Forest CEO: ಮಾದರಿ ನೆಡುತೋಪು ನಿರ್ಮಿಸಲು ವಿಜಯಪುರ ಜಿ. ಪಂ. ಸಿಇಓ ರಾಹುಲ್ ಶಿಂಧೆ ಸೂಚನೆ

ವಿಜಯಪುರ: ಅರಣ್ಯ ಇಲಾಖೆಯ ನಿರ್ಮಿಸಿದ ಭೂತನಾಳ ಸಸ್ಯ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ನಗರದ ಹೊರವಲಯ ಭೂತನಾಳ ಬಳಿ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಡಿ ನಾನಾ ಜಾತಿ ಹಾಗೂ ಅಳತೆಯ ಸಸಿಗಳನ್ನು 70000 ಸಸಿಗಳನ್ನು ಬೆಳೆಸಿ, ನಿರ್ವಹಣೆ ಮಾಡುತ್ತಿರುವ ಕಾರ್ಯವನ್ನು ವೀಕ್ಷಿಸಿದ ಅವರು ಖುಷಿ ವ್ಯಕ್ತಪಡಿಸಿದರು. 2021-22ನೇ ವರ್ಷದಲ್ಲಿ ಜಿಲ್ಲಾ ಪಂಚಾಯಿತಿಯ ಅಭಿವೃದ್ಧಿ ಅನುದಾನದಡಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸಿ, […]

NEP Prerana: ಪ್ರೇರಣಾ ಶಾಲೆಯಲ್ಲಿ ಎನ್ಇಪಿ ಅಡಿ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ

ವಿಜಯಪುರ: ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ವಿಜಯಪುರ ನಗರದ ಹೊರವಲಯದಲ್ಲಿರುವ ಪ್ರೇರಣಾ ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳಲ್ಲಿ ನಾನಾ ರೀತಿಯ ಕೌಶಲ್ಯ, ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಆಯಾ ವೃತ್ತಿಯಲ್ಲಿ ನಿರತರಾದ ಕೃಷಿ ಮೂಲದ ರೈತರು, ವಿದ್ಯುತ್ , ನೀರು, ಬಡಿಗತನ ಸಂಬಂಧಿಸಿದಂತೆ ವೃತ್ತಿನಿರತರು ವಿದ್ಯಾರ್ಥಿಗಳಿಗೆ ತಮ್ಮ ಅನುಭವ ಹಂಚಿಕೊಂಡರು. ಮಕ್ಕಳಲ್ಲಿ ಭವಿಷ್ಯದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಗೆ ಸ್ವಯಂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾನಾ ಕೌಶಲ್ಯಗಳ ಬಗ್ಗೆ ಈ ಅರಿವು […]

DCC Bank Profit: ಡಿಸಿಸಿ ಬ್ಯಾಂಕಿಗೆ ಈ ವರ್ಷ ರೂ. 12.95 ಕೋ ನಿವ್ವಳ ಲಾಭ- ಶಿವಾನಂದ ಪಾಟೀಲ

ವಿಜಯಪುರ: ವಿಜಯಪುರ ಡಿಸಿಸಿ ಬ್ಯಾಂಕ್ ಈ ವರ್ಷ ರೂ.12.95 ಕೋ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮತ್ತು ಶಾಸಕ ಶಿವಾನಂದ ಪಾಟೀಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2020-21ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ದುಡಿಯುವ ಬಂಡವಾಳ ರೂ. 3746.24 ಕೋ. ಇತ್ತು. 2021-22ನೇ ಆರ್ಥಿಕ ವರ್ಷಾಂತ್ಯಕ್ಕೆ ಇದು ರೂ. 4157.97 ರಷ್ಟಾಗಿದೆ. ಈ ವರ್ಷ ರೂ. 411.73 ಕೋ. ಹೆಚ್ಚಾಗಿದೆ‌ ಎಂದು ತಿಳಿಸಿದರು. ಬ್ಯಾಂಕಿಗೆ ಲಾಭ 2021-22ರಲ್ಲಿ ಬ್ಯಾಂಕು ರೂ. 18 ಕೋ. ಲಾಭ […]

