ಕಲಾವಿದ ಮುಸ್ತಾಕ ತಿಕೋಟಾ ಅವರ ಏಕವ್ಯಕ್ತಿ ಕಲಾ ಪ್ರದರ್ಶನ- ಡಾ. ಮಹಾಂತೇಶ ಬಿರಾದಾರ ಉದ್ಘಾಟನೆ

ವಿಜಯಪುರ: ವಿಜಯಪುರ ನಗರದ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಧನ ಸಹಾಯದಲ್ಲಿ ಕಲಾವಿದ ಮುಸ್ತಾಕ ತಿಕೋಟಾ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ನಡೆಯಿತು. ಕಲಾ ಪ್ರದರ್ಶನವನ್ನು ಡಾ.ಮಹಾಂತೇಶ ಬಿರಾದಾರ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು, ಕಲಾವಿದರಿಗೆ ಯಾವ ಚೌಕಟ್ಟು ಇರಬಾರದು,  ಆದರೆ ಇತ್ತೀಚಿಗೆ ಸೆನ್ಸಾರ್ ನೆಪದಲ್ಲಿ ಕಲಾವಿದರಿಗೆ ಚೌಕಟ್ಟು ಹಾಕುವ ಕಾರ್ಯ ನಡೆಯುತ್ತಿರುವುದು ನೋವಿನ ಸಂಗತಿ,  ಕಲಾವಿದರಿಗೆ ಮುಕ್ತವಾದ ಚೌಕಟ್ಟು, ನೆಲೆಗಟ್ಟು ಇದೆ.  ಇದನ್ನು ಹತ್ತಿಕ್ಕುವ ಕೆಲಸ ಆಗಬಾರದು ಎಂದು ಹೇಳಿದರು. ಕಲಾವಿದನ ವೈಚಾರಿಕ […]

ಉತ್ನಾಳದಲ್ಲಿ ಸರಕಾರಿ ಬಸ್ ಗಾಜು ಜಖಂ ಗೊಳಸಿದ ಅಪರಿಚಿತರು- ಚಾಲಕ, ನಿರ್ವಾಹಕರು ಕಂಗಾಲು

ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಅಪರಿಚಿತರು ಸರಕಾರಿ ಬಸ್ ಗಾಜನ್ನು ಪುಡಿ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಉತ್ನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಾತ್ರೆಯ ಸಂದರ್ಭದಲ್ಲಿ ವಿಜಯಪುರದಿಂದ ಉತ್ನಾಳಕ್ಕೆ ಸರಕಾರಿ ಬಸ್ಸು ತೆರಳಿತ್ತು. ಈ ಸಂದರ್ಭದಲ್ಲಿ ಅಲ್ಲಿನ ಕೆಲವು ಅಪರಿಚಿತರೊಂದಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕರೊಂದಿಗೆ ವಾಗ್ವಾದ ನಡೆದಿದೆ. ಆಗ ಅಪರಿಚಿತರು KA-28/F-2014 ಬಸ್ಸಿನ ಬಲಭಾಗದ ಕಿಟಕಿಗಳನ್ನು ಜಖಂ ಗೊಳಿಸಿದ್ದಾರೆ ಎನ್ನಲಾಗಿದೆ. ಕಳೆದ ವರ್ಷವೂ ಇಲ್ಲಿ ಇಂಥದ್ದೆ ಘಟನೆ ನಡದಿತ್ತು. ಆ ಪ್ರಕರಣ ಇನ್ನೂ ಮಾಸಿಲ್ಲ‌ ಈಗ ಮತ್ತೆ […]

ಹೊಸ ವರ್ಷಾಗಮನ ಹಿನ್ನೆಲೆ- ಬಸವ ನಾಡಿನಲ್ಲಿ ನಾನಾ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದ ಭಕ್ತರು

ವಿಜಯಪುರ: ಹೊಸ ವರ್ಷಾಚರಣೆ ಹಿನ್ನೆಲಯಲ್ಲಿ ಬಸವನಾಡಿನಲ್ಲಿ ಭಕ್ತರು ದೇವರ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಈ ಬಾರಿ ಹೊಸ ವರ್ಷ ಶನಿವಾರ ಬಂದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನಾನಾ ಹನುಮಂತ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಆಶೀರ್ವಾದ ಬಯಸುತ್ತಿದ್ದಾರೆ. ಹೊಸ ವರ್ಷದಂದು ತಾವು ನಂಬಿರುವ ದೇವರ ದರ್ಶನ ಪಡೆದು, ಇಷ್ಟಾರ್ಥಗಳನ್ನು ಕೇಳಿಕೊಂಡರೆ ದೇವರು ದಯಪಾಲಿಸುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರದ ಮಹತ್ಮಾ ಗಾಂಧಿ ರಸ್ತೆಯಲ್ಲಿರುವ ಮದಲಾ ಮಾರುತಿ ದೇವಸ್ಥಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ […]

