ನಾನಾ ರೇಲ್ವೆ ನಿಲ್ದಾಣಗಳ ಪುನರಾಭಿವೃದ್ದಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಮೂಲಕ ಅಮೃತ ಭಾರತ ಯೋಜನೆ ಮೂಲಕ ದೇಶದ ನಾನಾ ರೇಲ್ವೆ ನಿಲ್ದಾಣಗಳ ಪುನರಾಭಿವೃದ್ದಿ, ರಸ್ತೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಸಮರ್ಪಣೆ, ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದು, ದೇಶದ ರೈಲು ನಿಲ್ದಾಣಗಳು ಸಾರ್ವಜನಿಕರಿಗೆ ಅತ್ಯಾಧುನಿಕ, ಸುಂದರ, ಸ್ವಚ್ಚ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆಗಳನ್ನು ಒದಗಿಸಲಿವೆ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಹೇಳಿದ್ದಾರೆ.   ನಗರದ ರೈಲ್ವೇ ನಿಲ್ಧಾಣದಲ್ಲಿ ಆಯೋಜಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹುಬ್ಬಳ್ಳಿ ವಿಭಾಗದ […]

ವಿಜಯಪುರ-ಬೆಂಗಳೂರು, ಮುಂಬೈಗೆ ವಂದೇ ಭಾರತ ರೈಲು ಪ್ರಾರಂಭಿಸಿ- ಸುನೀಲಗೌಡ ಪಾಟೀಲ ಆಗ್ರಹ

ವಿಜಯಪುರ: ಭಾರತದ ಸ್ವಾತಂತ್ರ‍್ಯ ಸುವರ್ಣ ಮಹೋತ್ಸವದ ಅಂಗವಾಗಿ ಪ್ರಾರಂಭಿಸಲಾಗಿರುವ ವಂದೇ ಭಾರತ ರೈಲು ಸೇವೆಯನ್ನು ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಮತ್ತು ಮುಂಬೈ- ಸೋಲಾಪುರ ರೈಲನ್ನು ವಿಜಯಪುರದ ವರೆಗೆ ವಿಸ್ತರಿಸುವಂತೆ ಆಗ್ರಹಿಸಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಕೇಂದ್ರ ಅಶ್ವಿನಿ ವೈಷ್ಣವ ಅವರಿಗೆ ಪತ್ರ ಬರೆದಿದ್ದಾರೆ. ಭಾರತದ ಸ್ವಾತಂತ್ರ‍್ಯ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಜನತೆ ಒಂದು ಸ್ಥಳದಿಂದ ಮತ್ತೋಂದು ಸ್ಳಳಕ್ಕೆ ಸಂಚರಿಸಲು ಹೆಚ್ಚುವರಿಯಾಗಿ ರೈಲುಗಳನ್ನು ಓಡಿಸುವುದರ ಜೊತೆಗೆ ರೈಲಿನಲ್ಲಿ ಸ್ವಚ್ಚತೆ ಸೇರಿದಂತೆ […]

ವಿಜಯಪುರ- ತಿರುಪತಿ ರೈಲು ಸೇವೆ ಪ್ರಾರಂಭಿಸಿ- ಸಂಸದ ರಮೇಶ ಜಿಗಜಿಣಗಿ ಅವರಿಂದ ರೇಲ್ವೆ ಇಲಾಖೆ ಜಿಎಂ ಗೆ ಪತ್ರ

ವಿಜಯಪುರ: ವಿಜಯಪುರದಿಂದ ತಿರುಪತಿಗೆ ನೇರ ರೈಲು ಸಂಚಾರ ಆರಂಭಿಸುವxತೆ ಸಂಸದ ರಮೇಶ ಜಿಗಜಿಣಗಿ ಅವರು ಹುಬ್ಬಳ್ಳಿ ರೇಲ್ವೆ ಜನರಲ್ ಮ್ಯಾನೇಜರ್ ಗೆ ಪತ್ರ ಬರೆದಿದ್ದಾರೆ. ಜಿಲ್ಲೆಯ ಜನತೆ ವಿಜಯಪುರದಿಂದ ತಿರುಪತಿಯ ಮದ್ಯೆ ರೈಲುಸೇವೆ ಪ್ರಾರಂಭಿಸುವಂತೆ ಬಹುದಿನಗಳಿಂದ ಮನವಿ ಮಾಡುತ್ತಿದ್ದಾರೆ.  ಈ ಕುರಿತು ಈಗಾಗಲೇ ಕೇಂದ್ರ ರೇಲ್ವೆ ಸಚಿವರೊಂದಿಗೂ ಚರ್ಚೆ ನಡೆಸಲಾಗಿದೆ.  ಈ ಭಾಗದಿಂದ ತಿರುಪತಿಗೆ ನೇರ ರೈಲು ಸೇವ ಇಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ವಿಜಯಪುರ- ತಿರುಪತಿ ಮಧ್ಯೆ ರೈಲು ಸಂಚಾರ ಪ್ರಾರಂಭಿಸಿ […]

