MBP Tour: ನ. 26ರಂದು ಬಬಲೇಶ್ವರ ಮತಕ್ಷೇತ್ರದಲ್ಲಿ ಎಂ. ಬಿ. ಪಾಟೀಲ ಪ್ರವಾಸ- ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲರ ನಾಳೆ ನ. 26ರಂದು ಶನಿವಾರ ಬಬಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ನಾನಾ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಬೆ.10 ಗಂ. ಅರಕೇರಿಯಲ್ಲಿ 55.99 ಲಕ್ಷ ವೆಚ್ಚದಲ್ಲಿ ರೂ.‌ ನಿರ್ಮಿಸಲಾಗುತ್ತಿರುವ ಅರಕೇರಿ-ಬರಟಗಿ ಹಳ್ಳಕ್ಕೆ ಬಾಂದಾರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಲಿದ್ದಾರೆ. ಅರಕೇರಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ರೂ. 31.50 ಲಕ್ಷ ವೆಚ್ಚದ ಪ್ರೌಢ ಶಾಲೆ ಕಟ್ಟಡ ಉದ್ಘಾಟಿಸಲಿದ್ದಾರೆ. ಬಳಿಕ ಅರಕೇರಿ ಬಿಸೇನ್ […]

Car Accident: ನಡುರಾತ್ರಿ ಹೋಟೇಲುಗಳಿಗೆ ನುಗ್ಗಿದ ಕಾರು- ಅದೃಷ್ಟವಶಾತ ತಪ್ಪಿದ ಪ್ರಾಣಹಾನಿ

ವಿಜಯಪುರ: ಮಧ್ಯರಾತ್ರಿ ಕಾರೊಂದು ರಸ್ತೆ ಬದಿಯ ಸುಮಾರು ಐದು ಹೋಟೇಲುಗಳಿಗೆ ನುಗ್ಗಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಬಳಿ ಸಂಭವಿಸಿದೆ. ಈ ಗ್ರಾಮದ ರಸ್ತೆಯ ಬಳಿ ಸಾಲುಸಾಲಾಗಿ ಹೋಟೇಲುಗಳಿವೆ. ಮಧ್ಯರಾತ್ರಿ‌ ಚಾಲಕನ ನಿಯಂತ್ರಣ ತಪ್ಪಿ ಕಾರು ಒಂದಾದ ಮೇಲೋಂದರಂತೆ ಎರಡು ಹೋಟೇಲುಗಳಿಗೆ ನುಗ್ಗಿದ್ದು ಈ ಹೋಟೇಲುಗಳಲ್ಲಿದ್ದ ಪೀಠೋಪಕರಣಗಳು ಧ್ವಂಸವಾಗಿವೆ. ಆದರೆ, ಹೋಟೇಲುಗಳಲ್ಲಿದ್ದ ಜನರು ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯಪುರ ಮೂಲದ ಕಾರು ಮಹೀಂದ್ರಾ XUV KA28/M-9169 ನಂಬರ್ ನ ಮಹೀಂದ್ರಾ ಕಾರು ಇದಾಗಿದೆ. ಈ […]

New ASP: ಶಂಕರ ಕಾಳಪ್ಪ ಮಾರಿಹಾಳ ವಿಜಯಪುರ ನೂತನ ಎಎಸ್ಪಿ

ವಿಜಯಪುರ: ಶಂಕರ ಕಾಳಪ್ಪ ಮಾರಿಹಾಳ ಅವರನ್ನು ವಿಜಯಪುರ ನೂತನ ಎಎಸ್ಪಿಯಾಗಿ ಸರಕಾರ ವರ್ಗಾವಣೆ ಮಾಡಿದೆ. ಕೆಲವು ದಿನಗಳ ಹಿಂದೆ ಎಎಸ್ಪಿಯಾಗಿದ್ದ ಡಾ. ರಾಮ ಲಕ್ಷ್ನಣಸಾ ಅರಸಿದ್ದಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಖಾಲಿಯಿರುವ ಈ ಹುದ್ದೆಗೆ ಸರಕಾರ ಶಂಕರ ಕಾಳಪ್ಪ ಮಾರಿಹಾಳ ಅವರನ್ನು ವಿಜಯಪುರ ಹೆಚ್ಚುವರಿ ಎಸ್ಪಿಯಾಗಿ ವರ್ಗಾವಣೆ ಮಾಡಿದೆ.