ಹೊಸ ವರ್ಷಾಗಮನ ಹಿನ್ನೆಲೆ ಕವಿತೆ ರಚಿಸಿದ ಚರ್ಮರೋಗ ಖ್ಯಾತ ವೈದ್ಯ ಡಾ. ಅರುಣ ಇನಾಮದಾರ

ವಿಜಯಪುರ: ವಿಜಯಪುರ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಮತ್ತು ಚಿಕಿತ್ಸೆಯ ಮೂಲಕ ಎಲ್ಲೆಡೆ ಹೆರಾಗಿರುವ ಚರ್ಮರೋಗ ತಜ್ಞ ಡಾ. ಅರುಣ ಇನಾಮದಾರ ಉತ್ತಮ ಬರಹಗಾರರು, ಅನುವಾದಕರು ಎಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು ಈಗಾಗಲೇ ಶರಣ ಅಲ್ಲಮಪ್ರಭುವಿನ ಕ್ಲಿಷ್ಟಕರಚಾದ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದಿಸುವ ಮೂಲಕ ಗಮನ ಸೆಳೆದಿದ್ದಾರೆ. ಈಗ 2022ಕ್ಕೆ ಶುಭ ಕೋರಲು ಡಾ. ಅರುಣ ಇನಾಮದಾರ ಕವನವೊಂದನ್ನು ರಚಿಸಿದ್ದಾರೆ. ಆ ಕವನ ಇಲ್ಲಿದೆ. ಡಾ. ಅರಣ ಇನಾಮದಾರ ಖ್ಯಾತ ಚರ್ಮ […]

ವಸ್ತುಗಳನ್ನು ಖರೀದಿಸುವಾಗ ವಸ್ತುವಿನ ಮೂಲ ಬೆಲೆಯನ್ನು ಕಡ್ಡಾಯವಾಗಿ ಪರೀಕ್ಷಿಸಿ- ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಕರೆ

ವಿಜಯಪುರ: ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಕಡ್ಡಾಯವಾಗಿ ಆ ವಸ್ತುವಿನ ಮೂಲ ಬೆಲೆಯನ್ನು ಕಡ್ಡಾಯವಾಗಿ ಪರೀಕ್ಷಿಸಿ ಖರೀದಿಸಬೇಕು ಎಂದು ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ. ಜಿ. ಕುರವತ್ತಿ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಮಾಪನಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, […]

ಬಿ ಎಲ್ ಡಿ ಇ ಡೀಮ್ಡ್ ವಿವಿ 9ನೇ ಘಟಿಕೋತ್ಸವ: ತಂದೆಯಿಲ್ಲದ ಮಗಳ ಶ್ರಮಕ್ಕೆ ಸಿಕ್ತು 7 ಚಿನ್ನದ ಪದಕಗಳು

ವಿಜಯಪುರ: ಜಗತ್ತಿನಲ್ಲಿ ಬದಲಾವಣೆ ತರಲು ಶಿಕ್ಷಣ ಅತ್ಯತ್ತುಮ ಆಯುಧ ಎನ್ನುವ ನೆಲ್ಸೆನ್ ಮಂಡೆಲಾ ಅವರ ಸಂದೇಶ ಎಂದಿಗೂ ಪ್ರಸ್ತುತ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ(ನಿಮ್ಯಾನ್ಸ್) ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಹೇಳಿದರು. ವಿಜಯಪುರ ನಗರದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು ಇಂದು ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೂ ನಿಮ್ಮ ಪದವಿಯ ಜೊತೆಗೆ ಹೆಚ್ಚಿನ ಜವಾಬ್ದಾರಿಯು ನಿಮ್ಮ ಹೆಗಲಿಗೆರಿದೆ. ಇನ್ನು ಮುಂದೆ […]

