ಬಸವ ನಾಡಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯಪುರ ಪ್ರವಾಸ ಕೈಗೊಂಡಿದ್ದಾರೆ. ಹುಬ್ಬಳ್ಳಿಯಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ವಿಜಯಪುರಕ್ಕೆ ಆಗಮಿಸಿದ ಸಿಎಂ, ಮೊದಲಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಗೌರವ ಸಲ್ಲಿಸಿದರು.

ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಸವಕಳಿ ಪಂಪುಗಳ ಬದಲಾವಣೆ: ಗೋವಿಂದ ಎಂ. ಕಾರಜೋಳ

ಬೆಳಗಾವಿ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಸವಕಳಿಗೊಂಡ ಮತ್ತು ಅಸಾಧಾರಣ ದುರಸ್ಥಿಗೆ ಬರುತ್ತಿರುವ ನಿರೀಕ್ಷಿತ ಪಂಪುಗಳನ್ನು ಕ್ರಮೇಣವಾಗಿ ಬದಲಾಯಿಸುವ ಉದ್ದೇಶದಿಂದ ಹೊಸ ಪಂಪುಗಳ ಖರೀದಿಗೆ ಕೃಷ್ಣ ಭಾಗ್ಯ ಜಲ ನಿಗಮದ 2021-22ನೇ ವರ್ಷದ ಕಾರ್ಯಕ್ರಮ ಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ‌ಈ ಎರಡು ಪಂಪುಗಳನ್ನು ಬದಲಾಯಿಸಲು ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಈ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ. ಸಿಂದಗಿ ಶಾಸಕರಾದ ರಮೇಶ ಭೂಸನೂರ ಅವರ ಚುಕ್ಕೆ ಗುರುತಿನ […]

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಹೆಲ್ಮೆಟ್ ಕಡ್ಡಾಯ- ಎಸ್ಪಿ ಎಚ್. ಡಿ. ಆನಂದ ಕುಮಾರ ಹೇಳಿದ್ದೇನು ಗೊತ್ತಾ?

ವಿಜಯಪುರ: ಸ್ವತಃ ರಸ್ತೆಗಿಳಿದ ವಿಜಯಪುರ ಎಸ್ಪಿ ಬೈಕ್ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ವಿನೂತನ ಜಾಗೃತಿಗೆ ಮುಂದಾಗಿದ್ದಾರೆ.   ವಿಜಯಪುರ ನಗರದ ಗಾಂಧಿಚೌಕಿನಲ್ಲಿ ತಸ್ತೆಗಿಳಿದ ಎಸ್ಪಿ ಎಚ್. ಡಿ. ಆನಂದ ಕುಮಾರ, ಬೈಕ್ ಸವಾರರಿಗೆ ಗುಲಾಬಿ ಹೂವು ನೀಡಿ‌ ಕಿವಿಮಾತು ಹೇಳಿ ವಿನೂತನವಾಗಿ ಕಾನೂನು ಪಾಲನೆ ಮಾಡುವಂತೆ ಮನವಿ ಮಾಡಿದರು.   ಇತ್ತೀಚಿನ ವರ್ಷಗಳಲ್ಲಿ ಸಂಭವಿಸುತ್ತಿರುವ ಬೈಕ್ ಅಪಘಾತಗಳಲ್ಲಿ ಬೈಕ್ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದರಲ್ಲಿ ಬಹುತೇಕರಿಗೆ ತಲೆಗೆ ಪೆಟ್ಟಾಗಿ ಹೆಚ್ಚಿನ ತೊಂದರೆ […]

ಕಾಲು-ಬಾಯಿ ಬೇನೆ ರೋಗ ನಿರೋಧಕ ಲಸಿಕೆ ಹಾಕಿಸಿ, ಜಾನುವಾರುಗಳನ್ನು ಆರೋಗ್ಯವಾಗಿ ಇರಿಸಿಕೊಳ್ಳಿ-ಡಿಸಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಜಾನುವಾರುಗಳ ಮಾಲಿಕರು ತಮ್ಮ ರಾಸುಗಳಿಗೆ ಕಾಲು-ಬಾಯಿ ಬೇನೆ ರೋಗ ನಿರೋಧಕ ಲಸಿಕೆ ಹಾಕಿಸಿ ಆರೋಗ್ಯವಾಗಿ ಇರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಕರೆ ನೀಡಿದ್ದಾರೆ.  ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾಲುಬಾಯಿ ಬೇನೆ ರೋಗ ನಿರೋಧಕ ಲಸಿಕೆ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು. ವಿಜಯಪುರ ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನ ಜಾನುವಾರುಗಳಿವೆ ಎಂದು ವಾಸ್ತವಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.  ಅವುಗಳಿಗೆ ಮನೆ ಬಾಗಿಲಿಗೆ ಹೋಗಿ ಕಿವಿಯೋಲೆ ಹಾಕಿಸಿ ಲಸಿಕೆ […]

