ.ವಿಜಯಪುರ ನಗರದಲ್ಲಿರುವ ತಮ್ಮ ಸಾರ್ವಜನಿಕ ಸಂಪರ್ಕ ಕಾರ್ಯಾಲಯದಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಮಾಜಿ ಸದಸ್ಯರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.ಈಗ ವಿಜಯಪುರ ನಗರದಲ್ಲಿ 10 ರಿಂದ 12 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. […]

ವಿಜಯಪುರ ನಗರದ ಹೊರವಲಯದ ಸ್ಟೋನ್ ಕ್ರಷರ್ ಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಬಸವನಾಡು ವಿಜಯಪುರ- ವಿಜಯಪುರ ಜಿಲ್ಲೆಯ ಐನಾಪೂರ ಗ್ರಾಮದಲ್ಲಿರುವ ಸ್ಟೋನ್ ಕ್ರಷರ್ ಘಟಕಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸ್ಟೋನ್ ಕ್ರಷರ್ ಗಳಿಗೆ ನೀಡಲಾಗಿರುವ ಫಾರಂ-ಬಿ, ಫಾರಂ-ಸಿ ಮತ್ತು ಫಾರಂ-ಸಿ ನವೀಕರಣ, ಪರಿಭಾವಿತ ವಿಸ್ತರಣೆ ನೀಡುವ ಸಂಬಂಧ ಈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಲ್ಲು ಪುಡಿ ಮಾಡುವ ಪ್ರಾಧಿಕಾರದ ಅಧ್ಯಕ್ಷರು ಸೇರಿದಂತೆ ಸದಸ್ಯರಾದ ಉಪವಿಭಾಗಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ, ಪರಿಸರ ಇಲಾಖೆ […]

ಸುಗಮ ವಿದ್ಯುತ್ ಸರಬರಾಜಿಗೆ 175 ಕಿ. ಮೀ. ಹೊಸ ಲೈನ್ ನಿರ್ಮಾಣ- ಶಾಸಕ ಎಂ. ಬಿ. ಪಾಟೀಲ

ವಿಜಯಪುರ- ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಹೆಸ್ಕಾಂ ಬಬಲೇಶ್ವರ ಉಪವಿಭಾಗ ವ್ಯಾಪ್ತಿಯಲ್ಲಿ, ಸಮರ್ಪಕ ವಿದ್ಯುತ್ ಪೂರೈಕೆ ನಿಟ್ಟಿನಲ್ಲಿ ರೂ. 7.33 ಕೋ. ವೆಚ್ಚದಲ್ಲಿ 174.34 ಕಿ.ಮೀ ಹೊಸ 11 ಕೆ. ವಿ. ಲೈನ್ ನಿರ್ಮಿಸುವ 28 ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ವಿಧಾನಸಭೆ ಕ್ಷೇತ್ರವು ಸಂಪೂರ್ಣ ನೀರಾವರಿಗೆ ಒಳಪಟ್ಟಿದೆ. ನೀರಿನ ಬಳಕೆಗಾಗಿ ರೈತರಿಗೆ ವಿದ್ಯುತ್ ಅವಲಂಬನೆ ಅನಿವಾರ್ಯವಾಗಿದೆ. ಕೇಲವು ಫೀಡರಗಳು […]

ನೀರಾವರಿ ಯೋಜನೆಗಳಿಂದಾಗಿ ಜಿಲ್ಲೆಯಲ್ಲಿ ನೀರಿನ ಬವಣೆ ತಪ್ಪಿದೆ- ಎಂ. ಬಿ. ಪಾಟೀಲ

ಬಸವ ನಾಡು ವಿಜಯಪುರ, ಮಾ. 31- ವಿಜಯಪುರ ಜಿಲ್ಲೆ ನೀರಾವರಿಗೆ ಒಳಪಟ್ಟಿದ್ದರಿಂದ ಬೇಸಿಗೆ ಸಮಯದಲ್ಲೂ ನೀರಿನ ಕೊರತೆ ತಪ್ಪಿದೆ. ಇದರಿಂದಾಗಿ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕಾರಣವಾಗಿದೆ ಎಂದು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ರೈತ ಸಂಘಗಳು ಮತ್ತು ವರ್ಡ್ ವಿಜನ್ ಇಂಡಿಯಾ ಎ. ಪಿ. ವಿಜಯಪುರ ಸಹಯೋಗದಲ್ಲಿ ಹಂಚಿನಾಳ ಪಿ. ಎಚ್. ಗ್ರಾಮದಲ್ಲಿ ಆಯೋಜಿಸಲಾಗಿದ್ದ ಪಿವಿಸಿ ಪೈಪ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವರ್ಡ್ ವಿಜನ್ ಸಂಸ್ಥೆ […]

