ಪಂಚಮಸಾಲಿ ಮೀಸಲಾತಿ ಹೋರಾಟ: ಬೆಂಗಳೂರಿನಲ್ಲಿ ಶ್ರೀಗಳ ಧರಣಿಯಲ್ಲಿ ವಿಜಯಪುರ ಜಿಲ್ಲೆಯಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ- ಶಂಕರಗೌಡ ಬಿರಾದಾರ ಮನವಿ

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪ್ರಥಮ ಜಗದ್ಗುರುಗಳಾದ ಬಸವಜಯ ಮೃತುಂಜಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಕಳೆದ 34 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಯುತ್ತಿದೆ.  ಈ ಧರಣಿ ಸತ್ಯಾಗ್ರಹದಲ್ಲಿ ವಿಜಯಪುರ ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರೀಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಎಸ್. ಬಿರಾದಾರ ಮನವಿ ಮಾಡಿದ್ದಾರೆ. ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಸರಕಾರ ಲಿಂಗಾಯತ ಪಂಚಮಸಾಲಿ […]

ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಆರೋಪ- ನ್ಯಾಯಾಲಯದಿಂದ ಆರೋಪಿಗಳಿಗೆ ಒಂದು ತಿಂಗಳು ಜೈಲು, ತಲಾ ರೂ. 11,500 ದಂಡ- ಎಸ್. ಎಚ್. ಹಕೀಂ

ವಿಜಯಪುರ: ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಒಂದು ತಿಂಗಳು ಜೈಲು ಶಿಕ್ಷೆ ಮತ್ತು ರೂ. 25000 ದಂಡ ವಿಧಿಸಿ ಆದೇಶ ಹೊರಡಿಸಿದೆ. ವಿಜಯಪುರ ನಗರದ ಬಿ.ಎಲ್.ಡಿ‌.ಇ ರಸ್ತೆಯಲ್ಲಿರುವ ಬಿದರಿಯವರ ಅಶ್ವಿನಿ ಆಸ್ಪತ್ರೆಯಲ್ಲಿ 26.07.2018ರಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ರಫೀಕ್ ಅಬ್ದುಲ್ ರಜಾಕ್ ಉಮರಾಣಿ ಮತ್ತು ಸೋಹೇಬ್ ಅಕ್ತರ್ ರುಕ್ಮುದ್ದೀನ್ ಗೌರಿ ಎಂಬುವರು ಆಸ್ಪತ್ರೆಯ ನರ್ಸ್ ಬಸವರಾಜ ದುಂಡಪ್ಪ ಝಳಕಿ ಎಂಬುವರ ಮೇಲೆ ಹಲ್ಲೆ ನಡೆದಿದ್ದಾರೆ ಎಂದು ವಿಜಯಪುರ […]

ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿ- ವಿಚ್ಛೇದನ ಕೋರಿ ಬಂದ ದಂಪತಿಗಳ ಮನವೊಲಿಕೆ ಸೇರಿ 7124 ಪ್ರಕರಣ ಇತ್ಯರ್ಥ

ವಿಜಯಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯಾದ್ಯಂತ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಯಶಸ್ವಿಯಾಗಿದೆ.  ಲೋಕ ಅದಾಲತ್‍ನಲ್ಲಿ ಒಟ್ಟು 7124 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ತಿಳಿಸಿದ್ದಾರೆ. ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ ದಂಪತಿಗಳಿಗೆ ತಿಳಿವಳಿಕೆ ನೀಡಿ, ಮನವೊಲಿಸುವ ಮೂಲಕ ವಿಚ್ಛೇದನದಿಂದ ಹಿಂದೆ ಸರಿದು, ಪರಸ್ಪರ ಉತ್ತಮ ಸಮನ್ವಯತೆಯಿಂದ ಜೀವನ ಸಾಗಿಸುವಂತೆ ತಿಳಿಹೇಳಿ ವ್ಯಾಜ್ಯವನ್ನು ಇತ್ಯರ್ಥಪಡಿಸಲಾಯಿತು.  ಅಲ್ಲದೇ, ಇನ್ನೊಂದು […]

ಚಿನ್ನದಂಗಡಿಯಲ್ಲಿ ಹಣ ಕಿತ್ತುಕೊಳ್ಳಲು ವಿಫಲ ಯತ್ನ- ಗಾಳಿಯಲ್ಲಿ ಗುಂಡು ಹಾರಿಸಿದ ಖದೀಮರು- ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

