Pinchani Adalat: ಆ. 29ರಂದು ತಿಕೋಟಾ, ಆ. 30ರಂದು ಬಬಲೇಶ್ವರದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ

ವಿಜಯಪುರ: ಬಬಲೇಶ್ವರ ಮತಕ್ಷೇತ್ರದ ತಿಕೋಟಾ ಮತ್ತು ಬಬಲೇಶ್ವರಗಳಲ್ಲಿ ಪಿಂಚಣಿ ಅದಾಲತ ಕಾರ್ಯಕ್ರಮ ನಡೆಯಲಿದೆ. ಆ. 29 ರಂದು ಸೋಮವಾರ ತಿಕೋಟಾದಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ. ಅಂದು ತಿಕೋಟಾ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಬೆ. 11ರಿಂದ ಪಿಂಚಣಿ ಅದಾಲತ್ ನಡೆಯಲಿದೆ. ಅದೇ ರೀತಿ, ಮಾ. 30ರಂದು ಬಬಲೇಶ್ವರ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ. ಅಂದು ಬೆ. 11 ರಿಂದ ಈ ಕಾರ್ಯಕ್ರಮ ನಡೆಯಲಿದೆ‌ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಮತ್ತು ಬಬಲೇಶ್ವರ ಮತಕ್ಷೇತ್ರದ ಶಾಸಕರಾದ ಎಂ. […]

Horti Irrigation: ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಅನುಮೋದನೆ- ಇಂಡಿ ಬಹುಹಳ್ಳಿ ಯೋಜನೆ ಅಂದಾಜು ಪಟ್ಟಿಗೆ ಅನುಮೋದನೆ- ಸಚಿವ ಕಾರಜೋಳ

ಬೆಂಗಳೂರು: ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಡಿ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಲಸಂಪನ್ಮೂಲ‌ ಸಚಿವ ಗೋವಿಂದ ಕಾರಜೋಳ‌ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ‌ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಪ್ರತ್ಯೇಕವಾಗಿ 3.245 ಟಿಎಂಸಿ ನೀರನ್ನು ಲಿಫ್ಟ್ ಮಾಡಿ (ಆರ್.ಎಲ್.504.75 ಮೀ.ನಿಂದ ಆರ್.ಎಲ್.660.00 ಮೀ.ವರೆಗೆ) ಪೈಪ್ ಲೈನ್ ಅಳವಡಿಕೆಯೊಂದಿಗೆ ಇಂಡಿ ಮತ್ತು ವಿಜಯಪುರ ತಾಲೂಕುಗಳ (ನಾಗಠಾಣ ಮತಕ್ಷೇತ್ರ ಒಳಗೊಂಡಂತೆ) 28000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ಇದಾಗಿದ್ದು, ಮೂರು […]

Earthquake Felt: ಬಸವ ನಾಡಿನಲ್ಲಿ ಮತ್ತೆ ಭೂಕಂಪ- ಮಧ್ಯರಾತ್ರಿ, ನಸುಕಿನ ಜಾವ ಎರಡು ಬಾರಿ ಭೂಕಂಪನ

ವಿಜಯಪುರ: ಬಸವ ನಾಡು ವಿಜಯಪುರದಲ್ಲಿ ಮತ್ತೆ ಭೂಕಂಪನ ಸಂಭವಿಸಿದೆ. ಮಧ್ಯರಾತ್ರಿ 12.05ಕ್ಕೆ ಮತ್ತು ನಸುಕಿನ ಜಾವ 5.29ಕ್ಕೆ ಭೂಕಂಪನ ಉಂಟಾಗಿದೆ. ಮಧ್ಯರಾತ್ರಿ12.05ಕ್ಕೆ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ಭೂಕಂಪನ ಅನುಭವವಾಗಿದೆ. ಅನಧಿಕೃತ ಮೂಲಗಳ ಪ್ರಕಾರ 2.8 ತೀವ್ರತೆಯ ಭೂಕಂಪನ ಇದಾಗಿತ್ತು. ನಸುಕಿನ‌ ಜಾವ ವಿಜಯಪುರ ತಾಲೂಕಿನ ಹೊನ್ನುಟಗಿ ಬಳಿ ಭೂಕಂಪನ ಅನುಭವವಾಗಿದೆ. ಹೊನ್ನುಟಗಿ ಬಳಿ ಕೇಂದ್ರಬಿಂದು ಹೊನ್ನುಟಗಿ ಭೂಕಂಪನ ಕುರಿತು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ. ರಿಕ್ಚರ್ ಮಾಪಕದಲ್ಲಿ […]

Earthquake DC: ಕಪ್ಪು ಶಿಲೆಯ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನವು ಹಾನಿ ಮಾಡುವುದಿಲ್ಲ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸ್ಪಷ್ಟನೆ