ಆಹಾರ, ಪೊಲೀಸ್ ಇಲಾಖೆ ಜಂಟಿ ಧಾಳಿ- ಅಕ್ರಮವಾಗಿ ಸಂಗ್ರಹಿಸಲಾದ 500 ಕ್ವಿಂಟಾಲ್ ಅಕ್ಕಿ ವಶ

ವಿಜಯಪುರ: ಆಹಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಧಾಳಿ ನಡೆಸಿ ಸುಮಾರು 500 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ರವಿವಾರ ರಾತ್ರಿ 9.45ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಧಾಳಿ ನಡೆಸಲಾಗಿದೆ.  ಕನ್ನಾನ್ ನಗರದಲ್ಲಿ ತಗಡಿನ ಶೆಡ್ ವೊಂದರಲ್ಲಿ ಈ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು.  ಸರಕಾರದ ನಾನಾ ಯೋಜನೆಗಳ ಅಡಿ ವಿತರಣೆಯಾಗಬೇಕಿದ್ದ ಈ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು.  ಆಹಾರ […]

ಕಾಣೆಯಾಗಿದ್ದ ಬಾಲಕ ನೀರಿನ ಕೆಸರಿನಲ್ಲಿ ಪತ್ತೆ- ಮುಂದೇನಾಯ್ತು ನೋಡಿ

ವಿಜಯಪುರ: ಇದು ಮನ ಮಿಡಿಯುವ ಸ್ಟೋರಿ. ತನಗಾದ ಪರಿಸ್ಥಿಯ ಬಗ್ಗೆ ಅರಿವಿಲ್ಲದೇ ಪರಿತಪಿಸುತ್ತಿದ್ದ ಬಾಲಕನ ಅಮಾಯಕ ಪರಿಸ್ಥಿತಿಗೆ ಸಾಕ್ಷಿ. ಅಷ್ಟಕ್ಕೂ ಆಗಿದ್ದೇನೆಂದರೆ, ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಮನೆಯಿಂದ ಕಾಣೆಯಾಗಿದ್ದ. ಮನೆಯವರು ಹುಡುಕಾಡಿದರೂ ಸಿಕ್ಕಿರಲಿಲ್ಲ. ಆತನ ಪೋಷಕರು ಮತ್ತು ಸಂಬಂಧಿಕರ ಆತಂಕ ಹೆಚ್ಚಾಗಿತ್ತು. ಈ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದಲ್ಲಿ. ನಿನ್ನೆ ಮಧ್ಯಾಹ್ನ ಮನೆಯಿಂದ ಹೊರ ಹೋಗಿದ್ದ ಬಾಲಕ ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಮೇಲಾಗಿ ಮಾನಸಿಕ ಅಸ್ವಸ್ಥ ಬೇರೆ. ಎಲ್ಲಿದ್ದಾನೋ? ಹೇಗಿದ್ದಾನೋ ಎಂಬ […]

ರೂ. 2.33 ಕೋ. ಮೌಲ್ಯದ ಚಿನ್ನಾಭರಣ, ಬೈಕ್ ಮತ್ತೀತರ ವಸ್ತುಗಳನ್ನು ವಾರಸುದಾರರಿಗೆ ಮರಳಿಸಿದ ಬಸವ ನಾಡಿನ ಪೊಲೀಸರು

ವಿಜಯಪುರ: ವಿಜಯಪುರ ಜಿಲ್ಲೆಯ ಇತಿಹಾರದಲ್ಲಿ ಇದೇ ಮೊದಲ ಬಾರಿಗೆ ವಿಜಯಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಳೆದ ಒಂದು ವರ್ಷದಲ್ಲಿ ನಡೆದ 252 ನಾನಾ ಕಳ್ಳತನ, ದರೋಡೆ, ಸುಲಿಗೆ ಪ್ರಕರಣಗಳನ್ನು ಭೇದಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಎಚ್. ಡಿ. ಆನಂದ ಕುಮಾರ, ಜಿಲ್ಲೆಯಲ್ಲಿ ನಡೆದ 252 ನಾನಾ ಕಳ್ಳತನ, ಸುಲಿಗೆ ಮತ್ತು ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 450ಕ್ಕೂ ಹೆಚ್ಚು ಜನ ಆರೋಪಿಗಳನ್ನು ಬಂಧಿಸಲಾಗಿದೆ.  ಅಲ್ಲದೇ, ಅವರ ಬಳಿಯಿದ್ದ ರೂ. 2 ಕೋಟಿ […]

