ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ- ಡಿಸಿ ಡಾ.ದಾನಮ್ಮನವರ

ವಿಜಯಪುರ: ವಿಜಯಪುರದಲ್ಲಿ ನಡೆಯುವ ಪತ್ರಕರ್ತರ 37ನೇ ರಾಜ್ಯ ಮಟ್ಟದ ಸಮ್ಮೇಳನ ಅತ್ಯಂತ ಅಚ್ಚುಕಟ್ಟಾಗಿ ನಡೆಸಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ನಾನಾ ಇಲಾಖೆಗಳ ಅಧಿಕಾರಿಗಳು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಪತ್ರಕರ್ತರಿಗೆ ಯಾವುದೇ ರೀತಿಯ ಅನಾನೂಕೂಲವಾಗದಂತೆ ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರ ಒದಗಿಸಲಿದೆ ಎಂದು ಹೇಳಿದರು. ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ವಸತಿ […]

ನಾನಾ ಬೇಡಿಕೆ ಈಡೇರಿಸಲು ಆಗ್ರಹ- ಡಿ. 29ರಂದು ಗಾಣಿಗ ಸಮುದಾಯದಿಂದ ಸುವರ್ಣಸೌಧ ಎದುರು‌ ಪ್ರತಿಭಟನೆ

ವಿಜಯಪುರ: ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸೇರಿದಂತೆ ನಾನಾ ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸಿ ಗಾಣಿಗ ಸಮಾಜದ ವನಶ್ರೀ ಸಂಸ್ಥಾನ ಮಠದ ಜಗದ್ಗುರು ಶ್ರೀ ಜಯಬಸವಕುಮಾರ ಸ್ವಾಮೀಜಿ ಹಾಗೂ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ ನೇತೃತ್ವದಲ್ಲಿ ಡಿ. 29 ರಂದು ಬೆಳಗಾವಿ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಗಾಣಿಗ ಸಮಾಜ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು. ವಿಜಯಪುರ ನಗರದ ವನಶ್ರೀ ಸಂಸ್ಥಾನ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಸೌಲಭ್ಯಗಳನ್ನು […]

PhD Award: ಎಚ್. ಕೆ. ಯಡಹಳ್ಳಿ ಈಗ ಅವರಿಗೆ ಪಿ ಎಚ್ ಡಿ ಪದವಿ

ವಿಜಯಪುರ: ನಗರದ ಸಿಕ್ಯಾಬ್ ಸಂಸ್ಥೆಯ ಎ. ಆರ್. ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಎಚ್. ಕೆ. ಯಡಹಳ್ಳಿ ಅವರಿಗೆ ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯ ಮನೋವಿಜ್ಞಾನ ವಿಷಯದಲ್ಲಿ ಸಲ್ಲಿಸಿದ ಪ್ರೌಢಪ್ರಬಂಧವನ್ನು ಪರಿಗಣಿಸಿ ಪಿ ಎಚ್ ಡಿ ಪದವಿ ಪ್ರಧಾನ ಮಾಡಿದೆ. ವೃತ್ತಿಪರ ಹಾಗೂ ವೃತ್ತಿಪರ ರಹಿತ ಕಾಲೇಜು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಸ್ವಯಂ ಪರಿಕಲ್ಪನೆ, ವ್ಯಕ್ತಿತ್ವ ಪಕ್ವತೆ ಹಾಗೂ ಸಂವೇಗಾತ್ಮಕ ಬುದ್ಧಿಶಕ್ತಿಗಳ ಪ್ರಭಾವ ಎಂಬ ವಿಷಯ ಕುರಿತು ಸಲ್ಲಿಸಿದ […]

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: ಚಡಚಣ ತಾಲೂಕಿನ ನಾನಾ ಕಚೇರಿಗಳಿಗೆ ಭೇಟಿ, ಪರಿಶೀಲನೆ ನಡೆಸಿದ ಡಾ. ದಾನಮ್ಮನವರ

ವಿಜಯಪುರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಚಡಚಣ ತಾಲೂಕಿನ ನಾನಾ ಕಚೇರಿಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.  ಚಡಚಣ ತಾಲೂಕು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೋವಿಡ್ ನಿಯಂತ್ರಣಕ್ಕಾಗಿ ಸ್ಥಾಪಿಸಲಾದ ಆಕ್ಸಿಜನ್ ಘಟಕವನ್ನು ಪರಿಶೀಲಿಸಿದ ಅವರು, ಮುನ್ನೆಚ್ಚರಿಕೆ ಕ್ರಮವಾಗಿ ಆಕ್ಸಿಜನ್ ಕೊರತೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ರೋಗಿಗಳಿಗೆ ಒದಗಿಸುವ ಬೆಡ್‍ಗಳನ್ನು ಶುಚಿತ್ವವಾಗಿಟ್ಟುಕೊಳ್ಳಬೇಕು. ಆಸ್ಪತ್ರೆಗೆ ಬಂದ ರೋಗಿಗಳಿಗೆ ಯಾವುದೇ […]

