Ibramimpur RoB: ಸಂಸದ ಜಿಗಜಿಣಗಿ ಪ್ರಯತ್ನ- ಒಂದೂವರೆ ತಿಂಗಳಲ್ಲಿ ಇಬ್ರಾಹಿಂಪೂರ ರೇಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ- ಮಳುಗೌಡ ಪಾಟೀಲ

ವಿಜಯಪುರ: ನಗರದ ಇಬ್ರಾಹಿಂಪೂರ ರೇಲ್ವೆ ಮೇಲ್ಸೇತುವೆ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣವಾಗಲಿದ್ದು, ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಜೆಪಿ ನಗರ ಮುಂಡಲ ಅಧ್ಯಕ್ಷ ಮಳುಗೌಡ ಬಿ. ಪಾಟೀಲ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ತಾಂತ್ರಿಕ ಕಾರಣಗಳಿಂದಾಗಿ ಈ ಕಾಮಗಾರಿ ವಿಳಂಬವಾಗಿದೆ.  ಈ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಸಂಸದ ರಮೇಶ ಜಿಗಜಿಣಗಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.  ಅಲ್ಲದೇ, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕಾಲೂ ಮಾಡಿಕೊಡುವಂತೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದರು.  ಈ […]

Journalists Conference: ವಿಜಯಪುರದಲ್ಲಿ ಪತ್ರಕರ್ತರ 37ನೇ ರಾಜ್ಯ ಮಟ್ಟದ ಸಮ್ಮೇಳನ ಯಶಸ್ಸಿಗೆ ಶಿವಾನಂದ ತಗಡೂರ ಮನವಿ

ವಿಜಯಪುರ: ನಗರದಲ್ಲಿ ನಡೆಯಲಿರುವ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಯಶಸ್ಸಿಗೆ ಶ್ರಮಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮನವಿ ಮಾಡಿದ್ದಾರೆ.  ವಿಜಯಪುರ ನಗರದ ಪತ್ರಿಕಾ ಭವನದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.  ವಿಜಯಪುರ ಜಿಲ್ಲೆಯ ಹಲವಾರು ಪತ್ರಕರ್ತರು ಹಾಗೂ ಸಂಘದ ಜಿಲ್ಲಾ ಪದಾಧಿಕಾರಿಗಳು ಪತ್ರಕರ್ತರ ರಾಜ್ಯ ಸಮ್ಮೇಳನ ವಿಜಯಪುರ ಜಿಲ್ಲೆಗೆ ವಹಿಸಿ ಕೊಡುವಂತೆ ಕಳೆದ ಮೂರು ವರ್ಷಗಳಿಂದ ಮನವಿ ಮಾಡುತ್ತ ಬಂದಿದ್ದರು.  […]

Airport Kajalol: ವಿಜಯಪುರ ಏರಪೋರ್ಟ್ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವ ಗೋವಿಂದ ಕಾರಜೋಳ- ನಂತರ ಹೇಳಿದ್ದೇನು ಗೊತ್ತಾ?

ವಿಜಯಪುರ: ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಅವರು ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಬುರಣಾಪುರ ಬಳಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದರು.  ಕಾಮಗಾರಿಯ ಪ್ರಗತಿಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಜು. 31ರವರೆಗೆ ಮೊದಲನೇ ಹಂತದ ಕಾಮಗಾರಿಯ ಶೇ.64 ಭೌತಿಕ ಮತ್ತು 63.17 ಆರ್ಥಿಕ ಪ್ರಗತಿ ಸಾಧಿಸಲಾಗಿದೆ.   ಎರಡನೇ ಹಂತದ ಕಾಮಗಾರಿಯಲ್ಲಿ ಶೇ.10.34ರಷ್ಟು ಭಔತಿಕ ಮತ್ತು ಶೇ.4.26ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ  ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವಿಜಯಪುರ […]

Human Trafficking: ಮಾನವ ಕಳ್ಳ ಸಾಗಣೆ ತಡೆ ನಮ್ಮೆಲರ ಹೊಣೆ-ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಎಲ್.ಅರಸಿದ್ದಿ

ವಿಜಯಪುರ: ಮಾನವ ಮತ್ತು ಮಾನವನ ಅಂಗಾಂಗಳ ಕಳ್ಳಸಾಗಣೆ ತಡೆಯುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಹೇಳಿದ್ದಾರೆ. ವಿಜಯಪುರ ನಗರದ ರುಡಸೆಟ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನೆ(ನಗರ ಮತ್ತು ಗ್ರಾಮೀಣ) ಸಂಯುಕ್ತಾಶ್ರಯದಲ್ಲಿ ನಡೆದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಕಳ್ಳ ಸಾಗಾಣಿಕೆ […]

Heart Joining App: ಒಡೆದಿರುವ ಮನಗಳನ್ನು ಒಗ್ಗೂಡಿಸುವ ಆ್ಯಪ್ ಗಳ ಅಗತ್ಯತೆ ಹೆಚ್ಚಾಗಿದೆ- ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ

ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಆವಿಷ್ಕಾರಗಳು ಆಗುತ್ತಿವೆ. ಹಲವಾರು ಆ್ಯಪ್ ಗಳ ರಚಿಸಲಾಗುತ್ತಿದೆ. ಆದರೆ, ಒಡೆದು ಹೋಗಿರುವ ಮನಸ್ಸುಗಳನ್ನು ಸೇರಿಸುವಂಥ ಒಂದೆರಡು ಆ್ಯಪ್‌ಗಳು ಬಂದರೆ ಬದುಕನ್ನು ಸುಲಭವಾಗಿ ಸರಿಪಡಿಸಬಹುದಾಗಿತ್ತು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಡಿಜಿಟಲ್‌ ಕಲಿಕೆಯ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾಗಿರುವ ಪ್ರೋಲಾ ಟೆಕ್‌ ನ ಪ್ರೋಲಾಸ್ಕೂಲ್‌ ಆ್ಯಪ್ ನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ಗುರುವಿನ […]

Press Card Warn: ಪತ್ರಕರ್ತರ ಸಂಘದ ಐಡಿ ಕಾರ್ಡ್ ದುರ್ಬಳಕೆ ಸಹಿಸಲ್ಲ- ಸಂಗಮೇಶ ಚೂರಿ ಎಚ್ಚರಿಕೆ

ವಿಜಯಪುರ: ಕಾರ್ಯನಿರತ ಪತ್ರಕರ್ತರ ಕಾನಿಪ ಗುರುತಿನ‌ಚೀಟಿ(ID Card) ದುರ್ಬಳಕೆ ಸಹಿಸುವುದಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಎಚ್ಚರಿಕೆ ನೀಡಿದ್ದಾರೆ.. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಅವರು‌‌ ಮಾತನಾಡಿದರು. ಗುರುತಿನ ಕಾರ್ಡ್ ದುರುಪಯೋಗ ಪಡಿಸಿಕೊಂಡು ಸಂಘಕ್ಕೆ ಕೆಟ್ಟ ಹೆಸರು ತರುವಂಥ ಕೆಲಸವನ್ನು ಯಾವ ಸದಸ್ಯರೂ ಮಾಡಬಾರದು. ಗುರುತಿನ ಕಾರ್ಡ್ ದುರ್ಬಳಕೆ ಮಾಡಿಕೊಳ್ಳುವುದನ್ನು ನಾನು ಸಹಿಸುವುದಿಲ್ಲ. ಸಂಘವು […]

Pressday Nadahalli: ಮಾಧ್ಯಮಗಳು ಮನೋವಿಕಾಸದ ಸುದ್ದಿಗಳಿಗೆ ಆದ್ಯತೆ ನೀಡಬೇಕು- ಎ. ಎಸ್. ಪಾಟೀಲ ನಡಹಳ್ಳಿ

ವಿಜಯಪುರ: ಮಾಧ್ಯಮಗಳು ಮನೋವಿಕಾರದ ಬದಲು ಮನೋವಿಕಾಸದ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದು ಮುದ್ದೇಬಿಹಾಳ ಬಿಜೆಪಿ ಶಾಸಕ ಮತ್ತು ರಾಜ್ಯ ಆಹಾರ ನಿಗಮದ ಅಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವ ಮತ್ತು ಶ್ರೀ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಪದಗ್ರಹಣ, ಪ್ರಶಸ್ತಿ ಪ್ರದಾನ, ವಿತರಕರಿಗೆ ಸೌಲಭ್ಯ ಮತ್ತು ಸದಸ್ಯರಿಗೆ ಐಡಿ ಕಾರ್ಡ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಾಧ್ಯಮಗಳು ಪ್ರಜಾಪ್ರಭುತ್ವದ […]

Goolappa Mutya Jatre: ಪವಾಡ ಪುರುಷ ಗೂಳಪ್ಪ ಮುತ್ಯಾನ ಜಾತ್ರೆಗೆ ಹರಿದು ಬಂದ ಭಕ್ತ. ಸಾಗರ- ಗಮನ ಸೆಳೆದ ನಾನಾ ಕಾರ್ಯಕ್ರಮಗಳು