ವಿಜಯಪುರ: ಚಿನ್ನದಂಗಡಿಯಲ್ಲಿ ಬೆದರಿಸಿ ಹಣ ದರೋಡೆ ಮಾಡಲು ಬಂದಿದ್ದ ದುರ್ಷ್ಕಮಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಸಾರ್ವಜನಿಕರನ್ನು ಹೆದರಿಸಿ ಆತಂಕ ಸೃಷ್ಠಿಸಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ಸಿಂದಗಿ ಪಟ್ಟಣದ ಶಾಂತವೀರ ಮಠದ ರಸ್ತೆಯ ಪಕ್ಕದಲ್ಲಿ ಕಾಳು ಪತ್ತಾರ ಎಂಬುವರಿಗೆ ಸೇರಿದ ನ್ಯೂ ಚಾಮುಂಡೇಶ್ವರಿ ಜ್ಯುವೆಲರ್ಸ್ ಅಂಗಡಿ ಬಳಿ ಈ ಘಟನೆ ನಡೆದಿದೆ.  ಸಂಜೆ ಚಿನ್ನದ ಅಂಗಡಿಗೆ ಬಂದಿದ್ದ ದುಷ್ಕರ್ಮಿಗಳು, ಜುವೆಲರ್ಸ್ ಅಂಗಡಿಗೆ ನುಗ್ಗಿ ಚಿನ್ನಾಭರಣ ಕಳ್ಳತನಕ್ಕೆ ಯತ್ಸಿಸಿದ್ದಾರೆ.  ಈ ಸಂದರ್ಭದಲ್ಲಿ ಅಂಗಡಿಗೆ ಬಂದಿದ್ದ ಆಲಮೇಲ […]

ಮಕ್ಕಳನ್ನು ಸನ್ಮಾರ್ಗದೆಡೆಗೆ ಕರೆದೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ- ಉಮಾಶ್ರಿ

ವಿಜಯಪುರ: ಮಕ್ಕಳನ್ನು ಸನ್ಮಾರ್ಗದಡೆಗೆ ಕರೆದೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಚಿತ್ರ ನಟಿ ಮತ್ತು ಮಾಜಿ ಸಚಿವೆ ಉಮಾಶ್ರಿ ಹೇಳಿದ್ದಾರೆ. ನಗರದಲ್ಲಿ ಆಕ್ಸಫರ್ಡ್ ಐಐಟಿ ಓಲಂಪಿಯಾಡ್ ಶಾಲೆ ಆಯೋಜಿಸಿದ್ದ ದಿ ಇವನಿಂಗ್ ಆಫ್ ಮರ್ಯಾಲಿಟಿ ಹೆಸರಿನ ವಿಶೇಷ ಪರಿಕಲ್ಪನೆಯ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಳಗೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ಮಕ್ಕಳಿಗೆ ಜನ್ಮ ನೀಡಿದರೆ ಸಾಲದು.  ಅವರಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸಂಸ್ಕಾರವಂತ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಪಾಲಕರು, ಶಿಕ್ಷಕರು, ಶಿಕ್ಷಣ […]

ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಭೀಮಸೇನ ಕೋಕರೆ ನೇತೃತ್ವದಲ್ಲಿ ರಾಜ್ಯ ನಿಯೋಗದಿಂದ ಸಿಎಂ ಬೊಮ್ಮಾಯಿ ಭೇಟಿ- ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆಗ್ರಹ

ಬೆಂಗಳೂರು: ಭಾರತೀಯ ಕಿಸಾನ್ ಸಂಘದ(ಬಿ ಎಸ್ ಕೆ) ರಾಜ್ಯಾಧ್ಯಕ್ಷ ಭೀಮಸೇನ ಎಂ. ಕೋಕರೆ ನೇತೃತ್ವದ ರಾಜ್ಯ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದೆ. ಈಗಾಗಲೇ ರೈತರಿಗಾಗಿ ರೂಪಿಸಲಾಗಿರುವ ನೀರಾವರಿ ಮತ್ತು ಕೃಷಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು.  ಅಲ್ಲದೇ, ಸಂಪುಟದಲ್ಲಿ ಅನುಮೋದನೆಯಾಗಿರುವ ಯೋಜನೆಗಳ ಜಾರಿಗೆ ತ್ವರಿತವಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ಈ ನಿಯೋಗ ಮುಖ್ಯಮಂತ್ರಿಗಳನ್ನು ಒತ್ತಾಯಿಸಿತು. ನಿಯೋಗದ ಮನವಿಗೆ ಸ್ಪಂದಿಸಿದ ಬಸವರಾಜ ಬೊಮ್ಮಾಯಿ, ಈ ನಿಟ್ಟಿನಲ್ಲಿ ಕೂಡಲೇ […]

