ಗುರುಗಳಿಗೆ ಕೃತಜ್ಞತೆ ಅರ್ಪಿಸುವ ದಿನವೇ ಗುರು ಪೂರ್ಣಿಮೆ

ನೀಲಕಂಠ ಬಡಚಿ ವಿಜಯಪುರ: ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರಾದಾಯಿಕವಾಗಿ ಗುರುಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನ ಗುರುವಿನ ಅನುಗ್ರಹ, ಉಪದೇಶ ಪಡೆದರೆ ಮನುಷ್ಯನಲ್ಲಿರುವ ಸಂದೇಹಗಳು ಬಗೆ ಹರಿದು ಉತ್ತಮವಾದ ಸಾತ್ವಿಕ ಜೀವನ ನಡೆಸಲು ಸಾಧ್ಯ ಎಂಬುದು ಬಲವಾದ ನಂಬಿಕೆಯಾಗಿದೆ. ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತರನ್ನು ಹೊರತರುವ ಮತ್ತು ಅವರಿಂದ ಅವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಹಾಗೂ ಅತ್ಯಂತ ಕಠಿಣ ಸಮಯದಲ್ಲಿ ಅವನಿಗೆ ನಿರಪೇಕ್ಷ ಪ್ರೇಮಗಳಿಂದ ಆಧಾರ ನೀಡಿ ಸಂಕಟಗಳಿಂದ ಮುಕ್ತ ಮಾಡುವವರೇ ಗುರುಗಳು. ಗುರು ಎಂದರೆ […]

ಸಿಎಂ ಬದಲಾವಣೆ ವಿರುದ್ಧ ಬಸವ ನಾಡಿನಲ್ಲಿ 20 ಸ್ವಾಮೀಜಿಗಳಿಂದ ಜಂಟಿ ಸುದ್ದಿಗೋಷ್ಠಿ- ಬೆಂಗಳೂರು, ದೆಹಲಿಯಲ್ಲಿ ಸಭೆಯ ಎಚ್ಚರಿಕೆ

ವಿಜಯಪುರ: ವಿಜಯಪುರದಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ವೀರಶೈವ ಲಿಂಗಾಯಿತ ಮಠಗಳ 20 ಜನ ಸ್ವಾಮೀಜಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಸಿಎಂ ಬಿ. ಎಸ್. ಯಡಿಯೂರಪ್ಪ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಯಡಿಯೂರಪ್ಪ ಅವರನ್ನು ಎರಡು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ‌ಒಂದು ವೇಳೆ ಬದಲಾವಣೆ ಮಾಡಿದರೆ ಉತ್ತರ ಕರ್ನಾಟಕದವರಿಗೆ ಆ ಸ್ಥಾನ ನೀಡಬೇಕು ಎಂದು ಮಠಾಧೀಶರು ಆಗ್ರಹಿಸಿದ್ದಾರೆ. ಬುರಣಾಪುರ ಸಿದ್ಧಾರೂಢ ಮಠದ ಯೋಗೇಶ್ವರಿ ಮಾತಾಜಿ ಮಾತನಾಡಿ, ಯಡಿಯೂರಪ್ಪ ಧೀಮಂತ […]

ಯತ್ನಾಳ ವಿರುದ್ಧ ಭೀಮಾಶಂಕರ ಹದನೂರ ವಾಗ್ದಾಳಿ- ಬುದ್ಧಿ ಭ್ರಮಣೆಯಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪ

ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬುದ್ದಿ ಭ್ರಮಣೆಯಾಗಿದೆ. ಹೀಗಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕಳೆದ ಐದಾರು ತಿಂಗಳುಗಳಿಂದ ಯತ್ನಾಳ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ತಪ್ಪಿದ್ದಕ್ಕಾಗಿ ಈಗ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಿದ್ದಾರೆ. ಈ ಹಿಂದೆ ಕೂಡಲ ಸಂಗಮ […]

ಬಸವ ನಾಡಿನ ಗಾನಯೋಗಿ ಸಂಘದ ಯುವಕರ ಕಾಯಕ ಇತರರಿಗೂ ಪ್ರೇರಕ

ವಿಜಯಪುರ: ಮನಸ್ಸಿದ್ದರೆ ಮಾರ್ಗ. ಯುವಕರು ಕೈ ಜೋಡಿಸಿದರೆ ಎಷ್ಟೋಂದು ಸುಂದರವಾಗಿರುತ್ತೆ ಎಂಬುದಕ್ಕೆ ಪೂರಕ ಈ ಪ್ರಸಂಗ. ಅದು ಯಾರೂ ಊಹಿಸದ ಕಾರ್ಯ. ಅದರ ಅಕ್ಕಪಕ್ಕದಲ್ಲಿಯೇ ವಾಸಿಸುತ್ತರೂ ಜನ ಮಾತ್ರ ಕ್ಯಾರೆ ಎನ್ನುತ್ತಿರಲ್ಲಿ. ಕಸದಿಂದ ರಸ ಎಂಬ ಮಾತಿನಂತೆ ಗಲೀಜಾಗಿದ್ದ ಈ ಪ್ರದೇಶ ಈಗ ಸ್ವಚ್ಛ ಸುಂದರ ಪರಿಸರಕ್ಕೆ ಮಾದರಿಯಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಬಸವ ನಾಡು ವಿಜಯಪುರ ನಗರದ ಗೌರಿ ಗಣೇಶ ಬಡಾವಣೆಯಲ್ಲೊಂದು ಪ್ರಾಚೀನ ಭಾವಿಯಿತ್ತು. ಆದರೆ, ಸುತ್ತಮುತ್ತಲಿನ ಜನರಿಗೆ ಅದರ ಬಗ್ಗೆ ಕಾಳಜಿಯೇ ಇರಲಿಲ್ಲ. ನಾನಾ ಇಲಾಖೆಗಳು […]

ಹಿಟ್ನಳ್ಳಿಯಲ್ಲಿ ಅತ್ಯಧಿಕ 71 ಮಿ. ಮೀ. ಮಳೆ- ಬಸವ ನಾಡಿನಲ್ಲಿ ಉಳಿದೆಡೆ ಸುರಿದ ಮಳೆ ಎಷ್ಟು ಗೊತ್ತಾ?

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ರವಿವಾರವೂ ಉತ್ತಮ ಮಳೆ ಸುರಿದಿದೆ‌. ಹಿಟ್ನಳ್ಳಿಯಲ್ಲಿ ಅತ್ಯಧಿಕ 71 ಮಿ. ಮೀ. ಮಳೆ ದಾಖಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ರವಿವಾರದಿಂದ ಇಂದಿನವರೆಗೆ ಕಳೆದ 24 ಗಂಟೆಯವರೆಗೆ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ತಾಲೂಕು ಮತ್ತು ಪ್ರಮುಖ ಸ್ಥಳಗಳಲ್ಲಿ ದಾಖಲಾದ ಮಳೆಯ ವಿವರ ಇಂತಿದೆ ವಿಜಯಪುರ ತಾಲೂಕು ವಿಜಯಪುರ ನಗರ- 11.40 ಮಿ. ಮೀ., ನಾಗಠಾಣ- 9.10 ಮಿ. ಮೀ., ಭೂತನಾಳ- 21.80 ಮಿ. ಮೀ., ಹಿಟ್ನಳ್ಳಿ- 71 ಮಿ. ಮೀ. ಬಬಲೇಶ್ವರ ತಾಲೂಕು ಮಮದಾಪುರ- 31.60 […]

ಕಳೆದ 24 ಗಂಟೆಗಳಲ್ಲಿ ಬಸವ ನಾಡಿನಲ್ಲಿ ಸುರಿದ ಮಳೆ ಎಷ್ಟು? ಹವಾಮಾನ ಮುನ್ಸೂಚನೆ ಏನಿದೆ? ಇಲ್ಲಿದೆ ಮಾಹಿತಿ

ವಿಜಯಪುರ: ಶನಿವಾರದಿಂದ ಇಂದಿನವರೆಗೆ ಕಳೆದ 24 ಗಂಟೆಯವರೆಗೆ ವಿಜಯಪುರ ಜಿಲ್ಲೆಯ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಬಸವನ ಬಾಗೇವಾಡಿ ತಾಲೂಕಿನಲ್ಲಿ ಅತ್ಯಧಿಕ 27.,73 ಮಿ. ಮಿ. ಮಳೆಯಾಗಿದ್ದರೆ, ದೇವರ ಹಿಪ್ಪರಗಿ ತಾಲೂಕಿನಲ್ಲಿ ಅತೀ ಕಡಿಮೆ ಅಂದರೆ 3.33 ಮಿ. ಮಿ. ಮಳೆ ದಾಖಲಾಗಿದೆ. ಚಡಚಣ ಪಟ್ಟಣದಲ್ಲಿ ಅತ್ಯಧಿಕ 61 ಮಿ. ಮಿ. ಮಳೆ ದಾಖಲಾಗಿದೆ. ತಾಲೂಕು ಮತ್ತು ಪ್ರಮುಖ ಸ್ಥಳಗಳಲ್ಲಿ ದಾಖಲಾದ ಮಳೆಯ ವಿವರ ಇಂತಿದೆ ವಿಜಯಪುರ ತಾಲೂಕು ವಿಜಯಪುರ ನಗರ- 27.40 ಮಿ. ಮೀ., ಭೂತನಾಳ- 31.40 […]

ಬಸವ ನಾಡಿನಲ್ಲಿ ಕೊರೊನಾ ಆತಂಕದ ಮಧ್ಯೆಯೂ ಎಸ್ ಎಸ್ ಎಲ್ ಪರೀಕ್ಷೆಗೆ ಜಿಲ್ಲಾಡಳಿತ ಸನ್ನದ್ಧ

ವಿಜಯಪುರ: ಕೊರೊನಾ ಆತಂಕದ ನಡುವೆಯೇ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಗಳಿಗೆ ಬಸವ ನಾಡು ಸಜ್ಜಾಗಿದೆ. ಈ ಬಾರಿಯೂ ಪರೀಕ್ಷೆಗಳು ಸುಸೂತ್ರವಾಗಿ ನಡೆಸಲು ವಿಜಯಪುರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪರೀಕ್ಷಾ ಕೇಂದ್ರಗಳ ಆಡಳಿತ ಮಂಡಳಿಗಳೂ ಕೂಡ ತಂತಮ್ಮ ಶಾಲೆಗಳಲ್ಲಿ ಉತ್ತಮ ವ್ಯವಸ್ಥೆಯನ್ನು ಮಾಡುವ ಮೂಲಕ ಜಿಲ್ಲಾಡಳಿತಕ್ಕೆ ಕೈ ಜೋಡಿಸಿವೆ. ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಸೋಮವಾರ ಜು. 19 ರಿಂದ ಜು. 22ರ ವರೆಗೆ ಪರೀಕ್ಷೆಗಳು ನಡೆಯಲಿದ್ದು, ಸರಕಾರದ ಕೊರೊನಾ ಮಾರ್ಗಸೂಚಿಯಂತೆ […]

ಬಸವನ ಬಾಗೇವಾಡಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಶೋಕ‌ ಹಾರಿವಾಳ ಅವಿರೋಧ ಆಯ್ಕೆ

ವಿಜಯಪುರ: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಶೋಕ ಹಾರಿವಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಸವನ ಬಾಗೇವಾಡಿ ಪುರಸಭೆ ಕಾಂಗ್ರೆಸ್ ಸದಸ್ಯೆಅಗಿರುವ ಅಶೋಕ ಹಾರಿವಾಳ ಮೊದಲ ಬಾರಿ ಪುರಸಭೆಗೆ ಆಯ್ಕೆಯಾಗಿದ್ದಾರೆ. ತಾವು ಅವಿರೋಧವಾಗಿ ಆಯ್ಕೆಯಾಗಲು ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಅವರೇ ಕಾರಣ. ಶಾಸಕರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅಶೋಕ ಹಾರಿವಾಳ ತಿಳಿಸಿದ್ದಾರೆ. ಅಶೋಕ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿಯೂ ಕನ್ನಡ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆ ಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ- ವಿಜಯಪುರ ಕೆ ಕೆ ಆರ್ ಟಿ ಸಿ ಡಿಸಿ ನಾರಾಯಣಪ್ಪ ಕುರುಬರ

ವಿಜಯಪುರ: ಈ ಬಾರಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಹಿರೆಕುರುಬರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರಕಾರದ ಆದೇಶದಂತೆ ವಿಜಯಪುರ ಜಿಲ್ಲೆಯಲ್ಲಿ ಜು. 19 ರಿಂದ 22ರ ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುವ ಅವಧಿಯಲ್ಲಿ […]

ವಿಜಯಪುರ ಅಂಬೇಡ್ಕರ ಕ್ರೀಡಾಂಗಣದ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ ಒಳಾಂಗಣ ಕ್ರೀಡಾಂಗಣ ಕಾಮಗಾರಿಯನ್ನು ಕೂಡಲೇ ಮುಗಿಸಿ ಕ್ರೀಡಾಪಟುಗಳ ದೈನಂದಿನ ತರಬೇತಿಗಾಗಿ ಲೋಕಾರ್ಪಣೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಸಮಿತಿಯಿಂದ ಕೈಗೊಳ್ಳಲಾದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು. ಕ್ರೀಡಾಂಗಣದ ಕಾಮಗಾರಿಗಳನ್ನು ಒಳ್ಳೆಯ ಸುಸಜ್ಜಿತ ರೀತಿಯಲ್ಲಿ ಪೂರ್ಣಗೊಳಿಸಬೇಕು. ಬಾಕಿ ಕಾಮಗಾರಿಗಳನ್ನು ಈಗಾಗಲೇ ಕ್ರೀಡಾ ಇಲಾಖೆಯಲ್ಲಿರುವ ಮೊತ್ತದಲ್ಲಿ ಕಾಮಗಾರಿಗಳನ್ನು […]