ಚುನಾವಣೆ ಕಾರ್ಯದಲ್ಲಿ ಯಾವುದೇ ತಾಂತ್ರಿಕ ಅಡಚಣೆ ಉಂಟಾಗದಂತೆ ಅಗತ್ಯ ಕ್ರಮಕ್ಕೆ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ

ವಿಜಯಪುರ: ಚುನಾವಣೆ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಅಡೆತಡೆ ಉಂಟಾಗದಂತೆ ಮತದಾನ ನಡೆಯುವ ದಿನದಂದು ವೆಬ್‍ಕಾಸ್ಟಿಂಗ್ ಸೇರಿದಂತೆ ಮತದಾನದ ಮಾಹಿತಿ ವಿವರಗಳನ್ನು ತತಕ್ಷಣದಲ್ಲಿ ನೀಡಲು ಯಾವುದೇ ಅಡೆತಡೆಯಾಗದಂತೆ ಏರ್‍ಟೆಲ್-ಜಿಯೋ ಸೇರಿದಂತೆ ಹೈಸ್ಪೀಡ್ ಇಂಟರ್‍ನೆಟ್ ಸೇವೆ ಸೌಲಭ್ಯ ಒದಗಿಸುವಂತೆ ಸೇವಾದಾರರಿಗೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಜರುಗಿದ ಚುನಾವಣಾ ಕಾರ್ಯಕ್ಕೆ ನಿಯೋಜಿತ ನೋಡಲ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ, ಅವರು,ಜಿಲ್ಲೆಯಲ್ಲಿ ಒಟ್ಟು 2072 ಮತಗಟ್ಟೆ ಸ್ಥಾಪಿಸಲಾಗಿದೆ.ಚುನಾವಣಾ […]

ಜಲನಗರ ಬಸ್ ನಿಲ್ದಾಣಕ್ಕೆ ಅಂದವಾದ ಬಣ್ಣ ಹಚ್ಚಿ ಚಂದ ಮಾಡಿದ ಗಾನಯೋಗಿ ಸಂಘದ ಯುವಕರು

ವಿಜಯಪುರ: ನಗರದಲ್ಲಿ ಹದಗೆಟ್ಟಿದ್ದ ಜಲನಗರ ಬಸ್ ಸ್ಟಾಪ್ ನ್ನು ಗಾನಯೋಗಿ ಸಂಘದ ಯುವಕರು ಅಂದವಾದ ಬಣ್ಣ ಹಚ್ಚಿ ಚಂದವಾಗಿ ಕಾಣುವಂತೆ ಮಾಡಿದ್ದಾರೆ.  ಅಷ್ಟೇ ಅಲ್ಲ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆದರ್ಶ ಗುಣಗಳ ಹಾಗೂ ಅವರ ಸಂಕ್ಷೀಪ್ತ ಮಾಹಿತಿಯ ಕುರಿತು ಫಲಕಗಳನ್ನು ಬಸ್ ನಿಲ್ದಾಣದಲ್ಲಿ ಅಳವಡಿಸಿದ್ದಾರೆ. ಈ ಸಂದರ್ಭದಲ್ಲಿ ಗಾನಬನ ಸಂಘದ ಅಧ್ಯಕ್ಷ ಪ್ರಕಾಶ ಆರ್. ಕೆ ಮಾತನಾಡಿ, ವಿಜಯಪುರ ಮಗರದ ಜನತೆ ಈ ಬಸ್ ನಿಲ್ದಾಣವನ್ನು ಶುಚಿಯಾಗಿಟ್ಟು ಪರಿಸರವನ್ನು ಸುಂದರವಾಗಿಡಬೇಕು ಎಂದು ಮನವಿ […]

ಎಸ್.ಎಸ್.ಎ ಪರೀಕ್ಷೆ ಕೇಂದ್ಲ್ರ ಗಳಿಗೆ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಭೇಟಿ, ಪರಿಶೀಲನೆ

ವಿಜಯಪುರ: ಜಿಲ್ಲಾದ್ಯಂತ 147 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಗಳು ಆರಂಭಗೊಂಡಿದ್ದು, ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಶುಕ್ರವಾರ ನಗರದ ಟಿಟಿಐ ಆವರಣದಲ್ಲಿರುವ ಸರ್ಕಾರಿ ಉರ್ದು ಪ್ರೌಢ ಶಾಲೆ ಹಾಗೂ ಬಾಗಲಕೋಟೆ ರಸ್ತೆಯಲ್ಲಿರುವ ಪಿಡಿಜೆ ಪ್ರೌಢ ಶಾಲೆ ಹಾಗೂ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪಾರದರ್ಶಕ ಹಾಗೂ ನಕಲು ಮುಕ್ತ ಪರೀಕ್ಷೆಗಳು ನಡೆಯುವಂತೆ ನೋಡಿಕೊಳ್ಳುವಂತೆ ತಿಳಿಸಿದ ಅವರು, ಪರೀಕ್ಷಾ ಕೇಂದ್ರಗಳ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪರೀಕ್ಷಾರ್ಥಿಗಳು […]

