ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ಇಡಲಾಗುವುದು- ಎಂ. ಬಿ. ಪಾಟೀಲ
ವಿಜಯಪುರ: ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಬ್ರಿಟೀಷರ ವಿರುದ್ಧ ಹೋರಾಡಿದ ಧೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರು ಇಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವತಿಯಿಂದ ಆಯೋಜಿಸಲಾದ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರಕಾರಿ ಬಸ್ಸುಗಳಲ್ಲಿ ಉಚಿತ […]
ಸಿದ್ದು ಸಂಪುಟ ಸೇರಿದ 24 ನೂತನ ಸಚಿವರು- ಆದರೆ, ಇನ್ನೂ ಖಾತೆ ಹಂಚಿಕೆಯಾಗಿಲ್ಲ ಎಂದು ಕೆಪಿಸಿಸಿ ಸ್ಪಷ್ಟನೆ
ಬೆಂಗಳೂರು: ಕಳೆದ ಶನಿವಾರ ಎಂಟು ಜನ ಸಚಿವರ ಜೊತೆ ಅಧಿಕಾರ ಸ್ವೀಕರಿಸಿದ್ದ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ಸಂಪುಟಕ್ಕೆ ಈಗ ಹೊಸದಾಗಿ 24 ಜನ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಪ್ರಮಾಣ ವಚನ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನೂತನ ಸಚಿವರ ಪಟ್ಟಿ ಇಲ್ಲಿದೆ. ಎಚ್. ಕೆ. ಪಾಟೀಲ ಕೃಷ್ಣ ಭೈರೇಗೌಡ ಎನ್. ಚಲುವರಾಯಸ್ವಾಮಿ ಕೆ. ವೆಂಕಟೇಶ ಎಚ್. ಸಿ. ಮಹದೇವಪ್ಪ ಈಶ್ವರ […]
ದೇವು ಸತ್ಯಶೋಧಕ ಡಾಕ್ಯುಮೆಂಟರಿ ಚಿತ್ರಕ್ಕೆ ಬೆಸ್ಟ್ ಡೈರೆಕ್ಟರ್ ಅವಾರ್ಡ್
ವಿಜಯಪುರ: ಗೋವಾ ಇಂಟರನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಎಂಟರ್‍ಟೇನಮೆಂಟ್ ಸೊಸೈಟಿ ಆಫ್ ಗೋವಾದಲ್ಲಿ ನಡೆದ ಫೆಸ್ಟಿವಲ್ ಸತ್ಯಶೋಧಕ ಡಾಕ್ಯುಮೆಂಟರಿ ಚಿತ್ರಕ್ಕೆ ಬಸವ ನಾಡಿನ ಯುವಕ ದೇವು ಅಂಬಿಗ ಅವರಿಗೆ ಬೆಸ್ಟ್ ಡೈರೆಕ್ಟರ್ ಅವಾರ್ಡನ್ನು ಲಭಿಸಿದೆ. ಯೂನಿವರ್ಸಲ್ ಪಿಲ್ಮ್ ಮೇಕರ್ ಕೌನ್ಸಿಲ್ ಮತ್ತು ನವ ಕರ್ನಾಟಕ ಪಿಲ್ಮ್ ಅಕಾಡೆಮಿ ವತಿಯಿಂದ ಈ ಅವಾರ್ಡ್‍ನ್ನು ವಿತರಿಸಲಾಯಿತು. ಜಿಲ್ಲೆಯ ಯುವ ಪ್ರತಿಭೆ ದೇವು ಕೆ ಅಂಬಿಗ ಈ ಹಿಂದೆ ಸತ್ಯಶೋಧಕ ಎಂಬ ಡಾಕ್ಯುಮೆಂಟರಿ ಮಾಡಿ ರಾಜ್ಯಾದ್ಯಂತ ಎಲ್ಲಾ ಶಾಲಾ ಮಕ್ಕಳಿಗೆ ಈ ಚಿತ್ರವನ್ನು […]
ಮಗಳೆದುರು ತಾಯಿಯನ್ನು ಕೊಲೆ ಮಾಡಿದ ಆರೋಪಿಗೆ ಮರಣ ದಂಡನೆ ವಿಧಿಸಿದ ವಿಜಯಪುರ ನ್ಯಾಯಾಲಯ
ವಿಜಯಪುರ: ಮಹಿಳೆಯೊಬ್ಬಳನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿಗೆ ವಿಜಯಪುರ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ಆರೋಪಿ ಅಕ್ಬರ್ ಉರ್ಫ್ ಅಕ್ಬರಬಾಷಾ ಗಾಲಿಬಸಾಬ ಬಾಗವಾನ ಎಂಬಾತನ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸತೀಶ ಎಲ್. ಪಿ. ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ ಎಂದು ಸರಕಾರ ಪರ ಅಭಿ.ಯೋಜಕಿ ವಿ. ಎಸ್. ಇಟಗಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಘಟನೆ ಹಿನ್ನೆಲೆ […]
