ಸರಕಾರಿ ರಜೆ ದಿನವೂ ವಿಜಯಪುರದಲ್ಲಿ ತಿರುಗಾಡಿ ನಾನಾ ರಸ್ತೆ ಕಾಮಗಾರಿಗಳ ಪರಿಶೀಲಿಸಿದ ಡಿಸಿ ಪಿ. ಸುನೀಲ ಕುಮಾರ

ವಿಜಯಪುರ: ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ವಿಜಯಪುರ ನಗರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ಹಾಗೂ ನಿರ್ಮಿತಿ ಕೇಂದ್ರಗಳ ವತಿಯಿಂದ ನಾನಾ ಕಡೆ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.  ನಗರದ ಬಾಗಲಕೋಟೆ ಕ್ರಾಸ್‍ನಿಂದ ಆರ್ ಟಿ ಓ ಕಚೇರಿಯವರೆಗೆ ಕೈಗೊಳ್ಳಲಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದ ಅವರು, ಈ ರಸ್ತೆಯಲ್ಲಿ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಯುಜಿಡಿ ಚೇಂಬರ್ ಕವರ್ ಗಳನ್ನು ಸರಿಯಾಗಿ ನಿರ್ಮಿಸಬೇಕು.  ರಸ್ತೆ ನಿರ್ಮಾಣ ಕಾರ್ಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು.  ಕಾಲಕಾಲಕ್ಕೆ […]

ವೀಕೆಂಡ್ ಕರ್ಫ್ಯೂ: ಸದುಪಯೋಗ ಪಡಿಸಿಕೊಂಡು ಧೂಳುಮುಕ್ತ ನಗರ ಮಾಡಲು ಕಾರ್ಯೋನ್ಮುಖವಾಗಿರುವ ವಿಜಯಪುರ ಮಹಾನಗರ ಪಾಲಿಕೆ

ವಿಜಯಪುರ: ಕೊರೊನಾ ಓಮಿಕ್ರಾನ್ ಸೋಂಕು ತಡೆಯಲು ರಾಜ್ಯ ಸರಕಾರ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ.  ಶನಿವಾರ ಮತ್ತು ರವಿವಾರ ತೀರ ಅಗತ್ಯ ಕೆಲಸ ಕಾರ್ಯಗಳನ್ನು ಹೊ       ರತು ಪಡಿಸಿ ಮತ್ತು ತುರ್ತು ಸೇವೆಗಳ ಹೊರತಾಗಿ ಯಾವುದೇ ರೀತಿಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.  ಈ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಪೊಲೀಸರು ಬಿಗೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.  ವಿನಾಕಾರಣ ರಸ್ತೆಗೆ ಇಳಿಯುವವರನ್ನು ತಡೆದು ದಂಡ ವಿಧಿಸುತ್ತಿದ್ದಾರೆ. ಇತ್ತ ಈ ವೀಕೆಂಡ್ ಕರ್ಫ್ಯೂ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ […]

ಇಂದು, ನಾಳೆ ವಜ್ರ ಹನುಮಾನ ನಗರ ರೇಲ್ವೆ ಗೇಟ್ ಮೂಲಕ ಸಂಚಾರ ಬಂದ್- ಪರ್ಯಾಯ ಮಾರ್ಗ ಅನಿವಾರ್ಯ

ವಿಜಯಪುರ: ಕಾಮಗಾರಿ ಹಿನ್ನೆಲೆಯಲ್ಲಿ ಶನಿವಾರ(ಇಂದು) ಮತ್ತು ರವಿವಾರ ಎರಡು ದಿನ ವಿಜಯಪುರ ನಗರದ ವಜ್ರಹನುಮಾನ ರೇಲ್ವೆ ಗೇಟ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಎರಡು ದಿನ ಬೆ. 8 ರಿಂದ ರಾತ್ರಿ 8ರ ವರೆಗೆ ರೇಲ್ವೆ ಗೇಟ್ ಬಂದ್ ಮಾಡಲಾಗುತ್ತದೆ ಎಂದು ನೈರುತ್ಯ ರೇಲ್ವೆ ವಲಯ ಸೀನಿಯರ್ ಸೇಕ್ಷನ್ವೆಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಬಾಗಲಕೋಟೆ ಕಡೆಗೆ ತೆರಳಬೇಕಾದ ಜನರು ಇದಕ್ಕೆ ಪರ್ಯಾಯ ಮಾರ್ಗದಲ್ಲಿ‌ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ವಹ್ರ ಹನುಮಾನ ರೇಲ್ವೆ ಗೇಟ್ ಪಕ್ಕದಲ್ಲಿರುವ ರಸ್ತೆಯ […]

ವೀಕೆಂಡ್ ಕರ್ಫ್ಯೂ: ಬಸವ ನಾಡಿನಲ್ಲಿ ಜನಜೀವನಕ್ಕೆ ಹಾಕಿರುವ ನಿರ್ಬಂಧಗಳೇನು ಗೊತ್ತಾ?

ವಿಜಯಪುರ: ಕೊರೊನಾ ಅದರಲ್ಲೂ ಒಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ವಿಧಿಸಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆ. 5 ಗಂಟೆಯವರೆಗೆ ಈ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ.  ಈ ಸಂದರ್ಭದಲ್ಲಿ ಯಾವ ಚಟುವಟಿಕೆಗಳಿಗೆ ಅವಕಾಶವಿದೆ? ಯಾವ ಕೆಲಸಗಳಿಗೆ ಅನುಮತಿ ಎಲ್ಲ ಎಂಬುದರ ಕುರಿತು ರಾಜ್ಯ ಸರಕಾರ ನಿರ್ದಿಷ್ಠ ಮಾರ್ಗಸೂಚಿ ಹೊರಡಿಸಿದೆ. ಈ ವೀಕೆಂಡ್ ಕರ್ಫ್ಯೂನಲ್ಲಿ ಬಸವ ನಾಡು ವಿಜಯಪುರದಲ್ಲಿ ಏನೆಲ್ಲ ಕಂಡಿಶನ್ ಹಾಕಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ. […]

ಪಂಜಾಬ ಘಟನೆ ಖಂಡಿಸಿ ವಿಜಯಪುರ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಪಂಜಿನ ಮೆರವಣಿಗೆ

ವಿಜಯಪುರ: ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒದಗಿಸಲಾಗಿದ್ದ ಭದ್ರತಾ ವೈಫಲ್ಯ ಖಂಡಿಸಿ ವಿಜಯಪುರದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿತು. ವಿಜಯಪುರ ನಗರದ ಶಿವಾಜಿ ಚೌಕಿನಲ್ಲಿ ಪಂಜಿನ ಮೆರವಣಿಗೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಪಂಜಾಬ ಸರಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಪಾಕಿಸ್ತಾನದ ಗಡಿಯಿಂದ ಕೇವಲ 10 ಕಿ. ಮೀ. ದೂರದಲ್ಲಿ ಈ ಘಟನೆ ನಡೆದಿರುವುದು ವಿಷಾಧನೀಯ. ಪ್ರಧಾನಿ ನರೇಂದ್ರ ಮೋದಿ ಇಂಥ […]

ಮಾದಕ ವಸ್ತು ವ್ಯಸನ ತ್ಯಜಿಸಿ ಜೀವನ ಜಯಿಸಿ- ಡಾ. ರವಿ ಕೋಟೆಣ್ಣವರ

ಬಾಗಲಕೋಟೆ: ಬಾಗಲಕೋಟೆ ನಗರದ ಬಿವಿವಿಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಕೇಂದ್ರ ನಾಕೋ೯ಟಿಕ ಬ್ಯೂರೋ ಆಫ್ ಇಂಡಿಯಾ ಅಡಿಯಲ್ಲಿ ಮಾದಕ ವಸ್ತುಗಳನ್ನು ತ್ಯಜಿಸುವ ಕುರಿತು ಕಾರ್ಯಕ್ರಮ ನಡೆಯಿತು. ಪ್ರಾಧ್ಯಾಪಕ ಡಾ. ರವಿ ಕೋಟೆಣ್ಣವರ ಮಾತನಾಡಿ, ಮಾದಕ ವ್ಯಸನ ತ್ಯಜಿಸಿ ಜೀವನ ಜಯಿಸಿ ಎಂದು ಕರೆ ನೀಡಿದರು ಈ ಕಾರ್ಯಕ್ರಮದಲ್ಲಿ ಪಿ ಎಸ್ ಐ ಸಂತೋಷ ಜಾದವ ಮಾದಕ ವ್ಯಸನಗಳ ಕುರಿತು ಉಪನ್ಯಾಸ ನೀಡಿದರು.  ವೈದ್ಯ ವಿದ್ಯಾಥಿ೯ಗಳು ಮಾದಕ ವ್ಯಸನಗಳಿಂದ ಮುಕ್ತರಾಗಬೇಕು.  ಇತರರನ್ನು ಮಾದಕ ವಸ್ತುಗಳನ್ನು ತ್ಯಜಿಸಲು […]

ವಿಜಯಪುರದ ಸಂಗನ ಬಸವ ಶಿಶುನಿಕೇತನ ಶಾಲೆಯಲ್ಲಿ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮ

ವಿಜಯಪುರ: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮ ವಿಜಯಪುರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಸಂಗನ ಬಸವ ಶಿಶುನಿಕೇತನ ಶಾಲೆಯಲ್ಲಿ ನಡೆಯಿತು. ಶಾಲೆಯ ಪ್ರಾಂಶುಪಾಲರಾದ ವಿಜಯಲಕ್ಷ್ಮಿ ಪಟ್ಟೇದ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಚ್. ವೆಂಕಟೇಶ, ಯೋಗ ಶಿಕ್ಷಕ ಚನ್ನಬಸು ಎಸ್. ಬಣಜಿಗೇರ, ಪ್ರವೀಣ ಕುಮಾರ, ಶಂಕರ, ಅರುಣಾ ಇವರ ನೇತೃತ್ವದಲ್ಲಿ 1825 ಮಕ್ಕಳು ಹಾಗೂ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಈ […]

ಜ್ಞಾನ ಜೋಳಿಗೆ ಮೂಲಕ ಸಂಗ್ರಹಿಸಿದ ಪುಸ್ತಕಗಳನ್ನು ಸರಕಾರಿ ಶಾಲೆಗೆ ನೀಡಿದ ಸಮಾಜ ಸೇವಕ ಸಂಗಮೇಶ ಬಬಲೇಶ್ವರ

ವಿಜಯಪುರ: ಪ್ರಪಂಚದಲ್ಲಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ.  ಜಗತ್ತಿನಲ್ಲಿ ನಾವು ಪಡೆದ ಅಧಿಕಾರ, ಗಳಿಸಿದ ಆಸ್ತಿಯನ್ನು ಯಾರು ಬೇಕಾದರೂ ಕಿತ್ತುಕೊಳ್ಳಬಹುದು.  ಆದರೆ, ಪಡೆದ ಜ್ಞಾನವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಸಮಾಜ ಸೇವಕ ಮತ್ತು ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಗೆ ಜ್ಞಾನ ಜೋಳಿಗೆಯ ಮೂಲಕ ಸಂಗ್ರಹಗೊಂಡ ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು. ಹಣ ಮತ್ತು ಅಧಿಕಾರಕ್ಕಿಂತ ಜ್ಞಾನ ಮಿಗಿಲಾಗಿದೆ.  […]

ಪ್ರೊ. ಕವಿತಾ ಕೆ. ರಚಿತ ಎ ಕಾಂಪ್ರಹೆನ್ಸಿವ್ ಮ್ಯಾನ್ಯುಯಲ್ ಆಫ್ ಪೀಡಿಯಾಟ್ರಿಕ್ ನರ್ಸಿಂಗ್ ಪ್ರೊಸೀಜರ್ಸ್ 2ನೇ ಆವೃತ್ತಿ ಪುಸ್ತಕ ಬಿಡುಗಡೆ ಮಾಡಿದ ಡಾ. ರಾಘವೇಂದ್ರ ಕುಲಕರ್ಣಿ

ವಿಜಯಪುರ: ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜು ಪ್ರಾಧ್ಯಾಪಕಿ ಕವಿತಾ ಕೆ. ಅವರು ಬರೆದ ಎ ಕಾಂಪ್ರಹೆನ್ಸಿವ್ ಮ್ಯಾನ್ಯುಯಲ್ ಆಫ್ ಪೀಡಿಯಾಟ್ರಿಕ್ ನರ್ಸಿಂಗ್ ಪ್ರೊಸೀಜರ್ಸ್ 2 ನೇ ಆವೃತ್ತಿಯ ಪುಸ್ತಕವನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಕುಲಕರ್ಣಿ ಬಿಡುಗಡೆ ಮಾಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಶೋಧನಾ ಕಾರ್ಯದಲ್ಲಿ ತೊಡಗಿದಾಗ ಸೃಜನಶೀಲತೆಯಿಂದ ಪುಸ್ತಕಗಳ ರಚನೆ ಸಾಧ್ಯವಾಗುತ್ತದೆ.  ನಿಮ್ಮಿಂದ ಇನ್ನೂ ಹೆಚ್ಚಿನ ಪುಸ್ತಕ ಬರಲಿ ಎಂದು ಶುಭ ಹಾರೈಸಿದರು. […]

ವಿಜಯಪುರ ಜಿಲ್ಲಾ ಪಂಚಾಯಿತಿಯ ಗ್ರಾಮ ವಾಣಿ ಮಾಸಿಕ ಪತ್ರಿಕೆ ಬಿಡುಗಡೆ

ವಿಜಯಪುರ: ವಿಜಯಪುರ ಜಿಲ್ಲಾ ಪಂಚಾಯಿತಿಯ ಗ್ರಾಮ ವಾಣಿ ಮಾಸಿಕ ಪತ್ರಿಕೆ ಬಿಡುಗಡೆ ಸಮಾರಂಭ ವಿಜಯಪುರ ಜಿ. ಪಂ. ಕಾರ್ಯಾಲಯದಲ್ಲಿ ನಡೆಯಿತು. ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾಸ ಪತ್ರಿಕೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಅಭಿವೃದ್ಧಿಗೊಸ್ಕರ ಜಿ. ಪಂ, ತಾ. ಪಂ, ಹಾಗೂ ಗ್ರಾ, ಪಂ, ಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಗಲಿರುಳು ದುಡಿಯುತ್ತಿದ್ದಾರೆ.  ಅವರು ಕೈಗೊಂಡಿರುವ ಕಾಮಗಾರಿಗಳಲ್ಲಿ ಯಶಸ್ವಿಯಾದ ಪ್ರಮುಖ ಕೆಲ ಕಾಮಗಾರಿಗಳ ಮಾಹಿತಿಯನ್ನು ಒಳಗೊಂಡಿರುವ […]