ಸ್ವ ಅಧ್ಯಯನಶೀಲರಾಗಿ ಸಾಮರ್ಥ್ಯ ಬೆಳೆಸಿಕೊಂಡು ಉತ್ತಮ ಶಿಕ್ಷಕರಾಗಿ- ಪ್ರೊ. ಯು. ಕೆ. ಕುಲಕರ್ಣಿ

ವಿಜಯಪುರ: ಸ್ವ ಅಧ್ಯಯನಶೀಲರಾಗಿ ಸಾಮರ್ಥ್ಯ ಬೆಳೆಸಿಕೊಂಡಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಯು. ಕೆ. ಕುಲಕರ್ಣಿ ಹೇಳಿದರು. ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ, ಸ್ನಾತಕೋತ್ತರ ಶಿಕ್ಷಣ ಅಧ್ಯಯನ ಮತ್ತು ಸಂಶೋಧನಾ‌‌ ಕೇಂದ್ರದಲ್ಲಿ ಸ್ನಾತಕೋತ್ತರ ಶಿಕ್ಷಣ ವಿಭಾಗದ ಮೊದಲನೇ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಮತ್ತು ಪರಿಚಯಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಕ ಅವರು […]

ಪರಶುರಾಮ ರಜಪೂತ ವಿಡಿಎ ನೂತನ ಅಧ್ಯಕ್ಷ- ಉಳಿದ ಹೊಸ ಸದಸ್ಯರು ಯಾರು ಗೊತ್ತಾ?

ವಿಜಯಪುರ: ವಿಜಯಪುರ ನಗರಾಭಿವೃದ್ಧಿ ಪ್ಕಾಧಿಕಾರ ನೂತನ ಅಧ್ಯಕ್ಷರನ್ನಾಗಿ ಪರಶುರಾಮ ಸಿಂಗ್ ವಿ. ರಜಪೂತ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.  ವಿಜಯಪುರ ನಗರಸಭೆ ಮಾಜಿ ಅಧ್ಯಕ್ಷರೂ ಆಗಿರುವ ಪರಶುರಾಮಸಿಂಗ್ ವಿ. ರಜಪೂತ್ ಈಗ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವಾಗ ಹೊಸ ಜವಾಬ್ದಾರಿ ನೀಡಲಾಗಿದೆ.   ಅದರಂತೆ ನೂತನ ಸದಸ್ಯರನ್ನಾಗಿ ಅನೀಲ ಸಬರದ, ಮಡಿವಾಳ ಮರೆಪ್ಪ ಯಾಳವಾರ, ವೆಂಕಟೇಶ ಚಿದಂಬರರಾವ ಕುಲಕರ್ಣಿ, ಮಾಜಿ ಉಪಮೇಯರ್ ಲಕ್ಷ್ಮಿ ಬಾಗಪ್ಪ ಕನ್ನೊಳ್ಳಿ, ವಿಡಿಎ ಮಾಜಿ ಸದಸ್ಯ ರೇವಣಸಿದ್ದಪ್ಪ ಎಸ್. ಜಿರಲಿ […]

ಉತ್ತಮ ಜನಸ್ನೇಹಿ ಸೇವೆ ಒದಗಿಸಲು ಅಧಿಕಾರಿಗಳು ಮುಂದಾಗಬೇಕು- ಶಾಸಕ ರಮೇಶ ಭೂಸನೂರ

ವಿಜಯಪುರ: ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುವುದರ ಮೂಲಕ ಜನಸ್ನೇಹಿ ಆಡಳಿತ ನೀಡಲು ಸರಕಾರಿ ಅಧಿಕಾರಿ, ಸಿಬ್ಬಂದಿ ಮುಂದಾಗಬೇಕು ಎಂದು ಸಿಂದಗಿ ಶಾಸಕ ರಮೇಶ ಭೂಸನೂರ ಹೇಳಿದ್ದಾರೆ. ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿರು. ಈ ಕಟ್ಟಡ ಜನಸ್ನೇಹಿ ಕಟ್ಟಡವಾಗಿ ಹೊರಹೊಮ್ಮಲಿ.  ಕಚೇರಿಗೆ ಬರುವ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತಾಗಲಿ. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಕಚೇರಿ ಬರುವ ಸಾರ್ವಜನಿಕರನ್ನು ಪ್ರೀತಿ ವಿಶ್ವಾಸದಿಂದ ಸೇವೆ ಒದಗಿಸಲು ಮುಂದಾಗಬೇಕು. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವಂತಾಗಬಾರದು. ತ್ವರಿತಗತಿಯಲ್ಲಿ […]

ವಿಧಾನ ಸಭೆ ಚುನಾವಣೆ: ಮತ ಎಣಿಕೆ ಕೇಂದ್ರದ ಪೂರ್ವಭಾವಿ ಪರಿಶೀಲನೆ ನಡೆಸಿದ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ

ವಿಜಯಪುರ: ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ನಗರದ ಸೈನಿಕ ಶಾಲೆಗೆ ಭೇಟಿ ನೀಡಿ, ಮುಂಬರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಕೇಂದ್ರ ಭದ್ರತಾ ಕೊಠಡಿ ಸೇರಿದಂತೆ ನಾನಾ ಕೊಠಡಿಗಳ ಪರಿಶೀಲನೆ ನಡೆಸಿದರು. ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳ ದಾಸ್ತಾನು ಕೊಠಡಿ, ಮತ ಎಣಿಕೆ ಕೊಠಡಿ ಮತ್ತು ಭದ್ರತಾ ಕೊಠಡಿಗಳನ್ನು ಸ್ಥಾಪಿಸುವ ಕುರಿತು ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಫ್ ಕ್ಯಾಪ್ಟನ್ ಪ್ರತಿಭಾ ಬಿμï್ಟ ಹಾಗೂ […]

ಅಂಗದಾನ, ಮಣ್ಣು ಸಂರಕ್ಷಣೆ ಅರಿವು ಮೂಡಿಸಲು 57 ದಿನ ಏಂಕಾಂಗಿ ಸೈಕಲ್ ಜಾಥಾ- ಬಸವರಾಜ ಶಾಂತಪ್ಪ ದೇವರ ಅವರಿಗೆ ರೈಲು ನಿಲ್ದಾಣದಲ್ಲಿ ಸ್ವಾಗತ

ವಿಜಯಪುರ: ನಗರದ ಆಶ್ರಮ ಬಳಿಯ ಐಶ್ವರ್ಯ ನಗರದ ನಿವಾಸಿ ಮತ್ತು ಆರೋಗ್ಯ ಇಲಾಖೆ ನಿವೃತ್ತ ನೌಕರ ಬಸವರಾಜ ಶಾಂತಪ್ಪ ದೇವರ ಅಂಗದಾನ ಮತ್ತು ಮಣ್ಣು ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಏಕಾಂಗಿಯಾಗಿ 57 ದಿನ ಸೈಕಲ್ ಜಾಥಾ ಕೈಗೊಂಡಿದ್ದಾರೆ.  68ನೇ ವಯಸ್ಸಿನಲ್ಲಿಯೂ ಈ ನರ್ಮದಾ ಪರಿಕ್ರಮ ಕಾರ್ಯಕ್ರಮದಡಿ 3900 ಕಿ. ಮೀ. ಸೈಕಲ್ ಜಾತಾ ಮುಗಿಸಿಕೊಂಡು ವಾಪಸ್ಸಾದ ಅವರನ್ನು ದೇವರ ಕುಟುಂಬಸ್ಥರು ಮತ್ತು ಸ್ನೇಹಿತರು ಸ್ವಾಗತಿಸಿ ಬರಮಾಡಿಕೊಂಡರು.  ಈ ಸಂದರ್ಭದಲ್ಲಿ ಗುರುಶಾಂತ ನಿಡೋಣಿ, ಶ್ರೀಕಾಂತ ಕಟ್ಟಿಮನಿ, ಡಾ. […]

ಪಾರದರ್ಶಕ, ನಿರ್ಭೀತ ಚುನಾವಣೆಗೆ ಸಜ್ಜಾಗಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ

ವಿಜಯಪುರ: ಪಾರದರ್ಶಕ, ನಿರ್ಭಿತ, ನ್ಯಾಯ ಸಮ್ಮತ ಹಾಗೂ ಸುವ್ಯವಸ್ಥಿತ ಚುನಾವಣೆ ನಡೆಯುವಂತೆ ನೋಡಿಕೊಳ್ಳುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ರ  ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಆಗಮಿಸಿದ್ದ ಭಾರತ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯ ಸಲಹೆ ಸೂಚನೆಗಳನ್ನು […]

ಧಾರವಾಡ ಐಐಟಿ ಉನ್ನತ ಕೌಶಲ್ಯ ಕಾರ್ಯಕ್ರಮದಲ್ಲಿ ಪಾಲ್ಗೋಂಡ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸನ್ಮಾನ

ವಿಜಯಪುರ: ಧಾರವಾಡದಲ್ಲಿ ನಡೆದ ಗ್ಲೋಬಲ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಫಾರ್ಡೆಬಲ್ ಆ್ಯಂಡ್ ಕ್ಲೀನ್ ಎನರ್ಜಿ ಉನ್ನತ ಕೌಶಲ್ಯ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಬಿ. ಎಲ್. ಡಿ. ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಸರ್ವೇಶ ಮೈಂದರಗಿ, ಶೃಷ್ಟಿ ಬುದ್ನಿ, ಅಶೋಕ ಹೂಗಾರ, ಶಿವಲೀಲಾ ಪಾಟೀಲ, ಆದಿತ್ಯ ತಳವಾರ, ಬಸವರಾಜೇಶ್ವರಿ, ಸಂಜನಾ ಬಗಲಿ, ಶುಭಾ ಕಲ್ಯಾಣಮಠ ಮುಂತಾದವರು ಐಐಟಿ ಧಾರವಾಡದಲ್ಲಿ […]