ವಿಜಯಪುರ: ವಿಜಯಪುರ ಜಿಲ್ಲೆ ಕಪ್ಪು ಶಿಲೆಯಿಂದ ಆವೃತವಾಗಿದ್ದು, ಇದು ಕಡಿಮೆ ಮತ್ತು ಮಧ್ಯಮ ತೀವ್ರತೆಯುಳ್ಳ ವಲಯವಾಗಿದೆ. ಹೀಗಾಗಿ ಈ ರೀತಿಯ ಪ್ರದೇಶಗಳಲ್ಲಿನ ಭೂಕಂಪನಗಳು ಯಾವುದೇ ಹಾನಿ ಸೃಷ್ಟಿಸುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರು ಅವರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮೇಲಿಂದ ಮೇಲೆ ಕಡಿಮೆ ತೀವ್ರತೆ ಉಳ್ಳ ಭೂಕಂಪನ ಸಂಭವಿಸುತ್ತಿದೆ. ಈ ಬಗ್ಗೆ ಆಗಸ್ಟ್ 23ರಂದು ಜಿಲ್ಲಾಡಳಿತದಿಂದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆ ನಡೆಸಿ […]

Earthquake Karajol: ಬಸವ ನಾಡಿನಲ್ಲಿ ಕೊಳವೆ ಭಾವಿಗಳ ಹೆಚ್ಚಳದಿಂದ ಭೂಕಂಪನ ಉಂಟಾಗುತ್ತಿರುವ ಶಂಕೆಯಿದೆ- ಜಿಲ್ಲಾಡಳಿತ ಕಾರಣ ಪತ್ತೆ ಮಾಡಿಸಬೇಕು- ಉಮೇಶ ಕಾರಜೋಳ

ವಿಜಯಪುರ: ಗುಮ್ಮಟ ನಗರಿಯಲ್ಲಿ ಉಂಟಾಗುತ್ತಿರುವ ಭೂಕಂಪಕ್ಕೆ ಕೊಳವೆ ಭಾವಿಗಳ ಹೆಚ್ಚಳವೇ ಕಾರಣ ಎಂಬ ಶಂಕೆ ಬಲವಾಗಿದ್ದು, ಈ ಕುರಿತು ವಿಜಯಪುರ ಜಿಲ್ಲಾಡಳಿತ ಸ್ಪಷ್ಟ ಕಾರಣ ಪತ್ತೆ ಮಾಡಿ ಜನರಲ್ಲಿ ಉಂಟಾಗಿರುವ ಆಂತಕವನ್ನು ನಿವಾರಣೆ ಮಾಡಬೇಕು ಎಂದು ಬಿಜೆಪಿ ಯುವ ಮುಖಂಡ ಮತ್ತು ಸಮಾಜ ಸೇವಕ ಉಮೇಶ ಕಾರಜೋಳ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ನಾಡು ವಿಜಯಪುರ ಜಿಲ್ಲೆಯ ಕೊಲ್ಹಾರದಿಂದ ಮಹಾರಾಷ್ಟ್ರದ ಸೋಲಾಪುರದವರೆಗೆ ಭೂಮಿಯಡಿ ಏಕಶಿಲೆಯಿದೆ.   ಆದರೆ, ಬೋರವೆಲ್ ಗಳ ಹೆಚ್ಚಳದಿಂದಾಗಿ ಈ ಏಕಶಿಲೆಗೆ ಧಕ್ಕೆಯಾಗುತ್ತಿದೆ,  […]

Earthquake Meeting: ಭೂಕಂಪನ ಹಿನ್ನೆಲೆ- ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಡಿಸಿ ಸಭೆ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಭೂಕಂಪ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ. ವಿಜಯಮಹಾಂತೇಶ ಬಿ.‌ದಾನಮ್ಮನವರ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭೂಕಂಪನಕ್ಕೆ ಸಂಬಂಧಿಸಿದಂತೆ ಚರ್ಚಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಭೂಗರ್ಭದಲ್ಲಿ ಚಿಕ್ಕ ಪ್ರಮಾಣದಲ್ಲಿ ಆಗುವ ಭೂಕಂಪನಗಳು ಕೆಲವೊಮ್ಮೆ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಭೂಕಂಪನದ ಬಗ್ಗೆ ಅನುಭವಕ್ಕೆ ಬಂದರೂ ಅದರಿಂದ ಜನತೆಗೆ ತೊಂದರೆಯೂ ಇರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದರೆ, ಭೂಕಂಪನದ ಬಗ್ಗೆ ನಾನಾ ಸಾಮಾಜಿಕ ಜಾಲತಾಣಗಳಲ್ಲಿ […]

Nursery CEO: ನರ್ಸರಿ ಅಭಿವೃದ್ಧಿಗೆ ವಿಜಯಪುರ ಜಿ. ಪಂ. ಸಿಇಓ ರಾಹುಲ್ ಶಿಂಧೆ ಚಾಲನೆ

ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ ಶಿಂಧೆ ಅವರು ವಿಜಯಪುರ ತಾಲೂಕಿನ ಆಹೇರಿ, ಶಿವಣಗಿ ಮತ್ತು ಮದಭಾವಿ ಗ್ರಾ. ಪಂ. ಗಳಿಗೆ ಭೇಟಿ ನೀಡಿ ನಾನಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆಹೇರಿ ಗ್ರಾ. ಪಂ. ವ್ಯಾಪ್ತಿಯ ಅಂಕಲಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಗಳ ಸಹಭಾಗಿತ್ವದಲ್ಲಿ ಕೈಗೊಂಡ ನರ್ಸರಿ ಅಭಿವೃದ್ಧಿ ಕಾಮಗಾರಿಗೆ ಸಹ ಚಾಲನೆ ನೀಡಿದರು. ನಂತರ ನರ್ಸರಿ ಅಭಿವೃದ್ಧಿ ಘಟಕದಲ್ಲಿ ದ್ರಾಕ್ಷಿ ಸಸಿಗಳನ್ನು ಸಹ […]

