ಕುಡಿಯುವ ನೀರಿನ ಸಮಸ್ಯೆ: ಗ್ರಾ. ಪಂ. ಯತ್ ಮಟ್ಟದಲ್ಲಿ ಕಾರ್ಯಪಡೆ ರಚಿಸಿ ಕಾರ್ಯ ನಿರ್ವಹಿಸಲು ಡಿಸಿ ಡಾ. ದಾನಮ್ಮನವರ ಸೂಚನೆ
ವಿಜಯಪುರ: ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಗ್ರಾ. ಪಂ. ಮಟ್ಟದಲ್ಲಿ ಗ್ರಾ. ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಗ್ರಾಮ ಮಟ್ಟದಲ್ಲಿ ರಚಿತವಾಗುವ ಕಾರ್ಯಪಡೆ ಸಮಿತಿಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ, ವಿಎ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರರನ್ನೊಳಗೊAಡ ಸಮಿತಿಯು […]
ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನ ಆಚರಣೆ
ವಿಜಯಪುರ: ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಲೋಯೋಲಾ ಅಂತರರಾಷ್ಟ್ರೀಯ ಕಾಲೇಜಿನಲ್ಲಿ ನಡೆದ ಜಾಥಾವನ್ನು ಲೋಯೋಲಾ ಸಂಸ್ಥೆಯ ಫಾ. ಟೇಲರ್ ಮತ್ತು ಮಾನಸಿಕ ಆರೋಗ್ಯ ಕಾರ್ಯಕ್ರಮದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಎಸ್. ಎಂ. ಗುಣಾರಿ ಜಂಟಿಯಾಗಿ ಚಾಲನೆ ನೀಡಿದರು. ನಂತರ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಎಸ್. ಎಂ. ಗುಣಾರಿ, ಎಲ್ಲ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು. ಸ್ವಸ್ಥ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ […]
ಬಾಕಿ ಬಿಲ್ ಹಣ ಪಾವತಿಸಲು ಆಗ್ರಹ- ಗುತ್ತಿಗೆದಾರರ ಸಂಘದಿಂದ ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ
ವಿಜಯಪುರ: ಕಳೆದ ಎರಡು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ. ಆರ್. ರೂಡಗಿ, ನಾನಾ ಇಲಾಖೆಗಳಲ್ಲಿ ಹಾಗೂ ನಿಗಮಗಳಲ್ಲಿ ಕೆಲಸ ನಿರ್ವಹಿಸಿರುವ ಗುತ್ತಿಗೆದಾರರ ಬಿಲ್ ಗಳು ಕಳೆದ ಎರಡು ವರ್ಷದಿಂದ ಭಾಗಶಃ ಬಟವಡೆಯಾಗಿರುತ್ತವೆ. ಇದರಿಂದ ಗುತ್ತಿಗೆದಾರರಿಗೆ ಆರ್ಥಿಕವಾಗಿ ತೀವ್ರ ತೂಂದರೆಯಾಗಿದೆ. ಅಲ್ಲದೇ, […]
ಆರತಿ ಬೆಳಗಿ, ಕುಂಬಳಕಾಯಿ ಒಡೆದು ಪಿಎಸ್ಐ ಸ್ವಾಗತಿಸಿದ ಅಭಿಮಾನಿಗಳು- ಚಡಚಣಕ್ಕೆ ಬಂದ ಮಹಾದೇವ ಯಲಿಗಾರಗೆ ವಿನೂತನ ಗೌರವ
ವಿಜಯಪುರ: ಪೊಲೀಸ್ ಠಾಣೆಗೆ ಮೂರನೇ ಬಾರಿ ವರ್ಗವಾಗಿ ಬಂದ ಪಿ.ಎಸ್.ಐ ಯನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿ ವಿನೂತನ ರೀತಿಯಲ್ಲಿ ರೀತಿಯಲ್ಲಿ ಸ್ವಾಗತಿಸಿದ ಅಪರೂಪದ ವೆಲ್ ಕಮ್ ಕಾರ್ಯಕ್ರಮ ಭೀಮಾ ತೀರದ ಚಡಚಣ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪಿ.ಎಸ್.ಐ. ಮಹಾದೇವ ಯಲಿಗಾರ 3ನೇ ಬಾರಿಗೆ ಚಡಚಣ ಪೊಲೀಸ್ ಠಾಣೆಗೆ ಪಿ.ಎಸ್.ಐ ಆಗಿ ವರ್ಗಾವಣೆಯಾಗಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಚಡಚಣ ಪಟ್ಟಣದ ಅವರ ಅಭಿಮಾನಿಗಳು ಮತ್ತು ಪಟ್ಟಣದ ನಿವಾಸಿಗಳು ಐಬಿಯಿಂದ ಪೊಲೀಸ್ ಠಾಣೆಯವರೆಗೆ ಮೆರವಣಿಗೆಯಲ್ಲಿ ಕರೆತಂದು ಅಭಿಮಾನ ತೋರಿದರು. […]
ವಿದ್ಯುತ್ ದರ ಹೆಚ್ಚಳಕ್ಕೆ ವಿರೋಧ- ಜೂ. 22 ರಂದು ವಿಜಯಪುರ ಬಂದ್ ಗೆ ಕರೆ ನೀಡಿದ ನಾನಾ ಸಂಘಟನೆಗಳು
ವಿಜಯಪುರ: ವಿದ್ಯುತ್ ದರ ಹೆಚ್ಚಳ ವಿರೋಧಿಸಿ ನಾನಾ ಸಂಘಟನೆಗಳು ಜೂ. 22ರಂದು ವಿಜಯಪುರ ಬಂದ್ ಕರೆ ನೀಡಿವೆ. ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾನಾ ಸಂಘಟನೆಗಳ ಮುಖಂಡರು ಪಾಲ್ಗೋಂಡು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಾನಾ ಮುಖಂಡರು, ರಾಜ್ಯ ಸರಕಾರ ವಿದ್ಯುತ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿದೆ. ಇದರಿಂದಾಗಿ ಕೈಗಾರಿಕೋದ್ಯಮಕ್ಕೆ ಹೊಡೆತ ಬೀಳಲಿದೆ. ಗ್ರಾಹಕರಿಗೂ ಇದು ಹೊರೆಯಾಗಲಿದೆ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಔದ್ಯೋಗಿಕ ರಂಗ, ಆಯಿಲ್ ಮಿಲ್, ಜಿನ್ನಿಂಗ […]
ಮತಾಂತರ ನಿಷೇಧ ಕಾನೂನು ಹಿಂಪಡೆಯುವ ಸರಕಾರದ ನಿರ್ಧಾರಕ್ಕೆ ವಿರೋಧ- ವಿ ಎಚ್ ಪಿ ಕಾರ್ಯಕರ್ತರಿಂದ ಪ್ರತಿಭಟನೆ, ಮನವಿ ಪತ್ರ ಸಲ್ಲಿಕೆ
ವಿಜಯಪುರ: ರಾಜ್ಯ ಸರಕಾರ ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಲು ನಿರ್ಧರಿಸಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೇ, ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ಪ್ರಸಾರ ಪ್ರಮುಖ ಸುನೀಲ ಭೈರವಾಡಗಿ, ಭಾರತವು ಹಿಂದೂ ರಾಷ್ಟ್ರವಾಗಿದ್ದು ಇಲ್ಲಿ ಹಿಂದುಗಳೊಡನೆ ಅನ್ಯ ಧರ್ಮೀಯರೂ ಸಹ ಸಹಬಾಳ್ವೆಯನ್ನು ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಕರ್ನಾಟಕದಲ್ಲಿಯೂ ಹಿಂದೂಗಳೊಡನೆ, ಅನ್ಯ ಧರ್ಮೀಯರೂ ಸಹ ತಮ್ಮ […]
ಆಲಮೇಲದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಡಾ. ದಾನಮ್ಮನವರ ಸೂಚನೆ
ವಿಜಯಪುರ: ನೂತನ ತಾಲೂಕು ಕೇಂದ್ರವಾಗಿರುವ ಆಲಮೇಲದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಹಸೀಲ್ದಾರಗೆ ಸೂಚನೆ ನೀಡಿದ್ದಾರೆ. ಆಲಮೇಲದ ರಾಯಲ್ ಫಂಕ್ಷನ್ ಹಾಲ್‍ನಲ್ಲಿ ನಡೆದ ಮೀಸಲಾತಿ ನಿಗದಿ ಸಭೆಯ ನಂತರ ಆಲಮೇಲ ನಗರದಲ್ಲಿ ಮಿನಿ ವಿಧಾನಸೌಧ ನಿರ್ಮಾಣದ ಉದ್ದೇಶಿತ ಸ್ಥಳಕ್ಕೆಅವರು ಸಿಂದಗಿ ಶಾಸಕ ಅಶೋಕ ಮನಗೂಳಿ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಯುಕೆಪಿ ಕ್ವಾಟರ್ಸ್ ಸರ್ವೆ ನಂಬರ್ 606ರಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಡಿಸಿ […]
ಗ್ರಾಮಗಳ ಅಭಿವೃದ್ಧಿ, ಗ್ರಾ. ಪಂ. ಸದಸ್ಯರ ಹಿತಕಾಯಲು ಸದಾ ಬದ್ಧನಾಗಿದ್ದೇನೆ- ಸುನೀಲಗೌಡ ಪಾಟೀಲ
ವಿಜಯಪುರ: ಗ್ರಾಮ ಪಂಚಾಯಿತಿಗಳು ಮತ್ತು ಗ್ರಾ. ಪಂ. ಜನಪ್ರತಿನಿಧಿಗಳ ಹಿತ ಕಾಪಾಡಲು ಸದಾ ಬದ್ಧನಾಗಿದ್ದೇನೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಯಕ್ಕುಂಡಿ ಗ್ರಾಮದಲ್ಲಿ ಅಂಗನವಾಡಿ ನೂತನ ಕಟ್ಟಡ ಮತ್ತು ಅರ್ಜುಣಗಿ ಗ್ರಾಮದಲ್ಲಿ ಎನ್. ಆರ್. ಎಲ್. ಎಂ. ಕಟ್ಟಡ, ಘನತ್ಯಾಜ್ಯ ಘಟಕ ಹಾಗೂ ಗೋದಾಮು ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಜಲ ಜೀವನ ಮಿಶನ್ ಯೋಜನೆ(ಜೆಜೆಎಂ) ಜಾರಿ ಸಂದರ್ಭದಲ್ಲಿ ಸರಕಾರ ಫಲಾನುಭವಿಗಳಿಂದ ವಂತಿಗೆ ಮತ್ತು ಮತ್ತು ಗ್ರಾಮ […]
ಬಾಲ ಕಾರ್ಮಿಕ ಪದ್ಧತಿ ಪಿಡುಗು ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ: ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ
ವಿಜಯಪುರ: ಬಾಲ ಕಾರ್ಮಿಕ ಪದ್ಧತಿಯ ಸಂಪೂರ್ಣ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದ್ದಾರೆ. ನಗರದ ಸಂತ ಅನ್ನಮ್ಮನವರ ದೇವಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ […]
ಯಂಕಂಚಿಯಲ್ಲಿ ಜಡೆ ತಲೆ ಪೂಜಾರಿಗಳು, ಪಟ್ಟದ ಪೂಜಾರಿಗಳ ಆರನೇ ಧರ್ಮ ಸಭೆ
ವಿಜಯಪುರ : ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಡೆ ತೆಲೆ ಪೂಜಾರಿಗಳು ಹಾಗೂ ಪಟ್ಟದ ಪೂಜಾರಿಗಳ ಆರನೆಯ ಧರ್ಮಸಭೆ ಹಾಲುಮತದ ಕುಲದೇವರಾದ ಶ್ರೀ ಬೀರಲಿಂಗೇಶ್ವರನಿಗೆ ಎಲ್ಲ ಪೂಜಾರಿಗಳಿಂದ ವಿಶೇಷ ಪೂಜೆ ಮಾಡಿ ಧರ್ಮಸಭೆ ನಡೆಸಲಾಯಿತು. ಈ ಧರ್ಮಸಭೆಯ ಸಾನಿಧ್ಯವನ್ನು ಮಹಾಳಿಂಗರಾಯ ಮಾರಾಯರು, ನಾಗಠಾಣ ಕೆಂಚರಾಯ ಮುತ್ತ್ಯಾ, ಮಾಲಹಳ್ಳಿ ಲಕ್ಕಪ್ಪ ಮುತ್ತ್ಯಾ ಪೂಜಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಳಿಂಗರಾಯ ಮಹಾರಾಜರು, ಸಮಾಜದ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸುವುದು, ರಾಜ್ಯದ ಎಲ್ಲಾ ಪೂಜಾರಿಗಳನ್ನು ಒಂದುಗೂಡಿಸುವದಕ್ಕಾಗಿ […]