ಮೆಕ್ಕೆಜೋಳ ಹಾಪರ್ ದುರಂತ- 7 ಕಾರ್ಮಿಕರ ಅಂತಿಮ ದರ್ಶನ ಪಡೆದ ಸಚಿವ ಎಂಬಿಪಿ- ಕಾರ್ಮಿಕರ ಕುಟುಂಬಕ್ಕೆ ತಲಾ ರೂ. 7 ಲಕ್ಷ ಪರಿಹಾರ, ವಿಮಾನ ಮೂಲಕ ಪಾರ್ಥಿವ ಶರೀರ ರವಾನೆ

ವಿಜಯಪುರ: ನಗರದ ಹೊರವಲಯದ ಅಲಿಯಾಬಾದ ಕೈಗಾರಿಕೆ ಪ್ರದೇಶದಲ್ಲಿ ಮೆಕ್ಕೆಜೋಳ ಸಂಗ್ರಹ ಹಾಪರ್(ತೊಟ್ಟಿ) ಕುಸಿದು ಸಾವಿಗೀಡಾದ ಏಳು ಜನರ ಪಾರ್ಥಿವ ಶರೀರಗಳನ್ನು ವಿಮಾನದ ಮೂಲಕ ಬಿಹಾರಕ್ಕೆ ಕಳುಹಿಸಿ ಕೊಡಲಾಗುವುದು.  ಅಲ್ಲದೇ, ಸಾವಿಗೀಡಾದವರ ಕುಟುಂಬಗಳಿಗೆ ತಲಾ ರೂ. 7 ಲಕ್ಷ ಪರಿಹಾರ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ಅಲಿಯಾಬಾದ ಕೈಗಾರಿಕೆ ಪ್ರದೇಶದಲ್ಲಿ ರಾಜಗುರು ಫುಡ್ ಇಂಡಸ್ರ್ರಿಯಲ್ಲಿ ಮೆಕ್ಕೆಜೋಳ ಸಂಗ್ರಹಿಸಲಾಗಿದ್ದ ಹಾಪರ್ಶ್ರ(ಬೃಹತ್ ಯಂತ್ರ) ಕುಸಿದ […]

ಯುದ್ಧಪೀಡಿತ ಇಸ್ರೆಲ್ ನಿಂದ ಬಸವನಾಡಿಗ ವಾಪಸ್ಸಾದ ಸಹಾಯಕ ಪ್ರಾಧ್ಯಾಪಕ ಸುಮೇಶ ಕೆ. ಜಿ.

ವಿಜಯಪುರ: ಯುದ್ಧ ಪೀಡಿತ ಇಸ್ರೆಲಿನಲ್ಲಿ ಸಿಲುಕಿದ್ದ ಬಸವನಾಡು ವಿಜಯಪುರದ ಸಹಾಯಕ ಪ್ರಾಧ್ಯಾಪಕ ಸುಮೇಶ ಕೆ. ಜಿ. ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ಇಸ್ರೇಲ್ ನ ಜೆರುಸೆಲಂನಿಂದ ವಿಮಾನ ಮೂಲಕ ಸ್ವದೇಶಕ್ಕೆ ಆಗಮಿಸಿದ ಅವರು, ವಿಜಯಪುರಕ್ಕೆ ಬಂದ ಬಳಿಕ ಜಿಲ್ಲಾಧಿಕಾರಿ ಟಿ. ಭೂಬಾಲನ ಅವರನ್ನು ಭೇಟಿ ಮಾಡಿದರು.  ಅಲ್ಲದೇ, ಇಸ್ರೆಲ್ ನಲ್ಲಿ ತಾವು ಎದುರಿಸಿದ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದರು.  ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಸುಮೇಶ ಕೆ. ಜಿ. ಅವರಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು. ಈ […]

ಚಂದ್ರಯಾನ 3 ಯಶಸ್ವಿ- ವಿಜಯಪುರದಲ್ಲಿ ಯುವ ಭಾರತ ಸಮಿತಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ವಿಜಯಪುರ: ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ತಕ್ಷಣ ಯುವ ಭಾರತ ಸಮಿತಿ ಕಾರ್ಯಕರ್ತರು ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದ ಹತ್ತಿರ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.  ಇಸ್ರೋಗೆ ಜಯವಾಗಲಿ ಎಂಬ ಘೋಷಣೆ ಹಾಕಿದ ಕಾರ್ಯಕರ್ತರು, ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ, ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ತಲುಪಿದ ವಿಕ್ರಂ ಲ್ಯಾಂಡರ್ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂತೋಷದ ಕ್ಷಣಗಳನ್ನು ಕೊಡುಗೆಯಾಗಿ […]

ಹಾಂಕಾಂಗ ಕಂಪನಿಯಿಂದ ಸಿದ್ಧ ಉಡುಪು ಕ್ಷೇತ್ರದ ಬಂಡವಾಳ ಹೂಡಿಕೆಗೆ ಉತ್ಸುಕತೆ- ಆರು ಸಾವಿರ ಉದ್ಯೋಗ ಸೃಷ್ಟಿಗೆ ಅವಕಾಶ: ಶಿವಾನಂದ ಪಾಟೀಲ