Egg Throwing Protest: ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ- ನಾನಾ ಸಂಘಟನೆಗಳಿಂದ ಪ್ರತಿಭಟನೆ

ವಿಜಯಪುರ: ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಅವರ ವಾಹನದ ಮೇಲೆ ಮೊಟ್ಟೆ ಎಸೆತ ಪ್ರಕರಣ ಖಂಡಿಸಿ ವಿಜಯಪುರ ನಗರದಲ್ಲಿ ನಾನಾ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಾಲುಮತ ಸಮಾಜದಿಂದ ಪ್ರತಿಭಟನೆ ಕೊಡಗು ಜಿಲ್ಲೆಯಲ್ಲಿ ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧಾರಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಖಂಡಿಸಿ ವಿಜಯಪುರ ಜಿಲ್ಲಾ ಹಾಲುಮತ ಸಂಘ ಹಾಗೂ ವಿಜಯಪುರ ಜಿಲ್ಲಾ ಕುರುಬರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ನಡೆಸಿದ ಈ ಕೃತ್ಯ ಖಂಡನೀಯ.  […]

Drought Elected: ಬರಗಾಲ ನಿವಾರಣಾ ಸಹಕಾರ ಸಂಘದ ಅದ್ಯಕ್ಷರಾಗಿ ಗೂಳಪ್ಪ ಶೆಟಗಾರ ಪುನರಾಯ್ಜೆ- ಉಳಿದ ಪದಾಧಿಕಾರಿಗಳ ಮಾಹಿತಿ ಇಲ್ಲಿದೆ

ವಿಜಯಪುರ: ಜಿಲ್ಲಾ ಬರಗಾಲ ನಿವಾರಣಾ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ಸದಸ್ಯರಾಗಿ ಬಸನಗೌಡ ಅ. ಪಾಟೀಲ, ಗೂಳಪ್ಪ ಸಿ. ಶೆಟಗಾರ, ರಮೇಶ, ಆಳೂರ, ರಾಜೇಂದ್ರ ಮ. ಪಾಟೀಲ, ರಾಜಶೇಖರ ವಿ. ಗಚ್ಚಿನಮಠ, ಲಕ್ಷ್ಮಣ ಯ. ಇಂಡಿ ಶರಣಗೌಡ ಬಾ, ಪಾಟೀಲ, ಸಂಗನಸಿಂಗ ಗು. ಹಜೇರಿ, ರತ್ನಮಾಲಾ ಸು. ಅಕ್ಕಿ, ಶಿವಕ್ಕ ಪ್ರ. ಕುಡಚಿ, ನಂದಕಿಶೋರ ರಾ. ರಾಠೋಡ, ಬಸವರಾಜ ಸಂ. ಬಂಡಿ, ಸಂಜೀವ ಬ. ಯಲದಿ, ಸಿದ್ರಾಮಪ್ಪ ದು. […]

Tremor Felt: ಗುಮ್ಮಟ ನಗರಿಯಲ್ಲಿ ಮತ್ತೆ ನಡುಗಿದ ಭೂಮಿ- ಭೂಕಂಪನ ಅನುಭವ

ವಿಜಯಪುರ: ವಿಜಯಪುರ ನಗರದಲ್ಲಿ ರಾತ್ರಿ 9.23ಕ್ಕೆ ಮತ್ತೆ ಭೂಕಂಪನದ ಅನುಭವವಾಗಿದೆ.    ವಿಜಯಪುರ ನಗರದ ಆದರ್ಶ ನಗರ, ಜಲನಗರ ಸೇರಿದಂತೆ ನಾನಾ ಕಡೆಗಳಲ್ಲಿ ಈ ಅನುಭವವಾಗಿದೆ. ಭೂಮಿಯೊಳಗಿಂದ ಶಬ್ದ ಕೇಳಿ ಬಂದಿದ್ದು, ಭೂಮಿ ನಡುಗಿದ ಅನುಭವವಾಗಿದೆ.  ಆದರೆ, ಇತರ ತೀವ್ರತೆ, ಕೇಂದ್ರಬಿಂದು ಮತ್ತು ಇದು ಭೂಕಂಪನ ಹೌದೋ ಅಲ್ವೋ ಎಂಬುದನ್ನು ವಿಜಯಪುರ ಜಿಲ್ಲಾಡಳಿತ ಇನ್ನಷ್ಟೇ ದೃಢಪಡಿಸಬೇಕಿದೆ.