ವಿಧಾನಸಭೆಗೆ ಚುನಾವಣೆ: ಜಿಲ್ಲೆಯಲ್ಲಿ 39851 ಹೊಸ ಮತದಾರರ ಸೇರ್ಪಡೆ: ಎಂಟು ಕ್ಷೇತ್ರಗಳಲ್ಲಿ ಒಟ್ಟು 18.78 ಲಕ್ಷ ಮತದಾರರು- ಡಿಸಿ ಡಾ. ದಾನಮ್ಮನವರ

ವಿಜಯಪುರ: ಕೇಂದ್ರ ಚುನಾವಣೆ ಆಯೋಗ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಿದ್ದು, ಮೇ 10ರಂದು ಬುಧವಾರ ಮತದಾನ ನಡೆಯಲಿದೆ.  ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ವೇಳಾಪಟ್ಟಿಯಂತೆ ಏ. 13 ರಂದು ಗುರುವಾರ ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ.  ಏ. 20 ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಏ. 21 ರಂದು ಶುಕ್ರುವಾರ ನಾಮಪತ್ರಗಳ […]

ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಿ ಗುಳೆ ತಡೆಯಲು ಕ್ರಮ: ಸಿಇಓ ರಾಹುಲ ಸಿಂಧೆ

ವಿಜಯಪುರ: ಈ ವರ್ಷ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಶೇ.60 ರಷ್ಟು ಗುರಿ ಹೊಂದಲಾಗಿದೆ ಮತ್ತು ವಿಶೇಷಚೇತನರಿಗೂ ಕೂಡ ಆದ್ಯತೆ ನೀಡಲಾಗಿದೆ. ಬೇಸಿಗೆಯ ದಿನಗಳಲ್ಲಿ ಜನರು ಬೇರೆ ಊರಿಗೆ ಕೆಲಸ ಅರಸಿ ಗುಳೆ ಹೋಗುವುದನ್ನು ತಡೆಗಟ್ಟಲು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವಂತೆ ಅಧಿಕಾರಿಗಳಿಗೆ  ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, […]

ಧೂಳಾಪುರ ಅಪಖ್ಯಾತಿಯ ವಿಜಯಪುರ ಚಿತ್ರಣ ಬದಲು- ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ಉಳಿದವಂತೆ ನಾನು ಬೋಗಸ್ ಭೂಮಿಪೂಜೆ ಮಾಡುತ್ತಿಲ್ಲ.  ಅನುದಾನ ಬಿಡುಗಡೆಯಾಗಿ ಟೆಂಡರ್ ಮುಗಿದ ಬಳಿಕವೇ ಗುಣಮಟ್ಟದ ರಸ್ತೆಗಳ ಅಭಿವೃದ್ಧಿ ಮಾಡಲು ಭೂಮಿಪೂಜೆ ಮಾಡುತ್ತಿದೇನೆ ಎಂದು ಶಾಸಕ ಬಸನಗೌಡ ಆರ್. ಪಾಟೀಲ ಯತ್ನಾಳ ಹೇಳಿದ್ದಾರೆ.  ನಗರದ ವಾರ್ಡ್ ಸಂಖ್ಯೆ 1ರ ಸಂಗಮೇಶ್ವರ ಕಾಲೊನಿಯ ಆಂತರಿಕ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.  ಸಿಸಿ ರಸ್ತೆ ಕಾಣದ ನಗರದಲ್ಲಿ, ನನ್ನ ಅವಧಿಯಲ್ಲಿ ಅಭಿವೃದ್ದಿಗೊಂಡ ರಸ್ತೆಗಳು, ಸುಳ್ಳು ಹೇಳಿ ಹೋಗುವ ರಾಜಕಾರಣಿ ಅಲ್ಲ. ಹೇಳಿದಂತೆ ನಡೆದುಕೊಳ್ಳುವೆ ಎಂದು ಅವರು […]

