ಡೋಮನಾಳ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟ ನಾಗಠಾಣ ಶಾಸಕ ವಿಠ್ಠಲ ಧೋ. ಕಟಕದೊಂಡ

ವಿಜಯಪುರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಾಗಠಾಣ(ಮೀ) ಕಾಂಗ್ರೆಸ್ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ ಡೋಮನಾಳ ಗ್ರಾಮದ ದಾವಲಮಲೀಕ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಶಾಸಕರು, ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮವನ್ನು ಉತ್ತೇಜಿಸುವ ವಿಶ್ವಸಂಸ್ಥೆಯ ಪ್ರಮುಖ ವಾಹನವಾಗಿದೆ.  1974 ರಲ್ಲಿ ಮೊದಲ ಬಾರಿಗೆ ನಡೆದ ಇದು ಸಮುದ್ರ ಮಾಲಿನ್ಯ, ಮಾನವ ಜನಸಂಖ್ಯೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಹೊರಹೊಮ್ಮುವ ಪರಿಸರ ಸಮಸ್ಯೆಗಳ ಬಗ್ಗೆ ಸುಸ್ಥಿರ ಬಳಕೆ ಮತ್ತು […]

ಜಲ ಬಿರಾದಾರಿ ವತಿಯಿಂದ ಶ್ರಮದಾನ, ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

ವಿಜಯಪುರ: ನಗರದ ಬಾಗಲಕೋಟ್ ರಸ್ತೆಯಲ್ಲಿರುವ ಅನಾಥಾಶ್ರಮದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿಜಯಪುರ ಜಲ ಬಿರಾದರಿ ವತಿಯಿಂದ ಶ್ರಮದಾನ ಮತ್ತು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಜಲ ಬಿರಾದರಿ ಜಿಲ್ಲಾಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಅವರು ಜಲ ಬಿರಾದರಿಯಿಂದ ಸಂಗ್ರಹಿಸಿಟ್ಟ 101ನದಿಗಳ ನೀರಿನಿಂದ ಪಂಚ ಭೂತಗಳಾದ ಬೆಂಕಿ, ನೀರು, ಗಾಳಿ, ಪೃಥ್ವಿ, ಆಕಾಶ, ಇವುಗಳಿಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಿದರು.  ಅಲ್ಲದೇ, ಸಸಿ ನೆಟ್ಟರು. ಬಳಿಕ ಮಾತನಾಡಿದ ಅವರು, ಇಂದು ಮನುಷ್ಯನ […]

ಶ್ರೀ ರುಕ್ಮಾಂಗದ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವೃಕ್ಷ ದತ್ತು ಯೋಜನೆಗೆ ಚಾಲನೆ

ವಿಜಯಪುರ: ನಗರದ ಶ್ರೀ ರುಕ್ಮಾಂಗದ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ವೃಕ್ಷ ದತ್ತು ಯೋಜನೆ ಪ್ರಾರಂಭಿಸಲಾಗಿದೆ.  ಈ ಯೋಜನೆಯಂತೆ ವಿದ್ಯಾರ್ಥಿಗಳು ಶಾಲೆಗೆ ಗಿಡಗಳನ್ನು ನೀಡಿ ಒಂದು ವರ್ಷಗಳ ಕಾಲ ಇವುಗಳನ್ನು ಪೋಷಣೆ ಮಾಡಲಿದ್ದಾರೆ.  ಈ ಯೋಜನೆಗೆ ವಿದ್ಯಾರ್ಥಿಗಳೇ ಚಾಲನೆ ನೀಡಿದ್ದು ಗಮನಾರ್ಹವಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಶಿಕ್ಷ ಆನಂದ ಕುಲಕರ್ಣಿ ಮಾತನಾಡಿ, ಇಂಥ ಯೋಜನೆಗಳು ಪರಿಸರದ ಬಗ್ಗೆ ಕಾಳಜಿಯನ್ನು ಹೆಚ್ಚಿಸುವುದರ ಜೊತೆಗೆ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ.  ಮಕ್ಕಳಲ್ಲಿ ಪರಿಸರದ ಮೇಲೆ […]

