Siddhasiri GB: ಸಿದ್ಧಸಿರಿ ಸೌಹಾರ್ದ 16 ವರ್ಷಗಳಲ್ಲಿ ರೂ. 1500 ಕೋಟಿ ಠೇವಣಿ ಪೂರೈಸಿದ ಹೆಮ್ಮೆ- ಯತ್ನಾಳ

ವಿಜಯಪುರ: ರಾಜ್ಯದ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಹೆಸರು ಮಾಡಿರುವ ಸಿದ್ಧಸಿರಿ ಸೌಹಾರ್ದ 2023 ಕ್ಕೆ ಮಿಶನ್ ರೂ. 3000 ಕೋ. ಠೇವಣಿ ಪೂರೈಸಬೇಕು ಎೞದು ಸಿಬ್ಬಂದಿಗಳಿಗೆ ಶಾಸಕ ಮತ್ತು ಸೌಹಾರ್ದದ ಅಧ್ಯಕ್ಷ ಬಸನಗಡೌ ಪಾಟೀಲ ಯತ್ನಾಳ ಸೂಚನೆ ನೀಡಿದ್ದಾರೆ.  ವಿಜಯಪುರದಲ್ಲಿ ನಡೆದ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತದ 2021-22ನೇ ವರ್ಷದ 16ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಈ ವರ್ಷದ ಅವಧಿಯಲ್ಲಿ ರೂ. 6.66 ಕೋ. ಲಾಭ ಗಳಿಸಿ, ಸಹಕಾರಿಯ ಸದಸ್ಯರಿಗೆ ಶೇ […]

Airport Basaveshwar: ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಶ್ರೀ ಬಸವೇಶ್ವರರ ಹೆಸರಿಡಿ- ಯತ್ನಾಳ ಮನವಿ

ಬೆಂಗಳೂರು: ವಿಜಯಪುರದಲ್ಲಿ ನಿರ್ಮಾನವಾಗುತ್ತಿರುವ ನೂತನ‌ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಶ್ರೀ ಬಸವೇಶ್ವರರ ಹೆಸರಿಡುವಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ‌ ಯತ್ನಾಳ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಸಿದ್ದು ಸವದಿ, ಅರವಿಂದ ಬೆಲ್ಲದ ಉಪಸ್ಥಿತರಿದ್ದರು.

MEDP Training: ಸಬಲಾ ಸಂಸ್ಥೆಯಲ್ಲಿ ನಡೆದ ಬಂಜಾರಾ ಆಭರಣ ತಯಾರಿಕೆ ತರಬೇತಿ ಸಮಾರೋಪ- ಜಿ. ಪಂ. ಸಿಇಓ ರಾಹುಲ ಶಿಂಧೆ ಭಾಗಿ

ವಿಜಯಪುರ: ನಗರದ ಪ್ರತಿಷ್ಠಿತ ಸಬಲಾ ಸಂಸ್ಥೆ ಮತ್ತು ನಬಾರ್ಡ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸಣ್ಣ ಉದ್ದಿಮೆಗಳ ಯೋಜನೆ(MEDP) ಅಡಿಯಲ್ಲಿ ನಡೆದ ಬಂಜಾರಾ ಆಭರಣ ತಯಾರಿಕಾ ತರಬೇತಿ ಶಿಬಿರ ಸಮಾರೋಪ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದ ಜಿ. ಪಂ. ಸಿಇಓ ರಾಹುಲ ಶಿಂಧೆ, ದೆಹಲಿಯ ದಿಲ್ಲಿಹಾತ್ ಎಂಬಲ್ಲಿ ಲಭ್ಯವಾಗುವ ಕರಕುಶಲ ವಸ್ತುಗಳು ವಿಜಯಪುರ ನಗರದ ಸಬಲಾ ಸಂಸ್ಥೆಯಲ್ಲಿ ಸಿಗುತ್ತಿವೆ.  ಈ ತರಬೇತಿಯಲ್ಲಿ ಭಾಗವಹಿಸಿದ 30 ಜನ ತರಬೇತಿದಾರರು ಇಲ್ಲಿ ಕಲಿತದ್ದನ್ನು ಸುದಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲತೆ ಸಾಧಿಸಬಹುದಾಗಿದೆ.  […]

