ವಿಜಯಪುರದಲ್ಲಿ ಶಾಸಕ ಯತ್ನಾಳ ಅವರಿಂದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ವಿಜಯಪುರ: ಶಾಸಕ ಬಸವಗೌಡ ಪಾಟೀಲ ಯತ್ನಾಳ ವಿಜಯಪುರ ನಗರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ವಾರ್ಡ್ ಸಂಖ್ಯೆ 21ರಲ್ಲಿ ಬರುವ ಸಿದ್ಧೇಶ್ವರ ಬಡಾವಣೆ, ಗಡಗಿ ಲೇಔಟ್ ದಲ್ಲಿ ಇರುವ ಶ್ರೀ ಜೈ ಹನುಮಾನ ದೇವಸ್ಥಾನ ಬಳಿ ಕಂಪೌಂಡ್ ಗೋಡೆ ಗಾರ್ಡನ್ ಮೇಸ್ ಅಳವಡಿಸುವ ಕಾಮಗಾರಿಗೆ ಯತ್ನಾಳ ಭೂಮಿ ಪೂಜೆ ನೆರವೇರಿಸಿದರು. ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ರೂ. 19.25 ಲಕ್ಷ ವೆಚ್ಚದ ಕಾಮಗಾರಿ ಇದಾಗಿದೆ. ಈ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ […]

ಮೂರು ತಲೆಮಾರುಗಳಿಂದ ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಮೂಲಕ ಮೂಲಕ ಗಮನ ಸೆಳೆಯುತ್ತಿರುವ ಬಸವ ನಾಡಿನ ಪತ್ತಾರ ಕುಟುಂಬ

ವಿಜಯಪುರ: ಈ ಕುಟುಂಬ ಕಳೆದ ಮೂರು ತಲೆಮಾರುಗಳಿಂದ ಪರಸರಕ್ಕೆ ಪೂರಕವಾಗಿರುವ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆದಿದೆ. ಮಣ್ಣಿನ ಗಣಪ ತಯಾರಿಸಲು ಪಣತೊಟ್ಟು ಅದನ್ನೇ ನಡೆಸಿಕೊಂಡು ಬಂದಿರುವ ಕುಟುಂಬ ಎಲ್ಲರೂ ಪರಿಸರ ಸ್ನೇಹಿ ಗಣೇಶೋತ್ಸವ ನಡೆಸಲಿ ಎಂಬ ಸಂಕಲ್ಪ ಮಾಡಿದೆ. ಈ ಕುಟುಂಬದ ಮಗ ಮತ್ತು ಸೊಸೆ ವಿದೇಶದಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿದ್ದರೂ ಕೂಡ ತಂದೆಯ ಸಂಕಲ್ಪಕ್ಕೆ ಪೂರಕವಾಗಿ ನಿಂತಿರುವುದು ಗಮನಾರ್ಹವಾಗಿದೆ. ಗುಮ್ಮಟ ನಗರಿ ವಿಜಯಪುರದ ವಾಟರ್ ಟ್ಯಾಂಕ್ ಬಳಿಯ ಜೋರಾಪುರ ಪೇಟೆಯಲ್ಲಿ ನಿವೃತ್ತ […]

ಬಸವ ನಾಡಿನಲ್ಲಿ ನಡೆಯಿತು ಕೃಷ್ಣ-ರಾಧೆಯರ ಫ್ಯಾನ್ಸಿ ಡ್ರೆಸ್ ಸ್ಪರ್ಧೆ- ಗಮನ ಸೆಳೆದ ಪುಟಾಣಿಗಳು

ವಿಜಯಪುರ: ಇಂದು ಗೋಕುಲಾಷ್ಠಮಿ. ಕೃಷ್ಣಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರದಲ್ಲಿ ಮಕ್ಕಳಿಗಾಗಿ ಕೃಷ್ಣ-ರಾಧೆಯರ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಆಯೋಜಿಸಲಾಗಿತ್ತು. ಲಯನ್ಸ್ ಕ್ಲಬ್ ಆಫ್ ಬಿಜಾಪುರ ವತಿಯಿಂದ ವಿಜಯಪುರ ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಈ ಸ್ಪರ್ಧೆಯಲ್ಲಿ ಪುಟಾಣಿ ಮಕ್ಕಳು ಕೃಷ್ಣ-ರಾಧೆಯರ ವೇಷ ಧರಿಸಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು. 3 ರಿಂದ 13 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರು ಈ ಮುಕ್ತ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡರು. ವಿಜಯಪುರ ನಗರದ ಶ್ರೀಕೃಷ್ಣನ ಭಕ್ತರು ಶ್ರದ್ಧಾಭಕ್ತಿಯಿಂದ ಮತ್ತು […]

ಸಮಾಜ ಸೇವಕ ಸಂಗಮೇಶ ಬಬಲೇಶ್ವರ ಅವರಿಂದ ಜ್ಞಾನ ಜೋಳಿಗೆ ಅಭಿಯಾನ- ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಂದ ಚಾಲನೆ

