Basaveshwar Airport: ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ವಿಮಾನ ನಿಲ್ದಾಣ ನಾಮಕರಣ- ಸಚಿವ ಗೋವಿಂದ ಕಾರಜೋಳ ಸಂತಸ

ಬೆಂಗಳೂರು: ವಿಜಯಪುರ ವಿಮಾನ ನಿಲ್ದಾಣಕ್ಕೆ 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದಕ್ಕೆ ನೀರಾವರಿ ಸಚಿವ ಗೋವಿಂದ ಕಾರಜೋಳ ಅತ್ಯಂತ ಹರ್ಷ ವ್ಯಕ್ತಪಡಿಸಿದ್ದಾರೆ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಐತಿಹಾಸಿಕ ನಿರ್ಣಯಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ವಿಜಯಪುರದಲ್ಲಿದಲ್ಲಿ ಎಟಿಆರ್-72 ಮಾದರಿ ವಿಮಾನ ಹಾರಾಟಕ್ಕಾಗಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣವನ್ನು ಏರ್ ಬಸ್-320 ಮಾದರಿಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲು ರೂ. 347.92 ಕೋ. (ಜಿ.ಎಸ್.ಟಿ. ಸೇರಿ) […]

Ainapur Felicitation: ವಸುಂಧರಾ ಮನೋಹರ ಐನಾಪುರ ಅವರಿಗೆ ಉಡುಪಿಯಲ್ಲಿ ಎಸ್ ಬಿ ಐ ನಿಂದ ಸನ್ಮಾನ

ವಿಜಯಪುರ: ಶ್ರೀ ಕೃಷ್ಣ ನಗರಿ ಉಡುಪಿಯ ಅಮೃತ ಗಾರ್ಡನ್ ದಲ್ಲಿ ನಡೆದ ಅಖಿಲ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್‍ದ ಅಖಂಡ 75 ವರ್ಷಗಳ ಸಾರ್ಥಕ ಸೇವೆಯ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ, ವಸುಂದರಾ ಮನೋಹರ ಐನಾಪುರ ಅವರನ್ನು ಸನ್ಮಾನಿಸಲಾಯಿತು.  ಬ್ಯಾಂಕಿನ ಕೇಂದ್ರ ಸಮಿತಿಗೆ ಪ್ರಥಮ ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾಗಿ ದಕ್ಷ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಸನ್ಮಾನ ನಡೆಯಿತು. ಈ ಸಂದರ್ಭದಲ್ಲಿ ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೆಡರೇಶನ್ […]

Hospital CM: ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ವಿಜಯಪುರ: ನಗರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರ ಬಳಿ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ನಿರ್ಮಿಸಿರುವ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುಣ್ಯಭೂಮಿ ವಿಜಯಪುರಕ್ಕೆ ಪ್ರತಿ ಭಾರಿ ಭೇಟಿ ನೀಡಿದಾಗಲೂ ಈ ನೆಲದ ಸ್ಪರ್ಶದಿಂದಾಗಿ ನಾಡಿನಲ್ಲಿ ಹಲವಾರು ಕೆಲಸ ಮಾಡುವ ಸ್ಫೂರ್ತಿದಾಯಕ ಜ್ಞಾನ ಪಡೆದಿದ್ದೇನೆ ಎಂದು ತಿಳಿಸಿದರು. ವಿಜಯಪುರ ಜಿಲ್ಲೆಯ ಸಿದ್ದೇಶ್ವರ ಶ್ರೀಗಳ ಆಶೀರ್ವಾದದ ಬಲದೊಂದಿಗೆ ಈ […]

CM Logo: ವಿಜಯಪುರದಲ್ಲಿ ನಡೆಯಲಿರುವ 37ನೇ ಕಾರ್ಯನಿರತರ ಪತ್ರಕರ್ತರ ಸಂಘದ ಸಮ್ಮೇಳದ ಲೋಗೋ ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ವಿಜಯಪುರ: ವಿಜಯಪುರದಲ್ಲಿ ನಡೆಯಲಿರುವ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ಸಮ್ಮೇಳನದ ಲೋಗೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಸಿಎಂ, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ಲೋಗೋವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವಿಜಯಪುರ ಕಾನಿಪ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕಾನಿಕ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ಕಾನಿಪ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಅವಿನಾಶ ಬಿದರಿ ಮುಂತಾದವರು […]

Earthquake Again: ಬಸವ ನಾಡಿನಲ್ಲಿ ಒಂದೇ ರಾತ್ರಿ ಮೂರು ಬಾರಿ ಭೂಕಂಪನ- ಎಲ್ಲಿ ಗೊತ್ತಾ?

