Rain Water: ಇದು ಯಾವುದೋ‌ ಹಳ್ಳ ಅಲ್ಲ- ಬಸವ ನಾಡಿನಲ್ಲಿರುವ ಈ ಸ್ಥಳ ಯಾವುದು ಗೊತ್ತಾ?

ವಿಜಯಪುರ: ಇದನ್ನು ನೋಡಿದರೆ ಹಳ್ಳದಂತೆ ಕಾಣುತ್ತದೆ. ಆದರೆ, ಇದು ಹಳ್ಳ ಅಲ್ಲವೇ ಅಲ್ಲ. ನದಿಯೂ ಅಲ್ಲ. ಸಂಜೆ ಬಸವ ನಾಡು ವಿಜಯಪುರ ನಗರದಲ್ಲಿ ಸುಮಾರು ಹೊತ್ತು ಧಾರಾಕಾರ ಮಳೆಯಾಗಿದೆ. ಈ ಮಳೆಯ ನೀರು ಎಷ್ಟಿತ್ತೆಂದರೆ, ರಾಷ್ಟ್ರೀಯ ಹೆದ್ದಾರಿಯೇ ಈ ಭಾಗದಲ್ಲಿ ಮಳೆಯ ನೀರಿನಿಂದ ತುಂಬಿ ಹೋಗಿತ್ತು. ರಸ್ತೆಯೇ ಕಾಣದ ರೋಡಿನಲ್ಲಿ ವಾಹನ ಸವಾರರು ಒಂದು ಅಂದಾಜಿನ ಮೇಲೆಯೇ ತಂತಮ್ಮ ವಾಹನ ಚಲಾಯಿಸಿಸುತ್ತಿದ್ದ ದೃಷ್ಯ ಮಾಮೂಲಾಗಿತ್ತು. ಬಸ್ಸಿರಲಿ, ಟ್ರಕ್ ಇರಲು, ದ್ವಿಚಕ್ರ ವಾಹನಗಳೇ ಇರಲಿ. ಎಲ್ಲವೂ ಹೀಗೆ ನೀರು […]

Ganja Seize: ಅಬಕಾರಿ ವಿಚಕ್ಷಣ ದಳ ಕಾರ್ಯಾಚರಣೆ- 980 ಗ್ರಾಂ ಒಣ ಗಾಂಜಾ ವಶ- ಓರ್ವನ ಬಂಧನ

ವಿಜಯಪುರ: ಜಿಲ್ಲಾ ಅಬಕಾರಿ ವಿಚಕ್ಷಣ ದಳದ ಧಾಳಿ ನಡೆಸಿ 980 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸಂಗಾಪುರ ಕ್ರಾಸ್ ಬಳಿ ನಡೆದಿದೆ. ಪತಸಪ್ಪ ಚನ್ನಪ್ಪ ಸಿಂಗೆ ಎಂಬಾತ ತನ್ನ ದ್ವಿಚಕ್ರ ವಾಹನದ ಮೇಲೆ ಅಕ್ರಮವಾಗಿ ಒಣ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಹಿನ್ನೆಲೆ ಈ ಧಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ 980 ಗ್ರಾಂ ಒಣ ಗಾಂಜಾ ಮತ್ತು ದ್ವಿಚಕ್ರ ವಾಹನ ವಶಪಡಿಕೊಂಡು‌ ಆರೋಪಿಯನ್ನು ಬಂಧಿಸಿದ್ದಾರೆ. ಒಣ ಗಾಂಜಾ ಮತ್ತು ದ್ವಿಚಕ್ರ […]