ಕಸಾಪ ಚುನಾವಣೆ: ಹಾಸಿಂಪೀರ ವಾಲಿಕಾರಗೆ 629 ಮತಗಳ ಭಾರಿ ಅಂತರದ ಗೆಲುವು

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ವಿಜಯಪುರ ನೂತನ ಜಿಲ್ಲಾಧ್ಯಕ್ಷರಾಗಿ ಹಾಸಿಂಪೀರ ವಾಲಿಕಾರ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಬೆಂಡಿಗೇರಿ ಅವರನ್ನು 629 ಮತಗಳು ಭಾರಿ ಅಂತರದಿಂದ ಸೋಲಿಸಿದ್ದಾರೆ. ಹಾಸಿಂಪೀರ ವಾಲಿಕಾರ ಅವರ ಪರವಾಗಿ 2490 ಮತಗಳು ಬಂದರೆ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ 1861 ಮತಗಳನ್ನು ಪಡೆದರು. ಮತ್ತೋರ್ವ ಅಭ್ಯರ್ಥಿ  ಅಭ್ಯರ್ಥಿ ಮಲ್ಲಿಕಾರ್ಜುನ  ಭೃಂಗಿಮಠ 1176 ಮತಗಳನ್ನು ಪಡೆದರೆ, ಉಳಿದ ಅಭ್ಯರ್ಥಿಗಳಾದ ಕಲ್ಲಪ್ಪ ಯಲ್ಲಪ್ಪಶಿ ವಶರಣ 30 […]

ಕಸಾಪ ವಿಜಯಪುರ ನೂತನ ಜಿಲ್ಲಾಧ್ಯಕ್ಷರಾಗಿ ಹಾಸಿಂಪೀರ ವಾಲಿಕಾರ ಭರ್ಜರಿ ಗೆಲುವು

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ ನೂತನ ಜಿಲ್ಲಾಧ್ಯಕ್ಷರಾಗಿ ಸಮಾಜ ಸೇವಕ ಹಾಸಿಂಪೀರ ವಾಲಿಕಾರ ಭರ್ಜರಿ ಜಯ ಗಳಿಸಿದ್ದಾರೆ.   ಹಾಸಿಂಪೀರ ವಾಲಿಕಾರ ಅವರು ನಿಕಟಪೂರ್ವ ಜಿಲ್ಲಾಧ್ಯಕ್ಷ ಮತ್ತು ಜೆಡಿಎಸ್ ವಿಜಯಪುರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರನ್ನು ಸುಮಾರು 600ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.   ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಮೂರನೇ ಸ್ಥಾನ ಪಡೆಸಿದ್ದಾರೆ. ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಾಸಿಂಪೀರ ವಾಲಿಕಾರ ಅವರನ್ನು ಹಿರಿಯ ಪತ್ರಕರ್ತ ಅಲ್ಲಮಪ್ರಭು ಜಿ. ಮಲ್ಲಿಕಾರ್ಜುನಮಠ ಸೇರಿದಂತೆ ನಾನಾ ಬೆಂಬಲಿಗರು […]

ವಿಜಯಪುರ ನಗರದಲ್ಲಿ ಕೈಗೊಳ್ಳಲಾಗಿರುವ ಅಭಿವೃಧ್ಧಿ ಕಾಮಗಾರಿ ವೀಕ್ಷಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ವಿಜಯಪುರ ನಗದರಲ್ಲಿ ನಾನಾ ಯೋಜನೆಗಳ ಅಡಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವೀಕ್ಷಿಸಿದರು.  ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿರುವ ರೂ, 2.25 ಕೋ. ವೆಚ್ಚದ ಡಾ.ಬಾಬು ಜಗಜೀವನರಾಮ ವೃತ್ತದಿಂದ ಇಬ್ರಾಹಿಂ ರೋಜಾ ವರೆಗಿನ ಚರಂಡಿ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ ಅವರು, ರೂ. 14.80 ಕೋ. ವೆಚ್ಚದಲ್ಲಿ ಡಾ. ಬಾಬು ಜಗಜೀವನರಾಮ ವೃತ್ತದಿಂದ ಸೈನಿಕ ಶಾಲೆ, ಜಿಲ್ಲಾಸ್ಪತ್ರೆ, ನೇತಾಜಿ ಸುಭಾಸಚಂದ್ರ ಭೋಸ್ ವೃತ್ತದವರೆಗಿನ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಈ ಎರಡೂ […]