ಲೋಕಾಯುಕ್ತ ಅಧಿಕಾರಿಗಳಿಂದ ಶಾಲಾ ಕಾಲೇಜುಗಳಲ್ಲಿ ಕೋವಿಡ್-19 ಎಸ್ಓಪಿ ಪಾಲನೆ ಪರಿಶೀಲನೆ

ವಿಜಯಪುರ: ಸರಕಾರ ಪ್ರಸಕ್ತ ವರ್ಷದ ಶಾಲೆ-ಕಾಲೇಜುಗಳನ್ನು ಆರಂಬಿಸಲು ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಕೊರೊನಾ ನಿಯಮಾವಳಿ ಪಾಲನೆ ಅಂದರೆ ಎಸ್ಓಪಿ ಪಾಲನೆ ಕುರಿತು ವಿಜಯಪುರ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಯಲಿಗಾರ ಮತ್ತು ಲೋಕಾಯುಕ್ತ ಸಿಪಿಐ ಆನಂದ ಠಕ್ಕನ್ನವರ ನಾನಾ ಶಾಲೆ-ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲೋಕಾಯುಕ್ತರ ಆದೇಶದ ಹಿನ್ನೆಲೆಯಲ್ಲಿ ಈ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಸರಕಾರಿ ಶಾಲೆ- ಕಾಲೇಜುಗಳಲ್ಲಿ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಪಾಲನೆಯಾಗುತ್ತಿರುವ ಕುರಿತು ಪರಿಶೀಲನೆ ನಡೆಸಿದರು. ಅಲ್ಲದೇ, ಲೋಪದೋಷವಾದರೆ […]

ಇಂದು ವಿಶ್ವ ಹೃದಯ ದಿನ- ನಿಮ್ಮ ಹೃದಯದ ಆರೋಗ್ಯ ನಿಮ್ಮ ಕೈಯಲ್ಲಿದೆ

ಡಾ. ರವಿ ಎಸ್. ಕೋಟೆಣ್ಣವರ, ಹೋಮಿಯೋಪಥಿ ಖ್ಯಾತ ವೈದ್ಯರು ವಿಜಯಪುರ: ಜನ ಸಾಮಾನ್ಯರಲ್ಲಿ ಹೃದಯ ರೋಗಗಳ ಕುರಿತು ಅರಿವು ಮೂಡಿಸಲು ಸೆಪ್ಟೆಂಬರ 29 1999ರಲ್ಲಿ ವರ್ಲ್ಡ್ ಹಾಟ೯ ಫೆಡರೇಶನ್(WHF) ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳ (WHO) ಸಂಯುಕ್ತ ಆಶ್ರಯದಲ್ಲಿ ಆಗಿನ WHF ನ ಅಧ್ಯಕ್ಷರಾಗಿದ್ದ ಅಂಟೋನಿ ಬೆಯ್ಸ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ವಿಶ್ವ ಹೃದಯ ದಿನ ಆಚರಣೆ ಆರಂಭವಾಯಿತು.  ಈ ದಿನ ವಿಶ್ವಾದ್ಯಂತ ಎಲ್ಲ ಸರಕಾರಿ, ಅರೆ ಸರಕಾರಿ ಆರೋಗ್ಯ ಸಂಘ ಸಂಸ್ಥೆಗಳು ಜನರಲ್ಲಿ ಹೃದಯ […]

ಸಬ್ ರಜಿಸ್ಟ್ರಾರ್ ಕಾಣೆಯಾಗಿದ್ದಾರೆ ಹುಡುಕಿ ಕೊಡಿ ಎಂದ ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ

ವಿಜಯಪುರ: ವಿಜಯಪುರ ಸಬ್ ರಜಿಸ್ಟ್ರಾರ್ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಿ ಎಂದು ಕೆಪಿಸಿಸಿ ಸದಸ್ಯ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರದ ಸಬ್ ರಜಿಸ್ಟ್ರಾರ್ ಆಪೀಸ್ ಅವ್ಯವಸ್ಥೆಯ ಆಗರವಾಗಿದೆ. ಅಲ್ಲಿನ ಸಬ್ ರಜಿಸ್ಟ್ರಾರ್ ಬಿರಾದಾರ ಕಚೇರಿಯಲ್ಲಿ ಇರುವುದಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ. ತಾವು ಬೆಳಿಗ್ಗೆ ಕಾರ್ಯ ನಿಮಿತ್ಯ ಆ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿ ಹಿರಿಯ ನಾಗರಿಕರು ವಯೋವೃದ್ಧರು, ಮಹಿಳೆಯರು ಮೊದಲ ಮಹಡಿಗೆ ಬರಲು ಪರದಾಡುತ್ತಿದ್ದರು. ಇದನ್ನೆಲ್ಲಾ ಗಮನಿಸಿ ಸರಿಯಾದ […]

