Electricity MBP: ಸರಕಾರ ಸಹಾಯಧನ ಕಡಿತದ ಪರಿಣಾಮ ರೈತರ ಪಂಪಸೆಟ್ ಗಳಿಗೆ ವಿದ್ಯುತ್ ಕೊರತೆ ಸಂಕಷ್ಟದಲ್ಲಿ ರೈತರು ಎಂ. ಬಿ. ಪಾಟೀಲ ಆರೋಪ
ವಿಜಯಪುರ: ಸರಕಾರ ಎಸ್ಕಾಂ ಗಳಿಗೆ ಸಹಾಯ ಧನ ಕಡಿತ ಮಾಡಿದ್ದು, ಇದರಿಂದಾಗಿ ರೈತರ ಪಂಪಸೆಟ್ ಗಳಿಗೆ ವಿದ್ಯುತ್ ಕೊರತೆಯಾಗಿ ಅನ್ನದಾತರ ಸಂಕಷ್ಟದಲ್ಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಎಸ್ಕಾಂ ಗಳಿಗೆ ನಿಗದಿಯಾಗಿರುವ ಸಹಾಯಧನ, ಕಡಿತ ಮಾಡಿರುವ ಹಣ, ವಿದ್ಯುತ್ ಕೊರತೆಯ ಪ್ರಮಾಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ರಾಜ್ಯದಲ್ಲಿ ನೀರಾವರಿ ಪಂಪ್ ಸೆಟ್ ಗಳಿಗೆ ಬೇಕಾದ ವಿದ್ಯುಚ್ಛಕ್ತಿಯ ಪೂರೈಕೆಗೆ ಸುಮಾರು ರೂ. 16 ಸಾವಿರ ಕೋ. […]
Journalists Pension: ಪತ್ರಕರ್ತರ ಮಾಸಾಶನ ಹೆಚ್ಚಳ- ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಬ್ಯುಸಿನೆಸ್ ಐಕಾನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪತ್ರಕರ್ತರ ಹಲವಾರು ಬೇಡಿಕೆಗಳಿವೆ. ಪತ್ರಕರರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಭದ್ರತೆಯ ಅವಶ್ಯಕತೆ ಇದೆ. ನಿವೃತ್ತ ಪತ್ರಕರ್ತರಿಗೆ ಮಾಸಾಶನ ನೀಡುವ ಸಮಿತಿ ರಚಿಸಲು ನಾಳೆಯೇ ಆದೇಶ ಹೊರಡಿಸಲಾಗುವದು. ಅದಕ್ಕಿರುವ ನಿಯಮಗಳನ್ನು ಸರಳೀಕರಣಗೊಳಿಸಲಾಗುವುಎಂದು ಅವರು ತಿಳಿಸಿದರು. ವಿಧಾನ ಸಭೆಯ ಹತ್ತಿರವೇ ಪ್ರೆಸ್ ಕ್ಲಬ್ ಇದೆ. ಪತ್ರಕರ್ತರು ಶಕ್ತಿಸ್ಥಳ ಭಾಗ. ನಾಡು […]
KUWJ Felicitation: ಮಾಧ್ಯಮ ಮಾನ್ಯತಾ ಸಮಿತಿ ನೂತನ ಸದಸ್ಯರಿಗೆ ಕೆಯುಡಬ್ಲ್ಯೂಜೆ ಯಿಂದ ಸನ್ಮಾನ
ಬೆಂಗಳೂರು: ನೈಜ ಪತ್ರಕರ್ತರನ್ನು ಒಳಗೊಂಡ ಮಾಧ್ಯಮ ಮಾನ್ಯತಾ ಸಮಿತಿ ರಚನೆಯಾಗಿರುವುದು ಆ ಸಮಿತಿ ಘನತೆ ಹೆಚ್ಚಿಸಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಮಾಧ್ಯಮ ಮಾನ್ಯತಾ ಸಮಿತಿ (ಮೀಡಿಯಾ ಅಕ್ರಿಡಿಟೇಶನ್ ಸಮಿತಿ)ಯ ನೂತನ ಸದಸ್ಯರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು. ಡಿವಿಜಿ ಕಟ್ಟಿದ ಸಂಘ ಸಮಸ್ತ ಪತ್ರಕರ್ತರ ಪ್ರಾತಿನಿಧಿಕ ಮಾತೃ ಸಂಸ್ಥೆಯಾಗಿದೆ. ಎಂಟು ಸಾವಿರಕ್ಕೂ ಹೆಚ್ಚು ಸದಸ್ಯರಿರುವ ಬೃಹತ್ ಸಂಘಟನೆಯಾಗಿದೆ. ಸಂಘದ ಸದಸ್ಯತ್ವ ಪಡೆಯಲು ಎಲ್ಲಾ ಕಡೆಯಲ್ಲೂ […]