ಇಬ್ರಾಹಿಂಪೂರ ರೇಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ- ಸಂಸದರಿಗೆ ಅಪ್ಪು ಪಟ್ಟಣಶೆಟ್ಟಿ ಕೃತಜ್ಞತೆ ಸಲ್ಲಿಕೆ

ವಿಜಯಪುರ; ವಿಜಯಪುರ ನಗರದ ಇಬ್ರಾಹಿಂಪುರ ರೇಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತು ಕಾರ್ಪೊರೇಟರ್ ಮಳುಗೌಡ ಪಾಟೀಲ ಮುಂತಾದವರು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಇಂದಿನಿಂದ ನಗರದ ಈ ಭಾಗದ ಜನತೆಯ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಈ ಕಾಮಗಾರಿಗೆ ಕಾರಣರಾದ ಕೇಂದ್ರ ಮಾಜಿ ಸಚಿವ ಮತ್ತು ವಿಜಯಪುರ ಹಾಲಿ ಸಂಸದ ರಮೇಶ ಜಿಗಜಿಣಗಿ ಕಾರಣರಾಗಿದ್ದಾರೆ. ಕಾಮಗಾರಿ ನಾನಾ ಕಾರಣಗಳಿಂದ ವಿಳಂಬವಾಗಿದ್ದರೂ, ಸಂಸದರ ಮುತುವರ್ಜಿಯಿಂದ […]

RoB Open: ಇಬ್ರಾಹಿಂಪೂರ ರೇಲ್ವೆ ಮೇಲ್ಸೇತುವೆ ಡಿ. 27ರಿಂದ ಕಾರ್ಯಾರಂಭ- ರಮೇಶ ಜಿಗಜಿಣಗಿ

ವಿಜಯಪುರ: ಬಹುದಿನಗಳಿಂದ ಆಮೇಗತಿಯಲ್ಲಿ ಸಾಗಿದ್ದ ವಿಜಯಪುರ ನಗರದ ಇಬ್ರಾಹಿಂಪೂರ ರೈಲ್ವೆ ಮೇಲ್ಸೆತುವೆ ಡಿ.27 ಮಂಗಳವಾರದಿಂದ ಸಂಚಾರಕ್ಕೆ ಮುಕ್ತವಾಗಲಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬೆಳೆಯುತ್ತಿರುವ ವಿಜಯಪುರ ಮಹಾನಗರ ಸಂಚಾರ ದಟ್ಟಣೆ ತಪ್ಪಿಸುವ ದೃಷ್ಟಿಯಿಂದ ಈ ಮೇಲ್ಸೆತುವೆ ನಿರ್ಮಿಸಲಾಗಿದೆ. ರೇಲ್ವೆ ಕ್ರಾಸಿಂಗ್ ಸಮಯದಲ್ಲಿ ಇಲ್ಲಿರುವ ಗೇಟ್ ಬಂದ್ ಆಗಿ ನಾನಾ ವಾಹನಗಳು ಸುಮಾರು ಹೊತ್ತು ಕಾಯಬೇಕಿತ್ತು. ಈ ಮೇಲ್ಸೆತುವೆ ಸಂಚಾರಕ್ಕೆ ಮುಕ್ತವಾಗುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ರೇಲ್ವೆ ಮೇಲ್ಸೆತುವೆ ನಿರ್ಮಾಣಕ್ಕೆ ರೂ. […]

ZP CEO Visit: ತಾಳಿಕೋಟಿ ತಾಲೂಕಿನ ಕೊಣ್ಣೂರ, ಬಾವೂರ ಗ್ರಾ. ಪಂ. ಗಳಿಗೆ ಜಿ. ಪಂ. ಸಿಇಒ ರಾಹುಲ್ ಶಿಂಧೆ ಭೇಟಿ- ನಾನಾ ಕಾಮಗಾರಿಗಳ ಪರಿಶೀಲನೆ

ವಿಜಯಪುರ: ತಾಳಿಕೋಟಿ ತಾಲೂಕಿನ ಕೊಣ್ಣೂರ ಮತ್ತು ಬಾವೂರ ಗ್ರಾಮ ಪಂಚಾಯಿತಿಗಳಿಗೆ  ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಸಿಂಧೆ ಅವರು ಬುಧವಾರ ಭೇಟಿ ನೀಡಿ, ವಿವಿಧ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ, ಅಗತ್ಯ ಸಲಹೆ ಸೂಚನೆ ನೀಡಿದರು. ಕೊಣ್ಣೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಮಹಾತ್ಮಗಾಂಧಿ ನರೇಗಾ ಯೋಜನೆ, ಗ್ರಾಮೀಣ ವಸತಿ ಯೋಜನೆ, ಕರವಸೂಲಾತಿ, ಸ್ವಚ್ಚ ಭಾರತ ಮಿಷನ್ (ಗ್ರಾಮೀಣ) ಜಲಜೀವನ ಮಿಷನ್ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.  ಈ ಯೋಜನೆಗಳ ಪ್ರಗತಿಯನ್ನು ನಿಗದಿತ ಕಾಲ‌ಮಿತಿಯೊಳಗೆ […]

