ಭೂಕಂಪ ಅನುಭವಿಸುತ್ತಿರುವ ಗ್ರಾಮಗಳಲ್ಲಿ ಬಯಲು ಪ್ರದೇಶಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ

ವಿಜಯಪುರ: ವಿಜಯಪುರ ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ಪದೇ ಪದೇ ಭೂಕಂಪನದ ಅನುಭವ ಉಂಟಾಗುತ್ತಿದೆ.  ಈ ಗ್ರಾಮಗಳಲ್ಲಿ ಸುರಕ್ಷತೆ ಇರುವ ಬಯಲು ಪ್ರದೇಶಗಳನ್ನು ಗುರುತಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಲೋಕೋಪಯೋಗಿ, ಪಂಚಾಯಿತಿ ರಾಜ್ ಎಂಜಿನಿಯರಿಂಗ್ ಇಲಾಖೆ ಮತ್ತು ತಹಶೀಲ್ದಾರರ ಅವರಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಭೆ ನಡೆಸಿದ ಅವರು, ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ಭೂಕಂಪದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು.  ಜಿಲ್ಲೆಯಲ್ಲಿ […]

ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದು- ಸಿಟ್ಟಾದ ಕಿಚ್ಚನ ಅಭಿಮಾನಿಗಳಿಂದ ಸಿನೇಮಾ ಮಂದಿರದ ಮೇಲೆ ಕಲ್ಲು ತೂರಾಟ- ಮೂರ್ನಾಲ್ಕು ಜನ ಪೊಲೀಸ್ ವಶಕ್ಕೆ

ವಿಜಯಪುರ: ಕೋಟಿಗೊಬ್ಬ- 3 ಸಿನೇಮಾ ಪ್ರದರ್ಶನ ರದ್ದಾಗಿದ್ದರಿಂದ ಸಿಟ್ಟಾದ ಅಭಿಮಾನಿಗಳು ಸಿನೇಮಾ ಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಗುಮ್ಮಟ ನಗರಿ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಗರದ ಬಸ್ ನಿಲ್ದಾಣ ರಸ್ತೆಯಲ್ಲಿರುವ ಡ್ರೀಮಲ್ಯಾಂಡ್ ಚಿತ್ರ ಮಂದಿರದಲ್ಲಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ- 3 ಸಿನೇಮಾ ಮೊದಲ ಪ್ರದರ್ಶನ ಆಯೋಜಿಸಲಾಗಿತ್ತು.  ಆದರೆ, ಕೋಟಿಗೊಬ್ಬ- 3 ಚಿತ್ರ ಪ್ರದರ್ಶನ ರದ್ದು ಮಾಡಲಾಯಿತು.  ತಮ್ಮ ನೆಚ್ಚಿನ ನಟನ ಸಿನೇಮಾವನ್ನು ಮೊದಲ ಪ್ರದರ್ಶನದಲ್ಲಿಯೇ ನೋಡಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿನೇಮಾ […]

ಆಹಾರ ಇಲಾಖೆ ಸಿಬ್ಬಂದಿ ಧಾಳಿ- ನಕಲಿ ಬಯೋ ಡೀಸಲ್ ಮಾರಾಟ ಅಡ್ಡೆ ಪತ್ತೆ

ವಿಜಯಪುರ: ವಿಜಯಪುರ ಆಹಾರ ಇಲಾಖೆ ಅಧಿಕಾರಿಗಳು ಭರ್ಜರಿ ಧಾಳಿ ನಡೆಸಿದ್ದು, ನಕಲಿ ಬಯೋ ಡೀಸೆಲ್ ಮಾರಾಟ ಮಾಡುತ್ತಿದ್ದ ಅಡ್ಡೆಯನ್ನು ಪತ್ತೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಝಳಕಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ ಈ ಧಾಳಿ ನಡೆದಿದೆ.  ಈ ಪ್ರದೇಶದಲ್ಲಿ ಶೆಡ್ ನಲ್ಲಿ ನಕಲಿ ಬಯೋ ಡಿಸೈಲ್ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಆಹಾರ ಇಲಾಖೆ ಅಧಿಕಾರಿಗಳ ತಂಡ ಈ ಧಾಳಿ ನಡೆಸಿದೆ.  ಅಧಿಕಾರಿಗಳ ತಂಡ ಧಾಳಿ ನಡೆಸುತ್ತಿದ್ದಂತೆ ನಕಲಿ ಬಯೋ […]

ಬಸವ ನಾಡಿನ ಶ್ರೀ ನರಸಿಂಹ ದೇವಸ್ಥಾನ ಕಂದಕ ಸ್ವಚ್ಛಗೊಳಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು

ವಿಜಯಪುರ: ಪೂಜೆಯ ತ್ಯಾಜ್ಯ ವಸ್ತುಗಳಿಂದ ತುಂಬಿಕೊಂಡಿದ್ದ ವಿಜಯಪುರ ನಗರದ ಶ್ರೀ ನರಸಿಂಹ ದೇವಸ್ಥಾನದ ಕಂದಕದಲ್ಲಿದ್ದ ಕಸಕಡ್ಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಕಾರ್ಯಕರ್ತರು ಗಮನ ಸೆಳೆದಿದ್ದಾರೆ. ಬೆಳಿಗ್ಗೆ 11ಕ್ಕೆ ಆರಂಭವಾದ ಈ ಸ್ವಚ್ಛತಾ ಅಭಿಯಾನ ಸತತ ಐದು ಗಂಟೆಗಳ ಕಾಲ ನಡೆಯಿತು.  ಸ್ಥಳೀಯವಾಗಿ ತಯಾರಿಸಲಾಗಿದ್ದ ಬೋಟಿನಲ್ಲಿ ಕೆಳಗಿಳಿದ ಕೆಲವು ಜನ ಯುವಕರು ಅಲ್ಲಿ ನೀರಿನಲ್ಲಿ ತೇಲಾಡುತ್ತಿದ್ದ ಕಸಕಡ್ಡಿಗಳನ್ನು ಒಂದೆಡೆ ಸೇರಿಸಿದರು.  ನಂತರ ಈ ಕಂದಕಕ್ಕೆ ಅಂಟಿಕೊಂಡಿರುವ ಗೋಡೆಯ ಮೇಲ್ಭಾಗದಲ್ಲಿರುವ ಇತರರು ಬಟ್ಟೆಯಿಂದ ಮತ್ತು […]

ಅ.7ರಂದು ಮಾಜಿ ಸಚಿವ ಎಂ. ಬಿ. ಪಾಟೀಲ‌ ಜನ್ಮದಿನ- ಹೂವು, ಹಾರ, ಕೇಕ್, ಪಟಾಕಿ ಬಳಕೆ ಬೇಡ- ಎಂ. ಬಿ. ಪಾಟೀಲ ಫೌಂಡೇಶನ್ ಮನವಿ

ವಿಜಯಪುರ: ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಹಾಗೂ ಬಿ‌ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಪಾಟೀಲ ಅವರ ಜನ್ಮ ದಿನ ಅ. 7ರಂದು ನಾಡಿನಾದ್ಯಂತ ಹಲವಾರು ಅಭಿಮಾನಿಗಳು ರಕ್ತದಾನ, ವೃದ್ಧಾಶ್ರಮಗಳಲ್ಲಿ, ಅನಾಥಾಶ್ರಮಗಳಲ್ಲಿ ಆಸ್ಪತ್ರೆಗಳಲ್ಲಿ, ಆಹಾರ ವಿತರಣೆ, ಸಸಿಗಳನ್ನು ಹಂಚುವುದು, ಸ್ವಚ್ಚತಾ ಕಾರ್ಯಕ್ರಮ, ದೇವಾಲಯಗಳಲ್ಲಿ ವಿಶೇಷ ಪೂಜೆಗಳ ಮೂಲಕ ನಾನಾ ಕಾರ್ಯಕ್ರಮಗಳ ಮೂಲಕ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಕ್ ಕತ್ತರಿಸುವುದು, ಹೂ ಹಾರ ಹಾಕುವುದು ಇತ್ಯಾದಿ ಅದ್ದೂರಿ […]

ರಾಜ್ಯದ ಮೊದಲ‌ ಆಧುನಿಕ ನೋವು ನಿವಾರಣೆ ಕೇಂದ್ರ ಅ.7 ರಿಂದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಆರಂಭ- ಡಾ. ಆರ್. ಎಸ್. ಮುಧೋಳ

ವಿಜಯಪುರ: ತೀವ್ರ ತರವಾದ ನಾನಾ ನೋವಿನಿಂದ ಬಳಲುವ ರೋಗಿಗಳಿಗೆ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಆಧುನಿಕ ನೋವು ನಿರ್ವಹಣೆ ಕೇಂದ್ರ ವಿಜಯಪುರದಲ್ಲಿ ಆರಂಭವಾಗಲಿದೆ. ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಅ. 7 ರಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ಉದ್ಘಾಟನೆಯಾಗಲಿದೆ ವಿವಿ ಎಂದು ಉಪಕುಲಪತಿ ಡಾ. ಆರ್. ಎಸ್. ಮುಧೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾತ್ಕಾಲಿಕ ಅನಾರೋಗ್ಯಕ್ಕೆ ಸಂಬಂಧಿಸಿದ ತೀವ್ರನೋವು, […]

ಅಸ್ಪೃಶ್ಯತೆ ಆಚರಣೆಯಿದ್ದ ಸಂದರ್ಭದಲ್ಲಿ ಗೌಡರ ಮನೆಯಲ್ಲಿ ದಲಿತರಿಗೆ ಸ್ಥಾನ ಕೊಟ್ಟಿತ್ತು ತೊರವಿ ಗೌಡರ ಕುಟುಂಬ- ಡಿಎಸ್‌ಎಸ್ ಮುಖಂಡ ಅಡಿವೆಪ್ಪ ಸಾಲಗಲ

