ಭಾರತದಲ್ಲಿ ಬಯೋಸೈನ್ಸ್ ಆಂದೋಲನಕ್ಕಾಗಿ ಕಿರಣ ಮಜುಂದಾರ ಶಾ ಅವರಿಗೆ ಐ.ಎಸ್.ಕ್ಯೂ ಜೆಮಶೇಡಜಿ ಟಾಟಾ ಪ್ರಶಸ್ತಿ
ಬೆಂಗಳೂರು: ಬಯೋಕಾನ್ ಸಮೂಹದ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರು ಭಾರತದಲ್ಲಿ ಜೈವಿಕ ವಿಜ್ಞಾನದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಇಂಡಿಯನ್ ಸೊಸೈಟಿ ಫಾರ್ ಕ್ಯಾಲಿಟಿ (ISQ) ಯು ಪ್ರತಿಷ್ಠಿತ ಜೆಮಶೇಡಜಿ ಟಾಟಾ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನಡೆದ ISQ ವಾರ್ಷಿಕ ಸಮ್ಮೇಳನ -2024 ದಲ್ಲಿ ಪ್ರಶಸ್ತಿ ನೀಡಲಾಯಿತು. ISQ ನಿಂದ 2004 ರಲ್ಲಿ ಸ್ಥಾಪಿಸಲಾದ ಜೆಮ್ಷೆಡ್ಜಿ ಟಾಟಾ ಪ್ರಶಸ್ತಿಯನ್ನು ‘ಆಧುನಿಕ ಭಾರತೀಯ ಕೈಗಾರಿಕಾ ಪಿತಾಮಹ ಎಂದು ಕರೆಯುವ ಜೆಮ್ಷೆಡ್ಜಿ ಟಾಟಾ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು […]
ಭೀಮಾ ತೀರದಲ್ಲಿ ಧೊಪ್ಪೆಂದು ನೆಲಕ್ಕಪ್ಪಳಿಸಿದ ಬಾಹ್ಯಾಕಾಶ ಪರಿಕರ- ಡಿಸಿ ಹೇಳಿದ್ದೇನು ಗೊತ್ತಾ?
ವಿಜಯಪುರ: ಆಗಸದಲ್ಲಿ ಹಾರಾಡುತ್ತಿದ್ದ ಪರಿಕರವೊಂದು ರೈತರೊಬ್ಬರ ಜಮೀನಿನಲ್ಲಿ ಬಿದ್ದು ಆತಂಕ ಸೃಷ್ಠಿಸಿದ ಘಟನೆ ಚಡಚಣ ತಾಲೂಕಿನ ಮರಗೂರ ಬಳಿ ನಡೆದಿದೆ. ಪ್ಯಾರಾಚೂಟ್ ಮಾದರಿಯ ಈ ಪರಿಕರ ಕಂಡು ರೈತರು ಗಾಬರಿಯಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮದ ಜನರು ಅದರ ಮೇಲೆ ಬರೆಯಲಾದ ಮಾಹಿತಿ ತಿಳಿದು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಪರಿಶೀಲನೆ ನಡೆಸಿದಾಗ ಇದು ಲೋ ಇನ್ಟೆನ್ಸಿಟಿ ವೆದರ್ ಮಾನಿಟರರಿಂಗ್ ಸಿಸ್ಟಮ್ ಪರಿಕರವಾಗಿದ್ದು, ಬೆಂಗಳೂರಿನ ಇಸ್ರೋದಿಂದ ಕೆಲ ದಿನಗಳ ಹಿಂದೆ ಉಡಾವಣೆ ಮಾಡಲಾಗಿತ್ತು ಎನ್ನಲಾಗಿದೆ. ಲೋ […]
ಸಚಿವ ವಿ. ಸೋಮಣ್ಣ ಭೇಟಿ ಮಾಡಿ ಉ. ಕ ರೇಲ್ವೆ ಯೋಜನೆ ಬೇಡಿಕೆ ಸಲ್ಲಿಸಿದ ಶಾಸಕ ಯತ್ನಾಳ
