ಯುಕ್ರೇನ್ ಯುದ್ಧ ಹಿನ್ನೆಲೆ- ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲು ಸಹಾಯವಾಣಿ ತೆರೆದ ವಿಜಯಪುರ ಜಿಲ್ಲಾಡಳಿತ

ವಿಜಯಪುರ: ಯುಕ್ರೆನ್ ವಿರುದ್ಧ ರಷ್ಯಾ ಯುದ್ಧ ಸಾರಿದೆ‌. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದೆ. ಉಕ್ರೇನ್ ದೇಶದಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ವಾಸವಾಗಿರುವ ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ಭಾರತದ ಪ್ರಜೆಗಳ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ. ಉಕ್ರೇನ್ ನಲ್ಲಿ ವಾಸವಿರುವ ವಿಜಯಪುರ ಜನರ ಮಾಹಿತಿಯನ್ನು ನೀಡಲು ಮತ್ತು ಪಡೆಯಲು ವಿಜಯಪುರ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸಹಾಯವಾಣಿ ತೆರೆದಿದೆ. ಕಂಟ್ರೋಲ್ ರೂಂ.ಸಂಖ್ಯೆ-1077 ಮತ್ತು 08352-221261 ಹಾಗೂ ರಾಕೇಶ್ ಜೈನಾಪುರ ಅವರ ಮೊಬೈಲ್ – […]

ಬಬಲೇಶ್ವರ ತಾಲೂಕಿನ ಬಣಜಿಗ ಸಮಾಜದ ಪದಾಧಿಕಾರಿಗಳ ಪೂರ್ವಭಾವಿ ಸಭೆ

ವಿಜಯಪುರ: ಬಬಲೇಶ್ವರ ತಾಲೂಕಗಿನ ಬಣಜಿಗ ಸಮಾಜದ ಪದಾಧಿಕಾರಿಗಳ ಪೂರ್ವಭಾವಿ ಸಭೆ ವಿಜಯಪುರ ನಗರದ ಸ್ಟೇಶನ ರಸ್ತೆಯಲ್ಲಿರುವ ಶ್ರೀ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ನಡೆಯಿತು.  ಈ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ನಾಡಿನಲ್ಲಿ ಸರಳತೆ, ಸೌಮ್ಯ, ಶಿಸ್ತಿನಿಂದ ದಿನನಿತ್ಯ ಸ್ವಪ್ರಯತ್ನದೊಂದಿಗೆ ಉದ್ಯೋಗ ಜೊತೆಜೊತೆಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ಬಣಜಿಗ ಸಮಾಜದ ಜನತೆ ಎಲ್ಲ ಸಮುದಾಯದವರೊಂದಿಗೆ ಪ್ರೀತಿ ವಿಶ್ವಾಸದಿಂದ ಇದ್ದಾರೆ ಎಂದು ಹೇಳಿದರು. ಶತಮಾನಗಳ ಹಿಂದೆ ನಮ್ಮ ಪೂರ್ವಜರ ತಪಸ್ಸಿನ ಫಲದಿಂದ ಶ್ರೀ ಯಡಿಯೂರ ಸಿದ್ದಲಿಂಗೇಶ್ವರ, […]

ಮಹಿಳೆಯರು ಸವಾಲುಗಳನ್ನು ಮೆಟ್ಟಿ ನಿಂತಾಗ ಮಾತ್ರ ಸಾಧನೆ ಸಾಧ್ಯ- ಮಲ್ಲಮ್ಮ ಯಾಳವಾರ

ವಿಜಯಪುರ: ಮಹಿಳೆಯರು(Women) ಸಮಸ್ಯೆಗಳನ್ನು ಸವಾಲುಗಳಾಗಿ(Challanges) ಸ್ವೀಕರಿಸಿ ತಮ್ಮ ಗುರಿ ಸಾಧಿಸಲು ಶ್ರಮಿಸಿದಾಗ ಮಾತ್ರ ಸಾಧಕರಾಗಲು(Successor) ಸಾಧ್ಯ ಎಂದು ವಿಜಯಪುರ(Vijayapura) ಸಬಲಾ ಸಂಸ್ಥೆಯ ಸಂಸ್ಥಾಪಕಿ(Sabala association founder) ಹಾಗೂ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ(Bank Chairwoman) ಡಾ. ಮಲ್ಲಮ್ಮ ಯಾಳವಾರ ಹೇಳಿದ್ದಾರೆ.  ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ವತಿಯಿಂದ ಆಯೋಜಿಸಲಾಗಿದ್ದ 2021-22ನೇ ವರ್ಷದ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಸ್ವಾಗತ […]

ದ್ರಾಕ್ಷಿ ನಾಡು ತಿಕೋಟಾ ತಾಲೂಕು, ವಿಜಯಪುರ ನಗರದ ನಾನಾ ಕಡೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ, ಪರಿಶೀಲನೆ

ವಿಜಯಪುರ: ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ವಿಜಯಪುರ ಜಿಲ್ಲೆಯ ದ್ರಾಕ್ಷಿ ನಾಡು ತಿಕೋಟಾ ತಾಲೂಕಿನ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.    ತಿಕೋಟಾ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು, ಕಂದಾಯ ಇಲಾಖೆಯ ಸಂಬಂಧಪಟ್ಟ ನಾನಾ ಕೆಲಸ ಕಾರ್ಯಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸಿದರು.  ತಿಕೋಟಾದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಾಮಗಾರಿಯನ್ನು ವೀಕ್ಷಿ,ಸಿದರು. ಕನಮಡಿ ಗ್ರಾಮದಲ್ಲಿ 2016-17 ನೇ ಆರ್ಥಿಕ ವರ್ಷದಲ್ಲಿ ಎಸ್ಟಿ ಸಮುದಾಯದ ನಾನಾ ಅಭಿವೃದ್ಧಿ ಕಾರ್ಯಕ್ರಮಗಳನ್ನು […]

ಗುಮ್ಮಟ ನಗರಿಯ ರಸ್ತೆಗಳಿಗೆ ಆದಿಲಶಾಹಿ ಬಾದಷಹರು, ಸೂಫಿ ಸಂತರು, ಇತರ ಮಹನೀಯರ ಹೆಸರಿಡಲು ದಿ ಬಿಜಾಪುರ ಹೆರಿಟೇಜ್ ಫೌಂಡೇಶನ್ ಆಗ್ರಹ

ವಿಜಯಪುರ: ವಿಜಯಪುರ ನಗರದ ಕೆಲವು ಮಾರ್ಗ ಮತ್ತು ವೃತ್ತಗಳಿಗೆ ಆದಿಲ್‍ಶಾಹಿ ದೊರೆಗಳ, ಸೂಫಿ ಸಂತರ ಹಾಗೂ ಇತರೆ ಮಹನೀಯರ ನಾಮಕರ ಮಾಡಬೇಕು ಎಂದು ಒತ್ತಾಯಿಸಿ ದಿ ಬಿಜಾಪುರ ಹೆರಿಟೇಜ್ ಪೌಂಡೇಶನ್ ವತಿಯಿಂದ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಫೌಂಜೇಶನ್ ಸಂಸ್ಥಾಪಕ ಅನೀಸ ಮನೀಯಾರ ಮತ್ತು ಹಮ್ಜಾ ಮಹಿಬೂಬ, ವಿಜಯಪುರ ನಗರವು ಜಗತ್ತಿನ ಇತಿಹಾಸದಲ್ಲಿ ಪ್ರಾಮುಖ್ಯತೆ ಪಡೆದಿದೆ.  ಇಲ್ಲಿ ಅನೇಕ ಮಹಾ ಪುರುಷರು, ಸಮಾಜ ಸುಧಾರಕರು ಹಾಗೂ ಐತಿಹಾಸಿಕ ವ್ಯಕ್ತಿಗಳು […]

ಸ್ವಾತಂತ್ರ್ಯ ಮಹೋತ್ಸವ ಭಿತ್ತಿಚಿತ್ರ ಸ್ಪರ್ಧೆ- ನಾನಾ ಶಾಲೆಗಳ 40 ವಿದ್ಯಾರ್ಥಿಗಳು ಭಾಗಿ

ವಿಜಯಪುರ: ಇಂಟ್ಯಾಚ್ ವಿಜಯಪುರ ಚಾಪ್ಟರ್ ಮತ್ತು ವಿಜಯಪುರ ನಗರದ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯ ಮಹೋತ್ಸವ ಬಿತ್ತಿ ಚಿತ್ರ ಸ್ಪರ್ಧೆಯನ್ನು ಆಯೋಜಿಲಾಯಿತು.  ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ. ಸೋಮಶೇಖರ ವಾಲಿ ಮಾತನಾಡಿ, ಈಸ್ಟ ಇಂಡಿಯಾ ಕಂಪನಿ ಮೂಲಕ ಆಗಮಿಸಿದ್ದ ಬ್ರಿಟೀಷರು ಭಾರತಾದ್ಯಂತ ತಮ್ಮ ಪಾರುಪತ್ಯ ಸ್ಥಾಪಿಸಿ ನಮ್ಮನ್ನು ಗುಲಾಮಗಿರಿಯತ್ತ ಕೊಂಡೊಯ್ದಿದ್ದರು.  ಆದರೆ, ನಮ್ಮ ರಾಷ್ಟ್ರದ ನಾಯಕರು […]

ಛತ್ರಪತಿ ಶಿವಾಜಿ ವೇಷದಲ್ಲಿ ಗಮನ ಸೆಳೆದ ಗುಮ್ಮಟ ನಗರಿಯ ಮಕ್ಕಳು

ವಿಜಯಪುರ: ಭಾರತದಲ್ಲಿ ಪುರಾತನ ಕಾಲದಿಂದಲೂ ಸಾವಿರಾರು ವೀರರು, ಯೋಧರು, ಸಾಹಸಿಗಳು ಗಮನ ಸೆಳೆದಿದ್ದಾರೆ. ಶಿಷ್ಠರ ರಕ್ಷಣೆಗಾಗಿ ಯುದ್ಧಗಳನ್ನೂ ಮಾಡಿದ್ದಾರೆ. ಖಡ್ಗ ಝಳಪಿಸಿ ವಿಜಯಶಾಲಿಯೂ ಆಗಿದ್ದಾರೆ. ಹಲವರು ಹುತಾತ್ಮರೂ ಆಗಿದ್ದಾರೆ. ಇಂಥ ಹೋರಾಟಗಾರರಲ್ಲಿ ಇಂದಿಗೂ ಜನಜನಿತರಾಗಿರುವವರು ಛತ್ರಪತಿ ಶಿವಾಜಿ. ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ನಾನಾ ಕಡೆಗಳಲ್ಲಿ ತಮ್ಮ ಕಾಲದಲ್ಲಿ ತಮ್ಮ ವೀರಗುಣಗಳಿಂದ ಗಮನ ಸೆಳೆದವರು ಛತ್ರಪತಿ ಶಿವಾಜಿ ಮಹಾರಾಜರು. ತಾಯ್ನಾಡಿನ ರಕ್ಷಣೆಗಾಗಿ ಮೊಘಲರೊಂದಿಗೆ ಇವರು ನಡೆಸಿದ ಹೋರಾಟ ಇಂದಿಗೂ ಸ್ಮರಣೀಯವಾಗಿದೆ. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು […]

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: ಸಿಂದಗಿ ತಾಲೂಕಿನ ಮಲಘಾಣದಲ್ಲಿ ಕಾರ್ಯಕ್ರಮ ಆರಂಭ

ವಿಜಯಪುರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ವಿಜಯಪುರ(Vijayapura District) ಜಿಲ್ಲೆಯ ಸಿಂದಗಿ(Sindagi) ತಾಲೂಕಿನ ಮಲಘಾಣ(Malaghan) ಗ್ರಾಮದಲ್ಲಿ(Village) ಆರಂಭವಾಗಿದೆ. ಮಲಘಾಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಆರಂಭವಾದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಸ್ವೀಕರಿಸಿದ ಅರ್ಜಿಗಳು ಮತ್ತು ಕೈಗೊಂಡ ಕ್ರಮಗಳ ಕುರಿತು ಇಂಡಿ ಉಪವಿಭಾಗ ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ಕಾರ್ಯಕ್ರಮ ಉದ್ದೇಶ ಕುರಿತು ಮಾಹಿತಿ ನೀಡಿದರು. ಜಿ. ಪಂ. ಮುಖ್ಯ ಕಾರ್ಯ ನಿರ್ವಣಾಧಿಕಾರಿ ರಾಹುಲ ಶಿಂಧೆ ಮಾತನಾಡಿ, […]

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಮಗಕ್ಕೆ ಸುವರ್ಣ ಮಹೋತ್ವಸದ ಸಂಭ್ರಮ- ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

ವಿಜಯಪುರ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‍ಟಿಡಿಸಿ)ಕ್ಕೆ ಈಗ ಸುವರ್ಣ ಮಹೋತ್ಸವ ಸಂಭ್ರಮ.  ಈ ವರ್ಷಾಚರಣೆ ಹಿನ್ನೆಲೆಯಲ್ಲಿ ನಿಗಮದಿಂದ ವತಿಯಿಂದ ವಿಜಯಪುರ ನಗರದಲ್ಲಿರುವ ಮಯೂರ್ ಆದಿಲ್ ಶಾಹಿ ಹೊಟೇಲ್‍ನಲ್ಲಿ ಈ ವರ್ಷದ ಘೋಷ ವಾಕ್ಯ ಅತಿಥಿ ಸತ್ಕಾರ ಕಾರ್ಯಕ್ರಮದಡಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಲಾಯಿತು.  ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ, ಜಿ. ಪಂ. ಸಿಇಒ ರಾಹುಲ ಸಿಂಧೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಜಂಟಿಯಾಗಿ ಸಸಿ ನೆಡುವ ಮೂಲಕ ಸ್ವರ್ಣ ಸಂಭ್ರಮದ ಅತಿಥಿ […]

ಶಾಲೆಗಳು ಪುನಾರಂಭ ಹಿನ್ನೆಲೆ ವಿಜಯಪುರದಲ್ಲಿ ಡಿಸಿ, ಎಸ್ಪಿಯಿಂದ ಪರಿಶೀಲನೆ

ವಿಜಯಪುರ: ವಸ್ತ್ರ ಸಂಹಿತೆ ಹಿನ್ನೆಲೆಯಲ್ಲಿ ಹೈಕೋರ್ಟ್ ಮತ್ತು ಸರಕಾರದ ಆದೇಶದ ಹಿನ್ನೆಲೆಯಲ್ಲಿ ಶಾಲೆಗಳು ಪುನಾರಂಭವಾಗಿವೆ.  ಈ ಹಿನ್ನೆಲೆಯಲ್ಲಿ   ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಎಸ್ಪಿ ಎಚ್. ಡಿ. ಆನಂದ ಕುಮಾರ ನಾಮನಾ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.   ವಿಜಯಪುರ ನಗರದಲ್ಲಿರುವ ನಾನಾ ಶಾಲೆಗಳಿಗೆ ಡಿಸಿ ಮತ್ತು ಎಸ್ಪಿ ಭೇಟಿ ನೀಡಿದರೆ, ತಾಲೂಕುಗಳಲ್ಲಿ ತಹಸೀಲ್ದಾರರು ಕೆಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ವಿಜಯಪುರ ನಗರದಲ್ಲಿ ಪಿ. ಸುನೀಲ ಕುಮಾರ ಮತ್ತು ಎಚ್. […]