ವಿಜಯಪುರ: ಕಳೆದ ಕೆಲವು ದಿನಗಳಿಂದ ನೆಮ್ಮದಿಯಿಂದಿದ್ದ ಬಸವ ನಾಡಿನ‌ ಜನ ಈಗ ಭೂಕಂಪನದಿಂದಾಗಿ ಮತ್ತೆ ಬೆಚ್ಚಿ ಬಿದ್ದಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಿಂದ ಸುಮಾರು‌ 2.50 ಕಿ. ಮೀ. ದೂರದಲ್ಲಿ ವಾಯುವ್ಯ ಭಾಗದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ನಸುಕಿನ ಜಾವ 3.45ಕ್ಕೆ ರಿಕ್ಚರ್ ಮಾಪಕದಲ್ಲಿ1.9 ತೀವ್ರತೆ, ಬೆ. 3.46ಕ್ಕೆ 2 ತೀವ್ರತೆ ಮತ್ತು ಬೆ. 5.56ಕ್ಕೆ 3.2 ತೀವ್ರತೆಯ ಭೂಕಂಪನ ಉಂಟಾಗಿದೆ. ಭೂಮಿಯ ಕೆಳಗಡೆ 10 ಕಿ. ಮೀ.‌ ಆಳದಲ್ಲಿ‌ ಈ ಭೂಕಂಪನ ಉಂಟಾಗಿದೆ […]

Lokayukta Raid: ಬೆಳ್ಳಂಬೆಳಿಗ್ಗೆ ಧೂಳಖೇಡ್ ಆರ್ ಟಿ ಓ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಧಾಳಿ

ವಿಜಯಪುರ: ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಚಡಚಣ ತಾಲೂಕಿನ ಧೂಳಖೇಡ ಆರ್ ಟಿ ಓ ಚೆಕ್ ಪೋಸ್ಟ್ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತರು ಧಾಳಿ ನಡೆಸಿದ್ದಾರೆ. ಸಾರಿಗೆ ವಾಹನ ಸವಾರರಿಂದ ಹಣ ವಸೂಲಿಗೆ ಈ ಚೆಕ್ ಪೋಸ್ಟ್ ನಲ್ಲಿ ಲಂಚ ಪಡೆಯಲಾಗುತ್ತದೆ ಎಂಬ ಆರೋಪ ಮುಂಚೆಯಿಂದಲೂ ಇದೆ.  ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 5 ಗಂಟೆಗೆ ಧಾಳಿ ನಡೆಸಿರುವ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ನೇತೃವದ ಸುಮಾರು 20 ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಆರ್ ಟಿ ಓ ಚೆಕ್ […]

Drugs Seize: ಬೆಂಗಳೂರಿನಲ್ಲಿ ಅಬಕಾರಿ ದಾಳಿ- ರೂ. 1. 40 ಲಕ್ಷ ಮೌಲ್ಯದ ಮಾದಕ ದ್ರವ್ಯ ವಶ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿ ರೂ. 1.40 ಲಕ್ಷ ಮೌಲ್ಯದ ಒಣಗಿದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಜಂಟಿ ಆಯುಕ್ತ ಎ. ಎಲ್. ನಾಗೇಶ ಮತ್ತು ಉಪಾಯುಕ್ತ ವೀರಣ್ಣ ಬಾಗೇವಾಡಿ ಮಾರ್ಗದರ್ಶನದಲ್ಲಿ ಮಹದೇವಪುರ ವಲಯ ವ್ಯಾಪ್ತಿಯ ಅಬಕಾರಿ ಇನ್ಸಪೆಕಕ್ಟರ್ ಎ. ಎ. ಮುಜಾವರ ಮತ್ತು ಸಿಬ್ಬಂದಿ ಕುಂದಲಹಳ್ಳಿ ಗೇಟ್ ಹತ್ತಿರ ಧಾಳಿ ನಡೆಸಿದ್ದಾರೆ.  ಈ ಸಂದರ್ಭದಲ್ಲಿ ಕೇರಳ ಮೂಲಕ ಆಲಪ್ಪುಳ ಮೂಲದ ಆರೋಪಿ ಸಿಬಿ ಕೆ. ಜೆ. ಎಂಬಾತನನ್ನು ಬಂಧಿಸಲಾಗಿದೆ. ಅಲ್ಲದೇ, ಆರೋಪಿ […]

