ಎಂ. ಬಿ. ಪಾಟೀಲರ ಮನವಿಗೆ ಸ್ಪಂದಿಸಿ ಹೋರಾಟ ಕೈಬಿಟ್ಟ ಹೊಕ್ಕುಂಡಿ ರೈತರು

ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದಿ ಹಿನ್ನೆಲೆಯಲ್ಲಿ ಬಬಲೇಶ್ವರ ತಾಲೂಕಿನ ಹೊಕ್ಕುಂಡಿಯಲ್ಲಿ ರೈತರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ. ಹೊಕ್ಕುಂಡಿ ಮತ್ತು ತಿಗಣಿ ಬಿದರಿ ಭಾಗದಲ್ಲಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಅಲ್ಲಿನ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.  ಈ ವಿಷಯ ತಿಳಿದ ಎಂ. ಬಿ. ಪಾಟೀಲರು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ರೈತರ ಅಹವಾಲು ಸ್ವೀಕರಿಸಿದರು.  ಈ ಸಂದರ್ಭದಲ್ಲಿ ಕೆಬಿಜೆಎನ್‌ಎಲ್ ಬಬಲೇಶ್ವರ […]

ರಾಜಕೀಯ ಪಕ್ಷಗಳು ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ತಮ್ಮ ನಿಲುವ ಸ್ಪಷ್ಟಪಡಿಸಲಿ- ಸಂಗಮೇಶ ಬಬಲೇಶ್ವರ

ಬೆಂಗಳೂರು: ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟದ ಬಗ್ಗೆ ತಮ್ಮ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಎರಡು ವರ್ಷಗಳಇಂದ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯ ನಿರಂತರವಾಗಿ ಹೋರಾಟ ಮಾಡುತ್ತಿದೆ.  ಕೂಡಲ ಸಂಗಮದಿಂದ ಬೆಂಗಳೂರು ಅರಮನೆ ಮೈದಾನದವರೆಗೆ ಪಾದಯಾತ್ರೆ ಮಾಡಿ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಮಾಡಿದೆ.  ಪ್ರತಿ ಬಾರಿ ಮುಖ್ಯಮಂತ್ರಿಗಳು ಕೊಟ್ಟ ಸುಳ್ಳಿನ […]

ಬೆಂಗಳೂರಿನಲ್ಲಿ 48ನೇ ದಿನ ಪೂರೈಸಿದ ಪಂಚಮಸಾಲಿ ಮೀಸಲಾತಿ ಹೋರಾಟ- ಶ್ರೀಗಳನ್ನು ಭೇಟಿ ಬೆಂಬಲ ಸೂಚಿಸಿದ ಸಿ. ಎಸ್. ನಾಡಗೌಡ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಹೋರಾಟ 48ನೇ ದಿನ ಪೂರೈಸಿದೆ.   ಈ ಮಧ್ಯೆ, ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೋಂಡ ಮಾಜಿ ಸಚಿವ ಸಿ. ಎಸ್. ನಾಡಗೌಡ ಶ್ರೀಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.  ಅಲ್ಲದೇ, ಶ್ರೀಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪಂಚಸೇನೆಯ ರಾಜ್ಯಧ್ಯಕ್ಷ ಬಸನಗೌಡ ಪಾಟೀಲ(ನಾಗರಾಳ ಹುಲಿ), ರುದ್ರಗೌಡ ಅಂಗಡಗೇರಿ, ಸುರೇಶಗೌಡ […]

ಮಾ. 4ರಂದು ವಿದ್ಯುನ್ಮಾನ ಮತಯಂತ್ರಗಳ ತರಬೇತಿ- ಅಧಿಕಾರಿಗಳು ಕಡ್ಡಾಯವಾಗಿ ತರಬೇತಿ ಹಾಜರಾಗುವಂತೆ ಡಿಸಿ ಸೂಚನೆ