ಕಳುವು, ಸುಲಿಗೆ, ಕಾಣೆಯಾದ ಮೊಬೈಲ್ ಫೋನ್ ಸೈಬರ್ ಕ್ರೈಂ ಗೆ ದುರ್ಬಳಕೆ ತಡೆಗೆ ಕೇಂದ್ರದಿಂದ ಕ್ರಮ- ಗಮನ ಹರಿಸಲು ಎಸ್ಪಿ ಎಚ್. ಡಿ. ಆನಂದಕುಮಾರ ಸೂಚನೆ

ವಿಜಯಪುರ: ಇತ್ತೀಚಿನ ದಿನಗಳಲ್ಲಿ ಕಳುವಾದ ಅಥವಾ ಕಾಣೆಯಾದ ಇಲ್ಲವೇ ಸುಲಿಗೆಯಾದ ಮೊಬೈಲ್ ಫೋನುಗಳನ್ನು ಸೈಬರ್ ಅಪರಾಧ ಅಥವಾ ನಾರ್ಕೋಟಿಕ್ಸ್ ಅಪರಾಧ ಸೇರಿದಂತೆ ನಾನಾ ಗಂಭೀರ ಅಪರಾಧಗಳಲ್ಲಿ ದುರ್ಬಳಕೆಯಾಗುತ್ತಿವೆ.  ಇಂಥ ಮೊಬೈಲ್ ಫೋನ್ ಗಳ ದುರ್ಬಳಕೆ ತಪ್ಪಿಸಲು ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆ ಮೊಬೈಲ್ ಫೋನ್ ಬ್ಲಾಕ್ ಮಾಡಲು CEIR(Central Equipment Identity Register) ಪೋರ್ಟಲ್ ಸೇವೆ ಆರಂಭಿಸಿದೆ.  ರಾಜ್ಯ ಪೊಲೀಸ್ ಇಲಾಖೆ ಕೂಡ ಈ ನಿಟ್ಟಿನಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕ್ರಮ ಕೈಗೊಂಡಿದೆ ಎಂದು […]

ಬೇಸಿಗೆ ಬಿಸಿಗಾಳಿ ಪರಿಸ್ಥಿತಿ ನಿಭಾಯಿಸಲು ವಿಜಯಪುರ ಜಿಲ್ಲಾಡಳಿತದಿಂದ ನಾನಾ ಸಲಹೆ

ವಿಜಯಪುರ: ಪ್ಸಸಕ್ತ ಬೇಸಿಗೆಯಲ್ಲಿ ಬಿಸಿಗಾಳಿ, ಸಿಡಿಲು ಪರಿಸ್ಥಿತಿ ನಿಭಾಯಿಸಲು ಸಾರ್ವಜನಿಕರು ಜಿಲ್ಲಾಡಳಿತದಿಂದ ನೀಡಿರುವ ಸಲಹೆ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಹವಾಮಾನ ಇಲಾಖೆಯಿಂದ ಮುನ್ಸೂಚನೆಗಳು, ರೇಡಿಯೋ ಟಿವಿ ದಿನಪತ್ರಿಕೆಗಳಲ್ಲಿ ಬರುವ ಅತಿಯಾದ ಬಿಸಿಲಿನ ಶಾಖದ ಕುರಿತು ಸಾರ್ವಜನಿಕರು ತಿಳಿದುಕೊಳ್ಳಬೇಕು.  ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು. ಟೋಪಿ. ಬೂಟುಗಳು. ಅಥವಾ ಚಪ್ಪಲಗಳನ್ನು ಬಳಸಿ ಹಗುರವಾದ ತಿಳಿ ಬಣ್ಣದ ಸಡಿಲವಾದ […]

ಮಾ. 18ರಂದು ಜಿಲ್ಲಾ ಮಟ್ಟದ ಫಲಾನುಭವಿ ಆಧಾರಿತ ಸಮಾವೇಶ- ಕಾರ್ಯಕ್ರಮ ಯಶಸ್ವಿಗೆ ಸಕಲ ಸಿದ್ಧತೆ ಕೈಗೊಳ್ಳಲು ಡಿಸಿ ಡಾ. ದಾನಮ್ಮನವರ ಸೂಚನೆ

ವಿಜಯಪುರ: ಕೇಂದ್ರ ಹಾಗೂ ರಾಜ್ಯ ಸರಕಾರದ ನಾನಾ ಯೋಜನೆಗಳ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಫಲಾನುಭವಿ ಆಧಾರಿತ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮಾ.18 ರಂದು ನಗರದ ಸೈನಿಕ ಶಾಲೆ ಮೈದಾನದಲ್ಲಿ ಜಿಲ್ಲಾ ಮಟ್ಟದ ಫಲಾನುಭವಿ ಆಧಾರಿತ ಸಮಾವೇಶ ಏರ್ಪಡಿಸಲು ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ.  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಫಲಾನುಭವಿ ಆಧಾರಿತ ಸಮಾವೇಶ ಪೂರ್ವಸಿದ್ಧತೆ ಕುರಿತು ನಾನಾ ಇಲಾಖೆ ಅಧಿಕಾರಿಗಳೊಂದಿಗೆ […]