ಯತ್ನಾಳ ಜೊತೆ ಸದಾ ಕಾಲ ನಾನಿರುತ್ತೇನೆ ಎಂದ ಸಚಿವ ಸಿ. ಪಿ. ಯೋಗೇಶ್ವರ

ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಜೊತೆಗೆ ನಾನು‌ ಸದಾ ಕಾಲ‌ ಇರುತ್ತೇನೆ ಎಂದು ಸೈನಿಕ ಎಂದೇ ಖ್ಯಾತಿಯಾಗಿರುವ ಸಚಿವ ಸಿ. ಪಿ. ಯೋಗೇಶ್ವರ ಭರವಸೆ ನೀಡಿದ್ದಾರೆ. ವಿಜಯಪುರದಲ್ಲಿ ತ್ರಿ ಸ್ಟಾರ್ ಹೋಟೇಲ್ ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಯತ್ನಾಳ ಅವರ ದ್ವನಿಗೆ ದ್ವನಿಯಾಗಿ ನಾನು ಸದಾ ಕಾಲ ನಿಲ್ಲುವೆ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ರೆಬೆಲ್ ನಾಯಕ ಎಂದೇ ಹೆಸರಾಗಿರುವ ಶಾಸಕ ಯತ್ನಾಳ ಬೆಂಬಲಕ್ಕೆ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ […]

ವಿಜಯಪುರ ಜಿಲ್ಲೆಯಲ್ಲಿ ಜೂ. 30, ಜು. 1 ರಂದು ಎರಡು ದಿನ ಕೆಲವು ಗುಂಪುಗಳಿಗೆ ಕೊರೊನಾ ಲಸಿಕೆ ಹಾಕಲ್ಲ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಜೂ. 30 ಮತ್ತು ಜು. 1 ರಂದು ಸಾರ್ವಜನಿಕರಿಗೆ ಕೊರೊನಾ ಲಸಿಕೆ ಹಾಕಲಾಗುವುದಿಲ್ಲ. ಜನತೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ. ಸರಕಾರದ ನಿರ್ದೇಶನದಂತೆ ಮುಂದಿನ ತಿಂಗಳಿನಿಂದ ಕಾಲೇಜುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅದಕ್ಕೂ ಮುಂಚಿತವಾಗಿ ಪದವಿ ಕಾಲೇಜುಗಳು, ಡಿಪ್ಲೋಮಾ ಕಾಲೇಜುಗಳು, ಐಟಿಐ ಕಾಲೇಜುಗಳಲ್ಲಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಮತ್ತು ಭೋದಕ ಮತ್ತು ಭೋದಕರ ಹೊರತಾದ ಸಿಬ್ಬಂದಿಗೆ ಕೊರೊನಾ ಲಸಿಕೆ ಹಾಕಲು ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜೂ. 28 […]

ಮಹಾರಾಷ್ಟ್ರ ಮತ್ತೀತರ ನೆರೆಯ ರಾಜ್ಯಗಳಿಗೆ ಸಾರ್ವಜನಿಕರು ತೆರಳಲು, ಮರಳಲು ಸರಕಾರ ವಿಧಿಸಿರುವ ಷರತ್ತುಗಳೇನು ಗೊತ್ತಾ?

ವಿಜಯಪುರ: ಸಂಭವನೀಯ ಕೊರೊನಾ 3ನೇ ಅಲೆಯನ್ನು ತಡೆಗಟ್ಟಲು ರಾಜ್ಯ ಸರಕಾರ ಬಿಗೀ ನಿಲುವು ತೆಗೆದುಕೊಂಡಿದ್ದು, ನೆರೆಯ ರಾಜ್ಯಗಳಿಗೆ ತೆರಳಲು ಮತ್ತು ಅಲ್ಲಿಂದ ಬರುವವರಿಗಾಗಿ ಹಲವಾರು ಷರತ್ತುಗಳನ್ನು ವಿಧಿಸಿದೆ. ಈ ಕುರಿತು ಮಾಹಿತಿ ನೀಡಿರುವ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ವಿಜಯಪುರ ಜಿಲ್ಲೆಯ ಮಹಾರಾಷ್ಟ್ರ್ದ ಗಡಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಎಲ್ಲ ಅರ್ಹ ಜನರಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಗಡಿ ಭಾಗಗಳಾದ ಚಡಚಣ ತಾಲೂಕಿನ ದೂಳಖೇಡ, ಶಿರಾಡೋಣ ಮತ್ತು ಇತರೆ ಚೆಕ್ […]