ಕುಡಿಯುವ ನೀರನ್ನು ಕೃಷಿ ಚಟುವಟಿಕೆಗೆ ಬಳಸದಂತೆ ಡಿಸಿ ಡಾ. ದಾನಮ್ಮನವರ ಆದೇಶ

ವಿಜಯಪುರ: ಜಿಲ್ಲೆಯ ಎಲ್ಲ ಜಲ ಮೂಲಗಳಲ್ಲಿರುವ ನೀರನ್ನು ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕಾಗಿರುವುದರಿಂದ ಬೇರೆ ಉದ್ದೇಶಗಳಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಕುಡಿಯುವ ನೀರು ಬಳಕೆ ಮಾಡುವುದನ್ನು ನಿಷೇಧಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ. 16.02.2023ರ ಸಭೆಯ ನಿರ್ದೇಶನದಂತೆ ಕೆಬಿಜೆಎನ್‍ಎಲ್ ಕಾಲುವೆ ಜಾಲಗಳ ಮೂಲಕ ವಾರಾಬಂದಿ ಮೂಲಕ ಹರಿಸಲಾದ ನೀರನ್ನು ಕುಡಿಯುವ ನೀರಿನ ಸಲುವಾಗಿ ಎಲ್ಲ ಜಲಮೂಲಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರನ್ನು ಕೃಷಿ […]

ಅಂತಾರಾಜ್ಯ ಚೆಕಪೋಸ್ಟ್ ಗಳಿಗೆ ಡಿಸಿ ಡಾ. ದಾನಮ್ಮನವರ, ಎಸ್ಪಿ ಎಚ್. ಡಿ. ಆನಂದಕುಮಾರ ದಿಢೀರ್ ಭೇಟಿ

ವಿಜಯಪುರ: ಮುಂಬರುವ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ನಾನಾ ಕಡೆ ಸ್ಥಾಪಿಸಲಾದ ಚೆಕ್‌ಪೋಸ್ಟ್ ಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹಾಗೂ ಎಸ್ಪಿ  ಎಚ್. ಡಿ. ಆನಂದ ಕುಮಾರ ಅವರು ಶನಿವಾರ ತಡರಾತ್ರಿ  ದಿಢೀರ ಭೇಟಿ ನೀಡಿ ಚೆಕ್‌ಫೋಸ್ಟನ ಅಧಿಕಾರಿಗಳ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಿದರು. ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ, ಅಳಗಿನಾಳ ಸೇರಿದಂತೆ ನಾನಾ ಕಡೆ ಸ್ಥಾಪಿಸಲಾದ ಚೆಕ್‌ಪೋಸ್ಟ್ಗಳಿಗೆ ಭೇಟಿ ನೀಡಿದ ಅವರು, ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಚುನಾವಣಾ […]

ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಯುವಕನಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಿ ಹೃದಯ ವೈಶಾಲ್ಯತೆ ಮೆರೆದ ಎಂಎಲ್‌ಸಿ ಸುನೀಲಗೌಡ ಪಾಟೀಲ

ವಿಜಯಪುರ: ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಬಡ ಕಟ್ಟಡ ಕಾರ್ಮಿಕನಿಗೆ ಶಸ್ತ್ರಚಿಕಿತ್ಸೆಗೆ ನೆರವಾಗುವ ಮೂಲಕ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ವಿಜಯಪುರ ನಗರದ ಇಂಡಿ ರೋಡ್ ನಿವಾಸಿ ಹಣಮಂತ ಗೋಠೆ(28) ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಕಟ್ಟಡ ಕೂಲಿ ಕಾರ್ಮಿಕರಾಗಿರುವ ಈ ಯುವಕ ತಂದೆ, ತಾಯಿ ಮತ್ತು ಪತ್ನಿಯನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದರು. ಈ ವಿಷಯ ತಿಳಿದ ಸುನೀಲಗೌಡ ಪಾಟೀಲ ಅವರು, ಯುವಕನಿಗೆ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ […]

ನಗರಾಭಿವೃದ್ದಿ ಪ್ರಾಧಿಕಾರದ ಬಜೆಟ್ ಸಭೆ- ರೂ. 17.72 ಕೋ. ಉಳಿತಾಯ ಆಯವ್ಯಯ ಮಂಡಿಸಿದ ಆಯುಕ್ತ ಶಂಕರಗೌಡ ಸೋಮನಾಳ

ವಿಜಯಪುರ: ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ 2023-24ನೇ ಆರ್ಥಿಕ ವರ್ಷದಲ್ಲಿ ರೂ. 17.72 ಕೋ. ಉಳಿತಾಯ ಬಜೆಟ್ ಮಂಡನೆಯಾಗಿದೆ. ವಿಜಯಪುರ ನಗರ ಅಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಆಯುಕ್ತ ಶಂಕರಗೌಡ ಸೋಮನಾಳ ಆಯವ್ಯಯ ಮಂಡಿಸಿದರು.  ಈ ಸಭೆಯಲ್ಲಿ ಒಟ್ಟು ಅಂದಾಜು ರೂ. 122. 60 ಕೋ. ಆದಾಯ ಕ್ರೋಢೀಕರಿಸಲು ಮತ್ತು ರೂ. 104.88 ಕೋ. ವೆಚ್ಚ ಮಾಡಲು ಅನುಮೋದನೆ ನೀಡಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಶಾಸಕ ಬಸನಗೌಡ […]