ಲಿಥಿಯನ್‌ -ಅಯಾನ್‌ ಸೆಲ್‌ ಉತ್ಪಾದನೆ ಕಂಪನಿ ಸಿ4ವಿ ಯಿಂದ ರಾಜ್ಯದಲ್ಲಿ ರೂ. 4000 ಕೋ. ಹೂಡಿಕೆಗೆ ಒಪ್ಪಂದ- ಜಗದೀಶ ಶೆಟ್ಟರ

ಬೆಂಗಳೂರು: ಲಿಥಿಯನ್‌- ಅಯಾನ್‌ ಸೆಲ್‌ ಉತ್ಪಾದನೆ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಅಮೇರಿಕಾದ ಸಿ4ವಿ ರಾಜ್ಯದಲ್ಲಿ ರೂ. 4000 ಕೋ. ಹೂಡಿಕೆ ಮಾಡಲು ಮುಂದಾಗಿದ್ದು, ಇದು ರಾಜ್ಯದ ಎಲೆಕ್ಟ್ರಿಕ್‌ ಸೆಲ್‌ ಉತ್ಪಾದನೆ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಿಶ್ವದ ಪ್ರಮುಖ ಲಿಥಿಯನ್‌ -ಅಯಾನ್‌ ಸೆಲ್‌(Li-Ion) ಸೆಲ್‌ ಉತ್ಪಾದನಾ ಕಂಪನಿಯ ಪ್ರತಿನಿಧಿಗಳೊಂದಿಗೆ ಒಡಂಬಡಿಕೆಯ ನಂತರ ಮಾತನಾಡಿದ ಅವರು, ಸಿ4ವಿ ಕಂಪನಿ ನೂರಕ್ಕೂ ಹೆಚ್ಚು ಪೇಟೆಂಟ್‌ ಗಳನ್ನು ಹೊಂದಿರುವ […]

ಕೃಷ್ಣಾ ನದಿ ನೀರು ಹಂಚಿಕೆ ವಿಚಾರ- ಅಂತಿಮ ಅಧಿಸೂಚನೆಗೆ ಕರ್ನಾಟಕ- ಮಹಾರಾಷ್ಟ್ರ ಜಂಟಿ ಪ್ರಯತ್ನ- ಸಚಿವ ಬೊಮ್ಮಾಯಿ

ಬೆಂಗಳೂರು: ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ಬ್ರಿಜೇಶ್ ಮಿಶ್ರಾ ನ್ಯಾಯಾಧೀಕರಣ ನೀಡಿರುವ ಐ ತೀರ್ಪಿನ ಕುರಿತು ಅಂತಿಮ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟಿನಲ್ಲಿ ಜಂಟಿ ಹೋರಾಟಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಿರ್ಧರಿಸಿವೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕೃಷ್ಣಾ ಮತ್ತು ಭೀಮಾ ಪ್ರದೇಶದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅಂತಾರಾಜ್ಯ ಪ್ರವಾಹ ಪರಿಶೀಲನಾ ಸಮಿತಿಯ ಸಭೆಯ ಬಳಿಕ […]

ಸಿಎಂ ಜೊತೆ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರು, ಅಧಿಕಾರಿಗಳ ಸಭೆ- ಕೃಷ್ಣಾ, ಭೀಮಾ ಪ್ರವಾಹ ನಿಯಂತ್ರಣ ಕುರಿತು ನಿರ್ಧಾರ

ಬೆಂಗಳೂರು: ಕೃಷ್ಣಾ ಮತ್ತು ಭೀಮಾ ಪ್ರವಾಹ ನಿಯಂತ್ರಣ ಮತ್ತು ಇತರ ನೀರಾವರಿ ವಿಚಾರಗಳ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಗಳೂರಿಗೆ ಆಗಮಿಸಿದ್ದ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಜಯಂತ ಪಾಟೀಲ ಮತ್ತು ಅಧಿಕಾರಿಗಳು ಹಾಗೂ ರಾಜ್ಯ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣಾ ಸಮಿತಿಯ ಸಭೆ ನಡೆಸಿದರು. ಈ ಸಭೆಯಲ್ಲಿ ಕೃಷ್ಣಾ ಮತ್ತು ಭೀಮಾ ಜಲಾನಯನ ಪ್ರದೇಶದಲ್ಲಿ ಪರಿಣಾಮಕಾರಿ ಪ್ರವಾಹ ನಿರ್ವಹಣೆಯ ಕುರಿತು ನಾನಾ ವಿಷಯಗಳ ಕುರಿತು ಚರ್ಚಿಸಲಾಯಿತು. ಎರಡೂ ರಾಜ್ಯಗಳ ನಡುವೆ ಸಚಿವರು, ಕಾರ್ಯದರ್ಶಿಗಳ ಹಂತ ಹಾಗೂ […]

ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು ಪಡಿಸಿದ ಕೇಂದ್ರ ಸರಕಾರ

ವಿಜಯಪುರ: ಕೇಂದ್ರ ಸರಕಾರ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ. ಭಾರತ ಸರಕಾರ ಈ ಬಾರಿ ಸಿ ಬಿ ಎಸ್ ಇ ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದು ಪಡಿಸಲು ನಿರ್ಧರಿಸಿದೆ. ಪರೀಕ್ಷೆ ಕುರಿತು ಸಾಕಷ್ಟು ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಠಿಯಿಂದ ಕೈಗೊಳ್ಳಲಾದ ವಿದ್ಯಾರ್ಥಿಗಳ ಸ್ನೇಹಿ ನಿರ್ಧಾರ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮಾಹಿತಿ […]

ಫೀಲ್ಡ್ ಕಮಾಂಡರ್ ರೀತಿ ಕೆಲಸ ಮಾಡುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಪ್ರಧಾನಿ ಸೂಚನೆ- ಬಸವರಾಜ ಬೊಮ್ಮಾಯಿ

ಬೆಂಗಳೂರು: ಎಲ್ಲ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕೊರೊನಾ ವಿರುದ್ಧ ಫೀಲ್ಡ್ ಕಮಾಂಡರ್ ರೀತಿಯಲ್ಲಿ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜತೆ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ ನಂತರ ಸಚಿವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದ್ದಾರೆ. ರಾಜ್ಯ ಸರಕಾರದ ಮುಖ್ಯ […]

ಕಬಿನಿ, ದಾಂಡೇಲಿ ಕಾಡಲ್ಲಿ ವರುಷಗಳ ಕಾಲ ಹುಡುಕಿದರೂ ಸಿಗದ ಹಕ್ಕಿ ಬಸವ ನಾಡಿನ ಮನೆಯ ಹಿಂಭಾಗದಲ್ಲಿ ಸೆರೆ ಹಿಡಿದ ಧ್ರುವ ಪಾಟೀಲ

ಬಸವ ನಾಡು ವಿಜಯಪುರ- ಬಸವ ನಾಡಿನ ಯುವಕ ಮತ್ತು ವನ್ಯಜೀವಿ ಛಾಯಾಗ್ರಾಹಕ ಧ್ರುವ ಪಾಟೀಲ ಆ ಒಂದು ಹಕ್ಕಿಗಾಗಿ ವರುಷಗಟ್ಟಲೇ ಕಬಿನಿ ಮತ್ತು ದಾಂಡೇಲಿ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಫಲ ಸಿಕ್ಕಿರಲಿಲ್ಲ. ಆದರೆ, ಈಗ ಅದೇ ಆ ಒಂದು ಹಕ್ಕಿಯನ್ನು ತಮ್ಮ ಮನೆಯ ಉದ್ಯಾನದಲ್ಲಿ ಕಾಣುವ ಮೂಲಕ ಫುಲ್ ಖುಷ್ ಆಗಿ ಅದರ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ವಿಶ್ವದ ಬಲು ಅಪರೂಪದ ಮತ್ತು ಅಷ್ಟೇ ಸುಂದರವಾಗಿರುವ ಬಾನಾಡಿ ಪ್ಯಾರಾಡೈಸ್ ಫ್ಲೈಕ್ಯಾಚರ್ ಗಂಡು ಹಕ್ಕಿಯನ್ನು ಸೆರೆಯ […]

ಕೊರೊನಾ ಕಾಟ ಮುಂದುವರೆಯಲಿದೆ- ಚೀನಾದಿಂದ ಭಯವಿದೆ- ಗಣ್ಯ ವ್ಯಕ್ತಿಯ ಸ್ಥಾನಮಾನದಲ್ಲಿ ಏರಿಳಿತವಾಗಲಿದೆ- ಕಾಲಜ್ಞಾನದ ಹೊತ್ತಿಗೆ ಬಿಚ್ಚಿಟ್ಟ ಬಬಲಾದಿ ಕಾರ್ಣಿಕ

ಇಲ್ಲಿನ ಕಾರ್ಣಿಕರು ನುಡಿಯುವ ಕಾಲಜ್ಞಾನದ ಭವಿಷ್ಯ ಈವರೆಗೂ ನಿಜವಾಗುತ್ತ ಬಂದಿರುವುದು ವಿಶೇಷವಾಗಿದೆ.