ಬಿಜೆಪಿ ಮುಖಂಡರು ಅಧಿಕಾರ ದಾಹ ಬಿಟ್ಟು ಕೊರೊನಾ, ಬೆಲೆ ಏರಿಕೆ ನಿಯಂತ್ರಿಸಲಿ- ಶಾಸಕ ಎಂ. ಬಿ. ಪಾಟೀಲ ವಾಗ್ದಾಳಿ

ಹಾವೇರಿ: ಕೊರೊನಾ ಸಂಕಷ್ಟ ಸಮಯದಲ್ಲಿ ಕೊರೊನಾ ನಿರ್ವಹಣೆ ಬಿಟ್ಟು ಬಿಜೆಪಿ ನಾಯಕರು ಅಧಿಕಾರ ದಾಹ ಪ್ರದರ್ಶಿಸುತ್ತಿದ್ದಾರೆ ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಮಾಡಿದ ಅವರು, ರಾಜ್ಯ ಸರಕಾರದಲ್ಲಿ ತಾಳ ಮೇಳ ಇಲ್ಲ. ಸಿಎಂ ಬದಲಾವಣೆ ಮಾಡಬೇಕು ಅಂತಾರೆ‌. ಪರಸ್ಪರ ಸಹಕಾರವಿಲ್ಲ. ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಸುವ ಕೆಲಸ ಮಾಡಬೇಕು. ಅಧಿಕಾರ ಖುರ್ಚಿ ಗಿರ್ಚಿ ನಂತರ ಎಂದು ಅವರು ಹೇಳಿದರು. ಕೊರೊನಾದಿಂದಾಗಿ […]

ಕೊರೊನಾ, ಲಾಕಡೌನ್ ಸಮಯದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ 50 ದಿನಗಳಲ್ಲಿ 50 ಸಾವಿರ ಜನರಿಗೆ ಆಹಾರ ವಿತರಣೆ

ವಿಜಯಪುರ: ಕೊರೊನಾ ಮತ್ತು ಲಾಕಡೌನ ಸಂದರ್ಭದಲ್ಲಿ ಸತತ 50 ದಿನ 50 ಸಾವಿರ ಹಸಿದ ಹೊಟ್ಟೆಗಳ ಹಸಿವು ನೀಗಿಸುವ ಮೂಲಕ ಗಣೇಶ ಭಕ್ತರು ಮತ್ತು ಮಾಜಿ ಸಚಿವರು ಗಮನ ಸೆಳೆದಿದ್ದಾರೆ. ಹೀಗೆ ಹಸಿವಿನಿಂದ ಬಳಲಿದವರಿಗೆ ಬಸವನಾಡಿನ ಗಣೇಶ ಭಕ್ತರು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅನ್ನ ಹಾಕಿದ್ದಾರೆ. ಸಮಾಜ ಸೇವೆಗೆ ನಿಂತು ಸೈ ಎನಿಸಿಕೊಂಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲದೇ, ಹೊಟೇಲುಗಳಿಗೆ ತೆರಳಲು ಸಾಧ್ಯವಾಗದೇ, ಆರ್ಥಿಕ ಸಂಕಷ್ಟದಲ್ಲಿದ್ದವರ ಪಾಲಿಗೆ ಇವರು ಈ ಮೂಲಕ ಅನ್ನದಾತರಾಗಿದ್ದಾರೆ. […]

ಮಂಗಳವಾರದಿಂದ ಶಾಸಕ ಎಂ. ಬಿ. ಪಾಟೀಲ ಅವರಿಂದ ಅಹವಾಲು ಸ್ವೀಕಾರ

ವಿಜಯಪುರ: ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರ ಕಚೇರಿ ಸೋಮವಾರದಿಂದ ಎಂದಿನಂತೆ ಆರಂಭವಾಗಲಿದೆ. ಜ. 15 ಮಂಗಳವಾರ ಬೆ. 10.30 ರಿಂದ ಮ.2 ರವರೆಗೆ ಬಿ. ಎಂ. ಪಾಟೀಲ ರಸ್ತೆಯಲ್ಲಿರುವ ಕಛೇರಿಯಲ್ಲಿ ಶಾಸಕರು ಉಪಸ್ಥಿತರಿದ್ದಾರೆ. ಈ ಸಂದರ್ಭದಲ್ಲಿ ಶಾಸಕರು ಬಬಲೇಶ್ವರ ಮತಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವಶ್ಯಕತೆ ಇದ್ದವರು ಮಾತ್ರ ಕಛೇರಿಗೆ ಭೇಟಿ ನೀಡುಬೇಕು ಮತ್ತು ಭೇಟಿಯ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್, ಸೈನಿಟೈಸರ್ ಬಳಕೆ ಹಾಗೂ ಸಾಮಾಜಿಮ ಅಂತರ […]