ನವದೆಹಲಿ: ನಗರ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ವಿಜಯಪುರ ನಗರದಲ್ಲಿ ರೈಲ್ವೆ ಮೇಲ್ಸೆತುವೆ ನಿರ್ಮಾಣ ಸೇರಿದಂತೆ ಉತ್ತರ ಕರ್ನಾಟಕ ಭಾಗದ ನಾನಾ ರೈಲ್ವೆ ಅಭಿವೃದ್ಧಿ ಯೋಜನೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವರೊಂದಿಗೆ ಮಾತನಾಡಿದ ಅವರು, ವಿಜಯಪುರ ನಗರವು ಸುಮಾರು 10 ಲಕ್ಷ ಜನಸಂಖ್ಯೆ ಹೊಂದಿದ್ದು, ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಹುಟಗಿ- ಗದಗ ನಡುವೆ ಡಬ್ಲಿಂಗ್ ಟ್ರ್ಯಾಕ್ […]
ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ ಇನ್ನಿಲ್ಲಃ ಅನ್ನದಾತನ ಅಗಲಿಗೆ ನೋವು ತಂದಿದೆ ನಮಗೆಲ್ಲ
ಮಹೇಶ ವಿ. ಶಟಗಾರ ವಿಜಯಪುರ: ಮಾಧ್ಯಮ ಲೋಕದ ದಿಗ್ಗಜ, ದೇಶಕ್ಕೆ ಸಾವಿರಾರು ಪತ್ರಕರ್ತರನ್ನು ನೀಡಿದ ಈ ನಾಡು ಸಂಸ್ಥೆ ಸ್ಥಾಪಿಸುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ರಾಮೋಜಿ ರಾವ(87) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗಿನ ಜಾವ 4.50ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಮೋಜಿ ರಾವ ಈಗ ನೆನಪು ಮಾತ್ರ ರಾಮೋಜಿ ರಾವ ಇನ್ನಿಲ್ಲ ಎಂಬ ಎಂಬ ಸುದ್ದಿ ತೀವ್ರ ದುಃಖ ತಂದಿದೆ. ನನ್ನಂಥ ಹಲವರು 2000ನೇ ಈ ದಿನ ಅಂದರೆ ಜೂನ್ 8 ರಂದು […]
ಗರ್ಭವತಿ ಮಹಿಳೆಯ ಮರ್ಯಾದಾ ಹತ್ಯೆ- ಇಬ್ಬರಿಗೆ ಗಲ್ಲು ಶಿಕ್ಷೆ, 5 ಜನರಿಗೆ ಜೀವಾವಧಿ
ವಿಜಯಪುರ: ಮರ್ಯಾದಾ ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ ಮತ್ತು ಉಳಿದ ಐದು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಜಯಪುರ ಸ್ಪೇಶಲ್ ಕೋರ್ಟ್ ಆದೇಶ ಹೊರಡಿಸಿದೆ. 30.06.2017 ರಂದು ಒಂಬತ್ತು ತಿಂಗಳು ಗರ್ಭಿಣಿ ಯುವತಿಯನ್ನು ಅವಳ ಸಂಬಂಧಿಕರೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು ಈ ಪ್ರಕರಣದ ಮೊದಲ ಆರೋಪಿ ಇಬ್ರಾಹಿಂಸಾಬ ಮಹ್ಮದಸಾಬ ಅತ್ತಾರ ಮತ್ತು ಅಕ್ಬರ್ ಮಹ್ಮದಸಾಬ ಅತ್ತಾರ ಅವರಿಗೆ ಗಲ್ಲು ಶಿಕ್ಷೆ ಮತ್ತು ರೂ. ತಲಾ ರೂ. 49250 ದಂಡ ವಿಧಿಸಲಾಗಿದೆ. ಅಲ್ಲದೇ, ಈ […]