International Yoga Day: ಅಂತಾರಾಷ್ಟಿಯ ಯೋಗ ದಿನಾಚರಣೆ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ವಿಜಯಪುರ: ಜೂ. 21ರಂದು ನಡೆಯಲಿರುವ ಮಹತ್ವದ ವಿಶ್ವ ಯೋಗ ದಿನಾಚರಣೆಗೆ ಸಂಬಂಧಿಸಿದಂತೆ ಚರ್ಚಿಸಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕೇಂದ್ರ ಸರಕಾರದ ಆಯುಷ್ ಮಂತ್ರಾಲಯವು ಈ ಬಾರಿ ಯೋಗ ಫಾರ್ ಹುಮ್ಯಾನಿಟಿ ಎಂಬ ಧ್ಯೇಯ ವಾಖ್ಯದಡಿ ಯೋಗ ದಿನವನ್ನು ಆಚರಿಸುತ್ತಿದೆ. ಈ ಮಹತ್ವದ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರ ಸಹಕಾರ ಪಡೆಯಬೇಕು ಎಂದು ಸಲಹೆ […]

Disabled ID Card: ವಿಜಯಪುರದಲ್ಲಿ 684 ಜನ ವಿಕಲಚೇತನರಿಗೆ ವಿಶಿಷ್ಠ ಗುರುತಿನ ಚೀಟಿ ವಿತರಣೆ

ವಿಜಯಪುರ: ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಜೂನ್ 8ರಂದು ವಿಕಲಚೇತನರಿಗೆ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ ನೀಡುವ ಶಿಬಿರ ಯಶಸ್ವಿಯಾಗಿ ನಡೆಯಿತು. R ಶಿಬಿರದಲ್ಲಿ ಪ್ರತಿಯೊಬ್ಬ ತಜ್ಞ ವೈದ್ಯರು ಉಪಸ್ಥಿತರಿದ್ದು, ಗ್ರಾಮೀಣ ಭಾಗದ ವಿಕಲಚೇತನ ಫಲಾನುಭವಿಗಳು ಜಿಲ್ಲಾ ಆಸ್ಪತ್ರೆಗೆ ಬಂದು ಹೋಗಲು ಗ್ರಾಮ ಪಂಚಾಯತಿಗಳಿಂದ ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದೆ ರೀತಿ ನಗರ ವ್ಯಾಪ್ತಿಯಿಂದ ಬರುವ ವಿಶೇಷ ಚೇತನರಿಗೆ ಜಿಲ್ಲಾ […]

DC Visit: ಜಿಲ್ಲಾಸ್ಪತ್ರೆಗೆ ತೆರಳಿ ಅಸ್ವಸ್ಥ ಮಕ್ಕಳ ಆರೋಗ್ಯ ವಿಚಾರಿಸಿ ಡಿಸಿ- ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚನೆ

ವಿಜಯಪುರ: ಆಹಾರ ಸೇವನೆಯಿಂದ ಅಸ್ವಸ್ಥರಾಗಿ ಇಂಡಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ವಿದ್ಯಾಲಯದ ವಿದ್ಯಾರ್ಥಿಗಳ ಪೈಕಿ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಐದು ಜನ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಆರೋಗ್ಯ ವಿಚಾರಿಸಿದರು. ಅಲ್ಲದೇ, ಈ ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ತೀವ್ರ […]

Panchamasali Demand: ಜೂ. 27 ರೊಳಗೆ ಮೀಸಲಾತಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳದಿದ್ದರೆ ಉಗ್ರ ಹೋರಾಟ- ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಗೆ

ಬೆಂಗಳೂರು: ಲಿಂಗಾಯಿತ(Lingayat) ಪಂಚಮಸಾಲಿ(Panchamasali) ಸಮುದಾಯಕ್ಕೆ(Community) 2ಎ ಮೀಸಲಾತಿ(2A Reservation) ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ(Shree Basavajaya Mrutyunjaya Swamiji) ನೇತೃತ್ವದಲ್ಲಿ ಸಮುದಾಯದ ಮುಖಂಡರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ತೆರಳಿ ಸ್ವಾಮೀಜಿಗಳ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿದ ಸಮಾಜದ ಮುಖಂಡರು, ಜೂ. 27ರೊಳಗೆ ಪ್ರಮುಖ ಹೋರಾಟಗಾರರೊಂದಿಗೆ ಅಂತಿಮ ಸುತ್ತಿನ ಮಾತುಕತೆಗೆ ಸಮಯ ನಿಗದಿ ಮಾಡಬೇಕು.  […]

Environment Day: ಇರುವದೊಂದು ಭೂಮಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಅಂಬಾದಾಸ ಜೋಶಿ

ವಿಜಯಪುರ: ಇರುವುದೊಂದೇ(one) ಭೂಮಿ(Earth).  ಅದರ ಸಂರಕ್ಷಣೆ(Protection) ನಮ್ಮೆಲ್ಲರ ಹೊಣೆ(Everone Responsibility) ಎಂದು ಪಿಡಿಜೆ ಶಾಲೆಯ ನಿವೃತ್ತ ಶಿಕ್ಷಕ ಅಂಬಾದಾಸ್ ಜೋಶಿ(Ambadas Joshi) ಹೇಳಿದರು. ಸೋಮವಾರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಪರಿಸರ ಜಾಗೃತ ವೇದಿಕೆ ವಿಜಯಪುರ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ- 2022 “ಇರುವುದೊಂದೇ ಭೂಮಿ” ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿತ್ಯ […]

Scouts And Guide Camp: ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ ಮೂಡಿಸಲು ಸ್ಕೌಡ್ಸ್, ಗೈಡ್ಸ್ ಅಗತ್ಯವಾಗಿದೆ- ಸಹಜಾನಂದ ದಂಧರಗಿ

ವಿಜಯಪುರ: ಮಕ್ಕಳಲ್ಲಿ(Children) ಶಿಸ್ತು(Discipline) ಮತ್ತು ದೇಶಪ್ರೇಮ(Patriotism) ಮೂಡಿಸಲು ಸ್ಕೌಟ್ಸ್ ಆ್ಯಂಡ್ ಗೈಡ್ಸ್(Scouts And Guides) ಅವಶ್ಯಕವಾಗಿದೆ ಎಂದು ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೋಶಾಧ್ಯಕ್ಷ ಸಹಜಾನಂದ ದಂದರಗಿ (Sahajanand Dandharagi) ಹೇಳಿದರು. ನಗರದ ಬಿ ಎಲ್ ಡಿ ಈ.ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ  ಕಾಲೇಜು ಯುವ ರೆಡ್ ಕ್ರಾಸ್ ಘಟಕ ಹಾಗೂ ಏನ್ ಎಸ್ ಎಸ್ ಘಟಕದ ಅಡಿಯಲ್ಲಿ ಆಯೋಜಿಸಲಾಗಿದ್ದ ಸ್ಕೌಟ್ ಆ್ಯಂಡ್ ಗೈಡ್ಸ್ ತರಬೇತಿ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ವರ್ಗಕೋಣೆಯು ನಮ್ಮ ಬದುಕಿನ ಒಂದು ಭಾಗವಾಗಬೇಕು.  ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.  ಇಂದಿನ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸುವುದು ನಮ್ಮೆಲ್ಲರ ಗುರುತರ  ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಭಾರತಿ. ವೈ. ಖಾಸನೀಸ ಮಾತನಾಡಿ, ಶಿಕ್ಷಕರನ್ನು ಮಾನಸಿಕವಾಗಿ ಬಲಿಷ್ಟಗೊಳಿಸುವ ತರಬೇತಿ ಇದಾಗಿದೆ.  ಮಕ್ಕಳಿಗೆ ಹಲವಾರು ಚಟುವಟಿಕೆಗಳ ಕುರಿತು ತರಬೇತಿ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಮಕ್ಕಳನ್ನು ತರುವುದು […]

MLC Election: ಬಿಜೆಪಿ ಶಿಕ್ಷಣ ಕ್ಷೇತ್ರ, ಪದವೀಧರರಿಗಾಗಿ ಮಾಡಿರುವ ಕೆಲಸಗಳನ್ನು ಮತದಾರರಿಗೆ ತಿಳಿಸಿ- ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ

ವಿಜಯಪುರ: ಬಿಜೆಪಿ(BJP) ಶಿಕ್ಷಣ ಕ್ಷೇತ್ರ(Education) ಮತ್ತು ಪದವೀಧರರ(Graduates) ಹಿತಕ್ಕಾಗಿ(Welfare) ಕೈಗೊಂಡಿರುವ ಕೆಲಸಗಳನ್ನು ಮತಾದರರಿಗೆ(Voters) ತಲುಪಿಸುವ ಕೆಲಸ ಮಾಡಬೇಕು ಎೞದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ(Arunkumar) ಹೇಳಿದ್ದಾರೆ. ವಿಜಯಪುರ ನಗರದ ಗುರುದತ ಮಂಗಲ ಕಾರ್ಯಾಲಯದಲ್ಲಿ ವಿಧಾನ ಪರಿಷತ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಚುನಾವಣೆಗೆ ಹಿನ್ನೆಲೆಯಲ್ಲಿ ನಡೆದ ಘಟನಾಯಕರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರಕಾರ ಮಾಡಿರುವ ಜನಪರ ಕೆಲಸ ಕಾರ್ಯಗಳನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು.  ಮತದಾನದ ದಿನಾಂಕ ಮತ್ತು ಚುನಾವಣೆ ಪ್ರಕ್ರಿಯೆ ಬಗ್ಗೆ […]