ವಾಟ್ಸಾಪ್ ನಲ್ಲಿ ಪಾಕಿಸ್ತಾನದ ಪರ ಮೆಸೇಜ್ ಬರೆದು ಕೃಷ್ಣನ ಜನ್ಮಸ್ಥಾನ ಸೇರಿದ ನಾಲತವಾಡದ ಯುವಕ ವೀರೇಶ
ವಿಜಯಪುರ: ಯುವಕನೊಬ್ಬ ವಾಟ್ಸಾಪ್ ನಲ್ಲಿ ಪಾಕಿಸ್ತಾನದ ಪರ ಬರಹ ಬರೆದು ಕೃಷ್ಣನ ಜನ್ಮಸ್ಥಾನ ಸೇರಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ನಡೆದಿದೆ. ನಾಲತವಾಡ ಪಟ್ಟಣದ ಕಾನಬಾವಿ ಓಣಿಯ ನಿವಾಸಿ ವೀರೇಶ ಪರಯ್ಯ ಕರ್ಪೂರಮಠ(31) ಎಂಬಾತ ಈ ಕೃತ್ಯ ಎಸಗಿದ್ದು, ಈತನನ್ನು ಬಂಧಿಸಿರುವ ಮುದ್ದೇಬಿಹಾಳ ಪೊಲೀಸರು ನ್ಯಾಯಾಧೀಶರ ಎದುರು ಹಾಜರು ಪಡಿಸಿ ಕೋರ್ಟಿನ ಆದೇಶದಂತೆ ವಿಜಯಪುರ ನಗರದ ದರ್ಗಾದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮುದ್ದೇಬಿಹಾಳ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ಅಪ್ಪಾಜಿ ನಾಡಗೌಡ ಹೆಸರಿನ […]
ಕೃಷ್ಣಾ ನದಿಗೆ ನೀರು ಬಿಡಲು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮನವಿ- 4 ಟಿಎಂಸಿ ನೀರು ಬಿಡುಗಡೆ ಮಾಡಲು ಮಹಾ ಡಿಸಿಎಂ ದೇವೇಂದ್ರ ಫಡ್ನವಿಸ್ ಅಧಿಕಾರಿಗಳಿಗೆ ಸೂಚನೆ
ವಿಜಯಪುರ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜನ, ಜಾನುವಾರುಗಳಗೆ ಕುಡಿಯಲು ನೀರು ಬಿಡುವಂತೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾಡಿದ ಮನವಿಗೆ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ ಒಪ್ಪಿಗೆ ಸೂಚಿದಿದ್ದಾರೆ. ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಪ್ರವಾಸದಲ್ಲಿರುವ ದೇವೇಂದ್ರ ಫಡ್ನವೀಸ ಅವರನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಆ ಭಾಗದ ಮುಖಂಡರು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಣ್ಣಾಸಾಹೇಬ ಜೊಲ್ಲೆ, ಮಹಾರಾಷ್ಟ್ರದಿಂದ […]
ವೃದ್ಧೆಯ ಭಕ್ತಿ- ಗುಳೆ ತಪ್ಪಿಸಿ ಸುಖ ಸಂಸಾರಕ್ಕೆ ಕಾರಣರಾದ ಆಧುನಿಕ ಭಗೀರಥನ ಚುನಾವಣೆ ಖರ್ಚಿಗೆ ರೂ. 50 ಸಾವಿರ ನೀಡಲು ನಿರ್ಧಾರ
ವಿಜಯಪುರ: ನೀರಾವರಿ ಸೌಲಭ್ಯ ಒದಗಿಸಿ ಜನ ಗುಳೆ ಹೋಗುವುದನ್ನು ತಪ್ಪಿಸಲು ಕಾರಣರಾದ ಆಧುನಿಕ ಭಗೀರಥ ಎಂ. ಬಿ. ಪಾಟೀಲ ಅವರಿಗೆ ಈ ಬಾರಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮತ್ತು ಖರ್ಚಿಗಾಗಿ ಬಂಜಾರಾ ವೃದ್ಧೆಯೊಬ್ಬರು ರೂ. 50 ಸಾವಿರ ಹಣ ನೀಡಲು ನಿರ್ಧರಿಸಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಎಲ್. ಟಿ. 2ರ ವೃದ್ದೆ ಪುತಲಿಬಾಯಿ ರಾಮು ರಾಠೋಡ(65) ಎಂ. ಬಿ. ಪಾಟೀಲರ ಮೇಲಿನ ಅಭಿಮಾನದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುತಲಿಬಾಯಿ […]
ಆದಿ ಬಣಜಿಗರ ಸಮುದಾಯ ಅಭಿವೃದ್ಧಿಯತ್ತ ಸಾಗಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ಆದಿ ಬಣಜಿಗರ ಸಮುದಾಯ ಕಾಯಕ ನಿಷ್ಠ ಸಮುದಾಯ. ಈ ಸಮುದಾಯದ ಮಕ್ಕಳು ಶಿಕ್ಷಣ ಪಡೆದು ಬುದ್ದಿವತಂರಾಗಬೇಕು. ಆದಿ ಬಣಜಿಗರ ಸಮುದಾಯವೂ ಅಭಿವೃದ್ಧಿಯತ್ತ ಸಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಆದಿ ಬಣಜಿಗ ಸಮುದಾಯವನ್ನು ಪ್ರವರ್ಗ 2ಡಿ ಗೆ ಸೇರಿಸಿರುವುದಕ್ಕೆ ಹುಬ್ಬಳ್ಳಿಯಲ್ಲಿ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. ಹುಬ್ಬಳ್ಳಿಗೆ ಬಂದಾಗ ಮಗಳು ತವರು ಮನೆಗೆ ಬಂದ ಹಾಗೇ ಆಗುತ್ತದೆ. ನಮ್ಮ ತಂದೆಯವರು ಈ ಊರಿನ ಜೊತೆಗಿನ ಸಂಬಂಧ, […]
ಮೀಸಲಾತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಮುಖಂಡರಿಂದ ಸನ್ಮಾನ
ವಿಜಯಪುರ: ಮೀಸಲಾತಿ ಪ್ರಮಾಣ ಹೆಚ್ಚಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪಂಚಮಸಾಲಿ ಸಮಾಜದ ಮುಖಂಡರು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು. ಪಂಚಮಸಾಲಿ ಸಮಾಜದ ಬಹು ದಿನಗಳ ಬೇಡಿಕೆಯಾದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ, ಆದೇಶ ಪ್ರತಿಯನ್ನು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು, ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ಸ್ಬಾಮೀಜಿಗಳು, ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ಎಂ. ಎಸ್. […]
ಸಾರ್ವಜನಿಕ ಸಮಾರಂಭದಲ್ಲಿ ಮೂರು ಬಾರಿ ಸಿಎಂಗೆ ಮಹತ್ವದ ಫೋನ್ ಕಾಲ್- ಮೈಕ್ ಬಂದ್ ಮಾಡಿಸಿದಸಿಎಂ ಬಸವರಾಜ ಬೊಮ್ಮಾಯಿ
ವಿಜಯಪುರ: ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಉದ್ಘಾಟನೆಗೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂರು ಬಾರಿ ಕಾರ್ಯಕ್ರಮದ ಮೈಕ್ ಬಂದ್ ಮಾಡಿಸಿ ಫೋನ್ ನಲ್ಲಿ ಮಾತನಾಡಿದ ಪ್ರಸಂಗ ಬಸವನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ. ನಾಲತವಾಡ ಪಟ್ಟಣದ ಪಟ್ಟಣದ ಶರಣ ವಿರೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ವೇದಿಕೆಗೆ ಬರುತ್ತಿದ್ದಂತೆ ಮೊಬೈಲ್ ನಲ್ಲಿ ಮಾತನಾಡುತ್ತ ಬ್ಯೂಸಿಯಾದರು. ಮೊದಲ ಬಾರಿಗೆ ಮೊಬೈಲ್ ಫೋನ್ ರಿಂಗಣಿಸಿದಾಗ ಕಾರ್ಯಕ್ರಮ ನಿರೂಪಕರು ಮಾತನಾಡುವುದನ್ನು ನಿಲ್ಲಿಸಲು […]