Students Velidictory: ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ವಿಜಯಪುರ: ಸ್ನಾತಕೋತ್ತರ ಶಿಕ್ಷಣ ಅಧ್ಯಯನ ಕೇಂದ್ರದ ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೋಡುವ ಸಮಾರಂಭ ವಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆ ಕೇಂದ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ತೊರವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇಂಗ್ಲಿಷ್ ಅಧ್ಯಯನ ವಿಭಾಗದ ಸ್ಥಳೀಯ ಮುಖ್ಯಸ್ಥ ಡಾ. ಫಯಾಜ್ ಅಹಮ್ಮದ್ ಎಚ್. ಇಳಕಲ ಮಾತನಾಡಿದರು. ಉನ್ನತ ವ್ಯಾಸಂಗ ಮನುಷ್ಯನ ಯಶಸ್ವಿ ಜೀವನಕ್ಕೆ ದಾರಿ […]

Radio Silver Jubilee: ವಿಜಯಪುರ ಆಕಾಶವಾಣಿ ಕೇಂದ್ರದ ರಜತ ಮಹೋತ್ಸವ ಸಂಭ್ರಮ- ಜಿಲ್ಲಾಧಿಕಾರಿಗಳು ಭಾಗಿ

ವಿಜಯಪುರ: ವಿಜಯಪುರ ಆಕಾಶವಾಣಿ ಕೇಂದ್ರ ಜ್ಞಾನ ದಾಸೋಹ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದ್ದಾರೆ. ನಗರದ ರೇಡಿಯೋ ಕೇಂದ್ರದಲ್ಲಿ ನಡೆದ ವಿಜಯಪುರ ಆಕಾಶವಾಣಿ ಕೇಂದ್ರದ ರಜತ್ ಮಹೋತ್ಸವ ಸಂಭ್ರಮ ರಜತ ರವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದತು. 1997ರ ಸೆ. 18 ರಂದು ವಿಜಯಪುರ ಆಕಾಶವಾಣಿ ಕೇಂದ್ರ ಸ್ಥಾಪನೆಯಾಯಿತು. ಅಂದಿನಿಂದ ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ ಒಂದು ಹೊಸ ಶಕೆ ಆರಂಭವಾಯಿತು. ಈ ಮೂಲಕ ಅವಿಭಜಿತ ವಿಜಯಪುರ ಜಿಲ್ಲೆಯ ಜನತೆಯ […]

National Seminar: ಬಿ ಎಲ್ ಡಿ ಇ ಎವಿಎಸ್ ಆಯುರ್ವೇದ ಕಾಲೇಜಿನಲ್ಲಿ‌ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

ವಿಜಯಪುರ: ಬಿ ಎಲ್ ಡಿ ಇ ಸಂಸ್ಥೆಯ ಎ. ವಿ. ಆಯುರ್ವೇದ ಮಹಾವಿದ್ಯಾಲಯದಲ್ಲಿ ಒಂದು ದಿನ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ನಡೆಯಿತು. ದೇಶದ ನಾನಾ ರಾಜ್ಯಗಳಿಂದ ಆಯುರ್ವೇದ ಮತ್ತು ಯುನಾನಿ ಕ್ಷೇತ್ರದ ಹೆಸರಾಂತ ವೈದ್ಯರು, ಪದವೀಧರರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಪಾಲ್ಗೋಂಡಿದ್ದರು. ಈ ಕಾರ್ಯಕ್ರಮವನ್ನು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸರಕಾರಿ ಆಯುರ್ವೇದ ಮಹಾವಿದ್ಯಾಲಯದ ಬಿಎಸ್ಓ(ಪಿಜಿ) ವಿಭಾಗದ ಮುಖ್ಯಸ್ಥೆ ಡಾ. ಅಹಲ್ಯಾ ಶರ್ಮಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, […]

World Literacy Week: ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ವಿಶ್ವ ಸಾಕ್ಷರತಾ ದಿನ ಆಚರಣೆ

ವಿಜಯಪುರ: ವಿಶ್ವ ಸಾಕ್ಷರತಾ ದಿನಾಚರಣೆ ಅಂಗವಾಗಿ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಬಂದಿಗಳಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಟಿ. ಎಸ್. ಆಲಗೂರ, ಅಂತಾರಾಷ್ಟ್ರೀಯ ಸಾಕ್ಷರತೆಯ ಇತಿಹಾಸ ತಿಳಿಸಿದ ಅವರು, ಮಹಿಳೆಯರು ಶಿಕ್ಷಣ ಪಡೆದು ಪ್ರಜ್ಞಾವಂತರಾಗಿ ಸಮಾಜ ಸುಧಾರಣೆಗೆ ಕೊಡುಗೆ ನೀಡಬೇಕು ಎಂದು ಹೇಳಿದರು.   ಕಾರಾಗೃಹದ ಅಧೀಕ್ಷಕ ಡಾ. ಐ. ಜೆ. ಮ್ಯಾಗೇರಿ ಮಾತನಾಡಿ, ಶಿಕ್ಷಣ ಮನುಷ್ಯನ ಸ್ವತ್ತು.  ಅಕ್ಷರ ಸಾಧಕರ ಸ್ವತ್ತು.  ಚೈತನ್ಯ ಒಂದು ನಂಬಿಕೆ.  ಚೈತನ್ಯದ ಅನುಭವದಿಂದ ಪರಬ್ರಹ್ಮನ […]