ಶಾಲೆ-ಕಾಲೇಜುಗಳ ವ್ಯಾಪ್ತಿಯಲ್ಲಿ ತಂಬಾಕೋತ್ಪನ್ನಗಳು ಮಾರಾಟವಾಗದಂತೆ ಎಚ್ಚರಿಕೆ ವಹಿಸಿ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಎಚ್ಚರಿಕೆ

ಬಸವನಾಡುವಿಜಯಪುರ, ಮಾ. 30- ಕೊಟ್ಪಾ ಕಾಯ್ದೆಯಡಿ ವಿಜಯಪುರ ಜಿಲ್ಲೆಯ ಶಾಲಾ, ಕಾಲೇಜು ಆವರಣದಿಂದ 100 ಮೀಟರ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನಗಳು ಮಾರಾಟವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಮತ್ತು ಐ ಡಿ ಎಸ್ ಪಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿಜಯಪುರ ಜಿಲ್ಲೆಯ 100 ಕಾಲೇಜುಗಳನ್ನು […]

ವಿಜಯಪುರ ಜಿಲ್ಲೆಯ ಬ್ಯಾಂಕುಗಳ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಿದ ಗೋವಿಂದರೆಡ್ಡಿ

ವಿಜಯಪುರ, ಮಾ. 27- ವಿಜಯಪುರ ಜಿಲ್ಲೆಯ ಬ್ಯಾಂಕುಗಳ 2021-22ನೇ ಆರ್ಥಿಕ ವರ್ಷದ ರೂ. 8040.27 ಕೋ. ಹಣಕಾಸು ವಿನಿಯೋಗ ಹೊಂದಿರುವ ಎಲ್ಲಾ ಬ್ಯಾಂಕರ್‌ಗಳಿಗೆ ವಾರ್ಷಿಕ ಸಾಲ ಯೋಜನೆ (ಎಸಿಪಿ) ಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ್ ರೆಡ್ಡಿ ಅವರು ಬಿಡುಗಡೆ ಮಾಡಿದರು. ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಡಿಎಲ್‌ಸಿಸಿ ಸಭೆಯಲ್ಲಿ ಸಾಲ ಯೋಜನೆಯಡಿ ರೂ. 5932.72 ಕೋ. (73.79%) ಕೃಷಿ, ರೂ. 865.85 ಕೋ. (10.77%) ಎಂಎಸ್‌ಎಂಇ ಮತ್ತು ಇತರ ಆದ್ಯತೆಯ ವಲಯಕ್ಕೆ […]

ಆಹಾರ ವಸ್ತುಗಳ ಪೂರೈಕೆಯಲ್ಲಿ ಗ್ರಾಹಕರಿಗೆ ಮೋಸವಾಗಬಾರದು- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ, ಮಾ. 25- ಆಹಾರ ವಸ್ತುಗಳು ಗ್ರಾಹಕರ ಆರೋಗ್ಯಕ್ಕೆ ಮಾರಕವಾಗಬಾರದು. ಗ್ರಾಹಕರಿಗೆ ಮೋಸವಾಗದಂತೆ ಆಹಾರ ವಸ್ತುಗಳನ್ನು ಪೂರೈಸಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಕರೆ ನೀಡಿದ್ದಾರೆ.ವಿಜಯಪುರದಲ್ಲಿ ಜಿ. ಪಂ. ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷತಾ ಇಲಾಖೆ, ಕೆ.ಎಫ್.ಸಿ.ಎಸ್.ಸಿ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ನ್ಯೂ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಗ್ರಾಹಕರ […]

ಬಬಲೇಶ್ವರ ಗ್ರಾ. ಪಂ. ಈಗ ಪ.ಪಂ. ಆಗಿ ಮೇಲ್ದರ್ಜೆಗೆ- ಶಾಸಕ ಎಂ. ಬಿ. ಪಾಟೀಲ

ವಿಜಯಪುರ, ಮಾ. 25- ವಿಜಯಪುರ ಜಿಲ್ಲೆಯ ಬಬಲೇಶ್ವರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿಸಿ ಸರಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ ಎಂದು ಸ್ಥಳೀಯ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ಈ ಕುರಿತು ರಾಜ್ಯ ಸರಕಾರ ಕರ್ನಾಟಕ ರಾಜ್ಯ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ವಿಜಯಪುರ ತಾಲೂಕಿನ ಬಬಲೇಶ್ವರ ಗ್ರಾಮ ಪಂಚಾಯತಿಯೊಂದಿಗೆ ಮಜರೆ ಗ್ರಾಮ, ಅಡವಿ ಸಂಗಾಪುರ ಗ್ರಾಮಗಳನ್ನು ಒಳಗೊಂಡು ಬಬಲೇಶ್ವರ ಪಟ್ಟಣ […]