ಸಿಡಿಲು ಬಡಿದು ಐತಿಹಾಸಿಕ ಮೆಹತರ ಮಹಲ್ ಮಿನಾರ್ ಹೆ ಹಾನಿ- ಒಂದು ಕಾರು, ಎರಡು ಬೈಕ್ ಜಖಂ
ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಸಂಜೆ ಸುರಿದ ಸಿಡಿಲು ಸಹಿತ ಮಳೆಗೆ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಮೆಹತರ ಮಹಲ್ ಗೆ ಸ್ವಲ್ಪ ಹಾನಿಯಾಗಿದ್ದು, ಒಂದು ಕಾರು, ಎರಡು ಬೈಕುಗಳು ಜಖಂ ಗೊಂಡಿವೆ. ಸಂಜೆ ಗಾಳಿ, ಗುಡುಗು ಮತ್ತು ಸಿಡಿಲು ಸಹಿತ ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಮೆಹತರ ಮಹಲ್ ನ ಮಿನಾರ್ ವೊಂದರ ಮೇಲ್ಭಾಗದಲ್ಲಿ ಮಿಂಚು ಸಹಿತ ಸಿಡಿಲು ಬಡಿದಿದ್ದು, ಆ ಭಾಗದ ಕಲ್ಲುಗಳು ಕೆಳಗೆ ಬಿದ್ದಿವೆ. ಇದರಿಂದಾಗಿ ಸ್ಮಾರಕದ ಎದುರು ನಿಲ್ಲಿಸಲಾಗಿದ್ದ ಒಂದು ಕಾರು ಮತ್ತು […]
Video News: ಮಗು ಸಾತ್ವಿಕ ಸಾವು ಗೆದ್ದು ಬಂತು- ಪೋಷಕರು ಸೇರಿ ಎಲ್ಲರಿಗೂ ಹರ್ಷ ತಂತು
ವಿಜಯಪುರ: ಇಂಡಿ ತಾಲೂಕಿನ ಲಚ್ಯಾಣದಲ್ಲಿ ಮಗು ತೆರೆದ ಕೊಳವೆ ಭಾವಿಗೆ ಬಿದ್ದಿದ್ದ ಪ್ರಕರಣ ಸುಖಾಂತ್ಯ ಕಂಡಿದ್ದು, ದೇವರ ಕೃಪೆಯಿಂದ ಮಗುವನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರಗೆ ತೆಗೆದಿದ್ದಾರೆ. ಬುಧವಾರ ಸಂಜೆ 6 ಗಂಟೆಗೆ ಕೊಳವೆ ಭಾವಿಗೆ ಬಿದ್ದಿದ್ದ ಮಗುವನ್ನು ಸತತ 20 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಗುರುವಾರ ಮಧ್ಯಾಹ್ನ ಹೊರಗೆ ತೆಗೆಯಲಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ತಮ್ಮ 4 ಎಕರೆ ತೋಟದಲ್ಲಿ ಬೆಳೆಯಲಾಗಿದ್ದ ಲಿಂಬೆ ಮತ್ತು ದ್ರಾಕ್ಷಿ ಬೆಳೆಗಳನ್ನು ರಕ್ಷಿಸಲು ಮುಜಗೊಂಡ ಅವರು ತೋಟದಲ್ಲಿ ಕೊಳವೆ ಭಾವಿ […]
Video News: ಲಚ್ಯಾಣದಲ್ಲಿ ಬೋರವೆಲ್ ಗೆ ಬಿದ್ದ ಮಗು- ಕ್ಷಿಪ್ರ ಕಾರ್ಯಾಚರಣೆಗೆ ಸಚಿವ ಎಂ. ಬಿ. ಪಾಟೀಲ ಸೂಚನೆ