Engineers Day: ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಅಭಿಯಂತರರ ದಿನಾಚರಣೆ

ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಎ. ಸಂಸ್ಥೆಯ ವಚನ ಪಿತಾಮಹ ಡಾ. ಪ. ಗು. ಹಳಕಟ್ಟಿ ಅಭಿಯಾಂತ್ರಿಕ  ಹಾಗೂ ತಾಂತ್ರಿಕ ಮಹಾವಿದ್ಯಾಲದಲ್ಲಿ ಎಂಜಿನಿಯರ್ಸ್ ಡೆ ಆಚರಿಸಲಾಯಿತು.  ಬಾರತರತ್ನ ಡಾ. ಸರ್ ಎಂ. ವಿಶ್ವೇಶ್ವರಯ್ಯ ಅವರ 162ನೇ ಜನ್ಮ ದಿನಚರಣೆ ಅಂಗವಾಗಿ ಸಿವಿಲ್ ವಿಭಾಗದಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೆಬಿಜೆಎನ್ಎಲ್ ಆಲಮಟ್ಟಿ ಡಿವಿಜನ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಿ. ಎಸ್. ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವೇಶ್ವರಯ್ಯ ಭವ್ಯ ಭಾರತದ ಕನಸನ್ನು  ಕಂಡಿದ್ದರು.  ದೇಶದ ಸಮೃದ್ಧವಾಗಿ, ಆರ್ಥಿಕವಾಗಿ, […]

Students Introduction: ಕೆಸಿಪಿ ಸಾಯಿನ್ಸ್ ಕಾಲೇಜಿನಲ್ಲಿ ಬಿ.‌ಎ. ಬಿ. ಎಸ್ಸಿ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮ

ವಿಜಯಪುರ: ವಿದ್ಯಾರ್ಥಿಗಳು ಸತತ ಓದು, ಪರಿಶ್ರಮ, ನಿರಂತರ ಅಧ್ಯಯನ ನಡೆಸಿ ಕಾಲೇಜಿನಲ್ಲಿರುವ ಮೂಲ ಸೌಲಭ್ಯಗಳನ್ನು ಬಳಸಿಕೊಂಡು ಭವಿಷ್ಯವನ್ನು ಉಜ್ವಲ ಪಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಡಾ. ಯು. ಎಸ್. ಪೂಜೇರಿ ಹೇಳಿದರು. ನಗರದ ಬಿ. ಎಲ್. ಡಿ. ಇ. ಸಂಸ್ಥೆಯ ಎಸ್. ಬಿ. ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಮೃತ ಮಹೋತ್ಸವ ವರ್ಷಾಚರಣೆ ಹಾಗೂ 2022-23 ನೇ ವರ್ಷದ ಬಿ.‌ ಎ ಮತ್ತು ಬಿ.ಎಸ್ಸಿ ವರ್ಷದ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿ. ಎಲ್. ಡಿ. […]

POCSO Workshop: ಮಾಧ್ಯಮ ಪ್ರತಿನಿಧಿಗಳಿಗೆ ಪೋಕ್ಸೊ, ಜೆಜೆ ಕಾಯಿದೆ ಕುರಿತು ಕಾರ್ಯಾಗಾರ- ನ್ಯಾ. ವೆಂಕಣ್ಣ ಹೊಸಮನಿ ಹೇಳಿದ್ದೇನು ಗೊತ್ತಾ?

ವಿಜಯಪುರ : ಪೊಕ್ಸೊ ಮತ್ತು ಜೆಜೆ ಕಾಯಿದೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗಾಗಿ ಕಾರ್ಯಾಗಾರ ನಗರದಲ್ಲಿ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಾಗಾರವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ. ಹೊಸಮನಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ […]