Bheema DC Visti: ಮಹಾಮಳೆ ಎಫೆಕ್ಟ್- ಭೀಮಾ ನದಿಗೆ ನೀರು ಬಿಡುಗಡೆ- ನದಿತೀರದ ಗ್ರಾಮಗಳಿಗೆ ಡಿಸಿ ಭೇಟಿ, ಸುರಕ್ಷಿತ ಸ್ಥಳಕ್ಕೆ ತೆರಳಲು ಗ್ರಾಮಸ್ಥರಿಗೆ ಸೂಚನೆ

ವಿಜಯಪುರ: ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಆಗುತ್ತಿದ್ದು ಅಲ್ಲಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನದಿಗಳಿಗೆ ಹೊರ ಬಿಡಲಾಗಿದೆ.  ಇದೇ ರೀತಿ ಮಹಾರಾಷ್ಟ್ರ ಉಜನಿ ಜಲಾಷಯದಿಂದ ಭೀಮಾ ನದಿಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಂಭವನೀಯ ಪ್ರವಾಹದ ಕುರಿತು ಪರಿಶೀಲನೆ ನಡೆಸಲು ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಚಡಚಣ ಮತ್ತು ಇಂಡಿ ತಾಲೂಕಿನ ಭೀಮಾ ತೀರದ ಗ್ರಾಮಗಳಿಗೆ ಭೇಟಿ ನೀಡಿದರು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವ್ಯಾಪ್ತಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ […]

Earthquake Sunilgouda: ಬಸವ ನಾಡಿನಲ್ಲಿ ಭೂಕಂಪನ- ಸದನದಲ್ಲಿ ಧ್ವನಿ‌ ಎತ್ತಿದ ಸುನೀಲಗೌಡ ಪಾಟೀಲ

ವಿಜಯಪುರ: ಬಸವನ ನಾಡು ವಿಜಯಪುರ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿರುವ ಭೂಕಂಪನದ ಕುರಿತು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ವಿಧಾನ ಮಂಡಲ ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಈವರೆಗೆ ಸುಮಾರು 52 ದಾರಿ ಭೂಕಂಪನವಾಗಿದೆ. ಜನರು ಆತಂಕದಲ್ಲಿದ್ದಾರೆ. ಮನೆಯ ಹೊರಗಡೆ ಮಲಗಬೇಕೆಂದರೆ ಮಳೆ ಇರುತ್ತದೆ. ಮನೆ ಒಳಗಡೆ ಕುಳಿತುಕೊಳ್ಳಬೇಕೆಂದರೆ ಭೂಕಂಪನವಾಗುತ್ತದೆ ಎಂದು ಜನ ಹೆದರುತ್ತಿದ್ದಾರೆ.  2010ರಲ್ಲಿ 24 ಬಾರಿ ಮತ್ತು 2021ರಲ್ಲಿ 25 ಬಾರಿ ಸೇರಿದಂತೆ ಈವರೆಗೆ ಒಟ್ಟು 52 ಬಾರಿ ಧೂಮಿ ಕಂಪಿಸಿದೆ ಎಂದು […]

Heavy Rain: ಗುಮ್ಮಟ ನಗರಿಯಲ್ಲಿ ಭಾರಿ ಮಳೆ ಹಲವಾರು ಕಡೆ ಮನೆಗಳಿಗೆ ನುಗ್ಗಿದ ನೀರು ಸಾರ್ವಜನಿಕರ ಪರದಾಟ ಸುದ್ದಿಗೆ ಸಂಬಂಧಿಸಿದ ವಿಡಿಯೋ-1.

ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಸಂಜೆ ಸುರಿದ ಧಾರಾಕಾರ  ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಜಯಪುರ ನಗರದಲ್ಲಿ ಸಂಜೆ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸುರಿದ ಧಾರಾಕಾರಯಿಂದಾಗಿ ಸಾರ್ವಜಿಕರಿಗೆ ತೀವ್ರ ತೊಂದರೆಯಾಗಿದೆ.  ಭಾರಿ ಮೋಡ ಕವಿದ ವಾತಾವರಣ ಮತ್ತು ಧಾರಾಕಾರ ಮಳೆಯಿಂದಾಗಿ ಕೇವಲ ಐದು ಅಡಿ ಎದುರಿಗಿದ್ದ ವಸ್ತುಗಳು ಸ್ಪಷ್ಟವಾಗಿ ಕಾಣಿಸದಂಥ ಪರಿಸ್ಥಿತಿ ಉಂಟಾಗಿತ್ತು. ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲನಿ, ಶಹಾಪೇಟೆ, ಅಪ್ಸರಾ ಟಾಕೀಸ್, ಆದರ್ಶ ನಗರ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಸಾರ್ವಜನಿಕರು ಹೈರಾಗಣಾಗಿದ್ದಾರೆ. […]

Varsity Convocation: ಸೆ. 12 ರಂದು ಬಿ ಎಲ್ ಡಿ ಇ ಡೀಮ್ಡ್ ವಿವಿಯ 10ನೇ ಘಟಿಕೋತ್ಸವ ಕಾರ್ಯಕ್ರಮ

ವಿಜಯಪುರ: ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಕಾರ್ಯಕ್ರಮ ಸೆ. 12ರಂದು ಸೋಮವಾರ ರಂದು ವಿವಿ ಆವರಣದಲ್ಲಿರುವ ಗ್ರಂಥಾಲಯ ಸಭಾಭವನದಲ್ಲಿ ನಡೆಯಲಿದೆ. ಬೆ. 11ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಚೆನ್ನೈನ ಪೊರೂರ್ ನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಸಂಸ್ಥೆಯ ಕುಲಪತಿ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಪ್ರೊ. ಡಾ. ಪಿ. ವಿ. ವಿಜಯರಾಘವನ ಮುಖ್ಯ ಅತಿಥಿಗಳಾಗಿ ಪಾಲ್ಗೋಂಡು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. […]

NCC Javeed Jamadar: ಎನ್ ಸಿ ಸಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಪ್ರೇರೆಪಿಸುತ್ತದೆ- ಡಾ. ಜಾವೀದ ಜಮಾದಾರ

ವಿಜಯಪುರ: ಏಕತೆ ಮತ್ತು ಶಿಸ್ತು ದೇಶಾಭಿಮಾನ ಎಂಬ ಧೈಯವಾಕ್ಯ ಹೊಂದಿರುವ ಎನ್ ಸಿ ಸಿ ದೇಶದ ಯುವಕರಿಗೆ ತಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಪ್ರೇರೆಪಿಸುತ್ತಿದೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರ ಫೆಡರೇಶನದ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವಿದ ಜಮಾದಾರ ಹೇಳಿದ್ದಾರೆ.  ವಿಜಯಪುರ ನಗರದ ಎನ್ ಸಿ ಸಿ ತರಬೇತಿ ಕೇಂದ್ರದಲ್ಲಿ 36 ಕರ್ನಾಟಕ ಎನ್ ಸಿ ಸಿ ಬಟಾಲಿಯನ್ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ಬೆಂಗಳೂರು ಕೇಂದ್ರ ರಕ್ಷಣಾ ಮಂತ್ರಾಲಯ […]

VC Corruption Yatnal: ವಿವಿ ಕುಲಪತಿಯಾಗುವವರು ನಾಲ್ಕೈದು ಕೋಟಿ ಹಣ ನೀಡಿ ಅಧಿಕಾರಕ್ಕೆ ಬಂದಿರುತ್ತಾರೆ- ನಂತರ ಭ್ರಷ್ಟಾಚಾರ ಮಾಡುತ್ತಾರೆ- ಶಾಸಕ ಯತ್ನಾಳ ಗಂಭೀರ ಆರೋಪ

ವಿಜಯಪುರ: ವಿಶ್ವವಿದ್ಯಾಲಯಗಳಿಗೆ ಕುಲಪತಿಗಳಾಗಿ ಬರುವವರು ನಾಲ್ಕೈದು ಕೋಟಿ ಹಣ ನೀಡಿಯೇ ಅಧಿಕಾರಕ್ಕೆ ಹುದ್ದೆ ವಹಿಸಿಕೊಂಡಿರುತ್ತಾರೆ.  ನಂತರ ಅವರು ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುವ ಭ್ರಷ್ಟಾಚಾರ ವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪನೆಯಾಗಬಾರದು.  ಇದರಿಂದ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು. ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುತ್ತದೆ.  ಉಪಕುಲಪತಿ ಆಗುವವರು ತಮ್ಮ ನೇಮಕಾತಿಗಾಗಿ ನಾಲ್ಕೈದು ಕೋಟಿ ರೂಪಾಯಿ […]

Chitradurga Yatnal: ಟಿಪ್ಪು ಪರ ಒಲವಿದ್ದವರಾರೂ ಉದ್ಧಾರವಾಗಿಲ್ಲ- ಚಿತ್ರದುರ್ಗ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ- ಶಾಸಕ‌ ಯತ್ನಾಳ

ವಿಜಯಪುರ: ಟಿಪ್ಪು ಸುಲ್ತಾನನ ಪರ ಒಲವಿದ್ದವರಾರಿಗೂ ಒಳ್ಲೆಯದಾಗಿಲ್ಲ. ಈಗ ಚಿತ್ರದುರ್ಗ ಮುರುಘಾ ಶರಣರಿಗೆ ಸಂಕಷ್ಟ ಎದುರಾಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಮಠಕ್ಕೆ ಉತ್ತಮ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಚಿತ್ರದುರ್ಗ ಮಠ ಕೆಲಸವನ್ನು ಸರಕಾರ ಮಾಡಬೇಕು. ಒಬ್ಬ ಒಳ್ಳೆಯ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು. ಸರಕಾರ ಮತ್ತು ವೀರಶೈವ ಲಿಂಗಾಯತ ಸಮಾಜ ಮುಂಬರುವ ದಿನಗಳಲ್ಲಿ ಒಳ್ಳೆಯ ಮಠಾಧೀಶರನ್ನು ಅಲ್ಲಿಗೆ […]

School Ganesha: ಗಣೇಶನ ವಿಚಾರಕ್ಕೆ ಗದ್ದಲ- ಶಾಲೆಯ ಹೊರಗೆ ಪಾಠ ಕೇಳಿದ ವಿದ್ಯಾರ್ಥಿಗಳು- ಪೊಲೀಸರ ಮಧ್ಯಸ್ಥಿಕೆಯಿಂದ ಬಗೆಹರಿದ ಸಮಸ್ಯೆ

ವಿಜಯಪುರ: ಸರಕಾರಿ ಶಾಲೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ವಿಚಾರ ತಾರಕಕ್ಕೇರಿ ವಿದ್ಯಾರ್ಥಿಗಳು ಶಾಲೆಗೆ ಕೀಲಿ ಹಾಕಿ ಪ್ರತಿಭಟನೆ ಮಾಡಿದ ಘಟನೆ ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರಿನಲ್ಲಿ ನಡೆದಿದೆ. ಅಷ್ಟೇ ಅಲ್ಲ,ವಿದ್ಯಾರ್ಥಿಗಳು ಶಾಲೆಯ ಹೊರಗಡೆ ಮರದ ಕೆಳಗಡೆ ಕುಳಿತು ಪಾಠ ಆಲಿಸಿದ್ದಾರೆ. ಯಲಗೂರು ಸರಕಾರಿ ಪ್ರೌಢ ಶಾಲೆಯಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡದೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜೊತೆ ಸೇರಿದ ಪೋಷಕರು ಕೂಡ ಪ್ರತಿಭಟನೆ ನಡೆಸಿದ್ದಾರೆ. ಈ ಶಾಲೆಯಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿ ಆಚರಣೆ […]