Hadagali Programme: ಹಡಗಲಿಯಲ್ಲಿ ಡಿಸಿ ನಡೆ ಹಳ್ಳಿಯ ಕಡೆ- ವಿಜಯಪುರ ತಹಸೀಲ್ದಾರ ಭಾಗಿ

ವಿಜಯಪುರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ವಿಜಯಪುರ ತಹಸೀಲ್ದಾರ ಸಿದರಾಯ ಭೋಸಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಾನಾ ಫಲಾನುಭವಿಗಳಿಗೆ ಸರ್ಟಿಫಿಕೇಟ್ ನೀಡಲಾಯಿತು. ಇದಕ್ಕಿಂತಲೂ ಮೊದಲು ಅಧಿಕಾರಿಗಳನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಐ. ಎಚ್. ತುಂಬಗಿ, ಉಪತಹಸೀಲ್ದಾರ ಡಿ. ಬಿ. ಭೋವಿ, ಕಂದಾಯ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ನಾನಾ ಇಲಾಖೆಗಳ ಅಧಿಕಾರಿಗಳು, ಹಡಗಲಿ ಗ್ರಾ. ಪಂ. […]

Vegetables Day: ಪ್ರೇರಣಾ ಫನ್ ಸ್ಕೂಲ್ ನಲ್ಲಿ ತರಕಾರಿ ದಿನ ಆಚರಣೆ- ಸಂಭ್ರಮಿಸಿದ ಮಕ್ಕಳು

ವಿಜಯಪುರ: ಇಂದಿನ ಆಧುನಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶೈಕ್ಷಣಿಕ ಜೊತೆಗೆ ಸಾಮಾನ್ಯ ಜ್ಞಾನವೂ ಅಗತ್ಯವಾಗಿದೆ.  ಈ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರದ ಪ್ರೇರಣಾ ಸಂಸ್ಥೆಯ ಪ್ರೇರಣಾ ಫನ್ ಸ್ಕೂಲಿನಲ್ಲಿ ತರಕಾರಿ ದಿನ ಆಚರಿಸಲಾಯಿತು. ಶಾಲೆಯ ಎಲ್ಲ ಮಕ್ಕಳು ತರಹೇವಾರಿ ತರಕಾರಿಗಳನ್ನು ತೆಗೆದುಕೊಂಡು ಬಂದು ಹಾಗೂ ತರಕಾರಿ ಆಕೃತಿಯ ಚಿತ್ರಪಟಗಳ ಮೂಲಕ ತಾವೇ ಸ್ವತಃ ತರಕಾರಿಗಳಾಗಿ ಗಮನ ಸೆಳೆದರು.  ಶಾಲೆಯ ಸಂಸ್ಥಾಪಕ ಡಾ. ಅರವಿಂದ ವೆ. ಪಾಟೀಲ ಅವರ ಆಶಯದಂತೆ ಇಂದಿನ ಮಕ್ಕಳಿಗೆ ಶಿಕ್ಷಣ ಮಾತ್ರವಲ್ಲದೆ ಶಿಕ್ಷಣದ […]

Vidyut Adalat: ದೇವಾಪುರ ಗ್ರಾಮದಲ್ಲಿ ವಿದ್ಯುತ್ ಲೋಕ್ ಅದಾಲತ್ ಕಾರ್ಯಕ್ರಮ

ವಿಜಯಪುರ: ಬಬಲೇಶ್ವರ ತಾಲೂಕಿನ ದೇವಾಪುರ ಗ್ರಾಮದಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮ ನಡೆಯಿತು. ಹೆಸ್ಕಾಂ ಜಾಗೃತ ದಳದ ಎಇಇ ಗಂಗಾಧರ ಲೋಣಿ, ವಿದ್ಯುತ್ ಕಂಪನಿಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಗ್ರಾಮದ ಯುವ ಮುಖಂಡ ಪ್ರಕಾಶ ಬಿರಾದಾರ ಮಾತನಾಡಿ, ಗ್ರಾಮದಲ್ಲಿ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ತಂತಿಗಳುಗಳು ಹಳೆಯದಾಗಿದ್ದು, ಬದಲಾಯಿಸಿ ಸಂಭವನೀಯ ವಿದ್ಯುತ್ ಅವಘಡಗಳನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೆಸ್ಕಾಂ ದೇವರ ಗೆಣ್ಣೂರ ಶಾಖಾದಿಕಾರಿ ಕಬಾಡೆ, ಸಂಗಮೇಶ ನಾಯ್ಕರ, ಮಳೆಪ್ಪ ಆಣಿ, […]

