ಸಿಎಂ ಆದ ಮೇಲೆ ಮೊದಲ ಬಾರಿಗೆ ದೆಹಲಿಗೆ ತೆರಳಿ ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಬಸವರಾಜ ಬೊಮ್ಮಾಯಿ
ನವದೆಹಲಿ: ನೂತನ ಸಿಎಂ ಆದ ಬಳಿಕ ಬಸವರಾಜ ಬೊಮ್ಮಾಯಿ ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವರು ಮತ್ತು ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ ಕೃತಜ್ಞತೆ ಸಲ್ಲಿಸಿದ್ದಾರೆ. ರಕ್ಷಣಾ ಸಚಿವರ ಭೇಟಿ ನವದೆಹಲಿಯಲ್ಲಿ ಮೊದಲಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿ ಮಾಡಿದ ಬೊಮ್ಮಾಯಿ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿದರು. ಅಲ್ಲದೇ, ಮಾತುಕತೆ ನಡೆಸಿದರು. ಜಲಶಕ್ತಿ ಸಚಿವರ ಭೇಟಿ ಇದೇ ವೇಳೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ […]
ಯಡಿಯೂರಪ್ಪ ಕಾರ್ಯವೈಖರಿ ಶ್ಲಾಘಿಸಿ ಬಸವರಾಜ ಬೊಮ್ಮಾಯಿಗೆ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೇ, ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಕ್ಷ ಮತ್ತು ಕರ್ನಾಟಕದ ಅಭಿವೃದ್ಧಿಗಾಗಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನ ವರ್ಣಿಸಲು ಶಬ್ದಗಳು ಸಾಲದು. ಕಳೆದ ಅನೇಕ ದಶಕಗಳಿಂದ ಯಡಿಯೂರಪ್ಪ ಕಷ್ಟಪಟ್ಟು ರಾಜ್ಯಾದ್ಯಂತ ಸಂಚರಿಸಿ ಜನರೊಂದಿಗೆ ಬೆರೆತು ಪಕ್ಷವನ್ನು ಬೆಳೆಸಿದ್ದಾರೆ. ಅವರ ಈ […]
ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ನಡೆದು ಬಂದ ದಾರಿಯ ಕುರಿತ ಚಿತ್ರಗಳು ಇಲ್ಲಿವೆ
ವಿಜಯಪುರ: ಮಾಜಿ ಸಿಎಂ ಪುತ್ರ ಈಗ ಹಾಲಿ ಸಿಎಂ. ಮಾಜಿ ಸಿಎಂ ದಿ. ಎಸ್. ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಈಗ ರಾಜ್ಯದ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಬಸವರಾಜ ಬೊಮ್ಮಾಯಿ ವಿವಾದಾತೀತ ನಾಯಕ. ಹಂಗಾಮಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಪಕ್ಕಾ ಶಿಷ್ಯ. ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯಿತ ಸಮುದಾಯದ ಲೀಡರ್. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಬಿಜೆಪಿ 2023ರ ಚುನಾವಣೆಯತ್ತ ದೃಷ್ಠಿ ನೆಟ್ಟು ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿ […]
ನಾಳೆ ಬುಧವಾರ ಬೆ. 11ಕ್ಕೆ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಬೊಮ್ಮಾಯಿಯನ್ನು ಆಹ್ವಾನಿಸಿದ ರಾಜ್ಯಪಾಲರು- ಸಚಿವ ಸಂಪುಟ ವಿಸ್ತರಣೆ ನಂತರ ನಿರ್ಧಾರ
ಬೆಂಗಳೂರು: ಬಸವರಾಜ ಬೊಮ್ಮಾಯಿ ನಾಳೆ ಬುಧವಾರ ಬೆ. 11ಕ್ಕೆ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕುರಿತು ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ಹಂಗಾಮಿ ಸಿಎಂ ಬಿ. ಎಸ್. ಯಡಿಯೂರಪ್ಪ, ಕೇಂದ್ರ ವೀಕ್ಷಕರಾದ ಅರುಣಸಿಂಗ್, ಧರ್ಮೇಂದ್ರ ಪ್ರಧಾನ, ಕಿಶನರೆಡ್ಡಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಮಾಜಿ ಸಚಿವರಾದ ಆರ್. ಅಶೋಕ, ಸಿ. ಟಿ. ರವಿ, ಕೆ. ಎಸ್. ಈಶ್ವರಪ್ಪ ಮತ್ತೀತರರ ಜೊತೆ ರಾಜಭವನಕ್ಕೆ […]
ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ನಾಳೆ ಪ್ರಮಾಣ ವಚನ ಸ್ವೀಕಾರ- 3 ಜನ ಡಿಸಿಎಂ ಸೇರಿ 15 ಜನ ಸಚಿವರಾಗಿ ಪ್ರಮಾಣ ಸಾಧ್ಯತೆ
ಬೆಂಗಳೂರು: ಹಂಗಾಮಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಪರಮಾಪ್ತ ಮತ್ತು ಮಾಜಿ ಸಿಎಂ ದಿ. ಎಸ್. ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಹಂಗಾಮಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಸೂಚಿಸಿದರು. ಈ ಹೆಸರಿಗೆ ಮಾಡಿ ಡಿಸಿಎಂ ಗೋವಿಂದ ಕಾರಜೋಳ ಅನುಮೋದನೆ ನೀಡಿದರು. ಕೇಂದ್ರದಿಂದ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಸಚಿವ […]
ಮಹಾರಾಷ್ಟ್ರದಲ್ಲಿ ಮಧ್ಯರಾತ್ರಿ ಪ್ರವಾಹದಲ್ಲಿ ಸಿಲುಕಿದ್ದ ಇಂಡಿಯ ಬಸ್- 19 ಜನರನ್ನು ರಕ್ಷಿಸಿದ ಎನ್ ಡಿ ಆರ್ ಎಫ್
ವಿಜಯಪುರ: ಮಹಾರಾಷ್ಟ್ರದ ಕೊಲ್ಹಾಪುರ ಬಳಿ ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ವಿಜಯಪುರ ಜಿಲ್ಲೆಯ ಇಂಡಿ ಡಿಪೋದ ಬಸ್ಸಿನಲ್ಲಿದ್ದ 19 ಜನರನ್ನು ಎನ್ ಡಿ ಆರ್ ಎಫ್ ತಂಡ ರಕ್ಷಣೆ ಮಾಡಿದೆ. ವಿಜಯಪುರ ಜಿಲ್ಲೆಯ ಇಂಡಿಯಿಂದ ಮಹಾರಾಷ್ಟ್ರದ ರತ್ನಾಗಿರಿಗೆ KA-28/F-2230 ನಂಬರಿನ ಬಸ್ ನಿನ್ನೆ ತೆರಳಿತ್ತು. ಆದರೆ, ಕೊಲ್ಹಾಪುರದಿಂದ ರತ್ನಾಗಿರಿಗೆ ಹೋಗುವ ಮಾರ್ಗದಲ್ಲಿ 2 ಕಿ. ಮೀ. ಸಂಚರಿಸಿದಾಗ ದೊಡ್ಡ ಹಳ್ಳದ ನೀರಿನಲ್ಲಿ ಕೃಷ್ಣಾ ನದಿಯ ಪ್ರವಾಹ ಏಕಾಏಕಿ ಏರಿಕೆಯಾಗಿ ಬಸ್ಸು ನಡು ನೀರಿನಲ್ಲಿ ನಿಂತು ಬಿಟ್ಟಿದೆ. ಅರ್ಧ […]
ಸ್ಥಳ ಪರಿಶೀಲನೆ ಅಧಿಕಾರಿಗಳ ಹುದ್ದೆ ಸೃಷ್ಟಿ ಅಮಿತ್ ಶಾ ಕನಸಿನ ಕೂಸು- ಅಪರಾಧ ಶೋಧ ಕಾರ್ಯದಲ್ಲಿ ಹೊಸ ಯುಗ- ಸಚಿವ ಬೊಮ್ಮಾಯಿ
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆ ಮೇರೆಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕೃತ್ಯ ಸ್ಥಳ ಪರಿಶೀಲನೆ ಅಧಿಕಾರಿಗಳ ಹುದ್ದೆ ಸೃಷ್ಟಿ ಮಾಡಲಾಗಿದೆ. ದೇಶದ ಎಲ್ಲ ಪೊಲೀಸ್ ಮಹಾನಿರ್ದೇಶಕರ ಸಭೆಯಲ್ಲಿ ಅಮಿತ್ ಶಾ ಈ ರೀತಿಯ ಅಧಿಕಾರಿಗಳ ನೇಮಕದ ಸಲಹೆ ನೀಡಿದ್ದರು. ಇದು ಅಮಿತ ಶಾ ಅವರ ಕನಸಿನ ಕೂಸು ಮತ್ತು ಇಚ್ಛೆಯಂತೆ ಈ ಹುದ್ದೆಯನ್ನು ಸೃಷ್ಟಿಸಲಾಗಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನ […]
ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಅನುಮತಿ ಬೇಕಿಲ್ಲ-ಈ ಬಗ್ಗೆ ಚರ್ಚಿಸಲು ಸರಕಾರ ಸರ್ವಪಕ್ಷ ಸಭೆ ಕರೆಯಬೇಕು-ಮಾಜಿ ಸಚಿವ ಎಂ. ಬಿ. ಪಾಟೀಲ
ವಿಜಯಪುರ: ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಅನುಮತಿ ಬೇಕಿಲ್ಲ ಈ ಕುರಿತು ಚರ್ಚಿಸಲು ಸರಕಾರ ಸರ್ವಪಕ್ಷ ಸಭೆ ಕರೆಯಬೇಕು ಮಾಜಿ ಸಚಿವ ಎಂ. ಬಿ. ಪಾಟೀಲ ಆಗ್ರಹ ವಿಜಯಪುರ: ಮೇಕೆದಾಟು ಯೋಜನೆ ರಾಜ್ಯದ ಹಕ್ಕು. ಇದಕ್ಕೆ ತಮಿಳುನಾಡು ಅನುಮತಿ ಬೇಕಿಲ್ಲ ಎಂದು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಮೇಕೆದಾಟು ವಿಚಾರ ಕುರಿತು ಚರ್ಚಿಸಲು ರಾಜ್ಯ ಸರಕಾರ ಸರ್ವ ಪಕ್ಷಗಳ ಮತ್ತು ನೀರಾವರಿ ಇಲಾಖೆ ಮಾಜಿ ಸಚಿವರ ಸಭೆ […]
ದೇಶದಲ್ಲಿಯೇ ಮೊದಲು: ರಾಜ್ಯದಲ್ಲಿ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆ ಸೃಷ್ಟಿ- ಗೃಹ ಸಚಿವ ಬೊಮ್ಮಾಯಿ
ಬೆಂಗಳೂರು: ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ದೇಶದಲ್ಲಿಯೇ ಮೊಟ್ಟ ಮೊದಲ ನುರಿತ ಹಾಗೂ ಪರಿಣಿತರ ‘ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ’ ಹುದ್ದೆಯನ್ನು ಸೃಷ್ಟಿ ಮಾಡಲಾಗಿದೆ. ಈ ಕುರಿತು ನೀಡಿರುವ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ನಾಳೆ ಜು. 13ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕೃತ್ಯ ಸ್ಥಳ […]
ಕೇಂದ್ರ ಸಂಪುಟ ವಿಸ್ತರಣೆ- ಪ್ರಾತಿನಿಧ್ಯ ವಿಜಯಪುರಕ್ಕೊ? ಚಿತ್ರದುರ್ಗಕ್ಕೊ? ಎಂಬುದೇ ಕುತೂಹಲ
ವಿಜಯಪುರ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಳು ಜೋರಾಗಿಯೇ ನಡೆಯುತ್ತಿರುವ ಮಧ್ಯೆಯೇ ರಾಜ್ಯದಿಂದ ದಲಿತರ ಕೋಟಾದಲ್ಲಿ ಯಾರಿಗೆ ಪ್ರಾತಿನಿಧ್ಯ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ. ರಾಜ್ಯದ ಐದೂ ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರಿದ್ದಾರೆ. ಇವರಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆರನೇ ಬಾರಿ ಸಂಸದರಾಗಿದ್ದರೆ, ವಿ. ಶ್ರೀನಿವಾಸ ಪ್ರಸಾದ(ಚಾಮರಾಜನಗರ) ಎರಡನೇ ಬಾರಿ, ನಾರಾಯಣಸ್ವಾಮಿ(ಚಿತ್ರದುರ್ಗ), ಉಮೇಶ ಜಾಧವ(ಕಲಬುರಗಿ) ಮತ್ತು ಮುನಿಸ್ವಾಮಿ(ಕೋಲಾರ) ಇದೇ ಮೊದಲ ಬಾರಿಗೆ ಸಂಸದರಾಗಿದ್ದಾರೆ. ರಮೇಶ ಜಿಗಜಿಣಗಿ ಈಗಾಗಲೇ ಒಂದು ಬಾರಿ ಈ ಹಿಂದಿನ […]