ವಿಜಯಪುರ: ಮುಂಬರುವ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸುಗಮವಾಗಿ ನಡೆಸಲುವ ನಿಟ್ಟಿನಲ್ಲಿ ನಾನಾ ಚುನಾವಣ ಕರ್ತವ್ಯಗಳಿಗೆ ನೇಮಿಸಿದ ತಂಡಗಳ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಚುನಾವಣೆ ವಿಷಯಗಳು, ಮಾದರಿ ನೀತಿ ಸಂಹಿತೆ ಹಾಗೂ ವಿದ್ಯುನ್ಮಾನ ಮತಯಂತ್ರಗಳ ನಿರ್ವಹನೆ ಕುರಿತು ಮಾ.4 ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ತರಬೇತಿ ಆಯೋಜಿಸಲಾಗಿದೆ.  ಅಂದು ಬೆ. 10 ರಿಂದ ಮ. 1ರ ವರೆಗೆ ಹಾಗೂ ಮಧ್ಯಾಹ್ನ 2.15ರಿಂದ ತರಬೇತಿ ಆಯೋಜಿಸಲಾಗಿದೆ.  ಈ ತರಬೇತಿಗೆ ಅತಿ ಮಹತ್ವದ್ದಾಗಿದ್ದು, ಎಲ್ಲ ಮತ ಕ್ಷೇತ್ರಗಳ ಚುನಾವಣಾಧಿಕಾರಿಗಳು, […]

ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಜ್ಞಾನ ದಿನ ಆಚರಣೆ

ವಿಜಯಪುರ: ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ದೇಶದ ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿಯಾಗುತ್ತದೆ ಎಂದು ವಿಜ್ಞಾನ ಸಂಘದ ಸಂಯೋಜಕ ಡಾ. ಜೆ. ಎಸ್. ಪಟ್ಟಣಶೆಟ್ಟಿ ಹೇಳಿದರು. ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ವಿಜ್ಞಾನ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಿಂದ ದೇಶದ ಎಲ್ಲ ಕ್ಷೇತ್ರಗಳ ಸಮತೋಲಿತ ಪ್ರಗತಿಗೆ ಅನುಕೂಲವಾಗುತ್ತದೆ.  ಮಾನವ ಜಗತ್ತಿನ ಯಾವ ಭಾಗದಲ್ಲಿದ್ದರೂ ಇದರ […]

ಅಕ್ವೇರಿಯಂ, ವೈನ್ ಪಾರ್ಕ್ ಗೆ ಜಿ. ಪಂ. ಸಿಇಓ ರಾಹುಲ ಶಿಂಧೆ ಭೇಟಿ, ಕಾಮಗಾರಿ ಪರಿಶೀಲನೆ

ವಿಜಯಪುರ: ಮೀನುಗಾರಿಕೆ ಅಕ್ವೇರಿಯಂ ಹಾಗೂ ತೊರವಿ ಗ್ರಾಮದಲ್ಲಿನ ವೈನ್ ಪಾರ್ಕಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದ ಹತ್ತಿರವಿರುವ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಮೀನುಗಾರಿಕೆ ಇಲಾಖೆಯ ಮುದ್ದು ಮೀನು ಸಂಗ್ರಾಲಯದ ಉನ್ನತೀಕರಣ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಪೆಟ್ ಬಾಂಡಿಂಗ್ ಏಜೆನ್ಸಿ ಬೆಂಗಳೂರು ಅವರಿಂದ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದಲ್ಲಿ […]

ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದ ಶಾಸಕ ಡಾ. ದೇವಾನಂದ ಚವ್ಹಾಣ

ವಿಜಯಪುರ: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸುವ ಮೂಲಕ ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಮಾನವೀಯತೆ ಮೆರೆದಿದ್ದಾರೆ. ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ತೆರಳಿದ್ದ ಶಾಸಕರು ಮರಳಿ ಬರುವಾಗ ದೇವರ ಹಿಪ್ಪರಗಿ- ಸಿಂದಗಿ ರಸ್ತೆಯಲ್ಲಿ ಬಸ್ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ನಾಲ್ಕೈದು ಜನರಿಗೆ ತೀವ್ರ ಗಾಯಗಳಾಗಿ ನರಳಾಡುತ್ತಿದ್ದರು.  ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.  ಈ ಸಂದರ್ಭದಲ್ಲಿ ಕಾರಿನಿಂದ ಇಳಿದ ಶಾಸಕರು ಕೂಡಲೇ ಆ್ಯಂಬುಲನ್ಸ್ ಗೆ ಕರೆ ಮಾಡಿ ಎಲ್ಲರನ್ನು ಅದರಲ್ಲಿ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟರು. […]