ಸೋಮವಾರದಿಂದ ಲಾಕ್ ಡೌನ್ ಸಡಿಲಿಕೆ- ವಿಜಯಪುರದಲ್ಲಿ ಏನಿರುತ್ತೆ? ಏನಿರಲ್ಲ- ಡಿಸಿ ಮಾಹಿತಿ

ವಿಜಯಪುರ: ರಾಜ್ಯ ಸರಕಾರ ನಾಳೆಯಿಂದ ಲಾಕಡೌನ್ ಸಡಿಲಿಕೆ ಮಾಡಿದ್ದು, ವಿಜಯಪುರ ಜಿಲ್ಲೆಯಲ್ಲಿ ಏನಿರುತ್ತೆ? ಏನಿರಲ್ಲ? ಎಂಬುದರ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ. ಪರಿಷ್ಕೃತ ಮಾರ್ಗಸೂಚಿಯಂತೆ ಮಾರ್ಗಸೂಚಿ ಪ್ರಮುಖ ಅಂಶಗಳು ಈ ಕಳಗಿನಂತಿವೆ ಜೂ. 14ರ ಬೆ. 6ರಿಂದ ಜೂ. 21ರ ಬೆಳಿಗ್ಗೆ 6 ರವರೆಗೆ ಈ ಮಾರ್ಗಸೂಚಿಗಳು ಜಾರಿಯಲ್ಲಿರಲಿವೆ. ಜಿಲ್ಲೆಯ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಗತ್ಯ ವಸ್ತುಗಳ ಮಾರಾಟಕ್ಕೆ ಬೆ. 6 ರಿಂದ ಮ. 2ರ ವರೆಗೆ ಕಾಲಾವಕಾಶವಿದೆ. […]

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲ್ಲ ಎನ್ನುತ್ತಿರುವ ಈ ಶಾಲೆಯ ವಿದ್ಯಾರ್ಥಿಗಳು- ಯಾಕೆ ಗೊತ್ತಾ?

ವಿಜಯಪುರ- ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವುದಿಲ್ಲ ಎಂದು ವಿಜಯಪುರ ನಗರದ ಶಾಲೆಯೊಂದರ ಮಕ್ಕಳು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಣ ಸಚಿವರಿಗೆ ಪತ್ರವನ್ನೂ ಬರೆದಿದ್ದಾರೆ. ಮೆಟ್ರಿಕ್ ಪರೀಕ್ಷೆಯನ್ನೇ ಬಹಿಷ್ಕರಿಸಲು ಮುಂದಾಗಿರುವ ಈ ವಿದ್ಯಾರ್ಥಿಗಳು, ಮಲ್ಟಿಪಲ್ ಚಾಯ್ಸ್ ಪರೀಕ್ಷೆಯನ್ನು ವಿರೋಧಿಸಿದ್ದಾರೆ. ಪರೀಕ್ಷೆ ನಡೆಸಿದರೆ ನಾವು ಬರೆಯುವುದಿಲ್ಲ ಎಂದು ಹಠ ಹಿಡಿದಿರುವ ಈ ವಿದ್ಯಾರ್ಥಿಗಳು ಈ ಕುರಿತು ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೆ ಪತ್ರ ಬರೆದಿದ್ದಾರೆ. ಗುಮ್ಮಟನಗರಿ ವಿಜಯಪುರ ನಗರದ ವಿಕಾಸ ಪ್ರೌಢಶಾಲೆಯ ವಿದ್ಯಾರ್ಥಿಗಳು […]

ವಿಜಯಪುರ ಎಪಿಎಂಸಿಯಲ್ಲಿ ಮಾವಿನ ಹಣ್ಣುಗಳ ಖರೀದಿಗೆ ಜನರ ನಿರಾಸಕ್ತಿ- ವ್ಯಾಪಾರಿಗಳು ಕಂಗಾಲು

ವಿಜಯಪುರ: ಒಂದೆಡೆ ಕೊರೊನಾ ಮತ್ತೋಂದೆಡೆ ಲಾಕಡೌನ್ ನಿಂದಾಗಿ ಹಣ್ಣುಗಳ ರಾಜ ಮಾವನ್ನು ಕೇಳುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ವಿಜಯಪುರ ನಗರದ ಎಪಿಎಂಸಿಯಲ್ಲಿ ಭರಪೂರ ಮಾವು ಮಾರಾಟಕ್ಕೆ ಬಂದಿದೆ. ಆದರೆ, ಕೇಳುವವರೇ ಇಲ್ಲದಾಗಿದೆ. ಬೇಸಿಗೆ ಬಂತೆಂದರೆ ಸಾಕು ತರಹೇವಾರಿ ತಳಿಯ ಮಾವುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ‌ಆದರೆ, ಈ ಬಾರಿಯೂ ಕೊರೊನಾ ಮತ್ತು ಲಾಕಡೌನ್ ನಿಂದಾಗಿ ಹಣ್ಣುಗಳ ರಾಜ ಮಾವಿನ ಹಣ್ಣುಗಳನ್ನು ಖರೀದಿಸುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಈಗ ಬೆಲೆ ಕುಸಿತದಿಂದಾಗಿ ಮಾವು ಬೆಳೆದ ಬೆಳೆಗಾರರು ಪರದಾಡುವಂತಾಗಿದೆ. ವಿಜಯಪುರ […]