ವಿಜಯಪುರ: ಈ ಹಿಂದೆ ಅಸ್ಪೃಶ್ಯತೆ ಆಚರಣೆ ಜಾರಿಯಲ್ಲಿದ್ದ ಕಾಲದಲ್ಲಿಯೇ ಕೇರಿಯ ದಲಿತರನ್ನು ಊರ ಗೌಡರ ಮನೆಯಲ್ಲಿ ಸ್ಥಾನ ಕೊಟ್ಟ ಕುಟುಂಬ ತೊರವಿ ಗೌಡರ ಕುಟುಂಬ ಎಂದು ಡಿ ಎಸ್ ಎಸ್ ಮುಖಂಡ ಅಡಿವೆಪ್ಪ ಸಾಲಗಲ ಮಾಜಿ ಸಚಿವ ದಿ. ಬಿ. ಎಂ. ಪಾಟೀಲ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರ ಕುಟುಂಬದ ಗುಣಗಾನ ಮಾಡಿದ್ದಾರೆ. ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಸಿದ್ದೇಶ್ವರ ಪಿಯು ಕಾಲೇಜಿನಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ […]

ಅರಣ್ಯ ಪರಿಸರ ವೀಕ್ಷಣೆ ಗೋಪುರಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಕಿಡಿಗೇಡಿಗಳು

ವಿಜಯಪುರ: ಅರಣ್ಯ ಪರಿಸರ ವೀಕ್ಷಣಾ ಗೋಪುರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಅಟ್ಟಹಾಸ ಮೆರೆದ ಘಟನೆ ವಿಜಯಪುರ ನಗರದ ಹೊರ ವಲಯದ ಭೂತ್ನಾಳ ಕೆರೆಯ ಹಿಂಭಾಗದಲ್ಲಿ ನಡೆದಿದೆ‌. ಕೋಟಿ ವೃಕ್ಷ ಅಭಿಯಾನದಡಿ ಮಾಜಿ ಸಚಿವ ಎಂ. ಬಿ. ಪಾಟೀಲ‌ ಸಚಿವರಾಗಿದ್ದಾಗ ಕರಾಡೆದೊಡ್ಡಿ ಬಳಿ 500 ಎಕರೆ ಪ್ರದೇಶದಲ್ಲಿ ಅರಣ್ಯ ಬೆಳೆಸಲು ನಾಂದಿ ಹಾಡಿದ್ದರು. ಸರಕಾರದ ನಾನಾ ಇಲಾಖೆಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಮತ್ತು ರೈತರು ಇದಕ್ಕೆ ಕೈ ಜೋಡಿಸಿದ್ದರು. ವರ್ಷದಿಂದ ವರ್ಷಕ್ಕೆ ಈ ಕೋಟಿ ವೃಕ್ಷ ಅಭಿಯಾನ ಯಶಸ್ಸು ಪಡೆಯುತ್ತಿದೆ. […]

ಯುಕೆಪಿ-3 ನೇ ಹಂತದ ಯೋಜನೆ ಸಂಪೂರ್ಣ ಜಾರಿಗಾಗಿ ಯಾವುದೇ ಹೋರಾಟಕ್ಕೆ ಸಿದ್ಧ- ಎಂಎಲ್‌ಸಿ ಸುನೀಲಗೌಡ ಪಾಟೀಲ

ಬಾಗಲಕೋಟೆ: ಯುಕೆಪಿ-3ನೇ ಹಂತದ ಯೋಜನೆ ಸಂಪೂರ್ಣ ಜಾರಿಗಾಗಿ ಯಾವುದೇ ಹೋರಾಟಕ್ಕೂ ನಾನು ಸಿದ್ಧ ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಬಿ. ಪಾಟೀಲ ತಿಳಿಸಿದ್ದಾರೆ. ಯುಕೆಪಿ-3ನೇ ಹಂತದ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಅನಗವಾಡಿ ಸೇತುವೆಯಿಂದ ಟಕ್ಕಳಕಿ ಕೃಷ್ಣಾ ನದಿಯವರೆಗೆ ಆಯೋಜಿಸಲಾಗಿದ್ದ ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ ಬಳಿಕ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 1964 ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಂದ ಆರಂಭವಾದ ಯುಕೆಪಿ ಯೋಜನೆಗಳು ನಾನಾ […]

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯಿಂದ ಪ್ರತಿಭಟನೆ

ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚು ಮಳೆಯಾಗಿ ರೈತರು ಬೆಳೆದ ಬೆಳೆ ಹಾನಿಯಾಗಿವೆ. ಕೂಡಲೇ ರಾಜ್ಯ ಸರಕಾರ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ರಾಷ್ಟ್ರೀ ಬಸವ ಸೈನ್ಯ ಸಂಘಟನೆಯಿಂದ ಬಸವನ ಬಾಗೇವಾಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಂಕರಗೌಡ ಬಿರಾದಾರ, ರೈತರು ಬೆಳೆದ ತೊಗರಿ, ಈರುಳ್ಳಿ, ದ್ರಾಕ್ಷಿ, ಮೆಕ್ಕೆಜೋಳ ಮತ್ತು […]