ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗಣರಾಜ್ಯೋತ್ಸವ ಆಚರಣೆ

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದಿಂದ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಪತ್ರಿಕಾ ಭವನ ಹಾಗೂ ಸಂಘದ ಹಳೆಯ ಕಾರ್ಯಾಲಯದ ಎದುರು ನಡೆದ ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಮತ್ತು ಸಂಘದ ಉಪಾಧ್ಯಕ್ಷ ಫಿರೋಜ್ ರೋಜಿಂದಾರ ಅವರು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಖಜಾಂಚಿ ರಾಹುಲ ಆಪ್ಟೆ, ಜಿಲ್ಲಾ […]

ಆಶ್ರಯ ಮನೆಗಳ ಹಂಚಿಕೆ ಪತ್ರ ವಿತರಣಿ- ಅಂಬೇಡ್ಕರರ ಸಮಾನತೆ ಕನಸು ನನಸಾಗುತ್ತಿದೆ ಎಂದ ಯತ್ನಾಳ

ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರು ಕಂಡ ಸ್ವಾಭಿಮಾನ, ಸಮಾನತೆ ಜೀವನದ ಕನಸು ನನಸಾಗಿಸುವ ಕೆಲಸ ವಿಜಯಪುರದಲ್ಲಿ ಆಗಿದೆ ಎಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ. ನಗರದ ಅಥಣಿ ರಸ್ತೆಯ ಅಲ್ ಅಮೀನ್ ಹಿಂದೆ ಇರುವ ನಮೋ ನಗರದಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ ನಿರ್ಮಿಸಲಾದ ಆಶ್ರಯ ಮನೆಗಳ ಹಂಚಿಕೆ ಪತ್ರ ವಿತರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಲ್ಲಿ ನಿರ್ಮಿಸಲಾದ ಗುಣಮಟ್ಟದ ಮನೆಗಳನ್ನು ಅತ್ಯಂತ ಪಾರದರ್ಶಕವಾಗಿ ಚೀಟಿ […]

ಬಸವನಾಡಿನಲ್ಲಿ ಜಿಲ್ಲಾಧಿಕಾರಿಯಿಂದ ಗಣರಾಜ್ಯೋತ್ಸವ ಧ್ವಜಾರೋಹಣ- ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗೋಣ- ಡಾ. ದಾನಮ್ಮನವರ

ವಿಜಯಪುರ: ಸಂವಿಧಾನದ ಆಶಯದಂತೆ ಸಂಪೂರ್ಣ ಸಮಾನತೆಯನ್ನು ಸಾಧಿಸಲು ನಾವು ನಡೆಸುತ್ತಿರುವ ಪ್ರಯತ್ನವನ್ನು ಇನ್ನಷ್ಟು ಹೆಚ್ಚಿಸಿ, ಪ್ರಜಾಪ್ರಭುತ್ವದ ಬೆನ್ನಲುಬಾಗಿರುವ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗೋಣ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು. ಜಿಲ್ಲಾಡಳಿತದ ವತಿಯಿಂದ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ನಂತರ ಅವರು ಮಾತನಾಡಿ, ದೇಶದ ಸಮಗ್ರತೆ ಮತ್ತು ಐಕ್ಯತೆಯನ್ನು ಕಾಪಾಡುವ ಕಾರ್ಯದಲ್ಲಿ ನಾವೆಲ್ಲರೂ […]

ಹೊನಗನಹಳ್ಳಿಯಲ್ಲಿ ಕಲಿಕಾ ಹಬ್ಬ- ಶಿಕ್ಷಣ ಸಂಯೋಜಕ ಸುಭಾಷ ರಾಠೋಡ ಉದ್ಘಾಟನೆ

ವಿಜಯಪುರ: ಮಕ್ಕಳಲ್ಲಿ ವಿಜ್ಞಾನ, ಗಣಿತ, ಇತಿಹಾಸ ಮತ್ತು ಸಾಂಸ್ಕøತಿಕ ಅಭಿರುಚಿಯನ್ನು ಬೆಳೆಸಲು ಕಲಿಕಾ ಚೇತರಿಕೆಯ ಒಂದು ಭಾಗವಾಗಿ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಶಿಕ್ಷಣ ಸಂಯೋಜಕ ಸುಭಾಸ ರಾಠೊಡ ಹೇಳಿದರು. ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹೊನಗನಹಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶೀತಲ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಹೊನಗನಹಳ್ಳಿ ಕ್ಲಸ್ಟರಿನ 120 ಮಕ್ಕಳು ನಾನಾ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.  ಮೊದಲಿಗೆ ಅಲಂಕೃತ ಎತ್ತಿನ ಬಂಡಿ ಮತ್ತು […]

ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡಬೇಕು- ಕಾಂತಾ ನಾಯಕ

ವಿಜಯಪುರ: ಶಿಕ್ಷಣ ನಮ್ಮ ಜೀವನದ ಬಹು ಮುಖ್ಯ ಘಟ್ಟ. ಹೀಗಾಗಿ ನಿವೇಲ್ಲರೂ ಅತ್ಯುತ್ತಮವಾಗಿ ಕಲೆತು ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು ಎಂದು ವಿಸ್ಮಯ ಚಾರಿಟೇಬಲ್ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷೆ ಕಾಂತಾ ನಾಯಕ ಮಕ್ಕಳಿಗೆ ಕರೆ ನೀಡಿದರು.  ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಟಿ ಮಾತನಾಡಿದ ಅವರು, ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು.  ನೀವೆಲ್ಲರೂ ನಮ್ಮ ರಾಷ್ಟ್ರದ ಭವಿಷ್ಯ ಬರೆಯುವಂತಹ ಶಕ್ತಿ ಹೊಂದಿದವರು.  ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿ ಸಾಧನೆ ಮಾಡುವ […]

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ಸತ್ಯಾಗ್ರಹ

ವಿಜಯಪುರ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.  ಈ ಸಂರ್ಭದಲ್ಲಿ ಮಾತನಾಡಿದ ನಾನಾ ಮುಖಂಡರು, 36 ತಿಂಗಳಿಂದ ಸಾರಿಗೆ ನೌಕರರ ವೇತನ ಹೆಚ್ಚಳದ ವಿಷಯ ನನೆಗುದಿಗೆ ಬಿದ್ದಿದೆ.  ಹಾಲಿ ಇರುವ ಭಾಟಾ, ಮಾಸಿಕ, ದೈನಂದಿನ(ರಾ, ಅಪಾಸ್ಟ್, ಬಟ್ಟೆ ತೊಳೆಯುವ, ರಾತ್ರಿ ಪಾಳಿ, ಪ್ರೋತ್ಸಾಹ) ಚಾಲಕರು, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂಧಿಗಳಿಗೂ […]

ಜ. 26 ರಂದು ಗಣರಾಜ್ಯೋತ್ಸವದ ದಿನ ಆಶ್ರಯ ಮನೆಗಳ ಹಕ್ಕು ಪತ್ರ ವಿತರಣೆ- ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ವಿಜಯಪುರ ನಗರದ  ಅಲ್ ಅಮಿನ್ ಹಿಂದುಗಡೆ ಇರುವ ನಮೋ ನಗರದಲ್ಲಿ ಪ್ರಧಾನಮಂತ್ರಿ ಅವಾಸ ಯೋಜನೆಯಡಿ ನಿರ್ಮಿಸಲಾಗಿರುವ ಆಶ್ರಯ ಮನೆಗಳ ಹಂಚಿಕೆ ಪತ್ರವನ್ನು ಜ.26 ರಂದು ಗಣರಾಜ್ಯೋತ್ಸವದ  ವಿತರಿಸಲಾಗುವುದು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.  ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವ ರು, ಅಂದು ಬೆ. 9.30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ.  ಈ ಪ್ರದೇಶದಲ್ಲಿ ಬಡವರಿಗಾಗಿ ಅತ್ಯುತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಲಾಗಿದೆ.  ಮೊದಲ ಹಂತದಲ್ಲಿ ಶೇ. 60 ರಷ್ಟು […]