ವಿಜಯಪುರ: ಆಟವಾಡುತ್ತಿದ್ದ ಪುಟ್ಟ ಮಗುವೊಂದು ತೆರೆದ ಬೋರವೆಲ್ ಗೆ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ. ಸುಮಾರು ಒಂದೂವರೆ ವರ್ಷದ ಗಂಡು ಮಗು ಸಾತ್ವಿಕ ಮುಜಗೊಂಡ ಸಂಜೆ 6 ಗಂಟೆಯ ಸುಮಾರಿಗೆ ಆಟವಾಡುತ್ತ ಹೋಗಿ ತೆರೆದ ಬೋರವೆಲ್ ಗೆ ಬಿದ್ದಿದೆ. ಸ್ಥಳಕ್ಕೆ ದೌಡಾಯಿಸಿದ ಡಿಸಿ, ಎಸ್ಪಿ ಮತ್ತೀತರ ಅಧಿಕಾರಿಗಳು ಘಟನೆಯ ಮಾಹಿತಿ ಪಡೆದ ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಋಷಿಕೇಶ ನೋನಾವಣೆ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. […]
ವಂದೇ ಭಾರತ ರೈಲು ಸೇವೆ ಪ್ರಾರಂಭಿಸಿ- ಪ್ರಧಾನಿಗೆ ಶಾಸಕ ಸುನೀಲಗೌಡ ಪಾಟೀಲ ಪತ್ರ
ವಿಜಯಪುರ: ಸಂಸದರು ಮತ್ತು ರೇಲ್ವೆ ಸಚಿವರಿಗೆ ಪತ್ರ ಬರೆದರೂ ಸ್ಪಂದಿಸದ ಹಿನ್ನೆಲೆಯಲ್ಲಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪತ್ರ ಬರೆದು ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೊಸದಾಗಿ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕು ಮತ್ತು ಮುಂಬೈ- ಸೋಲಾಪುರ ರೈಲನ್ನು ವಿಜಯಪುರವರೆಗೆ ವಿಸ್ತರಿಸುವಂತೆ ಆಗ್ರಹಿಸಿದ್ದಾರೆ. ಈ ಬೇಡಿಕೆ ಕುರಿತು 24.11.2023 ರಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮತ್ತು ಬಾಗಲಕೋಟೆ ಸಂಸದ ಪಿ. ಸಿ. ಗದ್ದಿಗೌಡರ […]
ಕೆಲಕಾಲ ಸ್ಥಬ್ದವಾಗಿ ಆತಂಕ ಸೃಷ್ಠಿಸಿದ ಫೇಸ್ ಬುಕ್, ಇನಸ್ತಾಗ್ರಾಂ- ಗ್ರಾಹಕರಿಗೆ ಗಾಬರಿಯೋ ಗಾಬರಿ
ವಿಜಯಪುರ: ಫೇಸ್ ಬುಕ್ ಮತ್ತು ಇನಸ್ತಾಗ್ರಾಂ ಕೆಲಕಾಲ ಸ್ತಬ್ದವಾಗಿದ್ದು, ಬಹುತೇಕ ಖಾತೆದಾರರಿಗೆ ಆತಂಕ ಸೃಷ್ಠಿಸಿದ ಘಟನೆ ಇಂದು ರಾತ್ರಿ ನಡೆಯಿತು. ಸುಮಾರು ಹೊತ್ತು Session expired ಎಂದು ಕಾಣಿಸಿಕೊಂಡ ಸಂದೇಶ ಫೇಸ್ ಬುಕ್ ಬಳಕೆದಾರರಿಗೆ ಆತಂಕ ಸೃಷ್ಠಿ ಮಾಡಿತ್ತು. ಕೆಲವರು ಮತ್ತೆ ಮತ್ತೆ ಪಾಸವರ್ಡ್ ಹಾಕಿದರೂ ಲಾಗಿನ್ ಆಗುತ್ತಿರಲಿಲ್ಲ. ಮತ್ತೆ ಕೆಲವರು, ಆ್ಯಪ್ ನ್ನೇ ಅನಇನಸ್ಟಾಲ್ ಮಾಡಿ ಮತ್ತೆ ಹೊಸದಾಗಿ ಇನಸ್ಟಾಲ್ ಮಾಡಿದರೂ ಪ್ರಯೋಜನವಾಗದೆ, ತಮ್ಮ ಖಾತೆ ಹ್ಯಾಕ್ ಆಗಿರಬಹುದು ಎಂದು ಆಂತಕ ವ್ಯಕ್ತಪಡಿಸಿದರು. ಹಲವಾರು ಜನರು […]