Govt Sunilgouda Patil: ಗ್ರಾ. ಪಂ. ಅಧ್ಯಕ್ಷರಿಗೆ ಕೇರಳ ಮಾದರಿ ಸೌಲಭ್ಯ ನೀಡಲು ಸರಕಾರ ನಿರ್ಲಕ್ಷ್ಯ- ಸದನದಲ್ಲಿ ಏಳು ಬಾರಿ ಧ್ವನಿ ಎತ್ತಿದರೂ ಸ್ಪಂದಿಸಿಲ್ಲ- ಸುನೀಲಗೌಡ ಪಾಟೀಲ

ವಿಜಯಪುರ: ಗ್ರಾ. ಪಂ. ಅಧ್ಯಕ್ಷರಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ ನೀಡುವ ಬಗ್ಗೆ ಸರಕಾರ ಮತ್ತೊಮ್ಮೆ ನಿರಾಸಕ್ತಿ ತೋರಿಸಿದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಗ್ರಾ. ಪಂ. ಅಧ್ಯಕ್ಷರಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸುತ್ತ ಬಂದಿದ್ದೇನೆ.  ಈ ಕುರಿತು ಇಂದು ಸದನದಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪಷ್ಟ ಉತ್ತರ ನೀಡದೆ ನುಣುಚಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾ. ಪಂ. […]

Sainik School: ವಿಜಯಪುರ ಸೈನಿಕ ಶಾಲೆಯ 59ನೇ ಸಂಸ್ಥಾಪನೆ ದಿನಾಚರಣೆ- ಭಾರತೀಯ ಸೇನಾ ಉಪದಂಡನಾಯಕ ಲೆ. ಜ. ಬಿ. ಎಸ್. ರಾಜು ಭಾಗಿ

ವಿಜಯಪುರ: ರಾಜ್ಯದ ಪ್ರತಿಷ್ಠಿತ ಮತ್ತು ಮೊದಲ ಮೊದಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯಪುರ ಸೈನಿಕ ಶಾಲೆಯ 59ನೇ ಸಂಸ್ಥಾಪನೆ ದಿನ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಉಪ ದಂಡನಾಯಕ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ಲೆಫ್ಟಿನೆಂಟ್ ಜನರಲ್ ಬಿ. ಎಸ್. ರಾಜು ಮುಖ್ಯ ಅತಿಥಿಯಾಗಿ ಪಾಲ್ಗೋಂಡು ಗಮನ ಸೆಳೆದರು.   ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ಶಾಲೆಯ ಆವರಣದಲ್ಲಿರುವ ಹುತಾತ್ಮ ಸೈನಿಕರ ಸ್ಮಾರಕಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದ ಅವರನ್ನು ಶಾಲೆಯ ವಿದ್ಯಾರ್ಥಿಗಳು […]

Bheema DC Visti: ಮಹಾಮಳೆ ಎಫೆಕ್ಟ್- ಭೀಮಾ ನದಿಗೆ ನೀರು ಬಿಡುಗಡೆ- ನದಿತೀರದ ಗ್ರಾಮಗಳಿಗೆ ಡಿಸಿ ಭೇಟಿ, ಸುರಕ್ಷಿತ ಸ್ಥಳಕ್ಕೆ ತೆರಳಲು ಗ್ರಾಮಸ್ಥರಿಗೆ ಸೂಚನೆ

ವಿಜಯಪುರ: ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಆಗುತ್ತಿದ್ದು ಅಲ್ಲಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನದಿಗಳಿಗೆ ಹೊರ ಬಿಡಲಾಗಿದೆ.  ಇದೇ ರೀತಿ ಮಹಾರಾಷ್ಟ್ರ ಉಜನಿ ಜಲಾಷಯದಿಂದ ಭೀಮಾ ನದಿಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಂಭವನೀಯ ಪ್ರವಾಹದ ಕುರಿತು ಪರಿಶೀಲನೆ ನಡೆಸಲು ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಚಡಚಣ ಮತ್ತು ಇಂಡಿ ತಾಲೂಕಿನ ಭೀಮಾ ತೀರದ ಗ್ರಾಮಗಳಿಗೆ ಭೇಟಿ ನೀಡಿದರು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವ್ಯಾಪ್ತಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ […]