ಬಸವ ನಾಡಿನ ಯುವಕ ದೂರದ ಅಮೇರಿಕದಲ್ಲಿ ಕೌನ್ಸಿಲರ್ ಆಗಿ ಆಯ್ಕೆ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ. ಯುವಕ ನವೀನ ಹಾವಣ್ಣನವರ ದೂರದ ಅಮೇರಿಕಾದಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ. ಅಮೇರಿಕಾದ ನ್ಯೂಯಾರ್ಕ್ ರಾಜ್ಯದ ರೋಚೆಸ್ಟರ್ ಜಿಲ್ಲೆಯ ಪೀಟ್ಸ್ ಪೋರ್ಡ್ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಅವರು ಕೌನ್ಸಲಿಲರ್ ಆಗಿ ಚುನಾಯಿತರಾಗಿದ್ದಾರೆ.  ಈ ಕೌನ್ಸಿಲರ್ ಚುನಾವಣೆಯಲ್ಲಿ  ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ದೆ ಮಾಡಿದ್ದ ನವೀನ ಹಾವಣ್ಣವರ, ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ವಿರುದ್ಧ 33 ಮತಗಳ ಅಂತರಿಂದ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ.  ಅಷ್ಟೇ ಅಲ್ಲ, ಶುಕ್ರವಾರ ಪೀಟ್ಸ್ ಪೋರ್ಡ್ ಪ್ರದೇಶದ ಕೌನ್ಸಿಲರ್ ಆಗಿ […]

ಉಕ್ರೇನ್ ಗಡಿದಾಟಿ ರೊಮೇನಿಯಾ ತಲುಪಿದ ಬಸವ ನಾಡಿನ ಕೊನೆಯ ನಾಲ್ಕು ವಿದ್ಯಾರ್ಥಿಗಳು- ರೋಮೆನಿಯಾದಿಂದ ಭಾರತದತ್ತ ಪಯಣ

ವಿಜಯಪುರ: ಯುದ್ಧ ಪೀಡಿತ(War Hit) ಉಕ್ರೇನಿನಲ್ಲಿ(Ukraine) ಸಿಲುಕಿದ್ದ(Stranded) ಬಸವ ನಾಡಿನ(Basava Nadu) ಒಟ್ಟು 16 ಜನರಲ್ಲಿ ಎಲ್ಲರೂ ಈಗ ಸುರಕ್ಷಿತವಾಗಿ(Safely) ಉಕ್ರೇನ್ ಗಡಿ(Border) ದಾಟಿದ್ದಾರೆ. ಒಟ್ಟು 16 ಜನರಲ್ಲಿ ಈಗಾಗಲೇ ಮೂರು ಜನ ವಿಜಯಪುರಕ್ಕೆ ವಾಪಸ್ಸಾಗಿದ್ದಾರೆ.  ಇನ್ನುಳಿದ 8 ಜನ ಈಗಾಗಲೇ ನವದೆಹಲಿ ಮತ್ತು ಬೆಂಗಳೂರು ತಲುಪಿದ್ದಾರೆ. ಸುರಕ್ಷಿತ ಸ್ಥಳ ತಲುಪಲು ಹರಸಾಹಸಪಟ್ಟ ನಾಲ್ಕು ವಿದ್ಯಾರ್ಥಿಗಳು ಉಕ್ರೇನಿನಲ್ಲಿಯೇ ಸಿಲುಕಿದ್ದ ನಾಲ್ಕು ಜನ ವಿದ್ಯಾರ್ಥಿಗಳಾದ ಅಮನ ಧರ್ಮರಾಯ ಮಮದಾಪುರ, ಹರ್ಷ ವಿದ್ಯಾಧರ ನ್ಯಾಮಗೊಂಡ, ಮೊಹ್ಮದ್ ಇಸ್ಮಾಯಿಲ್ ಉರ್ಫ್ ಅಫ್ತಾಬ್ […]

ಉಕ್ರೇನಿನನಿಂದ ವಿಜಯಪುರ ಜಿಲ್ಲೆಯ 10 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್, 6 ಜನ ಇನ್ನೂ ಬರಬೇಕಿದೆ- ಡಿಸಿ ಪಿ ಸುನಿಲಕುಮಾರ