ಭೀಮಾ ತೀರದ ಚಡಚಣ ಸಹೋದರರ ಕೊಲೆ ಆರೋಪ ಪ್ರಕರಣ- ಮಹಾದೇವ ಸಾಹುಕಾರ ಭೈರಗೊಂಡ ಮತ್ತೀತರರ ವಿಚಾರಣೆ ಏ. 10ಕ್ಕೆ ಮುಂದೂಡಿದ ನ್ಯಾಯಾಲಯ

ವಿಜಯಪುರ: ಜಿಲ್ಲೆಯ ಭೀಮಾ ತೀರದ ಉಮರಾಣಿ ಗ್ರಾಮದ ಚಡಚಣ ಸಹೋದರರ ಕೊಲೆ ಆರೋಪ ಪ್ರಕರಣದ ವಿಚಾರಣೆಯನ್ನು ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಏ. 10ಕ್ಕೆ ಮುಂದೂಡಿದೆ. ಚಡಚಣ ಸಹೋದರರಾದ ಧರ್ಮರಾಜ ಚಡಚಣ ನಕಲಿ ಎನಕೌಂಟರ್ ಆರೋಪ ಮತ್ತು ಗಂಗಾಧರ ಚಡಚಣ ನಿಗೂಢ ಕೊಲೆ ಆರೋಪ ಪ್ರಕರಣದ ಕುರಿತು ಬೆಳಿಗ್ಗೆ ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏ. 10ಕ್ಕೆ ನಿಗದಿ ಮಾಡಿ ಮುಂದೂಡಿತು. ಈ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಗಳಾದ ಮಹಾದೇವ ಸಾಹುಕಾರ […]

ಜಿಲ್ಲಾ, ತಾಲೂಕು ತಳವಾರ ಮಹಾಸಭಾ ಸಭೆ- ನೂತನ ಪದಾಧಿಕಾರಿಗಳ ಆಯ್ಕೆ ನಾನಾ ಮುಖಂಡರು ಭಾಗಿ

ವಿಜಯಪುರ: ಜಿಲ್ಲಾ ಮತ್ತು ತಾಲೂಕು ಮಟ್ಟದ ತಳವಾರ ಮಹಾಸಭಾ ಸಮಿತಿ ಸಭೆ ನಗರದಲ್ಲಿ ನಡೆಯಿತು.  ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.  ಈ ಸಭೆಯಲ್ಲಿ ಮಾತನಾಡಿದ ಮಹಾಸಭಾದ ಸದಸ್ಯ ಸುರೇಶಗೌಡ ಪಾಟೀಲ, ಇಂದು ನಾವುಗಳು ಅಧಿಕಾರ ಸ್ವೀಕರಿದ್ದು, ಅತೀವ ಸಂತಸದ ಸಂಗತಿಯಾಗಿದೆ.  ಸಮಾಜದ ಕಳಕಳಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದು ನಮ್ಮೆಲ್ಲ ಆಧ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ತಳವಾರ ಸಮುದಾಯಕ್ಕೆ ದೊರಕಬೇಕಾದ ಮೂಲಸೌಕರ್ಯ, ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಸರಕಾರಕ್ಕೆ ಒತ್ತಡ ಹಾಕುವುದರಿಂದ ಸಮಾಜದ ವಿದ್ಯಾರ್ಥಿಗಳಿಗೆ, ರೈತರಿಗೆ ಅನುಕೂಲವಾಗಲಿದೆ ಎಂದು ಅವರು […]

ಮಾ. 9 ರಿಂದ 29ರ ವರೆಗೆ ದ್ವಿತೀಯ ಪಿಯು ಪರೀಕ್ಷೆ: ಜಿಲ್ಲೆಯಲ್ಲಿ ವ್ಯವಸ್ಥಿತ, ಪಾರದರ್ಶಕವಾಗಿ ನಡೆಸಲು ಡಾ. ದಾನಮ್ಮನವರ ಸೂಚನೆ

ವಿಜಯಪುರ: ಜಿಲ್ಲಾದ್ಯಂತ ಮಾ. 9 ರಿಂದ 29ರ ವರೆಗೆ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ವ್ಯವಸ್ಥಿತ ಮತ್ತು ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲಾದ್ಯಂತ 56 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಒಟ್ಟು 32268 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 30178 ಅಭ್ಯರ್ಥಿಗಳು ಈ ವರ್ಷಕ್ಕೆ […]