ಅರ್ಹ ಅಸಂಘಟಿತ ಕಾರ್ಮಿಕ ಫಲಾನುಭವಿಗಳಿಗೆ ಪರಿಹಾರಧನ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

ವಿಜಯಪುರ: ವಿಜಯಪುರ ಜಿಲ್ಲೆಯ ಅಸಂಘಟಿತ ವಲಯದ 11 ವರ್ಗಗಳ ನೈಜ ಹಾಗೂ ಅರ್ಹ ಕಾರ್ಮಿಕರನ್ನು ಗುರುತಿಸುವ ಜೊತೆಗೆ ತ್ವರಿತವಾಗಿ ಪರಿಹಾರ ಧನ ವಿತರಿಸುವಂತೆ ಜಿಲ್ಲಾಧಿಕಾರಿ ಪಿ.‌ ಸುನಿಲ ಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಿಂದಾಗಿ ಅಸಂಘಟಿತ ವಲಯದ 11 ವರ್ಗಗಳ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸರಕಾರ ಈ ಕಾರ್ಮಿಕರ ಒಂದು […]

ಸ್ಟೀಯರಿಂಗ್ ಹಿಡಿಯುವವರ ಕೈಚಳಕ- ಬಸವ ನಾಡಿನ ಡಿಪೋಗಳು, ಬಸ್ ನಿಲ್ದಾಣಗಳಲ್ಲಿ ಈಗ ಜಾಗೃತೆಯ ಚಿತ್ತಾರಗಳು

ವಿಜಯಪುರ: ಕೊರೊನಾ ಮತ್ತು ಲಾಕಡೌನ್ ಎಲ್ಲರಿಗೂ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡಿದ್ದರೆ, ಹಲವರಿಲ್ಲಿನ ಪ್ರತಿಭೆಯನ್ನು ಹೊರ ಹಾಕಲೂ ಕಾರಣವಾಗಿವೆ. ಲಾಕಡೌನ್ ಗೂ ಮುಂಚೆ ಸ್ಟೀಯರಿಂಗ್ ಹಿಡಿಯುತ್ತಿದ್ದ ಕೈಗಳು ಈಗ ಬಸ್ ಡಿಲೋ ಮತ್ತು ಬಸ್ ನಿಲ್ದಾಣಗಲಲ್ಲಿ ಚಿತ್ತಾರ ಮೂಡಿಸಲು ಕಾರಣವಾಗಿವೆ. ವಿಜಯಪುರ ಈಶಾನ್ಯ ಸಾರಿಗೆ ಸಿಬ್ಬಂದಿ ಈಗ ಲಾಕಡೌನ್ ಸಂದರ್ಭದಲ್ಲಿ ಬೇರೊಂದು ಕೆಲಸದ ಮೂಲಕ ಗಮನ ಸೆಳೆದಿದ್ದಾರೆ. ಕೆಲವು ಜನ ಪ್ರತಿಭಾನ್ವಿತ ಸಿಬ್ಬಂದಿ ತಮ್ಮ ಕಲೆಯ ಪ್ರದರ್ಶನ ಮಾಡಿದ್ದಾರೆ. ಬಿಡುವಿನ ಈ ಸಂದರ್ಭದಲ್ಲಿ ಪೇಟಿಂಗ್ ಮಾಡುವ ಮೂಲಕ […]

ಕೊರೊನಾ ಮೂರನೇ ಅಲೆ ಎದುರಿಸಲು, ಮಕ್ಕಳ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಳ್ಳಿ- ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ಕೊರೊನಾ ಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಬೇಕಾಗುವ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರೊನಾ ರೋಗ ನಿಯಂತ್ರಣ ಕ್ರಮಗಳ ಕುರಿತು ಪರಿಶೀಲನೆ ಸಭೆ ನಡೆಸಿದ ಅವರು ಕೊರೊನಾ ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆತಲ್ಲಿ ಬಾಧಿತರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ […]

ಸಚಿವೆ ಶಶಿಕಲಾ ಜೊಲ್ಲೆ ಅವರಿಂದ ಸರಕಾರಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಕಾಮಗಾರಿ ಪರಿಶೀಲನೆ

ವಿಜಯಪುರ: ವಿಜಯಪುರ ನಗರದ ಸರಕಾರಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಕಾಮಗಾರಿಗಳು 15 ತಿಂಗಳಲ್ಲಿ ಪೂರ್ಣವಾಗಲಿವೆ. ಬಳಿಕ ಇದನ್ನು ಕೋವಿಡ್ ಆಸ್ಪತ್ರೆಯಾಗಿ ರೂಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದ್ದಾರೆ‌. ವಿಜಯಪುರ ನಗರದ ಸರಕಾರಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಈ ಆಸ್ಪತ್ರೆಯ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಮೊದಲ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಆರ್ […]