Doctors Award: ಡಾ. ಎಸ್. ಎಲ್. ಲಕ್ಕಣ್ಣವರ ಎಸ್. ಎಲ್. ಅವರಿಗೆ ಡಾಕ್ಟರ್ಸ್ ಡೆ ಅವಾರ್ಡ್- ಬುಧವಾರ ಬೆಂಗಳೂರಿನಲ್ಲಿ ಪ್ರಧಾನ
ವಿಜಯಪುರ: ಜಿಲ್ಲಾಸ್ಪತ್ರೆಯ ಮುಖ್ಯಸ್ಥ ಡಾ. ಎಸ್. ಎಲ್. ಲಕ್ಕಣ್ಣವರ ಅವರಿಗೆ ಡಾಕ್ಟರ್ಸ್ ಡೆ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಬುಧವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ರಾಜ್ಯ ಸರಕಾರ ಡಾ. ಬಿ. ಸಿ ರಾಯ್ ಅವರ ಹೆಸರಿನಲ್ಲಿ ಈ ಪ್ರಶಸ್ತಿಗೆ ನೀಡುತ್ತಿದೆ. ವಿಜಯಪುರ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಡಾ. ಎಸ್. ಎಲ್. ಲಕ್ಕಣ್ಣವರ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಬುಧವಾರ ಬೆಂಗಳೂರಿನಲ್ಲಿ […]
Madabhavi Epicenter: 3.5 ತೀವ್ರತೆ, ಮದಭಾವಿ ಬಳಿ ಭೂಕಂಪನ ಕೇಂದ್ರ ಬಿಂದು-
ವಿಜಯಪುರ: ರಾತ್ರಿ 8.17ಕ್ಕೆ ಸಂಭವಿಸಿದ ಭೂಜಂಪನದ ಕೇಂದ್ರಬಿಂದು ವಿಜಯಪುರ ತಾಲೂಕಿನ ಮದಭಾವಿ ಬಳಿ ಎಂದು ಗುರುತಿಸಲಾಗಿದೆ. 3.5 ತೀವ್ರತೆಯ ಭೂಕಂಪಕನ ಇದಾಗಿದ್ದು, ಭೂಮಿಯಿಂದ 5 ಕಿ. ಮೀ. ಆಳದಲ್ಲಿ ಭೂಕಂಪನ ಉಂಟಗಿದೆ. ಮದಭಾವಿಯಿಂದ ದಕ್ಷಿಣ- ದಕ್ಷಿಣ- ಪಶ್ಚಿಣ(ನೈರುತ್ಯ) ಭಾಗದ 3.30 ಕಿ. ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಮೂಲಗಳು ಬಸವ ನಾಡು ವೆಬ್ ಗೆ ಮಾಹಿತಿ ನೀಡಿವೆ.
Earthquake Sound: ಬಸವ ನಾಡಿನಲ್ಲಿ ಭೂಕಂಪನ- ಭೂಮಿಯೊಳಗಿಂದ ಕೇಳಿ ಬಂದ ಶಬ್ದ
ವಿಜಯಪುರ : ಬಸವ ನಾಡು ವಿಜಯಪುರದಲ್ಲಿ ಭೂಕಂಪನದ ಅನುಭವವಾಗಿದೆ. ರಾತ್ರಿ 8.17ರ ಸುಮಾರಿಗೆ ಭೂಮಿಯೊಳಗಿನಿಂದ ಗಢಗಢ ಶಬ್ದ ಕೇಳಿಬಂದಿದೆ. ಅಷ್ಟೇ ಅಲ್ಲ, ಭೂಮಿಯೂ ಕಂಪಿಸಿದೆ. ವಿಜಯಪುರ ನಗರದ ಆದರ್ಶ ನಗರ, ಚಾಲುಕ್ಯ ನಗರ, ಜಲನಗರ ಸೇರಿದಂತೆ ನಾನಾ ಕಡೆ ಇದು ಅನುಭವಕ್ಕೆ ಬಂದಿದೆ. ಇದರಿಂದಾಗಿ ಜನತೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸುಮಾರು ಮೂರ್ನಾಲ್ಕು ಸೆಕೆಂಡ್ ಭೂಕಂಪನ ಅನುಭವಕ್ಕೆ ಬಂದಿದ್ದು, ಇದು ವಿಜಯಪುರ ಜಿಲ್ಲಾಡಳಿತ ಇನ್ನಷ್ಟೇ ದೃಢಪಡಿಸಬೇಕಿದೆ.