ಕಾಂಗ್ರೆಸ್ಸಿನಲ್ಲಿ ಹೈಕಮಾಂಡ ನಿರ್ಧಾರವೇ ಅಂತಿಮ- ಎಸ್. ಆರ್. ಪಾಟೀಲ

ವಿಜಯಪುರ: ಸಿಎಂ ಅಭ್ಯರ್ಥಿಯ ಬಗ್ಗೆ ಯಾರೂ ಮಾತನಾಡದಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸ್ಪಷ್ಟ ಸೂಚನೆ ನೀಡಿದ್ದಾರೆ ವಿಧಾನ ಪರಿಷತ್ ಪ್ರತಿಪಕ್ಷದ ‌ನಾಯಕ ಎಸ್. ಆರ್. ಪಾಟೀಲ ತಿಳಿಸಿದ್ದಾರೆ‌ ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಳಿಕ ಶಾಸಕಾಂಗ ಸಭೆ ನಡೆಸಿ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಯಾರೋ ಹೇಳಿದರು ಎಂದು ಮುಖ್ಯಮಂತ್ರಿ ಮಾಡಲು ಆಗುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿನಲ್ಲಿ ಎದ್ದಿರುವ ಮುಂದಿನ ಸಿಎಂ ವಿಚಾರದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕಾಂಗ ಸಭೆಯಲ್ಲಿ ಹೈಕಮಾಂಡ್ ಪ್ರತಿನಿಧಿ ಇರುತ್ತಾರೆ. […]

ಗುಮ್ಮಟ ನಗರಿಯಲ್ಲಿ ರೂ. 15 ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾದಕ ದ್ರವ್ಯ ಸುಟ್ಟು ಹಾಕಿದ ಪೊಲೀಸರು

ವಿಜಯಪುರ: ವಿಜಯಪುರ ಜಿಲ್ಲಾ ಪೊಲೀಸರು ಸುಮಾರು ರೂ. 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾದಕ ದ್ರವ್ಯ(ಡ್ರಗ್ಸ್) ನಾಶಪಡಿಸಿದ್ದಾರೆ. ಅಂತಾರಾಷ್ಟ್ರೀಯ ಡ್ರಗ್ಸ್ ವಿರೋಧಿ ಮತ್ತು ಅಕ್ರಮ ಕಳ್ಳಸಾಗಣೆ ದಿನದ ಅಂಗವಾಗಿ ನ್ಯಾಯಾಲಯದ ಆದೇಶದ ಈ ಡ್ರಗ್ಸ್ ನಾಶ ಪಡಿಸಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ತಿಳಿಸಿದ್ದಾರೆ. ಎನ್ ಡಿ ಪಿ ಎಸ್ ಕಾಯಿದೆಯಡಿ ವಿಜಯಪುರ ಜಿಲ್ಲೆಯಲ್ಲಿ ಕಳೆದ ವರ್ಷ 40 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ರೂ. 14.08 ಲಕ್ಷಕ್ಕೂ ಹೆಚ್ಚು ಮೌಲ್ಯದ 302.871 ಕೆಜಿ‌ […]

ಕಾರಹುಣ್ಣಿಮೆ ಅಂಗವಾಗಿ ಎತ್ತುಗಳನ್ನು ಸಿಂಗರಿಸಿ ಸಂಭ್ರಮಿಸಿದ ಅನ್ನದಾತರು

ವಿಜಯಪುರ: ವಿಜಯಪುರ ಜಿಲ್ಲಾದ್ಯಂತ ಅನಲಾಕ್ ಜಾರಿಯಾಗುತ್ತಿದ್ದಂತೆ ಒಂದೊಂದೆ ಚಟುವಟಿಕೆಗಳು ಶುರುವಾಗಿವೆ. ವಿಜಯಪುರ ಜಿಲ್ಲೆಯ ಹಡಗಲಿಯಲ್ಲಿ ಕಾರ ಹುಣ್ಣಿಮೆ ಅಂಗವಾಗಿ ರೈತರು ಎತ್ತಿನ ಗಾಡಿ ಮತ್ತು ಎತ್ತುಗಳನ್ನು ಓಡಿಸಿ ಸಂಭ್ರಮಿಸಿದ್ದಾರೆ. ಕಾರ ಹುಣ್ಣಿಮೆ ಅನ್ನದಾತರ ಪಾಲಿಗೆ ತಮ್ಮ ಕುಟುಂಬ ಸದಸ್ಯರಂತಿರುವ ಎತ್ತುಗಳಿಗೆ ಸ್ನಾನ ಮಾಡಿಸಿ, ನಾನಾ ಬಣ್ಣಗಳನ್ನು ಹಚ್ಚಿ ರಿಬ್ಬನ್ ಕಟ್ಟಿ ಸಂಭ್ರಮಿಸುವ ಹಬ್ಬ. ಮುಂಗಾರು ಕೃಷಿ ಚಟುವಟಿಕೆಗಳು ಇದರಿಂದ ಆರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ಕಾರ ಹುಣ್ಣಿಮೆ ರೈತರ ಪಾಲಿಗೆ ಸಂಭ್ರಮದ ಹಬ್ಬವಾಗಿದೆ. ಕೊರೊನಾ ಮಾರ್ಗಸೂಚಿ ಇದ್ದರೂ ಹಡಗಲಿಯಲ್ಲಿ […]

ಚಿಕ್ಕಗಲಗಲಿ ಬ್ಯಾರೇಜಿಗೆ ಶಾಸಕ ಎಂ. ಬಿ. ಪಾಟೀಲರಿಂದ ಬಾಗೀನ ಅರ್ಪಣೆ- ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಬೇಕು ಎಂದ ಮಾಜಿ ಸಚಿವ

ವಿಜಯಪುರ: ಜಲಸಂಪನ್ಮೂಲ ಇಲಾಖೆ ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಚಿಕ್ಕಗಲಗಲಿ ಬ್ಯಾರೇಜಿಗೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸ್ವಕ್ಷೇತ್ರ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿಯಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ರೂ. 54 ಕೋ. ವೆಚ್ಚದ ನೂತನ ಬ್ರಿಡ್ಜ್-ಕಂ-ಬಾಂದಾರ ತುಂಬಿ ಹರಿಯುತ್ತಿದೆ. ಈ ಬ್ಯಾರೇಜಿಗೆ ಎಂ. ಬಿ. ಪವಾಟೀಲ ಗಂಗಾಪೂಜೆ ನೆರವೇರಿಸಿ, ಬಾಗೀನ […]

ಅಭಿವೃದ್ಧಿ ಕಾಮಗಾರಿಗಳ ಚಾಲನೆ ಜೊತೆಗೆ ಕೊರೊನಾ ಮಾರ್ಗಸೂಚಿ ಪಾಲನೆ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ಜನಪರ ಶಾಸಕ ಎಂ. ಬಿ. ಪಾಟೀಲ

ವಿಜಯಪುರ: ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದಂತೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುವ ಮೂಲಕ ಮತ್ತೆ ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಈ ಕಾರ್ಯಕ್ರಮಗಳು ಕೇವಲ ಸಮಾರಂಭಗಳಿಗೆ ಸೀಮಿತವಾಗದೇ ತಮ್ಮ ಮತಕ್ಷೇತ್ರದ ಜನರಲ್ಲಿ ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸುವ ಕಡೆಗೂ ಶಾಸಕರು ಗಮನ ಹರಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಶಾಸಕರ ಸಲಹೆ ದೇಶದ ನೂರು ಕೋಟಿ ಜನರು ಹಾಗೂ ನಮ್ಮ ರಾಜ್ಯದಲ್ಲಿ ಐದು ಕೋಟಿ ಜನರು ಲಸಿಕೆ ಹಾಕಿಸಿಕೊಂಡರೆ […]

ಚಿಕ್ಕಗಲಗಲಿ ಬಳಿ ಬ್ಯಾರೇಜ್ ಭರ್ತಿ- ಜೂ. 23 ಬುಧವಾರ ಗಂಗಾಪೂಜೆ ಸಲ್ಲಿಸಲಿರುವ ಶಾಸಕ ಎಂ. ಬಿ. ಪಾಟೀಲ

ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಳಿ ಚಿಕ್ಕಗಲಜಗಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ನೂತನ ಜಾಕೆಟಿಂಗ್ ತಂತ್ರಜ್ಞಾನದ ಬ್ಯಾರೇಜ್ ಈಗ ಭರ್ತಿಯಾಗಿದ್ದು, ನೀರು ತುಂಬಿ ಹರಿಯುತ್ತಿದೆ. ಈ ಬ್ಯಾರೇಜಿನ ಸುತ್ತಲಿನ ನಾನಾ ಹಳ್ಳಿಗಳ ರೈತರಿಂದ ಜೂ.23 ರಂದು ಬುಧವಾರ ಬುಧವಾರ ಗಂಗಾಪೂಜೆ ಮತ್ತು ಬಾಗೀನ ಕಾರ್ಯಕ್ರಮ ಆಯೋಜಿಸಿದ್ದಾರೆ. ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಅನುಕೂಲವಾಗಲು ನೂತನ ತಂತ್ರಜ್ಞಾನ ಬಳಸಿ, ಹಾಲಿ ಇದ್ದ […]

ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಕ್ರಮಕ್ಕೆ ಉಪಲೋಕಾಯುಕ್ತ ಬಿ. ಎಸ್. ಪಾಟೀಲ ಮೆಚ್ಚುಗೆ- 3ನೇ ಅಲೆ ತಡೆಯಲು ಸನ್ನದ್ಧರಾಗಿರಲು ಸೂಚನೆ

ವಿಜಯಪುರ: ಕೊರೊನಾ ನಿಯಂತ್ರಣಕ್ಕೆ ವಿಜಯಪುರ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಉಪಲೋಕಾಯುಕ್ತ ಬಿ. ಎಸ್. ಪಾಟೀಲ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರದ ಹೊಸ ಪ್ರವಾಸಿ ಮಂದಿರ(ಐಬಿ) ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೊರೊನಾ ನಿಯಂತ್ರಣ ಕ್ರಮಗಳು ಮತ್ತು ಲಸಿಕಾಕರಣದ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು, ಸಂಭವನೀಯ 3ನೇ ಅಲೆಯ ಎದುರಿಸಲು ಸೂಕ್ತ ಯೋಜನೆ ಮತ್ತು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸಂದಿಗ್ಧ ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. […]