IPS Promotions: ವಿಜಯಪುರ ಎಎಸ್ಪಿ ಡಾ. ಅರಸಿದ್ಧಿ ಸೇರಿ ಐಪಿಎಸ್ ಆಗಿ ಬಡ್ತಿ ಹೊಂದಿದ ಏಳೂ ಜನ ಅಧಿಕಾರಿಗಳಿಗೆ ಹಾಲಿ ಸ್ಥಳದಲ್ಲಿ ಮುಂದುವರಿಕೆ- ರಾಜ್ಯದಲ್ಲಿ ಮೊದಲ ಬಾರಿಗೆ ಈ ಸಂಪ್ರದಾಯ

ವಿಜಯಪುರ: ಕೇಂದ್ರ ಸರಕಾರ ಇತ್ತೀಚೆಗಷ್ಟೇ ಏಪಿಎಸ್ ಆಗಿ ಬಡ್ತಿ ನೀಡಿದ ಏಳು ಜನ ಹಿರಿಯ ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರಕಾರ ಹಾಲಿ ಇರುವ ಸ್ಥಳಗಳಲ್ಲಿಯೇ ಮುಂದುವರೆಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: IPS Promotion: ವಿಜಯಪುರ ಎಎಸ್ಪಿ ಡಾ.‌ ಅರಸಿದ್ದಿ, ಬಿ. ಎಸ್. ನೇಮೆಗೌಡ ಸೇರಿ ಏಳು ಜನರಿಗೆ ಐಪಿಎಸ್ ಗೆ ಬಡ್ತಿ ಸಾಮಾನ್ಯವಾಗಿ ಯಾವುದೇ ಹಿರಿಯ ಅಧಿಕಾರಿಗಳಿಗೆ ಬಡ್ತಿ ನೀಡಿದರೆ ನಂತರ ಅವರನ್ನು ಬೇರೋಂದು ಹುದ್ದೆ ಅಥವಾ ಜಿಲ್ಲೆಗೆ ವರ್ಗಾವಣೆ ಮಾಡಲಾಗುತ್ತದೆ.  ಆದರೆ, ಈ ಬಾರಿ […]

Earthquake Continues: ಗುಮ್ಮಟ ನಗರಿಯಲ್ಲಿ ಮಧ್ಯರಾತ್ರಿ, ಬೆಳಗಿನ ಜಾವ ಮತ್ತೆ ಭೂಕಂಪನ

ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಮಧ್ಯರಾತ್ರಿ ಮತ್ತೆ ಭೂಕಂಪನ ಸಂಭವಿಸಿದೆ. ಮಧ್ಯರಾತ್ರಿ 2.22ಕ್ಕೆ ಭೂಕಂಪನ ಉಂಟಾಗಿದ್ದು, ವಿಜಯಪುರ ನಗರದ ಹಲವಾರು ಕಡೆ ಜನತೆಗೆ ಇದರ ಅನುಭವವಾಗಿದೆ. ಜಲನಗರ, ಇಬ್ರಾಹಿಂಪೂರ ಸೇರಿದಂತೆ ನಾನಾ ಕಡೆ ಭೂಕಂಪನದ ಅನುಭವವಾಗಿದ್ದು ಜನತೆ ಅತಂಕದಲ್ಲಿ ಕಾಲ‌ ಕಳೆಯುವಂತಾಗಿದೆ. ವಿಜಯಪುರ ನಗರದ ಪೂರ್ವ ಭಾಗದಲ್ಲಿ ಸುಮಾರು 14 ಕಿ. ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಮಿಯ ಒಳಗಡೆ 10 ಕಿ. ಮೀ. ಆಳದಲ್ಲಿ ಭೂಕಂಪನ ಉಂಟಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. […]