ಅಗ್ನಿ ಅವಘಡ ಮುಂಜಾಗ್ರತೆ ಕ್ರಮ ಕುರಿತು ಅಣುಕು ಪ್ರದರ್ಶನ

ವಿಜಯಪುರ: ಜಿಲ್ಲಾ ವಿಪತ್ತು ನಿರ್ವಹಣಾ ಕೋಶ, ಕಾರ್ಖಾನೆ ಹಾಗೂ ಬಾಯ್ಲರಗಳ ಇಲಾಖೆ ಮತ್ತು ನಂದಿ ಸಕ್ಕರೆ ಕಾರ್ಖಾನೆ ಇವರ ವತಿಯಿಂದ ಬಬಲೇಶ್ವರ ತಾಲೂಕಿನ ಗಲಗಲಿಯ ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಅಗ್ನಿ ಅವಘಡಗಳಲ್ಲಿ ಜಾಗೃತಿ-ಅನುಸರಿಸಬೇಕಾದ ಕ್ರಮಗಳ ಕುರಿತು ಅಣುಕು ಪ್ರದರ್ಶನ ನಡೆಯಿತು. ಜಿಲ್ಲಾಧಿಕಾರಿಗಳಾದ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರ ಮಾರ್ಗದರ್ಶನದಂತೆ ಅಣುಕು ಪ್ರದರ್ಶನ ನಡೆಸಲಾಯಿತು. ಅಪಾಯದ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗೃತೆ ಕ್ರಮಗಳು ಹಾಗೂ ತೆಗೆದುಕೊಳ್ಳಬೇಕಾದ ಸುರಕ್ಷತೆ ಕುರಿತು ನಂದಿ ಸಕ್ಕರೆ ಕಾರ್ಖಾನೆಯ ಸುಮಾರು 300ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ […]

ಬಿಸಿಯೂಟ ಅಡುಗೆ ಸಿಬ್ಬಂದಿಗಳಿಗೆ ಸಮವಸ್ತ್ರ ವಿತರಣೆ- ಬಸವ ನಾಡಿನಲ್ಲಿ ರಾಜ್ಯದಲ್ಲಿಯೇ ಮೊದಲ ಸಲ ವಿತರಣೆ

ವಿಜಯಪುರ: ಶಾಲಾ ಮಕ್ಕಳಿಗೆ ರುಚಿ-ಶುಚಿಯಾದ ಮಧ್ಯಾಹ್ನದ ಬಿಸಿಯೂಟ ತಯಾರಿಕೆ ಮಾಡುವ ಅಡುಗೆ ಸಿಬ್ಬಂದಿಗಳಿಗೆ ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಸಮವಸ್ತ್ರ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ವಿಜಯಪುರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರರವರ ಸಹಯೋಗದಲ್ಲಿ 2023-24ನೇ ಶೈಕ್ಷಣಿಕ ವರ್ಷದ ವಿಶೇಷ ದಾಖಲಾತಿ ಆಂದೋಲನ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ ಹಾಗೂ ಡೇ-ನಲ್ಮ್ ದೀನದಯಾಳ ಅಂತ್ಯೋದಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಗಳ ಸಹಭಾಗಿತ್ವದಲ್ಲಿ ವಿಜಯಪುರ ನಗರದ ಸರ್ಕಾರಿ […]

ದೀಪಕ ಶಿಂತ್ರೆ ಅವರಿಗೆ ಪತ್ರಕರ್ತ ರತ್ನ ಪ್ರಶಸ್ತಿ

ವಿಜಯಪುರ: ನಗರದ ಹಿರಿಯ ಪತ್ರಕರ್ತ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಸಹ ಖಜಾಂಚಿ ದೀಪಕ ಶಿಂತ್ರೆ ಅವರು ಮಹಾರಾಷ್ಟ್ರ ರಾಜ್ಯ ಪತ್ರಕರ್ತರ ಸಂಘ ಪತ್ರಕರ್ತ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  ಕಳೆದ 25 ವರ್ಷಗಳಿಂದ ಪತ್ರಿಕಾ ರಂಗದಲ್ಲಿ1998ರಿಂದ ಸಕ್ರೀಯರಾಗಿರುವ ದೀಪಕ ಶಿಂತ್ರೆ ಅವರು ಮಹಾರಾಷ್ಟ್ರದ ಮರಾಠಿ ದಿನಪತ್ರಿಕೆಗಳಾದ ಸಂಚಾರ, ತರುಣ ಭಾರತ, ಸ್ವರಾಜ್ಯ (ಸೊಲಾಪೂರ), ಲಲಕಾರ, ಮಹಾ ಸತ್ತಾ (ಸಾಂಗಲಿ) ಅಲ್ಲದೇ ಬೆಳಗಾವಿಯಿಂದ ಪ್ರಕಟವಾಗುವ ಪುಡಾರಿ ಹಾಗೂ ಸ್ವತಂತ್ರ ಪ್ರಗತಿ ಮರಾಠಿ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.  ಅಲ್ಲದೇ, ಕೈಫಿಯತ್ […]

