ವಿದ್ಯಾರ್ಥಿಗಳು ಭವ್ಯ ಭಾರತ ಕಟ್ಟುವಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯಬೇಕು- ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸದಾನಂದ ಎನ್, ನಾಯಕ

ವಿಜಯಪುರ: ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತದ ಪ್ರಜೆಗಳಾಗಿದ್ದು. ಭವ್ಯ ಭಾರತ ಕಟ್ಟುವ ನಿಟ್ಟಿನಲ್ಲಿ ದಿಟ್ಟ ಗುರಿಯೊಂದಿಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಬೇಕು.  ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆಯಿಂದ ಹಾಗೂ ಸಮಚಿತ್ತದಿಂದ ಅಧ್ಯಯನ ನಡೆಸಿ ಯಶಸ್ಸಿನೆಡೆಗೆ ಸಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸದಾನಂದ ಎನ್. ನಾಯಕ ಹೇಳಿದ್ದಾರೆ. ವಿಜಯಪುರ ನಗರದ ಪಿ, ಡಿ, ಜೆ ಶಾಲೆಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ […]

ವಿಧ್ಯಾರ್ಥಿಗಳು ಸಮಯಕ್ಕೆ ಬೆಲೆ ನೀಡಿದರೆ ಸಾಧನೆ ಮಾಡಲು ಸಾಧ್ಯ- ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ

ವಿಜಯಪುರ.: ಕನ್ನಡ ಮಾಧ್ಯಮದಲ್ಲಿ ಓದಿ ಇಂದು ಅಧಿಕಾರಯಾಗಿದ್ದೇನೆ.  ವಿಧ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಲು ಸಮಯಕ್ಕೆ ಮೊದಲು ಗೌರವಿಸಬೇಕು.  ಸಮಯಕ್ಕೆ ಬೆಲೆ ನೀಡಿದರೆ ಮಾತ್ರ ನಾವು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಹೇಳಿದ್ದಾರೆ. ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ, ದಲಿತ ವಿದ್ಯಾರ್ಥಿ ಪರಿಷತ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಆಫಿಸರ್ಸ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ವಿಧ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ? […]

ಈ ಕಚೇರಿ ಸಿಬ್ಬಂದಿಗೆ ಗ್ರಾಹಕರೆಂದರೆ ಅಲರ್ಜಿ- ಏಜೆಂಟರಿಗೂ ತಪ್ಪುತ್ತಿಲ್ಲ ಕಿರಿಕಿರಿ- ಜನರ ಆರೋಪ

ವಿಜಯಪುರ: ಈ ಕಚೇರಿಯಲ್ಲಿ ಬಂದರೆ ಸಾಕು ಕಿರಿಕಿರಿ ತಪ್ಪಿದ್ದಲ್ಲ ಎಂಬ ಮನೋಭಾವ ಜನರಲ್ಲಿ ಹೆಚ್ಚುತ್ತಿದೆ.  ನಿಜವಾಗಿ ಹೇಳಬೇಕೆಂದರೆ ಗ್ರಾಹಕರೇ ದೇವರು ಎಂದು ಇಲ್ಲಿನ ಸಿಬ್ಬಂದಿ ವರ್ತಿಸಬೇಕು. ‌ಯೋಗಕ್ಷಮಂ ವಹಾಮ್ಯಹಂ! ಎಂಬುದು ಈ ಇಲಾಖೆಯ ಕಚೇರಿಯ ಕಾಂಛನದ ಕೆಳಗೆ ಬರೆಯಲಾಗಿರುವ ಘೋಷವಾಕ್ಯವಾಗಿದೆ. ನಾನು ಯೋಗಕ್ಷೇಮವನ್ನು ವಿಚಾರಿಸುತ್ತೇನೆ ಎಂಬುದು ಈ ಘೊಷವಾಕ್ಯದ ಹಿಂದಿರುವ ಸಾರವಾಗಿದೆ. ಅಷ್ಟೇ ಅಲ್ಲ, ನಾವು ಗ್ರಾಹಕರ ಜೊತೆ ಹೇಗೆ ವರ್ತಿಸುತ್ತೇವೆ. ಅವರ ಹಿತವನ್ನು ಹೇಗೆ ಕಾಪಾಡುತ್ತೇವೆ ಎಂಬುದರ ಕುರಿತು ನಿಗಮ ಗೀತೆ(ರಾಷ್ಟ್ರಗೀತೆ ಮಾದರಿಯಲ್ಲಿ ಗೀತೆ)ಯನ್ನು ರಚಿಸಲಾಗಿದೆ. […]