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಂದ ರೂ. 1 ಕೋ.ವೆಚ್ಚದ ಕಾಲೇಜ ಕಲಿಕಾ ಕೊಠಡಿಗಳನ್ನು ಉದ್ಘಾಟನೆ

ವಿಜಯಪುರ: ರೂ. 1 ಕೋ. ವೆಚ್ಚದ ಕಾಲೇಜು ಕಲಿಕಾ ಕೊಠಡಿಗಳನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದರು. ವಿಜಯಪುರ ನಗರದ ಗಾಂಧಿಚೌಕ್ ಬಳಿ ಸರಕಾರಿ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಆರು ಕೊಠಡಿಗಳನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ ನಬಾರ್ಡ ಯೋಜನೆ ಅನುದಾನದಲ್ಲಿ ನಿರ್ಮಿಸಲಾಗಿದೆ. ಈ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಶಾಲೆ- ಕಾಲೇಜುಗಳಿಗೂ ಸಹ ಖಾಸಗಿ ಶಾಲಾ ಕಾಲೇಜುಗಳಂತೆ ಹೈಟೆಕ್ ಸ್ಪರ್ಶ ಕೊಡುವದರೊಂದಿಗೆ ಈ ಭಾಗದ ಎಲ್ಲ ಬಡ […]

ವಿಜಯಪುರವನ್ನು ರಫ್ತು ನಗರ ಮಾಡುವ ಗುರಿಯಿದೆ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರವನ್ನು ರಫ್ತು ನಗರವನ್ನಾಗಿಸುವ ಗುರಿ ಹೊಂದಲಾಗಿದೆ. ಇಲ್ಲಿನ ಉದ್ದಿಮೆಗಳು ಕೂಡ ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಹೇಳಿದರು. ವಿಜಯಪುರ ನಗರದ ಶಿಕಾರಖಾನೆ ಬಳಿಯ ಜಿಲ್ಲಾ ಕೈಗಾರಿಕೆ ಕೇಂದ್ರದ ಆವರಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕೆ ಕೇಂದ್ರಸ ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಆಶ್ರಯದಲ್ಲಿ ಅಮೃತ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ವಾಣಿಜ್ಯ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪಕ್ಕದ ಜಿಲ್ಲೆಗಳಾದ ಬೆಳಗಾವಿ, ಕಲಬುರಗಿ ಸೇರಿದಂತೆ ಗಡಿ […]

ಹದಗೆಟ್ಟ ರಸ್ತೆ ದುರಸ್ಥಿ ಮಾಡಲು ಜೆಸಿಬಿ, ರೋಡ್ ರೋಲರ್ ಜೊತೆ ಬಂದ ಕಾಂಗ್ರೆಸ್ಸಿಗರು- ಕಸಿವಿಸಿಗೊಂಡು ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನೆ ತಡೆದ ಮಹಾನಗರ ಪಾಲಿಕೆ ಆಯುಕ್ತರು

ವಿಜಯಪುರ: ಹದಗೆಟ್ಟಿರುವ ರಸ್ತೆಗಳಿಂದ ಗುಮ್ಮಟ ನಗರಿಯ ಜನತೆ ಬೇಸತ್ತು ಹೋಗಿದ್ದಾರೆ. ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಮಳೆ ಬಂದರಂತೂ ಈ ಗುಂಡಿಗಳು ಕಾಣಿಸದೇ ವಾಹನ ಸವಾರರು ಪರದಾಡುವಂತಾಗಿದೆ. ಹಲವಾರು ಬಾರಿ ಅಪಘಾತಗಳೂ ಸಂಭವಿಸಿವೆ. ಇದರಿಂದ ಬೇಸತ್ತ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುಮ್ಮಟ ನಗರಿ ವಿಜಯಪುರದಲ್ಲಿ ರಸ್ತೆ ದುರಸ್ಥಿಗೆ ಮುಂದಾದ ಘಟನೆ ನಡೆದಿದೆ. ಐತಿಹಾಸಿಕ ಗೋಳಗುಮ್ಮಟ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಜೆಸಿಬಿ ಮತ್ತು ರೋಡ್ ರೋಲರ್ ಮತ್ತು ವೆಟ್ ಮಿಕ್ಸ್ […]

ಯು ಪಿ ಎಸ್ ಸಿ ಯಲ್ಲಿ 326ನೇ ಸ್ಥಾನ- ಯುವತಿಯನ್ನು ಅಭಿನಂದಿಸಿ ಸಂತಸಪಟ್ಟ ವಿವೇಕ ನಗರ ಬಡಾವಣೆ ಜನ

ವಿಜಯಪುರ: ಯು ಪಿ ಎಸ್ ಸಿ ಯಲ್ಲಿ ವಿಜಯಪುರ ಜಿಲ್ಲೆಯ ನೇತ್ರಾ ಮೇಟಿ ಎಂಬ ಯುವತಿ 326ನೇ ಸ್ಥಾನ ಪಡೆಯುವ ಮೂಲಕ ಯುವ ಜನತೆಯ ಕಣ್ಮಣಿಯಾಗಿ ಹೊರ ಹೊಮ್ಮಿದ್ದಾರೆ.   ಈ ಯುವತಿಯ ಸಾಧನೆಯನ್ನು ಮೆಚ್ಚಿದ ವಿಜಯಪುರ ನಗರದ ವಿವೇಕ ನಗರ ಬಡಾವಣೆ ಜನರು ನಗರಸಭೆ ಮಾಜಿ ಸದಸ್ಯ ರವಿಕಾಂತ ಬಗಲಿ ನೇತೃತ್ವದಲ್ಲಿ ಯುವತಿಯನ್ನು ಸನ್ಮಾನಿಸಿ ಸಂಭ್ರಮ ಪಟ್ಟಿದ್ದಾರೆ. ಯುವತಿ ನೇತ್ರಾ ನಿವಾಸಕ್ಕೆ ತೆರಳಿದ ರವಿಕಾಂತ ಬಗಲಿ, ವಿವೇಕ ನಗರದ ಗಜಾನನ ತರುಣ ಮಂಡಳಿ, ಜೈ ಸಂತೋಷ […]

ಕನ್ನಡ ಆರ್ಥಿಕ ಭಾಷೆಯಾದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ- ಹೆಗ್ಗೋಡಿನ ಹಿರಿಯ ಚಿಂತಕ ಪ್ರಸನ್ನ

ವಿಜಯಪುರ: ಕನ್ನಡ ಆರ್ಥಿಕ ಭಾಷೆಯಾದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ನಿರ್ಲಕ್ಷಿತ ಕ್ಷೇತ್ರಗಳಿಗೆ ಆದ್ಯತೆ ನೀಡಿ ಅಭಿವೃದ್ಧಿ ಪಡಿಸುವುದಯ ಸಧ್ಯದ ಅಗತ್ಯವಾಗಿದೆ ಎಂದು ಹೆಗ್ಗೋಡಿನ ಹಿರಿಯ ಚಿಂತಕ ಪ್ರಸನ್ನ ಹೇಳಿದರು. ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ ಮತ್ತು ಚಿಂತನ ಸಾಂಸ್ಕೃತಿಕ ಬಳಗ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಗ್ರಾಮೋದ್ಯೋಗ ಮತ್ತು ಆರ್ಥಿಕತೆ ಕುರಿತು ಉಪನ್ಯಾಸ ನೀಡಿದರು. ಮಹಿಳೆಯರು ಸೇರಿದಂತೆ ನಿರ್ಲಕ್ಷಿತರಾಗಿರುವ ಮತ್ತು ಶೇ. […]

ಬಸವ ನಾಡಿನಲ್ಲಿ ಇನ್ನೆರಡು ದಿನ ಮಳೆ ಮುನ್ಸೂಚನೆ- ಕಳೆದ 24 ಗಂಟೆಗಳಲ್ಲಿ ಚಡಚಣದಲ್ಲಿ 35.20 ಮಿ. ಮೀ. ಮಳೆ- ಉಳಿದೆಡೆ ಸುರಿದ ಮಳೆ ಎಷ್ಟು ಗೊತ್ತಾ?

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಇನ್ನೆರಡು ದಿನ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆ. 24 ಮತ್ತು 25ರ ವರೆಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮಳೆಯ ಸಾಧ್ಯತೆ ಶೇ. 50 ರಿಂದ 75 ರಷ್ಟಿದೆ. ಸೆ. 27ರ ವರೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮಧ್ಯೆ ಕಳೆದ 24 ಗಂಟೆಯಲ್ಲಿ ವಿಜಯಪುರ ಜಿಲ್ಲೆಯ ಅಲ್ಲಲ್ಲಿ […]

ಸೆ. 23 ಗುರುವಾರದಿಂದ ಮೂರು ದಿನ ವಿಜಯಪುರದಲ್ಲಿ ಪವಿತ್ರ ವಸ್ತ್ರ ಪ್ರದರ್ಶನ ಮತ್ತು ಮಾರಾಟ ಅಭಿಯಾನ

ವಿಜಯಪುರ: ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಕಾಲೇಜು ಹಾಗೂ ಚರಕದೇಶಿ ಗ್ರಾಮ ಸೇವಾ ಸಂಘ ಸಾಗರ ಇವರ ಸಹಯೋಗದಲ್ಲಿ ಸೆ. 23 ರಿಂದ ಮೂರು ದಿನಗಳ ಕಾಲ ಪವಿತ್ರ ವಸ್ತ್ರ ಪ್ರದರ್ಶನ ಮತ್ತು ಮಾರಾಟ ಅಭಿಯಾನ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಭಾರತಿ ಖಾಸನೀಸ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ಸೆ. 23 ರಂದು ಗುರುವಾರ ಬೆ. 9.30ಕ್ಕೆ ಎಸ್. ಎಸ್. ಪದವಿ […]