Paper Distributers Day: ವಿಶ್ವ ಪತ್ರಿಕಾ ವಿತರಕರ ದಿನ ಅರ್ಥಪೂರ್ಣವಾಗಿ ಆಚರಣೆ

ವಿಜಯಪುರ: 10ಕ್ಕೂ ಹೆಚ್ಚು ಪತ್ರಿಕಾ ವಿತರಕರನ್ನು ಸನ್ಮಾನಿಸುವ ಮೂಲಕ ನಗರದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಜಯಪುರ ನಗರದಲ್ಲಿ ನಗರದಲ್ಲಿ ಹೊಸ ಪತ್ರಿಕಾ ಬವನದಲ್ಲಿ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಸರಳ ಸಮಾರಂಭದಲ್ಲಿ 10ಕ್ಕೂ ಅಧಿಕ ಪತ್ರಿಕಾ ವಿತರಕರನ್ನು ಸನ್ಮಾನಿಸಿ, ಗೌರವಿಸುವ ಮೂಲಕ ಪತ್ರಿಕಾ ವಿತರಕರ ಕಾಯಕಕ್ಕೆ ಉತ್ತೇಜನ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪತ್ರಿಕಾ ವಿತರಕರು […]

Ganesh Temple: ಸಿಂದಗಿ ಪಟ್ಟಣದಲ್ಲಿ ಕುಸಿದು ಬಿದ್ದ ಗಣೇಶನ ಗೋಲ್ಡನ್ ಟೆಂಪಲ್ ಮಾದರಿ- ಬಾರಿ ಅನಾಹುತ- ಕೆಲವರಿಗೆ ಗಾಯ

ವಿಜಯಪುರ: ಸಾರ್ವಜನಿಕ ಉತ್ಸವದ ಅಂಗವಾಗಿ ನಮನ ನಿರ್ಮಿಸಲಾಗಿದ್ದ ಗೋಲ್ಡನ್ ಗಣೇಶ ಮಂಟಪ ದಿಢೋರ ಕುಸಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ಸಿಂದಗಿ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ವೃತ್ತದಲ್ಲಿನ ಗಣೇಶ ಮಂಟಪ ಕುಸಿದ ಪರಿಣಾಮ ಕೆಲವು ಜನರಿಗೆ ಗಾಯಗಳಾಗಿವೆ. ಸಾರ್ವಜನಿಕ ಗಣೇಶ ಉತ್ಸವದ ಹಿನ್ನೆಲೆಯಲ್ಲಿ ಸಿಂದಗಿ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ವೆಲ್ಲೋರದ ಗೋಲ್ಡನ್ ಟೆಂಪಲ್ ಮಾದರಿ ದೇವಸ್ಥಾಮ ನಿರ್ಮಿಸಲಾಗಿತ್ತು. ಈ ಗಣೇಶನ ಸಿಂದಗಿ‌ ಪಟ್ಟಣಾದ್ಯಂತ ಜನಮನ ಸೆಳೆದಿತ್ತು. ನಾಲ್ಕು ದಿನಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿರುವ […]

Couple Died: ಸಾವಿನಲ್ಲೂ ಒಂದಾದ ದಂಪತಿ- 5 ಜನ ಪುತ್ರರು, 3 ಜನ ಪುತ್ರಿಯರು, 24 ಮೊಮ್ಮಕ್ಕಳು, 16 ಮರಿಮೊಮ್ಮಕ್ಕಳನ್ನು ಅಗಲಿದ ದಂಪತಿ

ವಿಜಯಪುರ: ತುಂಬು ಸಂಸಾರ ನಡೆಸಿದ ದಂಪತಿ ಸಾವಿನಲ್ಲೂ ಒಂದಾದ ಹೃದಯವಿದ್ರಾವಕ ಘಟನೆ ಬಸವನಾಡು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ನಡೆದಿದೆ. ಸಾವಿಗೀಡಾದ ದಂಪತಿಯನ್ನು ದುಂಡವ್ವ ದೇವೇಂದ್ರ ವಳಸಂಗ(90) ಮತ್ತು ದೇವೇಂದ್ರ ಶಾಮರಾಯ ವಳಸಂಗ(106) ಎಂದು ಗುರುತಿಸಲಾಗಿದೆ. ದುಂಡವ್ವ ದೇವೇಂದ್ರ ವಳಸಂಗ ಕಳೆದ ಎರಡು ದಿನಗಳ ಹಿಂದೆ ಸ್ವಲ್ಪ ಅಸ್ವಸ್ಥರಾಗಿದ್ದರು. ತಿಕೋಟಾದಲ್ಲಿ ಚಿಕಿತ್ಸೆಯ ನಂತರ ಅವರನ್ನು ಸೋಮದೇವರಹಟ್ಟಿ ಗ್ರಾಮದ ತೋಟದ ವಸ್ತಿಗೆ ಕರೆತರಲಾಗಿತ್ತು. ಬೆ. 8. 30ಕ್ಕೆ ದುಂಡವ್ವ ಕೊನೆಯುಸಿರೆಳೆದಿದ್ದಾರೆ. ಪತ್ನಿ ಸಾವಿನ ಸುದ್ದಿ ತಿಳಿದ […]