Bluerose Technology: ನೂತನ ತಂತ್ರಜ್ಞಾನ ಸದುಪಯೋಗ ಪಡಿಸಿಕೊಳ್ಳಲು ಸಂಸದ ರಮೇಶ ಜಿಗಜಿಣಗಿ ಕರೆ

ವಿಜಯಪುರ: ಗ್ರಾಮೀಣ ಸೇರಿದಂತೆ ಸಣ್ಣಪುಟ್ಟ ನಗರಗಳ ಮಕ್ಕಳಿಗೆ ಅನುಕೂಲವಾಗಲು ಬೆಂಗಳೂರಿನ ಬ್ಲೂರೋಸ್ ಟೆಕ್ನಾಲಜಿ ಬಸವ ನಾಡಿ ಮಕ್ಕಳಿಗೆ ತಂತ್ರಜ್ಞಾನ ಪರಿಚಯಿಸಿದೆ.  ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕರೆ ನೀಡಿದ್ದಾರೆ. ವಿಜಯಪುರ ನಗರದ ಹೊರವಲಯದಲ್ಲಿ ಶಶಿನಾಗ ಹೋಟೆಲ್ ಬಳಿ ರೂಪಾದೇವಿ ಸಿ ಬಿ ಎಸ್ ಇ ಶಾಲೆಯಲ್ಲಿ  ಬ್ಲೂ ರೇಸ್ ಟೆಕ್ನಾಲಜಿ ಆಯೋಜಿಸಿದ್ದ ಇ-ಟೆಕ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇ-ಟೆಕ್ ಇಂಡಿಯಾ ಆನ್‍ಲೈನ್ ಕ್ಲಾಸ್ ಮೂಲಕ […]

Vijayapura Air Port: ಶೀಘ್ರದಲ್ಲಿಯೇ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ- ಡಾ. ಶೈಲೇಂದ್ರ ಬೆಲ್ದಾಳೆ

ವಿಜಯಪುರ: ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ವಿಜಯಪುರ ಜನತೆ ವಿಮಾನದಲ್ಲಿ ಸಂಚರಿಸುವ ಅವಕಾಶ ಲಭ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ವಿಜಯಪುರ ಹೊರವಲಯದ ಬುರಣಾಪುರದಲ್ಲಿ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು. ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-72 ದಿಂದ ಏರ್‌ಬಸ್ 320 ವಿಮಾನಗಳ […]

DC Visit: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ: ಸಿಂದಗಿ ತಾಲೂಕಿನ ನಾನಾ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿ

ವಿಜಯಪುರ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಸಿಂದಗಿ ತಾಲೂಕಿನ ನಾನಾ ಕಚೇರಿಗಳಿಗೆ ಭೇಟಿ ನೀಡಿ, ನಾನಾ ಕಚೇರಿಗಳ  ಪರಿಶೀಲನೆ ಹಾಗೂ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಸಿಂದಗಿ  ಪುರಸಭೆ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ದಾಖಲಾತಿಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ  ವಿವಿಧ ವಸತಿ ಯೋಜನೆಗಳಡಿ ಸಾರ್ವಜನಿಕರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಸಾರ್ವಜನಿಕರಿಗೆ ತಮಗೆ ನೀಡಲಾದ ಜಾಗವನ್ನು ಗುರುತಿಸಲು ತೊಂದರೆಯಾಗುತ್ತಿರುವ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ಕೂಡಲೇ […]

Childrens Day: ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನ ಆಚರಣೆ

ವಿಜಯಪುರ: ನಗರದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನವನ್ನು ಆಚರಿಸಲಾಯಿತು.  ಕಾರ್ಯಕ್ರಮದ ಅಂಗವಾಗಿ ಪ್ರಾಚಾರ್ಯ ಶ್ರೀಧರ ಕುರಬೆಟ ಅವರು ಜವಾಹರಲಾಲ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳು ಯಾವಾಗಲು ಹೇಗೆ ಸಂತೋಷವಾಗಿರಬೇಕು? ಹೇಗೆ ಕ್ರೀಯಾಶೀಲರಾಗಿರಬೇಕು? ಮತ್ತು ಹೇಗೆ ಬಯಸಿದ್ದನ್ನು ಪಡೆಯಬೇಕು ಎಂಬ ಮೂರು ವಿಚಾರಗಳನ್ನು ನಮಗೆ ಕಲಿಸುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎ. ಎಚ್. ಸಗರ, ಬಸವರಾಜ ರೆಬಿನಾಳ, ಅಶ್ವೀನ ವಗದರಗಿ, ಶಶಿಧರ ಲೋನಾರಮಠ, […]