ಅಗರಖೇಡದಲ್ಲಿ 49 ಮಿಮಿ, ಇಂಡಿಯಲ್ಲಿ 35 ಮಿಮಿ ಮಳೆ- ಬಸವನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆ, ಆಸ್ತಿಹಾನಿ ಎಷ್ಟು ಗೊತ್ತಾ?

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು, ಮೂರು ಮನೆಗಳು ಹಾನಿಗೀಡಾಗಿವೆ.   ವಿಜಯಪುರ ಜಿಲ್ಲೆಯ ನಾನಾ ಕಡೆ ಸುರಿದ ಮಳೆಯ ವಿವರ ಇಲ್ಲಿದೆ.  ವಿಜಯಪುರ ತಾಲೂಕು ವಿಜಯಪುರ ನಗರ- 16.6 ಮಿಮಿ ನಾಗಠಾಣ- 0.16 ಮಿಮಿ ಭೂತ್ನಾಳ- 1.2 ಮಿಮಿ ಹಿಟ್ನಳ್ಳಿ- 5.0 ಮಿಮಿ ಕುಮಟಗಿ- 0.4 ಮಿಮಿ ಬಬಲೇಶ್ವರ ತಾಲೂಕು ಮಮದಾಪುರ- 6.0 ಮಿಮಿ ಬಬಲೇಶ್ವರ- 3.8 ಮಿಮಿ ತಿಕೋಟಾ ತಾಲೂಕು ತಿಕೋಟಾ- 4.2 ಮಿಮಿ ಕನ್ನೂರ- 00 ಮಿಮಿ […]

ತರಕಾರಿ ಬೆಲೆ ಗಗನಕ್ಕೆ: ಸಹಪಾಠಿಗಳಿಗೆ ಬೀಜ ನೀಡಿ ವಿನೂತನವಾಗಿ ಜನ್ಮದಿನ ಆಚರಿಸಿಕೊಂಡ ಬಾಲಕ

ವಿಜಯಪುರ: ಇತ್ತೀಚೆಗೆ ತರಕಾರಿ ಬೆಲೆ ಗಗನಮುಖಿಯಾಗಿದೆ.  ಅದರಲ್ಲೂ ಕೆಂಪು ಬಂಗಾರ ಎಂದೇ ಈಗ ಕರೆಯಲಾಗುತ್ತಿರುವ ಟೊಮೆಟೊ ಬೆಲೆಯಂತೂ ಬಡವರಷ್ಟೇ ಯಾಕೆ, ಮಧ್ಯಮ ವರ್ಗದವರಿಗೂ ಕೈಗೆಟುಕದಂತಾಗಿದೆ.  ಮಕ್ಕಳಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಸಾಮಾನ್ಯ ಜ್ಞಾನ ಒದಗಿಸುವ ನಿಟ್ಟನಲ್ಲಿ ಮತ್ತು ಹಣದ ಮಹತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಪ್ರೇರಣಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅರವಿಂದ ಪಾಟೀಲ ವಿನೂತನ ಜ್ಞಾನಹಂಚಿಕೆ ಮಾಡುತ್ತಲೇ ಇರುತ್ತಾರೆ. ಈಗ ಗಗನಕ್ಕೇರಿರುವ ತರಕಾರಿ ಬೆಲೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಮತ್ತು ಅದಕ್ಕೆ ಪರಿಹಾರವಾಗಿ […]

ರಾಜನಾಳ ತಾಂಡಾದಲ್ಲಿ ಶಾಲೆಯಲ್ಲಿ ಪಾಠದ ಬದಲು ಮೈದಾನದಲ್ಲಿ ಆಟವಾಡುತ್ತಿರುವ ಮಕ್ಕಳು- ಯಾಕೆ ಗೊತ್ತಾ

ವಿಜಯಪುರ: ಎಸ್. ಡಿ. ಎಂ. ಸಿ ಅಂದರೆ ಶಾಲಾ ಅಭಿವೃದ್ಧಿ ನಿರ್ವಹಣೆ ಸಮಿತಿ ಮಕ್ಕಳ ವಿದ್ಯಾಭ್ಯಾಸದ ಗುಣಮಟ್ಟದ ಶಿಕ್ಷಣದ ಪರಿಶೀಲನೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವುದು ಸಾಮಾನ್ಯ. ಆದರೆ, ಇಂಥ ಎಸ್. ಡಿ. ಎಂ. ಸಿ ಅಧ್ಯಕ್ಷರು ಮಕ್ಕಳಿಗೆ ಪಾಠ ಮಾಡಿಸುವ ಬದಲು ಆಟಕ್ಕೆ ಬಿಟ್ಟರೆ ಹೇಗಿರಬೇಡ? ಆಟವಾಡುವುದೆಂದರೆ ಮಕ್ಕಳಿಗೆ ಸಿಗುವ ಮಜವೇ ಬೇರೆ.  ಆದರೆ, ಪಾಠ ಬೇಡ ಎಂದು ಆಟಕ್ಕೆ ಕಳುಹಿಸಿದರೆ ಪೋಷಕರೂ ತಕರಾರು ಮಾಡುವುದುಂಟು.  ಆದರೆ, ಇಲ್ಲಿ ಯಾರೂ ಈ ಬಗ್ಗೆ ತಕರಾರು […]