ಸಹಕಾರ ಭಾರತಿ ಜಿಲ್ಲಾ ಪತ್ತಿನ ಹಾಗೂ ವಿವಿದೋದ್ದೇಶ ಸಹಕಾರಿ ಸಂಘಗಳ ಸಭೆ

ವಿಜಯಪುರ: ಸಹಕಾರ ಭಾರತಿ ಜಿಲ್ಲಾ ಪತ್ತಿನ ಹಾಗೂt ವಿವಿಧೋದ್ದೇಶ ಸಹಕಾರಿ ಸಂಘಗಳ ಸಭೆ ನಗರದಲ್ಲಿ ನಡೆಯಿತು. ವಿಜಯಪುರದ ಜಿಲ್ಲಾ ಕೇಂದ್ರ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಸಭೆಯನ್ನು ಸಹಕಾರಿ ಭಾರತಿ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಎಂ. ಜಿ. ಪಾಟೀಲ, ಭಾಸ್ಕರ ಹೆಗಡೆ, ಗುರುನಾಥ ಜಾನತಿಕರ, ಮಾತನಾಡಿದರು.  ಈ ಸಭೆಯಲ್ಲಿ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ, ಜಿಲ್ಲಾಧ್ಯಕ್ಷ ಡಾ. ಆರ್. ಆರ್.  ನಾಯ್ಕ, ವಿಜಯಪುರ ಡಿಸಿಸಿ ಬ್ಯಾಂಕಿನ […]

ವಿಜಯಪುರದಲ್ಲಿ ಶ್ರೀರಾಮ ಫೈನಾನ್ಸ್ ಲಿ. ನೂತನ ವಲಯ ಕಚೇರಿ, ಶಾಖಾ ಕಚೇರಿಗಳ ಉದ್ಘಾಟನೆ

ವಿಜಯಪುರ: ಶ್ರೀರಾಮ ಫೈನಾನ್ಸ್ ಲಿಮಿಟೆಡ್ ನ ನೂತನ ವಲಯ ಕಚೇರಿ ಹಾಗೂ ಶಾಖಾ ಕಚೇರಿಗಳ ಉದ್ಘಾಟನೆ ಸಮಾರಂಭ ನಗರದಲ್ಲಿ ನಡೆಯಿತು. ಸಾಯಿ ಪಾರ್ಕ್ ನ ಸಮರ್ಥ ನಗರದ ತೋಳಮಟ್ಟಿ ಕಾಂಪ್ಸೆಕ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮ ಸಂಸ್ಥೆಯ ಝೋನಲ್ ಬ್ಯೂಸಿನೆಸ್ ಹೆಡ್ ಶ್ರೀಧರ ಮಾಟಂ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಂಸ್ಥೆ ಗ್ರಾಹಕಸ್ನೇಹಿಯಾಗಿದ್ದು, ಸಮಾಜಮುಖಿ ಕೆಲಸಗಳಿಗೆ ಆದ್ಯತೆ ನೀಡುತ್ತಿದೆ.  ಸಂಸ್ಥೆಯ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ನಗರದಲ್ಲಿ ಹಲವಾರು […]

ಶಾಂತಿನಿಕೇತನ ಪ್ರಾಥಮಿಕ, ಪ್ರೌಢಶಾಲೆಯ 21ನೇ ಶಾಂತಿ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ

ವಿಜಯಪುರ: ನಗರದ ಪ್ರತಿಷ್ಠಿತ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 21ನೇ ಶಾಂತಿಸಂಗಮ ಶಾಂತಿನಿಕೇತನ ಸಾಂಸ್ಕತಿಕ ಉತ್ಸವ 2022-23ನೇ ನಡೆಯಿತು. ಈ ಕಾರ್ಯಕ್ರಮವನ್ನು ವಿಧಾನ ಪರಿಷತ ಸದಸ್ಯ ಹಣಮಂತ ನಿರಾಣಿ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು, ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಜಿಲ್ಲೆಯ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದ್ದು, ಮಕ್ಕಳಲ್ಲಿ ಶಿಸ್ತು, ನೈತಿಕತೆಯನ್ನು ಕಲಿಸಿತ್ತ ಬಂದಿದೆ.  ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಜ್ಞಾನ ಸಂಪತ್ತನ್ನು ನೀಡುತ್ತಿರುವ ಈ ಸಂಸ್ಥೆ, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುತ್ತಿದೆ.  ಇಲ್ಲಿನ ಶಿಕ್ಷಕರು […]