Children Outreach: ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚಿಣ್ಣರ ಕಲರವ

ವಿಜಯಪುರ: ನಗರದ ಪ್ರತಿಷ್ಠಿತ ಬಿ ಎಲ್ ಡಿ ಎ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ನಗರದ ಕಕ್ಷಾ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿಗಾಗಿ ಮೆಕ್ಯಾನಿಕಲ್ ವಿಭಾಗದಲ್ಲಿರುವ ಎಲ್ಲ ಸೌಕರ್ಯಗಳು, ಕೌಶಾಲ್ಯಾಧಾರಿತ ಕಲಿಕಾ ವಿಧಾನಗಳು, ಸಂಶೋಧನಾ ಕೇಂದ್ರ ಇತ್ಯಾದಿಗಳ ಬಗ್ಗೆ ಔಟ್‍ರೀಚ್ ಕಾರ್ಯಕ್ರಮ ನಡೆಯಿತು.  ವಿಭಾಗದ ಮುಖ್ಯಸ್ಥ ಡಾ. ರಮೇಶ ಜೀರಗಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಕ್ಷಾ ಶಾಲೆಯ ಒಟ್ಟು 100 ಮಕ್ಕಳನ್ನು ಆರು […]

DC Village: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ- ರೈತರ ಹೊಲಗಳಿಗೆ ರಸ್ತೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆದ್ಯತೆ- ಶಾಸಕ ರಮೇಶ ಭೂಸನೂರ

ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ನೀರಾವರಿ ಬಂದ ಮೇಲೆ  ಈ ಭಾಗದ ಸಾಕಷ್ಟು ರಸ್ತೆಗಳು ಸುಧಾರಣೆಯಾಗಿವೆ. ರೈತರು ಉತ್ತಮ ಬೆಳೆ ಬೆಳೆಯುವಂತಾದರೂ  ತಾವು ಬೆಳೆದ ಬೆಳೆಗಳನ್ನು ಸೂಕ್ತ ಬೆಲೆಯಲ್ಲಿ ಮಾರಾಟ ಮಾಡಲು ಬೆಳೆಯನ್ನು ಹೊಲದಿಂದ ಮಾರುಕಟ್ಟೆಗೆ ಕೊಂಡೊಯ್ಯಲು ಕೆಲವೊಂದು ಕಡೆಗಳಲ್ಲಿ ರಸ್ತೆ ಇಲ್ಲದೇ ಸಮಸ್ಯೆಯಾಗುತ್ತಿರುವದು ಗಮನಕ್ಕೆ ಬಂದಿದ್ದು ಈಗಾಗಲೇ ಈ ಕುರಿತು ರೈತರ ಹೊಲಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಂದಗಿ ಶಾಸಕ ರಮೇಶ ಭೂಸನೂರ ಹೇಳಿದರು. ಆಲಮೇಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ […]

Oldage Home: ವೃದ್ಧರ ನೆಮ್ಮದಿಗಾಗಿ ಆಪ್ಟೆ ಫೌಂಡೇಶನ್ ನಿಂದ ಸ್ವಾಭಿಮಾನ ಹೌಸ್ ನಿರ್ಮಾಣ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಅರಕೇರಿ ಎಲ್. ಟಿ. ಬಳಿ ಆಪ್ಟೆ ಫೌಂಡೇಶನ್ ವೃದ್ಧರ ನೆಮ್ಮದಿಗಾಗಿ ಸ್ವಾಭಿಮಾನ ಹೌಸ್ ನಿರ್ಮಿಸುವ ಮೂಲಕ ಗಮನ ಸೆಳೆದಿದೆ. ಸುಂದರ ವಾತಾವರಣ ಕಲ್ಪಿಸಲು ನಿರ್ಮಿಸಲಾಗಿರುವ ಈ ಓಲ್ಡ್ಏಜ್ ಹೋಮ್ ರವಿವಾರ ಡಿ. 18ರಂದು ಸೇವಾರ್ಪಣೆಯಾಗಲಿದೆ ಎಂದು ಆಪ್ಟೆ ಫೌಂಡೇಶನ್ ಅಧ್ಯಕ್ಷ ವಿನಯ್ ಆಪ್ಟೆ ಹಾಗೂ ರಾಮಸಿಂಗ್ ರಜಪೂತ ತಿಳಿಸಿದ್ದಾರೆ. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಹಾಗೂ ಮಹಾರಾಷ್ಟ್ರದ ಕೊಲ್ಹಾಪುರದ ಪ್ರತಿಭಾ ಅಪ್ಟೆ ನೆರವೇರಿಸಲಿದ್ದಾರೆ. ವಿಜಯಪುರ ಮಹಾನಗರ ಪಾಳಿಕೆ ಸದಸ್ಯ […]