ವಿಜಯಪುರ: ಬವಸ ನಾಡು ವಿಜಯಪುರ ಜಿಲ್ಲೆಯಲ್ಲಿ ಜಾತ್ರೆಗಳ ಸಂಭ್ರಮ ಮುಂದುವರೆದಿದೆ.  ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ನಾಗರ ಅಮಾವಾಸ್ಯೆ ನಡೆದ ಪವಾಡ ಪುರುಷ ಗೂಳಪ್ಪ ಮುತ್ಯಾನ ಜಾತ್ರೆ ಸಂಭ್ರಮ ಮತ್ತು ಸಡಗರಕ್ಕೆ ಸಾಕ್ಷಿಯಾಗಿದೆ.  ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಕಳೆಗುಂದಿದ್ದ ಜಾತ್ರೆಗೆ ಈಗ ಮತ್ತೆ ಕಳೆ ಬಂದಿದೆ.  ನಾಗಠಾಣ ಗ್ರಾಮದಲ್ಲಿ ಪವಾಡ ಪುರುಷ ಗೂಳಪ್ಪ ಮುತ್ಯಾ ಅವರ ಜಾತ್ರೆಯ ಅಂಗವಾಗಿ ಕೇವಲ ಧಾರ್ಮಿಕ ಮಾತ್ರವಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾತ್ರೆಯ ಸಂಘಟಕರು ಭಕ್ತರ ಪ್ರೀತಿಗೆ […]

AP Birthday Cancel: ಅಪ್ಪು ಪಟ್ಟಣಶೆಟ್ಟಿ ಮಾದರಿ ನಡೆ- ಜನ್ಮದಿನ ಕಾರ್ಯಕ್ರಮ ರದ್ದು ಪಡಿಸಿ ಶ್ರದ್ಧಾಂಜಲಿ ಸಭೆ ನಡೆಸಿ ಬಿಜೆಪಿ ಕಾರ್ಯಕರ್ತನಿಗೆ ಗೌರವ ಸಲ್ಲಿಕೆ

ವಿಜಯಪುರ: ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಮ್ಮ ಜನ್ಮದಿನದಂದು ಉತ್ತಮ ನಿರ್ಧಾರ ಕೈಗೊಳ್ಳುವ ಮೂಲಕ ಮಾದರಿ ನಡೆ ಅನುಸರಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರೂ ಆಗಿರುವ ಅಪ್ಪು ಪಟ್ಟಣಶೆಟ್ಟಿ ಈಗ 53ನೇ ವರ್ಷ ಪೂರೈಸಿದ್ದಾರೆ.  ಹೀಗಾಗಿ ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಮತ್ತು ಹಿತೈಷಿಗಳು ವಿಜಯಪುರ ನಗರದ ಶಿವಾಜಿ ಚೌಕಿನಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಿದ್ದರು.  ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಟದ ಹಿನ್ನೆಲೆಯಲ್ಲಿ ಜನ್ಮದಿನವನ್ನು ಸಾಂಕೇತಿಕವಾಗಿ ಆಚರಿಸಿದ್ದರು.  ಆದರೆ, ಈ ಬಾರಿ ಕೊರೊನಾ ಭಯ ದೂರವಾಗಿರುವ […]

Kargil Vijay Divas: ಎ ಎಸ್ ಪಿ ಕಾಮರ್ಸ್ ಕಾಲೇಜಿನಲ್ಲಿ ಕಾರ್ಗಿಲ ವಿಜಯ ದಿವಸ ಆಚರಣೆ

ವಿಜಯಪುರ: ಬಿ ಎಲ್ ಡಿ ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ 23ನೇ ಕಾರ್ಗಿಲ ವಿಜಯ ದಿವಸವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಜಯಪುರ 36ನೇ ಕರ್ನಾಟಕ ಎನ್. ಸಿ. ಸಿ. ಬಟಾಲಿಯನ್ ಸುಬೇದಾರ ಮೇಜರ್ ಕುರಂದವಾಡಿ ಮಾತನಾಡಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ವಿವರಿಸಿದರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಯೋಧರು ತೋರಿದ ಸಾಹಸಗಾಥೆ ಪಾಕಿಸ್ತಾನಿ ಸೈನಿಕರು ಪರಾಜಯಗೊಂಡು ಫಲಾಯನ ಮಾಡಿದ ರೀತಿಯ ಕುರಿತು ಸುಬೇದಾರ ಮೇಜರ್ ಕುರಂದವಾಡಿ ಮಾಹಿತಿ ನೀಡಿದರು. ಈ […]