Raid Seize: ಕೃಷಿ ಜಾಗೃತ ಕೋಶ ಅಧಿಕಾರಿಗಳ ದಾಳಿ- 280 ಕೆ.ಜಿ. ರಸಗೊಬ್ಬರ ಜಪ್ತಿ

ವಿಜಯಪುರ: ರಾಜ್ಯ ಜಾಗೃತ ಕೋಶ ಕೃಷಿ ನಿರ್ದೇಶಕ ಅನೂಪ ಕೆ. ಜಿ. ನೇತೃತ್ವ ಮತ್ತು‌‌ ಬೆೞಗಾವಿ ಜಾಗೃತ ಕೋಶ ವಿಭಾಗದ ಜಂಟಿ ಕೃಷಿ ನಿರ್ದೇಶಕ ಜಲಾನಿ ಮೋಕಾಶಿ ಹಾಗೂ ವಿಜಯಪುರ ಕೃಷಿ ಇಲಾಖೆ ಅಧಿಕಾರಿಗಳ ತಂಡ ಜಂಟಿ ಧಾಳಿ ನಡೆಸಿ 280 ಕೆಜಿ ರಸಗೊಬ್ಬರ ಜಪ್ತಿ ಮಾಡಿದ್ದಾರೆ. ವಿಜಯಪುರ ನಗರದ ಕೃಷಿ ಪರಿಕರಗಳ ಮಾರಾಟ ಮಳಿಗೆಗಳ ಮೇಲೆ ಇತ್ತೀಚೆಗೆ ಈ ತಂಡಗಳು ದಾಳಿ ನಡೆಸಿವೆ. ಅನುಮತಿ ಪಡೆಯದ ಅಕ್ರಮವಾಗಿ ಜಿಂಕ್ ಮತ್ತು ಬೋರಾನ್ ಮಿಶ್ರಣ ಇಡಿಟಿಎ ಮತ್ತು […]

Retired Felicitation: ಸೇವಾ ನಿವೃತ್ತಿ ಹೊಂದಿದ ಮುಖ್ಯ ಗುರುಮಾತೆಗೆ ಸನ್ಮಾನಿಸಿ ಶುಭ ಕೋರಿಕೆ

ವಿಜಯಪುರ: 41 ವರ್ಷ ಶಿಕ್ಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾದ ಮುಖ್ಯ ಗುರುಮಾತೆಯನ್ನು ಶಾಲೆಯ ಸಿಬ್ಬಂದಿ, ಮಕ್ಕಳು ಮತ್ತು ಇತರರು ಆತ್ಮೀಯವಾಗಿ ಶುಭ ಕೋರಿದರು. ವಿಜಯಪುರ ನಗರದ ಗ್ಯಾಂಗ್ ಬಾವಡಿ ಪ್ರದೇಶದ ಜಯನಗರದಲ್ಲಿರುವ ಹೆಣ್ಣು ಮಕ್ಕಳ ಸರಕಾರಿ‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಮುಖ್ಯ ಶಿಕ್ಷಕಿ ಶಾರದಾ ಕೊಪ್ಪ(ಐಹೊಳ್ಳಿ) 41 ವರ್ಷ ಒಂದು ತಿಂಗಳುಗಳ ಕಾಲ ವಿಜಯಪುರ ನಗರದ ನಾನಾ ಶಾಲೆಗಳಲ್ಲಿ ಶಿಕ್ಷಕಿಯಾಗಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.   ಆ.31 […]