ಕೋವಿಡ್ ಹಿನ್ನೆಲೆ: ಸರಳ ಹಾಗೂ ಸಾಂಕೇತವಾಗಿ ವಿಶ್ವ ಮಾನವ ದಿನ ಆಚರಣೆ

ವಿಜಯಪುರ: ಕೋವಿಡ್ ಹಿನ್ನೆಲೆ ವಿಶ್ವ ಮಾನವ ದಿನವನ್ನು ಸರಳ ಮತ್ತು ಸಾಂಕೇತಿಕವಾಗಿ ವಿಶ್ವ ಮಾನವ ದಿನವನ್ನು ಆಚರಿಸಲಾಯಿತು. ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ವಿಶ್ವಮಾನವ ದಿನವಾಗಿ ಆಚರಿಸುವ ಕಾರ್ಯಕ್ರಮವನ್ನು ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ ಸರಳ ಹಾಗೂ ಸಾಂಕೇತವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರು ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜ್ಯೋತಿ […]

ದೌರ್ಜನ್ಯ ಪ್ರಕರಣ: ನೊಂದ ಪರಿಶಿಷ್ಠ ಸಮುದಾಯದ ಸಂತ್ರಸ್ತರಿಗೆ ರೂ. 132.31 ಲಕ್ಷ ಪರಿಹಾರಧನ ವಿತರಣೆ

ವಿಜಯಪುರ: ನಾನಾ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಂತ್ರಸ್ತರಿಗೆ ವಿಜಯಪುರ ಜಿಲ್ಲಾಡಳಿತದ ವತಿಯಿಂದ ಒಟ್ಟು 72 ಪ್ರಕರಣಗಳ ಪೈಕಿ 56 ಪ್ರಕರಣಗಳಲ್ಲಿ ರೂ. 132.31 ಲಕ್ಷ ರೂ.ಗಳ ಪರಿಹಾರ ಧನವನ್ನು ವಿತರಿಸಲಾಗಿದೆ. ಜ. 1 ರಿಂದ ಆ. 31ರ ವರೆಗೆ ಈ ಹಣವನ್ನು ವಿತರಿಸಲಾಗಿದೆ. ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ಮಾಹಿತಿ […]

ಡಿ. 30, 31 ರಂದು ಡಿಸಿ, ಜಿ. ಪಂ. ಸಿಇಓ ಗಳ ಜೊತೆ ಸಿಎಂ ಸಭೆ- ಸೂಕ್ತ ಮಾಹಿತಿ ನೀಡಲು ಡಿ. ರಂದೀಪ ಸೂಚನೆ

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿ.30 ಮತ್ತು 31 ರಂದು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಸಮ್ಮೇಳನ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಮಾಹಿತಿಗಳನ್ನು ಒದಗಿಸಬೇಕು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ. ರಂದೀಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಕಂದಾಯ ಇಲಾಖೆಯ‌ ವಿಪತ್ತು ನಿರ್ವಹಣೆ ಅಧಿಕಾರಿಗಳು ಸಮೀಕ್ಷೆ ಮತ್ತು […]

ಗ್ರಾ. ಪಂ. ಗಳು ಎನ್ ಟಿ ಪಿ ಸಿ ಅನುದಾನವನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಪಡಿಸಿ- ಶಾಸಕ ಶಿವಾನಂದ ಪಾಟೀಲ

ವಿಜಯಪುರ: ಕೂಡಗಿ ಎನ್ ಟಿ ಪಿ ಸಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳು ರಾಜ್ಯಕ್ಕೆ ಮಾದರಿಯಾದ ಗ್ರಾಮ ಪಂಚಾಯಿತಿಗಳಾಗಿ ಅಭಿವೃದ್ಧಿ ಹೊಂದಬೇಕು ಎಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದ್ದಾರೆ‌. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಎನ್ ಟಿ ಪಿ ಸಿಯಿಂದ ಸುಮಾರು ರೂ. 18.17 ಕೋ. ತೆರಿಗೆ ಹಣವನ್ನು ಎನ್ ಟಿ ಪಿ ಸಿ ವ್ಯಾಪ್ತಿಯಲ್ಲಿ ಬರುವ ಮುತ್ತಗಿ, ಕೂಡಗಿ, ಗೊಳಸಂಗಿ, ಮಸೂತಿ ಹಾಗೂ ತೆಲಗಿ ಗ್ರಾಮ ಪಂಚಾಯಿತಿಗಳಿಗೆ ಚೆಕ್ ವಿತರಿಸಿ ಅವರು […]