ಮೇ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾದ ಎಂಟು ಹಕ್ಕೋತ್ತಾಯ ಈಡೇರಿಸಲು ಆಗ್ರಹಿಸಿ ಮನವಿ ಪತ್ರ ಸಲ್ಲಿಕೆ

ವಿಜಯಪುರ: ನಗರದಲ್ಲಿ ಮೇ 27 ಮತ್ತು 28 ರಂದು ನಡೆದ 9ನೇ ಮೇ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾದ ಎಂಟು ಹಕ್ಕೋತ್ತಾಯಗಳನ್ನು ಈಡೇರಿಸಲು ಆಗ್ರಹಿಸಿ ಲಡಾಯಿ ಪ್ರಕಾಶನ, ಕವಿ ಪ್ರಕಾಶನ, ಚಿತ್ತಾರ ಕಲಾ ಬಳಗ ಮ್ತತು ಮೇ ಸಾಹಿತ್ಯ ಮೇಳ ಬಳಗದ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಅನಿಲ ಹೊಸಮನಿ, ಮೇ 27 ಮತ್ತು 28 ರಂದು ವಿಜಯಪುರದಲ್ಲಿ […]

ಬುಧವಾರ ಶಾಲೆಗಳು ಪುನಾರಂಭ: ಮಕ್ಕಳ ಸ್ವಾಗತಕ್ಕೆ ಶಾಲೆಗಳಲ್ಲಿ ಅಗತ್ಯ ಸಿದ್ಧತೆ- ಜಿ. ಪಂ. ಸಿಇಒ ರಾಹುಲ ಶಿಂಧೆ ಮನವಿ

ವಿಜಯಪುರ: 2023-24ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 31 ಬುಧವಾರದಿಂದ ಪ್ರಾರಂಭವಾಗುತ್ತಿದ್ದು,ಶಾಲಾ ಕೊಠಡಿ ಹಾಗೂ ಶಾಲಾ  ಆವರಣವನ್ನು ಸ್ವಚ್ಛಗೊಳಿಸಿ ಎಲ್ಲಾ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಸಿಇಓ ರಾಹುಲ್ ಶಿಂಧೆ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ 3345 ಶಾಲೆಗಳಲ್ಲಿ 5.28 ಲಕ್ಷ ಮಕ್ಕಳಿದ್ದು, ಶಾಲೆಗಳನ್ನು ಅಲಂಕರಿಸಿ ಮಕ್ಕಳನ್ನು ಸ್ವಾಗತಿಸಲು ಕ್ರಮ ಕೈಗೊಳ್ಳಲಾಗಿದೆ.  ಎಲ್ಲ ಮಕ್ಕಳಿಗೂ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆ ಮಾಡಲು ಸಹ ಸಿದ್ಧತೆ […]

ವಿಜಯಪುರ ತಾಲೂಕಿನ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಓ ರಾಹುಲ ಶಿಂಧೆ

ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ ಶಿಂಧೆ ಅವರು ವಿಜಯಪುರ ತಾಲೂಕಿನ ನಾನಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನಾನಾ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿ ಪರಿಶೀಲನೆ ನಡೆಸಿದರು. ಹಡಗಲಿ ಎಲ್ ಟಿ  ಗ್ರಾಮದ  ಅಂಗನವಾಡಿ ಕಟ್ಟಡ ನಿರ್ಮಾಣದ ಕಾರ್ಯ ಪರಿಶೀಲಿಸಿದರು. ಹಡಗಲಿ   ಎಲ್ ಟಿ-2 ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಅಂಗನವಾಡಿ ಮಕ್ಕಳಿಗೆ ಒದಗಿಸುವ ಪೌಷ್ಠಿಕ ಆಹಾರದ ವಿವರ ಪಡೆದುಕೊಂಡರು.  ಹಡಗಲಿ ಗ್ರಾಮದ ಸರಕಾರಿ ಹಿರಿಯ […]

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಿ- ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ

ವಿಜಯಪುರ: ಮಳೆಗಾಲ ಆರಂಭವಾಗಿರುವುದರಿಂದ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಮತ್ತು ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಡೆಂಗ್ಯೂಮತ್ತು ಮಲೇರಿಯಾ ರೋಗಗಳ ಸ್ಥಿತಿಗತಿ, ನಿವಾರಣೆ ಹಾಗೂ ಕಾರ್ಯತಂತ್ರದ ಬಗ್ಗೆ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಮುಂಜಾಗೃತೆ ಕ್ರಮಗಳನ್ನು ಕೈಗೊಂಡು ಡೆಂಗ್ಯೂ ಮಲೇರಿಯಾ ರೋಗ […]