Minister Inauguration; ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಉಮೇಶ ಕತ್ತಿ ಚಾಲನೆ

ವಿಜಯಪುರ: ಅರಣ್ಯ, ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಗುತ್ತಿ ಬಸವಣ್ಣ ಏತ ನೀರಾವರಿಯ ಯೋಜನೆಯ ಕೇಂದ್ರ ಸ್ಥಳದಲ್ಲಿ ಮೂರು ನೀರಿನ ಮೋಟರಗಳಿಗೆ ಚಾಲನೆ ನೀಡಿದರು. ಈ‌ ಸಂದರ್ಭದಲ್ಲಿ ಸಚಿವರು ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.‌‌‌‌ ಬಳಿಕ ಮಾತನಾಡಿದ ಅವರು, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಪಂಪ್‌ಗಳ ರಿಪೇರಿ ಕಾರ್ಯ ಪೂರ್ಣಗೊಂಡಿದೆ. ಹೀಗಾಗಿ […]

Shivadas SUCI: ಮಾರ್ಕ್ಸವಾದಿ ಚಿಂತಕ ಶಿವದಾಸ ಘೋಷ ಜನ್ಮ ಶತಮಾನೋತ್ಸವ ಆಚರಣೆ

ವಿಜಯಪುರ: ಶಿವದಾಸ ಘೋಷ ಅವರ ಚಿಂತನೆಗಳಿಲ್ಲದೆ ಇಂದು ದೇಶದಲ್ಲಿ ಸಮಾಜವಾದ ಸ್ಥಾಪನೆಮಾಡಲು ಸಾಧ್ಯವಿಲ್ಲ. ಎಂದು ಎಸ್ ಯು ಸಿ ಐ ಕಮ್ಯೂನಿಷ್ಟ ಪಕ್ಷದ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಡಾ. ಟಿ. ಎಸ್. ಸುನೀತಕುಮಾರ ಹೇಳಿದರು. ವಿಜಯಪುರ ನಗರದಲ್ಲಿ ಎಸ್ ಯು ಸಿ ಐ ಜಿಲ್ಲಾ ಘಟಕ ಆಯೋಜಿಸಿದ್ದ ಮಹಾನ್ ಮಾರ್ಕ್ಸವಾದಿ ಚಿಂತಕ ಶಿವದಾಸ ಘೋಷ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾರ್ಕ್ಸವಾದ ಕೇವಲ ರಾಜಕೀಯ ಸಿದ್ದಾಂತವಲ್ಲ. ಅದೊಂದು ಜೀವನ ವಿಧಾನವಾಗಿದೆ. ಇಂಥ ಮಾರ್ಕ್ಸವಾದವನ್ನು ಇಂದು ದೇಶದ […]

Savarkar Study Center: ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ವೀರ ಸಾವರ್ಕರ ಅಧ್ಯಯನ ಪೀಠ ಸ್ಥಾಪನೆಗೆ ಆಗ್ರಹಿಸಿ ಉಮೇಳ ಕಾರಜೋಳ ನೇತೃತ್ವದಲ್ಲಿ ಮನವಿ ಸಲ್ಲಿಕೆ

ವಿಜಯಪುರ: ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ವೀರ ಸಾವರ್ಕರ ಅಧ್ಯಯನ ಪೀಠ ಸ್ಥಾಪಿಸುವಂತೆ ಆಗ್ರಹಿಸಿ ಯುವ ಭಾರತ ಪದಾಧಿಕಾರಿಗಳು ವಿವಿ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮತ್ತು ಬಿಜೆಪಿ ಯುವ ಧುರೀಣ ಉಮೇಶ ಕಾರಜೋಳ, ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ ಸ್ಥಾಪನೆಯಾಗಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಸಬಲೀಕರಣ ಹಾಗೂ ಶಿಕ್ಷಣ ಪ್ರಸಾರದ ಉನ್ನತ […]