Alamatti Karjol: ಆಲಮಟ್ಟಿ ಪ್ರವಾಹ ನಿಯಂತ್ರಣ- ಸಚಿವ ಕಾರಜೋಳಗೆ ಉಮೇಶ ಕೋಳಕೂರ, ರವೀಂದ್ರ ಲೋಣಿ ಅಭಿನಂದನೆ
ವಿಜಯಪುರ: ಈ ಬಾರಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಜಲ ನಿರ್ವಹಣೆ ಉತ್ತಮವಾಗಿದ್ದು, ಕರ್ನಾಟಕವಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿಯೂ ಪ್ರವಾಹ ನಿಯಂತ್ರಣ ಸಾಧ್ಯವಾಗಿದೆ. ಇದಕ್ಕೆಲ್ಲ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಮುಂದಾಲೋಚನೆಯೇ ಕಾರಣ ಎಂದು ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಮತ್ತು ಮಾಜಿ ಕಾರ್ಪೋರೇಟರ್ ರವೀಂದ್ರ ಲೋಣಿ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಇಬ್ಬರೂ ಮುಖಂಡರು ಮಾತನಾಡಿದರು. ಮೊದಲಿಗೆ ಮಾತನಾಡಿದ ಉಮೇಶ ಕೋಳಕೂರ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ […]
IPS Promotion: ವಿಜಯಪುರ ಎಎಸ್ಪಿ ಡಾ. ಅರಸಿದ್ದಿ, ಬಿ. ಎಸ್. ನೇಮೆಗೌಡ ಸೇರಿ ಏಳು ಜನರಿಗೆ ಐಪಿಎಸ್ ಗೆ ಬಡ್ತಿ
ಬೆಂಗಳೂರು: ವಿಜಯಪುರ ಹೆಚ್ಚುವರಿ ಎಸ್ಪಿ ಡಾ. ರಾಮ ಲಕ್ಷ್ಮಣಸಾ ಅರಸಿದ್ಧಿ ಮತ್ತು ಬೆಳಗಾವಿ ಎಸಿಬಿ ಎಸ್ಲಿ ಬಿ. ಎಸ್. ನೇಮಗೌಡ ಸೇರಿದಂತೆ ಏಳು ಜನ ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ಅಧಿಕಾರಿಗಳಾಗಿ ಬಡ್ತಿ ನೀಡಲಾಗಿದೆ. ರಾಜ್ಯದ ನಾನಾ ಕಡೆ ಈ ಅಧಿಕಾರಿಗಳು ಈಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಎಸ್‌ಪಿಎಸ್ ಮೂಲಕ ಡಿವೈಎಸ್ಪಿಗಳಾಗಿ ಆಯ್ಕೆಯಾಗಿದ್ದ ಈ ಅಧಿಕಾರಿಗಳು ನಂತರ ಸೇವಾನುಭವ ಮತ್ತು ಅರ್ಹತೆಯ ಆಧಾರದ ಮೇಲೆ ಹೆಚ್ಚುವರಿ ಎಸ್ಪಿಗಳಾಗಿ ನಾನಾ ಕಡೆ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಇವರಿಗೆ ಕೇಂದ್ರ ಗೃಹ ಇಲಾಖೆ […]
NBA Accreditation: ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನ ನಾನಾ ಕೋರ್ಸುಗಳಿಗೆ ಎನ್ ಬಿ ಎ ಮಾನ್ಯತೆ
ವಿಜಯಪುರ: ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ನಾನಾ ವಿಭಾಗಗಳಿಗೆ ರಾಷ್ಟ್ರೀಯ ಮಂಡಳಿ ಮಾನ್ಯತೆ(National Board of Accreditation) ದೊರಕಿದೆ. 2022-23, 2023-24, 2024-25ರ ವರ್ಷದ ಎಂಜಿನಿಯರಿಂಗ್ ಪದವಿ ಕೋರ್ಸುಗಳಾದ ಕಂಪ್ಯೂಟರ್ ಸೈನ್ಸ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗಗಳಿಗೆ ಮೂರು ವರ್ಷದ ಮಾನ್ಯತೆ ದೊರೆತಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. […]
Airport Katti: ವಿಮಾನ ನಿಲ್ದಾಣ ಕಾಮಗಾರಿ ಮಾರ್ಚ ಅಂತ್ಯಕ್ಕೆ ಪೂರ್ಣಗೊಳಿಸಲು ಗಡುವು ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ
ವಿಜಯಪುರ: ಮುಂಬರುವ ಮಾರ್ಚ್ ಮಾಸಾಂತ್ಯದೊಳಗೆ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುವಂತೆ ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಡೋಣಿ ನದಿಯ ಪ್ರವಾಹ ಸೇರಿದಂತೆ ಮಳೆಯಿಂದಾದ ಹಾನಿ ವೀಕ್ಷಣೆಗಾಗಿ ವಿಜಯಪುರ ಪ್ರವಾಸದಲ್ಲಿರುವ ಸಚಿವರು ಬುರಣಾಪುರ ಬಳಿ ಇರುವ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಪ್ರಗತಿಯಲ್ಲಿರುವ, ಟರ್ಮಿನಲ್ ಕಟ್ಟಡ, ಎಟಿಸಿ […]