ಸರಕಾರದ ಯೋಜನೆಯ ಲಾಭ ವಿಕಲಚೇತನರಿಗೆ ದೊಕರಕಿಸಲು ಕ್ರಮ ಕೈಗೊಳ್ಳಲಿ- ಡಾ. ದಾನಮ್ಮನವರ

ವಿಜಯಪುರ: ಸರಕಾರ ವಿಕಲಚೇತನರ ಉನ್ನತಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.  ಈ ಯೋಜನೆಯ ಲಾಭ ನೈಜ ವಿಕಲಚೇತನರಿಗೆ ದೊರಕಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಫಲಾನುಭವಿಗಳು ಸಹ ಈ ಯೋಜನೆಯ ಮಾಹಿತಿ ಪಡೆದುಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದ್ದಾರೆ.  ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ವತಿಯಿಂದ ವಿಕಲಚೇತನರ ಜಿಲ್ಲಾ ಮಟ್ಟದ ಕುಂದು ಕೊರತೆ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿಕಲಚೇತನರಿಗೆ ಅನುಕೂಲವಾಗಲಿ ಎಂಬ […]

ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಸಮರ್ಪಕ ಅನುಷ್ಠಾನ: -ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಸೂಚನೆ

ವಿಜಯಪುರ: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಅಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರು ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾನಾ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಉರ್ದು ಶಾಲೆಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು. ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ದುರಸ್ತಿ ಕಾರ್ಯ ಕೈಗೊಳ್ಳಬೇಕಾದ ವಿವಿಧ ಶಾಲೆಗಳ ಕೊಠಡಿಗಳನ್ನು ಪರಿಶೀಲನೆ ನಡೆಸಬೇಕು, ಸಣ್ಣ ಪುಟ್ಟ […]

ಸ್ವಪ್ನಾ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯ ಮುಖ್ಯಸ್ಥೆ ಸುಜಾತಾ ಶಿ. ರೇಶ್ಮಿ ಅವರಿಗೆ ರೋಟರಿ ಕ್ಲಬ್ ವತಿಯಿಂದ ಸನ್ಮಾನ

ವಿಜಯಪುರ: ಕಳೆದ ಸುಮಾರು ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಕಿವುಡ ಮತ್ತು ಮೂಕ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಗರದ ಸ್ವಪ್ನಾ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯ ಸೇವೆಯನ್ನು ಪರಿಗಣಿಸಿ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥೆ ಸುಜಾತಾ ಶಿ. ರೇಶ್ಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರುದ್ರಗೌಡ ಪಾಟೀಲ, ಮುಖಂಡರಾದ ಚಂದ್ರಶೇಖರ ಸಿಂಧೂರ, ಜಿ. ಎಸ್. ಕುಲಕರ್ಣಿ, ಆನಂದ ಗುಜರಿ, ರಾಜೇಂದ್ರ ಜೋಶಿ […]

ಶಾಸಕ, ವಿಪ ಸದಸ್ಯರ ಭಾವಚಿತ್ರವಿರುವ ಹಿಟ್ಟಿನ ಗಿರಣಿ ಹಂಚಿಕೆ- ಇದಕ್ಕೂ ನಮಗೂ ಸಂಬಂಧವಿಲ್ಲ- ಸ್ಪಷ್ಟನೆ ನೀಡಿದ ಶಾಸಕರ ಕಚೇರಿ

ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಭಾವಚಿತ್ರವಿರುವ ಹಿಟ್ಟಿನ ಗಿರಣಿಗಳನ್ನು ಹಂಚುತ್ತಿರುವುದು ಬೆಳಕಿಗೆ ಬಂದಿದೆ‌.   ಈ ಹಿನ್ನೆಲೆಯಲ್ಲಿ ಶಾಸಕರ ಕಚೇರಿ ಸ್ಪಷ್ಟೀಕರಣದ ಪ್ರಕಟಣೆ ನೀಡಿದೆ. ಆತ್ಮೀಯರೇ, ತಮಗೆಲ್ಲರಿಗೂ ಈ ಮೂಲಕ ತಿಳಿಸುವುದೇನೆಂದರೆ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶ್ರೀ. ಎಂ. ಬಿ. ಪಾಟೀಲ ಸಾಹೇಬರು ಮತ್ತು ಸುನೀಲಗೌಡ ಪಾಟೀಲ ಸಾಹೇಬರ ಭಾವಚಿತ್ರ ಇರುವ ಹಿಟ್ಟಿನ ಗಿರಣಿಗಳನ್ನು ವೈಯಕ್ತಿಕವಾಗಿ ಕೆಲವರು ನೀಡುತ್ತಿದ್ದ, ಇದಕ್ಕೆ […]