ವಿಜಯಪುರ: ಜಿಲ್ಲೆಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಹಾಂಕಾಂಗ್ ಮೂಲದ ಟಾಲ್ ಅಪಾರೆಲ್ಸ್ ಜವಳಿ ಹಾಗೂ ಸಿದ್ಧ ಉಡುಪು ಉತ್ಪಾದನಾ ಕಂಪನಿಯು 700 ರಿಂದ 800 ಕೋಟಿ ರೂ ಹೂಡಿಕೆ ಮಾಡಲು ಉತ್ಸುಕತೆ ತೋರಿರುವ ಹಿನ್ನೆಲೆಯಲ್ಲಿ ಕಂಪನಿಯ ನಿರ್ದೇಶಕರಾದ ಇತಾನ್ ಯಾಂಗ್ ಅವರೊಂದಿಗೆ ಬೆಂಗಳೂರಿನಲ್ಲಿ ನಿನ್ನೆ ಸಭೆ ನಡೆಸಲಾಯಿತು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಅವರು ತಿಳಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕಂಪನಿ ನಿರ್ದೇಶಕರಿಗೆ ಮಾಹಿತಿ ಒದಗಿಸಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ಪೆÇ್ರೀತ್ಸಾಹ ಹಾಗೂ […]

ರೂ. 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದ ಆರ್ ಬಿ ಐ- 30 ಸೆಪ್ಟೆಂಬರ್ 2023ರ ವರೆಗೆ ನೋಟುಗಳ ಬದಲಾವಣೆಗೆ ಅವಕಾಶ

ನವದೆಹಲಿ: ರೂ. 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ನಿರ್ಧರಿಸಿದೆ.  ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಆರ್ ಬಿ ಐ ಚೀಫ್ ಜನರಲ್ ಮ್ಯಾನೇಜರ್ ಯೋಗೇಶ ದಯಾಳ, ನವೆಂಬರ್ 2016ರಲ್ಲಿ ರೂ. 500 ಮತ್ತು ರೂ. 1000 ನೋಟುಗಳನ್ನು ಬ್ಯಾನ್ ಮಾಡಿದ ನಂತರ ಆರ್ಥಿಕ ಪರಿಸ್ಥಿತಿಗೆ ಅನುಕೂಲವಾಗಲು ರೂ. 2000 ನೋಟುಗಳನ್ನು ಪರಿಚಯಿಸಲಾಗಿತ್ತು.  ಇತರ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಜನರಿಗೆ ಲಭ್ಯವಾಗುವ ನಿಟ್ಟಿನಲ್ಲಿ ರೂ. 2000 ನೋಟನ್ನು ಬಿಡುಗಡೆ ಮಾಡಲಾಗಿತ್ತು.  […]

ಬೆಂಗಳೂರಿನಲ್ಲಿ ಏರೋ ಇಂಡಿಯಾ-2023ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ- ವಿಮಾನಗಳ ಹಾರಾಟದ ಚಿತ್ರಗಳ ನಿಮಗಾಗಿ ಇಲ್ಲಿವೆ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಶನ್ ನಲ್ಲಿ ಏರೋ ಇಂಡಿಯಾ- 2023ಕ್ಕೆ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಪಸ್ಥಿತರಿದ್ದರು. ಎರೋ ಇಂಡಿಯಾ- 2023 ವಿಮಾನ ಹಾರಾಟದ ಚಿತ್ರಗಳು ನಿಮಗಾಗಿ ಇಲ್ಲಿವೆ.

ದೆಹಲಿಯಲ್ಲಿ ಸಚಿವ ಗಜೇಂದ್ರಸಿಂಗ್ ಭೇಟಿ ಮಾಡಿದ ಕಾರಜೋಳ- ಕೃಷ್ಣಾ ಐ ತೀರ್ಪು ಗೆಜೆಟ್ ನಲ್ಲಿ ಸೇರಿಸುವ ಕುರಿತು ಚರ್ಚೆ

ನವದೆಹಲಿ: ನವದೆಹಲಿ ಪ್ರವಾಸ ಕೈಗೊಂಡಿರುವ ರಾಜ್ಯ ನೀರಾವರಿ ಸಚಿವ ಗೋವಿಂದ ಕಾರಜೋಳ‌ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ ಅವರನ್ನು ಭೇಟಿ ಮಾಡಿದ್ದಾರೆ. ಬೆಳಿಗ್ಗೆ ಕೇಂದ್ರ ಸಚಿವರ ನಿವಾಸದಲ್ಲಿ ಶೇಖಾವತ ಅವರನ್ನು ಕಾರಜೋಳ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡುವಂತೆ ಕಾರಜೋಳ ಒತ್ತಾಯಿಸಿದರು. ಅಲ್ಲದೇ, ಕೃಷ್ಣ ಮೇಲ್ದಂಡೆ ಯೋಜನೆಯ ನ್ಯಾಯಾಧೀಕರಣದ ಐ-ತಿರ್ಪನ್ನು ಕೇಂದ್ರ ಸರಕಾರದ ಗೆಜೆಟ್ ನಲ್ಲಿ ಪ್ರಕಟಿಸುವುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಚರ್ಚಿಸಿದರು.