ಗಾಂಧಿಚೌಕ್ ಪೊಲೀಸರ ಭರ್ಜರಿ ಕಾರ್ಯಾಚರಣೆ- 3 ಜನ ಬೈಕ್ ಕಳ್ಳರ ಬಂಧನ, 36 ಬೈಕ್ ವಶ

ವಿಜಯಪುರ: ವಿಜಯಪುರ ನಗರದ ಗಾಂಧಿ ಚೌಕ್ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ಮೂರು ಜನ ಬೈಕ್ ಕಳ್ಳರನ್ನು ಬಂಧಿಸುವ ಪೊಲೀಸರು ಅವರಿಂದ ಸುಮಾರು ರೂ. 21 ಲಕ್ಷ 60 ಸಾವಿರ ಮೌಲ್ಯದ 36 ಮೋಟರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಆನಂದ ಕುಮಾರ ಎಚ್. ಡಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಬೈಕ್ ಕಳ್ಳರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಇತ್ತೀಚೆಗೆ ವಿಜಯಪುರ ಜಿಲ್ಲೆ ಮತ್ತು ವಿಜಯಪಿರ ನಗರದಲ್ಲಿ ಬೈಕ್ […]

ವಿಜಯಪುರದಲ್ಲಿ ಕಾನೂನು ಅರಿವು, ನೆರವು ಕಾರ್ಯಕ್ರಮ- ನ್ಯಾಯಾಧೀಶ ಶ್ರೀನಾಥ ಕೆ. ಭಾಗಿ

ವಿಜಯಪುರ: ಕಾನೂನು ಅರಿವು, ನೆರವು ಕಾರ್ಯಕ್ರಮ ವಿಜಯಪುರ ನಗರದಲ್ಲಿ ನಡೆಯಿತು.   ಬೆಂಗಳೂರಿನ ಕಾನೂಸು ಸೇವೆಗಳ ಪ್ರಾಧಿಕಾರ, ವಿಜಯಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಜಯಪುರ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯಪುರ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಾಥ ಕೆ. ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಂ. ಐ. ಇಂಡಿಕರ, ಎಚ್. ಜಿ. ಮುಲ್ಲಾ, ಪಬ್ಲಿಕ್ ಪ್ರಾಸಿಕ್ಯೂಟರ್ ಕೊಲ್ಹಾರ, ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ರೇಸ್ ಹೆಸರಿನಲ್ಲಿ ಪ್ರಾಣಿಗಳ ಮೇಲಾಗುವ ಹಿಂಸೆ ತಪ್ಪಿಸಿ- ಜಿಲ್ಲಾಡಳಿತಕ್ಕೆ ಎಂ ಎಲ್ ಸಿ ಸುನೀಲಗೌಡ ಪಾಟೀಲ ಪತ್ರ

ವಿಜಯಪುರ: ನಾನಾ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಣಿಗಳ ರೇಸ್ ಗಳನ್ನು ಸಂಘಟಿಸಿ, ಪ್ರಾಣಿಗಳನ್ನು ಹಿಂಸೆಗೆ ಗುರಿಪಡಿಸುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಜಯಪುರ-ಬಾಗಲಕೋಟ ಜಿಲ್ಲೆಗಳ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಜಿಲ್ಲಾಡಳಿತಕ್ಕೆ ಪತ್ರ ಆಗ್ರಹಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಪತ್ರ ಬರೆದಿರುವ ಅವರು ಯಾವುದೇ ಪ್ರಾಣಿಗಳನ್ನು ಹಿಂಸೆಗೆ ಗುರಿಪಡಿಸಬಾರದು. ಹಿಂಸೆಗೆ ಗುರಿಪಡಿಸಿದರೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಈ ಆದೇಶವನ್ನು ಉಲ್ಲಂಘಿಸಿ, ವಿಜಯಪುರ ಜಿಲ್ಲೆಯ […]

ಸ್ವಂತ ಖರ್ಚಿನಲ್ಲಿ ಒಳಚರಂಡಿ ದುರಸ್ತಿಗೆ ಸಹಾಯ ಮಾಡಿದ ಮಾಜಿ ಕಾರ್ಪೋರೇಟರ್ ಗೆ ಬಡಾವಣೆಗಳ ನಿವಾಸಿಗಳಿಂದ ಸನ್ಮಾನ

ವಿಜಯಪುರ: ವಿಜಯಪುರ ನಗರದ ವಿದ್ಯಾನಗರ ಮತ್ತು ರಹೀಮ ನಗರ ಪ್ರದೇಶದಲ್ಲಿ ಸಮಸ್ಯೆಗೆ ಕಾರಣವಾಗಿದ್ದ ಒಳಚರಂಡಿ ದುರಸ್ಥಿಗೆ ಮಾಜಿ ಕಾರ್ಪೋರೇಟರ್ ಅಬ್ದುಲ್ ರಜಾಕ್ ಹೊರ್ತಿ ವೈಯಕ್ತಿವಾಗಿ ಸಹಾಯ ಮಾಡಿದ್ದರು.  ಈ ಸಮಸ್ಯೆ ಬಗೆಹರಿಸಿದ ಹಿನ್ನೆಲೆಯಲ್ಲಿ ವಿದ್ಯಾನಗರ ಮತ್ತು ರಹೀಮ ನಗರ ನಿವಾಸಿಗಳು ಅಬ್ದುಲ್ ರಜಾಕ್ ಹೊರ್ತಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮನೋವೈದ್ಯ ಡಾ. ಎಸ್. ಎನ್. ಅತ್ತಾರ, ಕುಲಕರ್ಣಿ ಮತ್ತು ವಿದ್ಯಾನಗರ ಹಾಗೂ ರಹೀಮ ನಗರ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದು, ಹೊರ್ತಿಯವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ದೀಪಾವಳಿಯ ದಿನ ಮತ್ತೆ ಕಂಪಿಸಿದ ಭೂಮಿ ರಾತ್ರಿ 8.26 ಕ್ಕೆ ಮನೆಯಿಂದ ಹೊರಗೋಡಿ ಬಂದ ಜನ- ಎಲ್ಲಿ ಗೊತ್ತಾ?

ವಿಜಯಪುರ: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ಭೂಮಿ ಕಂಪಿಸುವ ಮೂಲಕ ಶಾಕ್ ನೀಡಿದ ಘಟನೆ ರಾತ್ರಿ 8.26 ಕ್ಕೆ ನಡೆದಿದೆ. ವಿಜಯಪುರ ಜಿಲ್ಲೆಯ ತಿಕೋಟಾ  ತಾಲೂಕಿನ ಕಳ್ಳಕವಟಗಿ, ಘೋಣಸಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಹುಬನೂರ, ಟಕ್ಕಳಕಿ ಗ್ರಾಮಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಮೊದಲಿಗೆ ಜೋರಾಗಿ ಶಬ್ದ ಕೇಳಿ ಬಂದಿದ್ದು, ನಂತರ ಭೂಮಿ ಕಂಪಿಸಿದ ಅನುಭವವಾಗಿದೆ.  ಆಗ ಗಾಬರಿಯಾದ ಜನರು ಹೊರಗೆ ಓಡಿ ಬಂದಿದ್ದಾರೆ.  ಅತಿ ಹೆಚ್ಚು ಶಬ್ದ ಭೂಮಿಯಿಂದ ಬಂದ ಅನುಭವಾಗಿದ್ದು, ದೀಪಾವಳಿ ಸಂಭ್ರಮದಲ್ಲಿರುವ ಈ ಗ್ರಾಮಸ್ಥರಲ್ಲಿ ಆತಂಕ […]

ವಿಜಯಪುರದ ಕಾಲೇಜಿಗೆ ಪ್ಲಾಸ್ಚಿಕ್ ಮುಕ್ತ ಕ್ಯಾಂಪಸ್ ಗರಿ- ಆ ಕಾಲೇಜು ಯಾವುದು ಗೊತ್ತಾ?

ವಿಜಯಪುರ: ಬಸವ ನಾಡಿನ ವಿಜಯಪುರ ನಗರದ ಕಾಲೇಜಿಗೆ ಈ ಬಾರಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ಲಾಸ್ಟಿಕ್ ಮುಕ್ತ ಆವರಣ ಪ್ರಶಸ್ತಿ ಲಭಿಸಿದೆ. ವಿಜಯಪುರ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮತ್ತು ಅತಿ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಹೊಂದಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ ಎಜ್ಯುಕೇಷನ್ ಸೊಸೈಟಿಯ ಶ್ರೀ ರವೀಂದ್ರನಾಥ ಠಾಗೋರ್ ಶಾಲೆ ಮತ್ತು ಕಾಲೇಜಿಗೆ ಕರ್ನಾಟಕ ರಾಜ್ಯೋತ್ಸವವದ ‌ಅಂಗವಾಗಿ ಪ್ಲಾಸ್ಟಿಕ್ ಮುಕ್ತ ಶಾಲೆ ಆವರಣ ಪ್ರಶಸ್ತಿ ಲಭಿಸಿದೆ. ‌ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು […]

ಕೆಲಸಗಾರರನ್ನು ಪ್ರೋತ್ಸಾಹಿಸಬೇಕೆ ಹೊರತು ಕಾಲೆಳೆಯಬಾರದು- ಯರನಾಳ ಶ್ರೀಗಳು

ವಿಜಯಪುರ: ಕೆಲಸ ಮಾಡುವವರನ್ನು ಬೆಂಬಲಿಸಿ ಪ್ರೊತ್ಸಾಹಿಸಬೇಕೇ ಹೊರತು ಕಾಲೆಳೆಯುವ ಕೆಲಸ ಮಾಡಬಾರದು ಎಂದು ಯರನಾಳ ಶ್ರೀ ಗುರುಸಂಗನಬಸವ ಮಹಾಸ್ವಾಮೀಜಿ ಹೇಳಿದ್ದಾರೆ. ಇಂದು ವಿಜಯಪುರದಲ್ಲಿ ನಡೆದ ಬಿಎಲ್‍ಡಿಇ ಸಂಸ್ಥೆಯ ಸಂಸ್ಥಾಪನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕಾಲೆಳೆಯುವ ಘಟನೆಗಳು ನಡೆಯುತ್ತಿವೆ. ಇದು ವಿಪರ್ಯಾಸ.‌‌ ಅಭಿವೃದ್ಧಿ ಕೆಲಸ ಮಾಡುವವರನ್ನು ಪ್ರೊತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು. 111 ವರ್ಷಗಳ ಹಿಂದೆ ಆರಂಭವಾದ ಬಿಎಲ್‍ಡಿಇ ಸಂಸ್ಥೆ ಅಜ್ಞಾನ, ಮೌಡ್ಯ, ದಾರಿದ್ರ್ಯವನ್ನು ಹೊಗಲಾಡಿಸಲು ಜ್ಞಾನದ ದೀವಿಗೆಯಂತೆ ಕೆಲಸ ಮಾಡಿದೆ. ಈ […]