ಡಿ. ಆರ್. ಮಮದಾಪುರ ಪರಿವಾರದವರಿಂದ ಗುಮ್ಮಟ ನಗರಿಯ ಪೌರ ಕಾರ್ಮಿಕರಿಗೆ ಸನ್ಮಾನ, ಆಹಾರ ಧಾನ್ಯಗಳ ಕಿಟ್ ವಿತರಣೆ

ವಿಜಯಪುರ: ವಿಜಯಪುರ ನಗರದ ಪೌರ ಕಾರ್ಮಿಕರಿಗೆ ಸರಕಾರದಿಂದ ಮತ್ತು ಮಹಾನಗರ ಪಾಲಿಕೆಯಿಂದ  ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ  ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ‌. ವಿಜಯಪುರ ನಗರದ ಎಲ್ ಐ ಸಿ(ಭಾರತೀಯ ಜೀವ ವಿಮೆ ನಿಗಮ) ಆವರಣದಲ್ಲಿ ಡಿ. ಆರ್. ಮಮದಾಪುರ ಪರಿವಾರದ ವತಿಯಿಂದ  ವಿಜಯಪುರ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಜನರು ಆರೋಗ್ಯಕರವಾಗಿರಲು  ಪೌರ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಇಂಥ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಒಡಿತರ ಕೀಟ್ ಗಳನ್ನು […]

ಬಸವ ನಾಡಿನಲ್ಲಿ 7 ದಿನಗಳ ಕಾಲ ಗಣೇಶೋತ್ಸವಕ್ಕೆ ಅವಕಾಶ- ಡಿಸಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಶ್ರೀ ಗಣೇಶೋತ್ಸವವನ್ನು ಗರಿಷ್ಠ ಏಳು ದಿನಗಳವರೆಗೆ ಕೋವಿಡ್ ಮಾರ್ಗಸೂಚಿಗಳೊಂದಿಗೆ ಆಚರಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾದಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ಗಣೇಶ ಹಬ್ಬದ ಆಚರಣೆಯನ್ನು ಗರಿಷ್ಠ ಐದು ದಿನಗಳ ವರೆಗೆ ಆಚರಿಸಲು ಆದೇಶ ಹೊರಡಿಸಲಾಗಿತ್ತು. ಈ ಮಧ್ಯೆ, ಗಣೇಶೋತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಗಣೇಶ ಹಬ್ಬದ ಆಚರಣೆಯನ್ನು ಐದು ದಿನಗಳ ಬದಲಾಗಿ ಏಳು ದಿನ ಆಚರಿಸಲು ಅನುಮತಿ […]

ಕೆರೂರ ಕೆಪಿಟಿಸಿಎಲ್ ನೂತನ ಉಪ ವಿದ್ಯುತ್ ಕೇಂದ್ರ ಕಾಮಗಾರಿಗೆ ಚಾಲನೆ

ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಕೆರೂರ ಬಳಿ ಕೆಪಿಟಿಸಿಎಲ್ ನೂತನ 110 ಕೆವಿ ವಿದ್ಯುತ್ ಉಪಕೇಂದ್ರದ ಕಾಮಗಾರಿಗೆ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಮತ್ತು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಭೂಮಿ ಪೂಜೆ ನೆರವೇರಿಸಿದರು. ಜಿಗಜೇವಣಗಿ ಮತ್ತು ಕೆರೂರು ಗ್ರಾಮಗಳ ಜನರ ಬಹುದಿನ ಗಳ ಬೇಡಿಕೆಗೆ ಇದರಿಂದ ಸ್ಪಂದನೆ ಸಿಕ್ಕಂತಾಗಿದೆ. ಈ ಸಂದರ್ಭದಲ್ಲಿ ಜಿಗಜೇವಣಗಿ ಮತ್ತು ಕೆರೂರ ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿ. ಪಂ. ಮಾಜಿ ಸದಸ್ಯರು, ಮುಖಂಡರು ಮತ್ತು ಗ್ರಾಮಸ್ಥರು […]

ಇಂಡಿ ತಾಲೂಕು ಸಮಗ್ರ ನೀರಾವರಿಗೆ ಆಗ್ರಹ- ಹೊರ್ತಿಯಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕನ್ನು ಸಮಗ್ರ ನೀರಾವರಿಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಇಂಡಿಯಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ 12ನೇ ದಿನಕ್ಕೆ ಕಾಲಿಟ್ಟಿದ್ದು, ಈ ಹೋರಾಟದ ಅಂಗವಾಗಿ ಹೊರ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದಾರೆ. ಹೂರ್ತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಾಲಯ ಪಕ್ಕದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಕೂಡಲೇ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ […]

ಗ್ರಾಮಸ್ಥರಿಂದ ಒದೆ ತಿನ್ನುವ ಭಯದಲ್ಲಿ ಕಳ್ಳರು ಸಂಚರಿಸುತ್ತಿದ್ದ ಕಾರು ಪಲ್ಟಿ- ಅಲ್ಲಿಯೇ ವಾಹನ ಬಿಟ್ಟು ಪರಾರಿಯಾದ ಖದೀಮರು

ವಿಜಯಪುರ: ಇದು ಗ್ರಾಮಸ್ಥರು ಅಕ್ಷರಶಃ ಕಳ್ಳರು ಜೀವದ ಹಂಗು ತೊರೆದೆ ಪಲಾಯನ ಮಾಡಲು ಕಾರಣವಾದ ಸ್ಟೋರಿ. ಗ್ರಾಮಸ್ಥರಿಂದ ಒದೆ ತಿನ್ನುವ ಭಯದಲ್ಲಿ ಕಳ್ಳರು ಸಂಚರಿಸುತ್ತಿದ್ದ ಕಾರು ಪಲ್ಟಿಯಾದ ತಕ್ಷಣ ಅದರಲ್ಲಿದ್ದ ವಸ್ತುಗಳು ಮತ್ತು ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮುಕರ್ತಿಹಾಳ ಬಳಿ ಕಳ್ಳರು ಕುರಿಗಳನ್ನು ಕದಿಯಲು ಬಂದಿದ್ದರು. ಕಾರಿನಲ್ಲಿ ಬಂದಿದ್ದ ಈ ಕಳ್ಳರನ್ನು ನೋಡಿದ ಕುರಿಗಳನ್ನು ಕದಿಯಲು ಮುಂದಾಗಿದ್ದಾರೆ. ಆಗ ಕುರಿಗಾಹಿ ಚಟ್ಟನೇ ಚೀರಿದ್ದಾನೆ. […]

ಅಂತಾರಾಜ್ಯ ಕಳ್ಳರ ಹೆಡೆಮುರಿ ಕಟ್ಟಿದ ಬಸವ ನಾಡಿನ ಪೊಲೀಸರು

ವಿಜಯಪುರ: ಅವರದೇ ಆದ ಗ್ಯಾಂಗ್ ನ್ನು ಕಟ್ಟಿಕೊಂಡು ರಾಜ್ಯದ ನಾನಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿ ತಲೆ ಮರೆಸಿಕೊಂಡಿದ್ದ ಐನಾತಿ ಕಳ್ಳರ ಗುಂಪೊಂದನ್ನು ಬಸವ ನಾಡಿನ ಪೊಲೀಸುರ ಹೆಡೆಮುರಿ ಕಟ್ಟಿದ್ದಾರೆ. ವಿಜಯಪುರದಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಎಚ್. ಡಿ. ಆನಂದ ಕುಮಾರ, ವಿಜಯಪುರ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಮನೆಗಳ ಕಳ್ಳತನ ಪ್ರಕರಣಗಳು ವರದಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಳ್ಳರ ಕಾಟ ತಡೆಯಲು ಅವರ ಹೆಡೆಮುರಿ ಕಟ್ಟಲು ಪ್ರತ್ಯೇಕವಾದ ತಂಡವನ್ನು ರಚಿಸಲಾಗಿತ್ತು. ಈ ತಂಡ ಈಗ […]

ಭರ್ತಿಯಾದ ಯಕ್ಕುಂಡಿ ಕೆರೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ ಶಾಸಕ ಎಂ. ಬಿ. ಪಾಟೀಲ

ವಿಜಯಪುರ: ವಿಜಯಪುರ ಬಬಲೇಶ್ವರ ತಾಲೂಕಿನ ಯಕ್ಕುಂಡಿ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಮಾಜಿ ಸಚಿವ, ಶಾಸಕ ಎಂ. ಬಿ. ಪಾಟೀಲ ಗಂಗಾಪೂಜೆ ಸಲ್ಲಿಸಿ, ಬಾಗೀನ ಅರ್ಪಿಸಿದರು. ಶಾಸಕ ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಜಾರಿಗೆ ತಂದ ಕೆರೆಗೆ ನೀರು ತುಂಬಿಸುವ ಯೋಜನೆಯಡಿ ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದ ಕೆರೆಗೆ ಕೃಷ್ಣಾ ನದಿಯಿಂದ ಮುಳವಾಡ ಏತ ನೀರಾವರಿ ಯೋಜನೆಯ ಮಲಘಾಣ ಪಶ್ಚಿಮ ಕಾಲುವೆಯಿಂದ ನೀರು ಹರಿಸಲಾಗಿದೆ. ಇದರಿಂದಾಗಿ ಈಗ ಯಕ್ಕುಂಡಿ ಹಾಗೂ ಸುತ್ತಲಿನ ಪ್ರದೇಶ ಹಚ್ಚ-ಹಸಿರಿನಿಂದ ಕಂಗೊಳಿಸುತ್ತಿದೆ. […]

ಕೊಪ್ಪದ ಸಹೋದರರ ಕಾಂಗ್ರೆಸ್ ಸೇರ್ಪಡೆ ಬಿಜೆಪಿ ಮುಕ್ತ ಬಬಲೇಶ್ವರ ಮತಕ್ಷೇತ್ರವಾಗಲು ನಾಂದಿ ಹಾಡಿದೆ- ಎಂ. ಬಿ. ಪಾಟೀಲ

ವಿಜಯಪುರ: ಯಕ್ಕುಂಡಿ ಗ್ರಾಮದ ಬಿಜೆಪಿ ಮುಖಂಡರಾದ ಚನ್ನಪ್ಪ ಕೊಪ್ಪದ ಮತ್ತು ಸಹೋದರರು ಹಾಗೂ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಬಿಜೆಪಿ ಮುಕ್ತ ಬಬಲೇಶ್ವರ ಮತಕ್ಷೇತ್ರಕ್ಕೆ ನಾಂದಿ ಹಾಡಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ ಚನ್ನಪ್ಪ ಕೊಪ್ಪದ ಮತ್ತು ಸಹೋದರರು ಹಾಗೂ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ನಾನು ಜಲಸಂಪನ್ಮೂಲ ಸಚಿವನಾಗಿ 5 ವರ್ಷಗಳ ಕಾಲ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಕೌಟುಂಬಿಕ […]

ಗುರುವಾರ ಯಕ್ಕುಂಡಿಯಲ್ಲಿ ಕೆರೆಗೆ ಬಾಗೀನ, ನಾನಾ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ- ಶಾಸಕ ಎಂ. ಬಿ. ಪಾಟೀಲ ಭಾಗಿ

ವಿಜಯಪುರ: ಕೃಷ್ಣಾ ನದಿ ನೀರಿನಿಂದ ಭರ್ತಿಯಾಗಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಯಕ್ಕುಂಡಿ ಕೆರೆಗೆ ಬಾಗೀನ ಅರ್ಪಣೆ ಕಾರ್ಯಕ್ರಮ ಗುರುವಾರ ನಡೆಯಲಿದ್ದು, ಶಾಸಕ ಎಂ. ಬಿ. ಪಾಟೀಲ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ, ಬಬಲೇಶ್ವರ ವಿಧಾನ ಸಭೆhu ಕ್ಷೇತ್ರದ ಯಕ್ಕುಂಡಿ ಗ್ರಾಮದ ಕೊಪ್ಪದ ಅವರ ತೋಟದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಚನ್ನಪ್ಪ ಸಿದಗೊಂಡಪ್ಪ ಕೊಪ್ಪದ ಸಹೋದರರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಲಿದ್ದಾರೆ. ಬೆ 11ಕ್ಕೆ ಈ ಕಾರ್ಯಕ್ರಮ ನಡೆಯಲಿದೆ. ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದ ಕೆರೆಯು ಕೃಷ್ಣಾ ನದಿಯಿಂದ […]

ವಿಜಯಪುರದಲ್ಲಿ ಗಣೇಶೋತ್ಸವಕ್ಕೆ ಐದು ದಿನ ಮಾತ್ರ ಅವಕಾಶ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ಸರಕಾರದ ಆದೇಶದಂತೆ ವಿಜಯಪುರ ಜಿಲ್ಲೆಯಲ್ಲಿ ಗಣೇಶ ಹಬ್ಬವನ್ನು ಸರಳ, ಶಾಂತಿಯುತ ಮತ್ತು ಭಕ್ತಿಪೂರ್ವಕವಾಗಿ ಆಚರಿಸುವ ನಿಟ್ಟಿನಲ್ಲಿ ಗಣೇಶೋತ್ಸವವನ್ನು ಐದು ದಿನಗಳಿಗೆ ಮಾತ್ರ ಸೀಮಿತ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಶಾಂತತೆ ಹಾಗೂ ಕೋವಿಡ್ ನಿಯಮಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದರಂತೆ ಸಾರ್ವಜನಿಕ ಸ್ಥಳಗಳಲ್ಲಿ […]