ಗ್ರಾಮ ಪಂಚಾಯಿತಿ ಚುನಾವಣೆ: ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ ಡಿಸಿ ಟಿ. ಭೂಬಾಲನ

ವಿಜಯಪುರ: ಜಿಲ್ಲೆಯ ನಾನಾ ಗ್ರಾಮ ಪಂಚಾಯಿತಿಗಳಿಗೆ ಜು. 23 ರಂದು ಸಾರ್ವತ್ರಿಕ ಹಾಗೂ ಉಪ ಚುನಾವಣೆ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಟಿ. ಭೂಬಾಲನ ಆದೇಶ ಹೊರಡಿಸಿದ್ದಾರೆ. ಮತದಾನ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು 144ರನ್ವಯ ಪ್ರತಿಬಂಧಕಾಜ್ಞೆಯನ್ನು ವಿಧಿಸಿರುವ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಟಿ. ಭೂಬಾಲನ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರ, ಬಳಬಟ್ಟಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ […]

ಹೊನವಾಡ ಗ್ರಾ. ಪಂ. ಗೆ ಜಿ. ಪಂ. ಸಿಇಓ ರಾಹುಲ ಶಿಂಧೆ ಭೇಟಿ: ನಾನಾ ಕಾಮಗಾರಿಗಳ ಪರಿಶೀಲನೆ

ವಿಜಯಪುರ: ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ತಿಕೋಟಾ ತಾಲೂಕಿನ ಹೊನವಾಡ ಗ್ರಾ.  ಪಂ. ಗೆ ಭೇಟಿ ನೀಡಿ ನಾನಾ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಹೊನವಾಡ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡ ಅಮೃತ ಸರೋವರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಈ ಅಮೃತ ಸರೋವರ ಕಾಮಗಾರಿಯನ್ನು ಹಸಿರು ಸರೋವರ ಅಂತಾ ಆಯ್ಕೆ ಮಾಡಿದ್ದು, ಸರೋವರದ ದಡದಲ್ಲಿ ವಿವಿಧ ರೀತಿಯ ಉತ್ತಮ ಗುಣಮಟ್ಟದ ಸಸಿಗಳನ್ನು ನಾಟಿ ಮಾಡಬೇಕು. ಸರೋವರದ ಸುತ್ತಲೂ ಸ್ಥಳೀಯವಾಗಿ […]

ಎನ್.ಎಸ್.ಎಸ್. ಶಿಬಿರಗಳು ಸಹಬಾಳ್ವೆ, ಸೇವಾಭಾವ ಬೆಳೆಸುತ್ತವೆ- ರಿಯಾಜ್ ಫಾರೂಖಿ

ವಿಜಯಪುರ: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಕಲಿಸುವದರೊಂದಿಗೆ ಸೇವಾ ಮನೋಭಾವ, ಸಹಬಾಳ್ವೆಯ ಬದುಕನ್ನು ಬೆಳೆಸುತ್ತವೆ ಎಂದು ಸಿಕ್ಯಾಬ್ ಎ. ಆರ್. ಎಸ್. ಇನಾಮದಾರ ಪದವಿ ಮಹಿಳಾ ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಚೇರಮನ್‌ ರಿಯಾಜ್ ಫಾರೂಖಿ ಹೇಳಿದರು.  ನಗರದ ಸಿಕ್ಯಾಬ್ ಪದವಿ ಮಹಿಳಾ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಎನ್. ಎಸ್. ಎಸ್. ಘಟಕ ಸುಹಾಗ ಕಾಲನಿಯಲ್ಲಿ ಆಯೋಜಿಸಿದ್ದ ವಿಶೇಷ ಶಿಬಿರ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಉದ್ಘಾಟಿಸಿದ ವಿಜಯಪುರ ಮಹಾನಗರ ಪಾಲಿಕೆಯ […]

ಸಾಂತ್ವನ ಕೇಂದ್ರ, ವೃದ್ಧಾಶ್ರಮಕ್ಕೆ ಜಿ. ಪಂ. ಸಿಇಓ ರಾಹುಲ ಶಿಂಧೆ ಭೇಟಿ, ಪರಿಶೀಲನೆ

ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನದಲ್ಲಿ ವಿಜಯಪುರ ನಗರದಲ್ಲಿ ನಡೆಯುತ್ತಿರುವ ಸಾಂತ್ವನ ಕೇಂದ್ರ ಮತ್ತು ವೃದ್ಧಾಶ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಗಣೇಶ ನಗರದಲ್ಲಿ ಶ್ರೀಧರ ಸ್ವಾಮಿ ವಿದ್ಯಾವರ್ಧಕ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿ, ಸಾಂತ್ವನ ಕೇಂದ್ರದ ಮುಖ್ಯಸ್ಥ ಕೆ.ಎನ್.ಮೇಟಿ ಅವರಿಂದ ಕೇಂದ್ರದ ಕಾರ್ಯನಿರ್ವಹಣೆ ಹಾಗೂ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಅವರು, ನೊಂದವರಿಗೆೆ ಸಮರ್ಪಕವಾಗಿ ಸ್ಪಂದಿಸುವುದರೊAದಿಗೆ ಅವರಲ್ಲಿ […]

ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಏಳಿಗೆ ಸಾಧ್ಯ- ಡಾ. ಆರ್. ಬಿ. ಕೊಟ್ನಾಳ

ವಿಜಯಪುರ: ಗ್ರಾಮಗಳ ಅಭಿವೃದ್ಧಿಯಿಂದ ದೇಶ ಏಳಿಗೆ ಸಾಧ್ಯ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಹೇಳಿದ್ದಾರೆ. ಕನ್ನಾಳ ಗ್ರಾಮದಲ್ಲಿ  ಬಿ. ಎಲ್. ಡಿ. ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್. ಎಸ್. ಎಸ್ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ನಾವೆಲ್ಲರೂ ಶ್ರಮಿಸಬೇಕು.  ಭಾರತ ಹಳ್ಳಿಗಳಿಂದ ಕೂಡಿರುವ ದೇಶವಾಗಿದ್ದು, ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ದಿಯಾದಂತೆ.  ಇದರಿಂದ  ಮಹಾತ್ಮ […]

ದರಬಾರ ಕಾಲೇಜಿನಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ

ವಿಜಯಪುರ: ನಗರದ ಶ್ರೀಮತಿ ಕುಮುದಬೇನ ದರಬಾರ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯುವ ಕೌಶಲ್ಯ ದಿನ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಗುರುಪಾದಯ್ಯಾ ಹೀರೆಮಠ, ಉದ್ಯೋಗ ಪಡೆಯಲು ಅಗತ್ಯವಾಗಿರುವ ಕೌಶಲ್ಯಗಳ ಮಹತ್ವವನ್ನು ವಿವರಿಸಿದರು. ನಮ್ಮ ದೇಶದಲ್ಲಿ ಇರುವ ಸರಕಾರಿ ಉದ್ಯೋಗಗಳು ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಅವಕಾಶಗಳ ಬಗ್ಗೆ ಹಾಗೂ ಅವುಗಳಿಗೆ ಬೇಕಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಅ;ರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು […]

ಕೇರಿಂಗ್ ಸೋಲ್ಸ್ ವತಿಯಿಂದ ಸ್ವಯಂ ಸೇವಕರಿಗೆ ಸನ್ಮಾನ

ವಿಜಯಪುರ: ಸಮಾಜಕ್ಕಾಗಿ ದುಡಿದ, ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಶ್ರಮಜೀವಿಗಳಿಗೆ ಕೇರಿಂಗ್ ಸೋಲ್ಸ್ ಇಂಡಿಯಾ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದಲ್ಲಿ ಸಿಕ್ಯಾಬ್ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ವಿಭಾಗದ ಮುಖಸ್ಥ ಡಾ. ಎಸ್. ಎ. ಖಾದ್ರಿ ಮತ್ತು ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಅಬ್ಬಾಸ ದುಂಡಸಿ ಮಾತನಾಡಿ, ಪ್ರತಿಯೊಬ್ಬರು ಸಮಾಜಕ್ಕೆ ಕೊಡುಗೆ ನೀಡಿದಾಗ ಜೀವನಕ್ಕೊಂದು ಅರ್ಥ ಬರುತ್ತದೆ.  ಇಂಥ ಸಮಾಜ ಸೇವಕರಿಗೆ ಈ ಕೇರಿಂಗ್ ಸೋಲ್ಸ್ ಗುರುತಿಸಿ ಅವರನ್ನು ಸಹ ಸನ್ಮಾನಿಸುವುದು ಶ್ಲಾಘನೀಯವಾಗಿದೆ.  ಸಮಾಜಕ್ಕೆ ದುಡಿಯುವವರು ಕುಟುಂಬ, ಮನೆ, […]