ಬಾಗಲಕೋಟೆ: ಸಮಾಜ ಸೇವಕ ಮತ್ತು ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ ಜ್ಞಾನ ಜೋಳಿಗೆ ಅಭಿಯಾನ ಆರಂಭಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಜಯಪುರದ ಜ್ಞಾನಯೋಗಾಶ್ರಮದ ನಡೆದಾಡುವ ದೇವರು ಎಂದೇ ಹೆಸರಾಗಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿ ಗ್ರಂಥ ದಾಸೋಹ ಮಾಡುವ ಮೂಲಕ ಬಾಗಲಕೋಟೆ ಜಿಲ್ಲೆಯ ರಬಕವಿಯಲ್ಲಿ ಚಾಲನೆ ನೀಡಿದರು. ಈ ಕಾರ್ಯಕ್ಕಾಗಿ ಸಂಗಮೇಶ ಬಬಲೇಶ್ವರ ಅವರು ಜ್ಞಾನ ಜೋಳಿಗೆ ಫೌಂಡೇಶನ್ ಆರಂಭಿಸಿದ್ದು, ವಿನೂತನ ಮತ್ತು ವಿಭಿನ್ನ ಅಭಿಯಾನ ಇದಾಗಿದೆ. ಈ ಸಂದರ್ಭದಲ್ಲಿ ಈ ವಿಶಿಷ್ಟ ಯೋಜನೆ ಕುರಿತು ಜ್ಞಾನ ಜೋಳಿಗೆ ಫೌಂಡೇಶನ್ನಿನ […]

ಆ. 30ರ ನಂತರ ರಸ್ತೆಗಳ ಮೇಲೆ ಬೀಡಾಡಿ ದನಗಳು ಕಂಡರೆ ಮಹಾನಗರ ಪಾಲಿಕೆ ವಶಕ್ಕೆ ಪಡೆಯಲಾಗುವುದು- ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಖಡಕ್ ಎಚ್ಚರಿಕೆ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಅದರಲ್ಲಿಯೂ ವಿಜಯಪುರ ನಗರದಲ್ಲಿ ಹೆಚ್ಚಾಗಿರುವ ಬಿಡಾಡಿ ದನಗಳ ನಿಯಂತ್ರಣಕ್ಕಾಗಿ ಕೇವಲ ಎಚ್ಚರಿಕೆ ನೀಡದೇ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಹಾನಗರ ಪಾಲಿಕೆ ಆಯುಕ್ತರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾಣಿ ದಯಾ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಮತ್ತು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು […]

ಸಾಮಾನ್ಯ ಪ್ರವೇಶ ಪರೀಕ್ಷೆ ವ್ಯವಸ್ಥಿತವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಸೂಚನೆ

ವಿಜಯಪುರ: ಆ. 28 ರಿಂದ 30ರ ವರೆಗೆ ವಿಜಯಪುರ ಜಿಲ್ಲೆಯ 20 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಕೋವಿಡ್ ಹಿನ್ನೆಲೆ ಎಸ್‍ಒಪಿ ನಿಯಮಾವಳಿ ಅನ್ವಯ ವ್ಯವಸ್ಥಿತ ಮತ್ತು ನಕಲು ಮುಕ್ತವಾಗಿ ನಡೆಸುವಂತೆ ವಿಜಯಪುರ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆ. 28 ರಂದು ಶನಿವಾರ ಜೀವಶಾಸ್ತ್ರ, ಗಣಿತ, ಅ. […]

ಮೊಹರಂ ಅಂಗವಾಗಿ ಸಾಂಗವಾಗಿ ಸಾಗಿದ ಮೂರು ದಿನಗಳ ಜಾರತ್ ಕಾರ್ಯಕ್ರಮ- ಗಮನ ಸೆಳೆದ ಹುಲಿವೇಷಿಗಳ ನಾಟ್ಯ

ವಿಜಯಪುರ: ಪವಿತ್ರ ಮೊಹರಂ ಹಬ್ಬದ ಅಂಗವಾಗಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವಾಪೂರ ಗ್ರಾಮದಲ್ಲಿ ಮೂರು ದಿನದ ಜಾರತ್ ಕಾರ್ಯಕ್ರಮದ ಅಂಗವಾಗಿ ಹೆಜ್ಜೆ ಮೇಳ ನಡೆಯಿತು. ಗ್ರಾಮೀಣ ಪ್ರದೇಶಗಳಲ್ಲಿ ಮೋಹರಂ ಹಬ್ಬ ಬಂತೆಂದರೆ ಸಾಕು ವಿಶಿಷ್ಟವಾದ ಆಚರಣೆ ನಡೆಸುವ ಮೂಲಕ ಗ್ರಾಮಸ್ಥರು ಗಮನ ಸೆಳೆಯುತ್ತಾರೆ. ಅನೇಕತೆಯಲ್ಲಿ ಏಕತೆ ಎಂಬಂತೆ ಈ ಗ್ರಾಮೀಣ ಪ್ರದೇಶಗಳಲ್ಲಿ ಹಿಂದು ಮತ್ತು ಮುಸ್ಲಿಂ ಭಾುವೈಕ್ಯದ ಸಂಕೇತವಾಗಿ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ. ಈ ಮೋಹರಂ ಹಬ್ಬವ ಆಗಮನಕ್ಕೂ ಒಂದು ತಿಂಗಳು ಮುಂಚಿತವಾಗಿ ಹೆಜ್ಜೆ ಮೇಳಗಳಲ್ಲಿ […]

ಸಾರ್ವಜನಿಕ ಗಣೇಶೋತ್ಸವಕ್ಕೆ ವೈಯಕ್ತಿಕ ದೇಣಿಗೆ ಘೋಷಣೆ ಮಾಡಿದ ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ನಗರದಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಟಾಪಿಸುವವರಿಗೆ ವೈಯುಕ್ತಿಕ ಹಣ ನೀಡುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಘೋಷಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಯತ್ಬಾಳ, ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಟಾಪಿಸಿದರೆ ರೂ. 5000 ಬೇರೆ ಬೇರೆ ಗಣೇಶ ಪೂರ್ತಿ ಪ್ರತಿಷ್ಟಾಪನೆ ಮಾಡಿದರೆ ರೂ. 2500 ವೈಯಕ್ತಿಕ ದೇಣಿಗೆ ನೀಡುವುದಾಗಿ ಯತ್ನಾಳ ತಮ್ಮ ಆಪ್ತ ಸಹಾಯಕರ ಮೂಲಕ ಪ್ರಕಟನೆ ಹೊರಡಿಸಿದ್ದಾರೆ. ಇದಕ್ಕಾಗಿಯೇ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯಲ್ಲಿ ತೆರೆಯಲಾದ ಕೌಂಟರ್ ನಲ್ಲಿ ಮನವಿ […]

ಬಸವ ನಾಡಿನಲ್ಲಿ ಸಹೋದರ-ಸಹೋದರಿಯರ ಸಂಬಂಧ ಬೆಸೆಯುವ ರಕ್ಷಾ ಬಂಧನ ಆಚರಣೆ

ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ನೂಲ ಹುಣ್ಣಿಮೆ ಅಂದರೆ ರಕ್ಷಾ ಬಂಧನ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಬಾಂಧವ್ಯವನ್ನು ಬೆಸೆಯುವ ಹಬ್ಬ ಇದಾಗಿದ್ದು, ಎಲ್ಲ ಮನೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಬೆಳಿಗ್ಗೆ ಎದ್ದು ಹೊಸ ಬಟ್ಟೆ ತೊಟ್ಟ ಬಾಲಕಿಯರು, ಯುವತಿಯರು ಮತ್ತು ವನಿತೆಯರು ತಮ್ಮ ಅಣ್ಣಂದಿರು ಮತ್ತು ತಮ್ಮಂದಿರ ಕೈಗಳಿಗೆ ರಾಖಿಯನ್ನು ಕಟ್ಟಿ ಸಂಭ್ರಮಿಸಿದರು. ಬಾಲಕರು, ಯುವಕರು, ಪುರುಷರೂ ಕೂಡ ಹೊಸ ಬಟ್ಟೆ ಧರಿಸಿದ್ದರು. ಅಲ್ಲದೇ, ತಮ್ಮ ತಂಗಿ ಮತ್ತು ಅಕ್ಕಂದಿರಿಂದ […]

ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಳ, ಸಂತ್ರಸ್ತರ ಪುನರ್ವಸತಿ, ಪುನರ್ ನಿರ್ನಾಣಕ್ಕೆ ಸರಕಾರ ಮುಂದಾಗಲಿ- ಎಂ. ಬಿ. ಪಾಟೀಲ

ವಿಜಯಪುರ: ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಳ ಮತ್ತು ಇದರಿಂದ ಸಂತ್ರಸ್ತರಾಗುವ ಜನರಿಗೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಸೌಲಭ್ಯಗಳನ್ನು ಒದಗಿಸಲು ಸರಕಾರ ಕೂಡಲೇ ಮುಂದಾಗಬೇಕು ಎಂದು ಮಾಜಿ ಸಚಿವ, ಶಾಸಕ ಎಂ. ಬಿ. ಪಾಟೀಲ ಆಗ್ರಹಿಸಿದ್ದಾರೆ‌. ವಿಜಯಪುರ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ತುಂಬಿದ ಕೆರೆಗೆ ಬಾಗೀನ ಅರ್ಪಿಸಿ, ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು. 2013ರಲ್ಲಿ ತಾವು ಸಚಿವನಾದಾಗ ಗೆಜೆಟ್ ಅಧಿಸೂಚನೆಗೆ ಕಾಯದೇ ಮುಂಚಿತವಾಗಿಯೇ ನೀರಾವರಿ ಯೋಜನೆಗಳ ಹೆಡ್‍ವರ್ಕ್ಸ್ ಕಾಲುವೆ ನೆಟವರ್ಕ್, ವಿದ್ಯುತ್ ಸ್ಥಾವರ ಸೇರಿದಂತೆ […]