ವಿಜಯಪುರ: ಯುದ್ಧಪೀಡಿತ ಯುಕ್ರೇನಿನಲ್ಲಿ ಸಿಲುಕಿದ್ದ ವಿಜಯಪುರ ಜಿಲ್ಲೆಯ ಒಟ್ಟು 16 ವಿದ್ಯಾರ್ಥಿಗಳಲ್ಲಿ 10 ಜನರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ ಸುನಿಲಕುಮಾರ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು ಇಬ್ಬರು ವಿದ್ಯಾರ್ಥಿಗಳು ಬುಡಾಪೆಸ್ಟ್ ವಿಮಾನ ನಿಲ್ದಾಣದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ನಾಲ್ಕು ಜನ ವಿದ್ಯಾರ್ಥಿಗಳು ಉಕ್ರೇನಿನಿಂದ ರೊಮೇನಿಯಾ ಗಡಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕೆಲವೇ ಗಂಟೆಗಳಲ್ಲಿ ರೊಮೇನಿಯ ತಲುಪಲಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಸುನಿಲಕುಮಾರ ತಿಳಿಸಿದ್ದಾರೆ.

ಆಹಾರ ಖಾಲಿಯಾಗ್ತಿದೆ- ಮೊಬೈಲ್ ಡಾಟಾ ಸಿಗುತ್ತಿಲ್ಲ- ಉಷ್ಣಾಂಶ ಮೈನಸ್ 2 ಡಿಗ್ರಿಯಿದೆ- ಬೇಗ ನಮ್ಮನ್ನು ರಕ್ಷಿಸಿ- ಪೂರ್ವ ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳ ಅಳಲು

ಮಹೇಶ ವಿ. ಶಟಗಾರ ವಿಜಯಪುರ: ಮೊಬೈಲ್ ಡಾಟಾ ಖಾಲಿಯಾಗುತ್ತಿದೆ.  ಖರೀದಿಸಲೂ ಸಾಧ್ಯವಾಗುತ್ತಿಲ್ಲ.  ಮೊಬೈಲ್ ಮೂಲಕ ಮಾತನಾಡಲೂ ಕೂಡ ಕಷ್ಟವಾಗುತ್ತಿದೆ.  ಸಿಕ್ಕಾಪಟ್ಟೆ ಛಳಿಯಿದೆ.  ಮೈನಸ್ 2 ಡಿಗ್ರಿ ಉಷ್ಣಾಂಶವಿದೆ.  ಸಂಗ್ರಹವಾಗಿರುವ ಆಹಾರ ಪದಾರ್ಥಗಳೂ ಮುಗಿಯುತ್ತಿವೆ.  ವಾಶ್ ರೂಂ ನಲ್ಲಿ ನೀರು ಬಂದ್ ಆಗಿದೆ.  ಹೊರಗಡೆ ಹೋಗುವಂತಿಲ್ಲ.  ಸದಾ ಬಾಂಬ್ ಶಬ್ದಗಳೊಂದಿಗೆ ಕಾಲ ಕಳೆಯುವಂತಾಗಿದೆ.  ಇದು ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ತೆರಳಿ ಅತಂತ್ರರಾಗಿರುವ ಕರ್ನಾಟಕದ ವಿದ್ಯಾರ್ಥಿಗಳ ಗೋಳು.  ಈಗ ಉಕ್ರೇನಿನಲ್ಲಿ ಅತಂತ್ರರಾಗಿರುವ ವೈದ್ಯ ವಿದ್ಯಾರ್ಥಿಗಳಿಗೆ ಬದುಕಲು ಆಹಾರ ಬೇಕು.  ಸಂಪರ್ಕಕ್ಕಾಗಿ […]

ಉಕ್ರೇನ್ ನಲ್ಲಿ ಬಸವ ನಾಡಿನ 24ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರದಾಟ- ಪೋಷಕರಲ್ಲಿ ಧರ್ಮಸಂಕಟ

ಮಹೇಶ ವಿ. ಶಟಗಾರ ವಿಜಯಪುರ: ಯುಕ್ರೇನ್Ukrain) ಮೇಲೆ ರಷ್ಯಾ ಸಮರ(Russia War) ಸಾರಿರುವ ಹಿನ್ನಲೆಯಲ್ಲಿ ಯುಕ್ರೇನ್ ಈಶಾನ್ಯ(East Ukrain) ಭಾಗದಲ್ಲಿ ವಿಜಯಪುರದ ಹಲವಾರು ವಿದ್ಯಾರ್ಥಿಗಳು(Vijayapura Students)ಸಿಲುಕಿಕೊಂಡಿದ್ದಾರೆ.(Stranded)ಬಾಂಬ್ ಸ್ಪೋಟಗಳ ಶಬ್ದದ ನಡುವೆ ಈ ವಿದ್ಯಾರ್ಥಿಗಳು ಆತಂಕ ಎದುರಿಸುತ್ತಿದ್ದಾರೆ  ವಿಜಯಪುರ ಜಿಲ್ಲೆಯ ವಿವಿಧಾ ಮಲ್ಲಿಕಾರ್ಜುನಮಠ, ಅಮನ ಮಮದಾಪುರ ಸೇರಿದಂತೆ ಸುಮಾರು 24 ಹೆಚ್ಚು ವಿದ್ಯಾರ್ಥಿಗಳು ನಾನಾ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ.  ಈ ಕುರಿತು ಕೆ ಎಸ್ ಎನ್ ಎಂ ಡಿ ಸಿ ರಾಜ್ಯದ ವಿದ್ಯಾರ್ಥಿಗಳ ಕುರಿತು ಮಾಹಿತಿ ನೀಡಿದೆ. ಉಕ್ರೇಸ್ ಈಶಾನ್ಯದಲ್ಲಿರುವ […]

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ನವದೆಹಲಿ: ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿಗೆ ದಿ ರಾಮಾಯಣ ಟ್ರೆಡಿಶನ್ ಇನ್ ಇಂಡಿಯಾ ಪುಸ್ತಕವನ್ನು ನೀಡಿದರು. ಬಳಿಕ ಪ್ರಧಾನ ಮಂತ್ರಿ ಜೊತೆ ನಾನಾ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಕೃಣಾಲ ಪಾಂಡ್ಯಗೆ ಕೊರೊನಾ ಪಾಸಿಟಿವ್- ಭಾರತ- ಶ್ರೀಲಂಕಾ ಟಿ-20 ನಾಳೆಗೆ ಮುಂದೂಡಿಕೆ

ವಿಜಯಪುರ: ಭಾರತ ಮತ್ತು ಶ್ರೀಲಂಕಾ ಮಧ್ಯೆ ಇಂದು ರಾತ್ರಿ ನಡೆಯಬೇಕಿದ್ದ ಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ನಾಳೆಗೆ ಮುಂದೂಡಲಾಗಿದೆ. ಈ ಕುರಿತು ಬಿಸಿಸಿಐ ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಭಾರತೀಯ ಕ್ರಿಕೆಟ್ ತಂಡದ ಆಲರೌಂಡರ್ ಕೃಣಾಲ ಪಾಂಡ್ಯ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ 8 ಗಂಟೆಗೆ ಆರಂಭವಾಗಬೇಕಿದ್ದ ಟಿ- 20 ಕ್ರಿಕೆಟ್ ಪಂದ್ಯವನ್ನು ನಾಳೆಗೆ ಜು. 28ಕ್ಕೆ ಮುಂದೂಡಲಾಗಿದೆ. ಕೊರೊನಾ ಸೋಂಕು ಹೆಚ್ಚಾಗುವುದನ್ನು ತಡೆಯಲು ಇಂದು ಭಾರತ ಮತ್ತು ಶ್ರೀಲಂಕಾ […]

ಕೊರೊನಾ ಕಾಟ ಮುಂದುವರೆಯಲಿದೆ- ಚೀನಾದಿಂದ ಭಯವಿದೆ- ಗಣ್ಯ ವ್ಯಕ್ತಿಯ ಸ್ಥಾನಮಾನದಲ್ಲಿ ಏರಿಳಿತವಾಗಲಿದೆ- ಕಾಲಜ್ಞಾನದ ಹೊತ್ತಿಗೆ ಬಿಚ್ಚಿಟ್ಟ ಬಬಲಾದಿ ಕಾರ್ಣಿಕ

ಇಲ್ಲಿನ ಕಾರ್ಣಿಕರು ನುಡಿಯುವ ಕಾಲಜ್ಞಾನದ ಭವಿಷ್ಯ ಈವರೆಗೂ ನಿಜವಾಗುತ್ತ ಬಂದಿರುವುದು ವಿಶೇಷವಾಗಿದೆ.