Murder Arrest: 11 ವರ್ಷದ ಹಿಂದಿನ ಕೊಲೆ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರು

ವಿಜಯಪುರ: ಕಳೆದ 11 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವ ಮೂಲಕ‌ ಬಸವ ನಾಡಿನ ಪೊಲೀಸರು ಗಮನ ಸೆಳೆದಿದ್ದಾರೆ. 24.07.2011ರಲ್ಲಿ ಆಂಧ್ರಪ್ರದೇಶದ ಶ್ರೀಶೈಲಂ ಕಾಡಿನಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸರು ಭೇದಿಸಿದ್ದಾರೆ. ಅಲ್ಲದೇ, ಈ ಪ್ರಕರ, ಸಂಬಂಧ ಓರ್ವ ದೈಹಿಕ ಶಿಕ್ಷಣ ನಿರ್ದೇಶಕ ಸೇರಿ ಮೂವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಈ ಕೊಲೆಯಲ್ಲಿ ಮಹಿಳೆತ ಪತಿಯೇ ಶಾಮೀಲಾಗಿದ್ದು ಗಮನಾರ್ಹವಾಗಿದೆ. ಕೊಲೆಯಾದ ಪ್ರಿಯಾಂಕ ಉರ್ಫ್ ದಾನೇಶ್ವರಿ ಇವಳ ಪತಿ ಮುದ್ದೇಬಿಹಾಳ […]

Journalism Award: ಡಾ. ಓಂಕಾರಗೌಡ ಕಾಕಡೆ ಸೇರಿ 10 ಜನರಿಗೆ ಅವರಿಗೆ ಎಸ್‌ಪಿಎನ್‌ಎಂಎ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ

ವಿಜಯಪುರ: ಬೆಂಗಳೂರಿನ ಪ್ರತಿಷ್ಛಿತ ಸೆಂಟ್ ಪೌಲ್ಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವನಹ ವಿಭಾಗ ಮಾಧ್ಯಮ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ವಿಜಯಪುರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರಗೌಡ ಕಾಕಡೆ ಅವರಿಗೆ ಮಾಧ್ಯಮ ಪ್ರಶಸ್ತಿ ಘೋಷಣೆ ಮಾಡಿದೆ. ಡಾ. ಓಂಕಾರಗೌಡ ಕಾಕಡೆ ಅವರ ಜೊತೆಗೆ ಹಿರಿಯ ಪತ್ರಕರ್ತರಾದ ಡಾ. ಎ. ಎನ್. ಯಲ್ಲಪ್ಪ ರೆಡ್ಡಿ, ವಿಶ್ವೇಶ್ವರ ಭಟ್, ಡಾ. ಬಿ. ಕೆ. ರವಿ ಸೇರಿದಂತೆ 10 […]

Order Cancel: ಮಧ್ಯಾಹ್ನ ಸರಕಾರ ಆದೇಶ, ಮಧ್ಯರಾತ್ರಿ ವೇಳೆಗೆ ಸಿಎಂ ಸೂಚನೆ ಹಿನ್ನೆಲೆ ವಾಪಸ್- ಆ ಆದೇಶ ಯಾವುದು ಗೊತ್ತಾ?

ಬೆಂಗಳೂರು: ಶುಕ್ರವಾರ ಮಧ್ಯಾಹ್ನವಷ್ಟೇ ಆದೇಶ ಹೊರಡಿಸಿದ್ದ ರಾಜ್ಯ ಸರಕಾರ ಆ ಆದೇಶಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಆದೇಶವನ್ನು ಹಿಂದಕ್ಕೆ ಪಡೆದಿದೆ. ಇದೀಗ ಈ ಆದೇಶದ ಬಗ್ಗೆ ಜನಾಕ್ರೋಶದಿಂದ ಪಾರಾಗಲು ಸಿಎಂ‌ ಸೂಚನೆ ಹಿನ್ನೆಲೆಯಲ್ಲಿ ಆದೇಶ ಹಿಂಪಪಡಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಯಾವುದು ಆ ಆದೇಶ? ರಾಜ್ಯ ಸರಕಾರದ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ವೀಡಿಯೋ ಮಾಡಬಾರದು ಎಂಬ ಆದೇಶವನ್ನು ಸರಕಾರ ಶುಕ್ರವಾರ ಮಧ್ಯಾಹ್ನ ಹೊರಡಿಸಿತ್ತು. ಇದಕ್ಕೆ ಸಾರ್ವಜನಿಕರು, ಪ್ರತಿಪಕ್ಷಗಳು, ನಾನಾ ಸಂಘಟನೆಗಳು […]

Rain CM Meeting: ಅತೀವೃಷ್ಠಿ ಹಿನ್ನೆಲೆ- ಮಧ್ಯಾಹ್ನ ನಾನಾ ಡಿಸಿಗಳೊಂದಿಗೆ ಸಿ‌ಎಂ ವಿಡಿಯೊ ಸಂವಾದ

ಬೆಂಗಳೂರು: ರಾಜ್ಯದಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆ ಹಾಗೂ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಾಹ್ನ‌ 1.30ಕ್ಕೆ ನಾನಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ‌ ಸಭೆ ನಡೆಸಲಿದ್ದಾರೆ. ಅತಿವೃಷ್ಠಿ ಯಿಂದ ಹಾನಿಗೊಳಗಾದ ಜಿಲ್ಲೆಗಳ ಸಭೆ ಇದಾಗಿದೆ. ಮ. 1.30 ಕ್ಕೆ ದೇವನಹಳ್ಳಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆ ನಡೆಯಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಬಳ್ಳಾಪುರ, ಹಾಸನ, ಬೀದರ, ಬೆಳಗಾವಿ, ಕಲಬುರಗಿ, ಮೈಸೂರು, ಹಾವೇರಿ, ಧಾರವಾಡ, ದಾವಣಗೆರೆ, ಯಾದಗಿರಿ, ಬಾಗಲಕೋಟ, […]

CM Flood Tour: ಎಂ. ಬಿ. ಪಾಟೀಲ ವಾಗ್ದಾಳಿ ಬಳಿಕ ಎಚ್ಚೆತ್ತ ಸರಕಾರ- ಮಳೆ ಪೀಡಿತ ಜಿಲ್ಲೆಗಳಿಗೆ ಭೇಟಿಗೆ ಸಿಎಂ ಬಸವರಾಜ ಬೊಮ್ಮಾಯಿ ನಿರ್ಧಾರ

ಬೆಂಗಳೂರು: ಅತಿವೃಷ್ಟಿಯಿಂದ ಹಾನಿಯಾದ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಮಲೆನಾಡು, ಕೊಡಗು, ಕರಾವಳಿ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಕಳೆದ 10 ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಈಗಾಗಲೇ ಸಂಬಂಧಿಸಿದ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ಹಾಗೂ ನೆರವಾಗಿಯೂ ಮಾತನಾಡಿದ್ದೇನೆ. ಈಗ ಮಳೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ […]

Earthquake Damage: ಭೂಕಂಪನ ಎಫೆಕ್ಟ್- ಬತ್ತಿದ ಭಾವಿ, ತಿಕೋಟಾ, ಇಂಡಿ ತಾಲೂಕುಗಳಲ್ಲಿ 48 ಮನೆಗಳಿಗೆ ಹಾನಿ

ವಿಜಯಪುರ: ಬೆಳಿಗ್ಗೆ ಸಂಭವಿಸಿದ ಭೂಕಂಪನ ದಿಂದಾಗಿ ವಿಜಯಪುರ ಜಿಲ್ಲೆಯ ತಿಕೋಟಾ ಮತ್ತು ಇಂಡಿ ತಾಲೂಕುಗಳಲ್ಲಿ ಹಾನಿ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ. ತಿಕೋಟಾ ತಾಲೂಕಿನ ಅರಕೇರಿ ಮತ್ತು ಅರಕೇರಿ ತಾಂಡಾಗಳಲ್ಲಿ ಭೂಕಂಪನದಿಂದ ಹಾನಿಯಾಗಿದೆ.  ಹಿರಿಯ ಭೂ ವಿಜ್ಞಾನಿ, ತಿಕೋಟಾ ಕಂದಾಯ ನಿರೀಕ್ಷಕರು ಮತ್ತು ಅರಕೇರಿ ಗ್ರಾಮ ಲೆಕ್ಕಾಧಿಕಾರಿ ಅವರು ತಹಸೀಲ್ದಾರ ಅವರ ಸಮ್ಮುಖದಲ್ಲಿ ಜಂಟಿಯಾಗಿ ಹಾನಿಯಾದ ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಅರಕೇರಿ ಮತ್ತು ಅರಕೇರಿ ತಾಂಡಾದಲ್ಲಿ ಎರಡು ಹಳೆಯ ಮನೆಗಳ ಹಿಂಭಾಗದ ಭಾಗವು […]

Earthquake Kannur: ಕನ್ನೂರಿನಿಂದ ಆಗ್ನೆಯಕ್ಕೆ 2.30 ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಕೇಂದ್ರ ಬಿಂದು

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಬೆಳಿಗ್ಗೆ ಸಂಭವಿಸಿದ ಭೂಕಂಪನದ ಕೇಂದ್ರಬಿಂದು ಕನ್ನೂರಿನಿಂದ ಆಗ್ನೆಯ ಭಾಗದಲ್ಲಿ ಸುಮಾರು 2.30 ಕಿ. ಮೀ. ದೂರದಲ್ಲಿ ಪತ್ತೆಯಾಗಿದೆ.   ಬೆಳಿಗನ ಜಾವ 6.22ಕ್ಕೆ ಭೂಮಿಯೊಳಗಿಂದ ಗಢಗಢ ಶಬ್ದ ಕೇಳಿ ಬಂದಿದ್ದು, ಭೂಕಂಪನ ಉಂಟಾಗಿತ್ತು. ವಿಜಯಪುರ ಜಿಲ್ಲೆ ಮಾತ್ರವಲ್ಲ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ಮತ್ತ ಸೋಲಾಪುರ ಜಿಲ್ಲೆಯ ದಕ್ಷಿಣ ಸೋಲಾಪುರ‌ ತಾಲೂಕಿನ ಕೆಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. ಇದರಿಂದಾಗಿ‌ ಜನರಲ್ಲಿ ಆತಂಕ‌ ಉಂಟಾಗಿತ್ತು. ಇದನ್ನೂ ಓದಿ: Earthquake 4.9 magnitude?: ಬಸವ […]

Sound Earthquake: ವಿಜಯಪುರ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಭೂಕಂಪನ ಅನುಭವ

ವಿಜಯಪುರ ನಗರ, ಇಂಡಿ ಸೇರಿದಂತೆ ಬಹುತೇಕ ಕಡೆ ಬೆಳ್ಳಂಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಶಬ್ದವೂ ಕೇಳಿ ಬಂದಿದೆ. ಬೆ. 5.40ರ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಅನುಭವಕ್ಕೆ ಬಂದಿದ್ದರೆ, ಬೆ. 6.22ರ ಸುಮಾರಿಗೆ ಭೂಮಿ‌‌ ಗಢಗಢ ನಡುಗಿದ ಅನುಭವವಾಗಿದೆ. ಸಕ್ಕರೆ ನಿದ್ದೆಯಲ್ಲಿದ್ದ ಜನ ಭೂಮಿ ನಡುಗಿದ ಅನುಭದಿಂದಾಗಿ ಹೌಹಾರಿ ಎದ್ದು ಕುಳಿತು‌ ಮನೆಯಲ್ಲಿದ್ದವರಿಗೆ ಭೂಕಂಪ ಆಯ್ತಾ ಎಂದು ಗಾಬರಿಯಿಂದ‌ ಪ್ರಶ್ನಿಸಿದ್ದಾರೆ. ವಿಜಯಪುರ ನಗರದ ಆದರ್ಶ ನಗರ, ಕಾಸಗೇರಿ ಓಣಿ, ಗೋಳಗುಮ್ಮಟ ಪ್ರದೇಶ, ಕೆಸಿ ನಗರ, ಜಲನಗರ ಸೇರಿದಂತೆ ಬಹುತೇಕ […]

Retd Govt Employees CM: ಸರಕಾರಿ ನಿವೃತ್ತ ನೌಕರರಿಗೆ ಆರೋಗ್ಯ ಯೋಜನೆ ವಿಸ್ತರಣೆ- ಸಿಎಂ‌ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸರಕಾರಿ ನಿವೃತ್ತ ನೌಕರರಿಗೆ ಆರೋಗ್ಯ ಯೋಜನೆಯನ್ನು ವಿಸ್ತರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಸರಕಾರಿ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರಿ‌ ನಿವೃತ್ತ ನೌಕರರಿಗಾಗಿ ಆರೋಗ್ಯ ಯೋಜನೆಯನ್ಬು ವಿಸ್ತರಿಸಲಾಗುವುದು. ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗನೆ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಅವರು ತಿಳಿಸಿದರಯ. ನಿವೃತ್ತ ನೌಕರರು ನಿರಂತರವಾಗಿ ಕ್ರಿಯಾಶೀಲರಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿ […]

PSI Scam:ನಿಷ್ಪಕ್ಷಪಾತವಾದ ತನಿಖೆ ಮೂಲಕ ಇಡೀ ವ್ಯವಸ್ಥೆ ಸ್ವಚ್ಛಗೊಳಿಸಲು ಬದ್ಧ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ನಿಷ್ಪಕ್ಷಪಾತವಾದ ಹಾಗೂ ನಿರ್ದಾಕ್ಷಿಣ್ಯವಾದ ತನಿಖೆಯನ್ನು ಮಾಡುವ ಮೂಲಕ ಇಡೀ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್‍ನ ಸರಕಾರಿ ಮತ್ಸ್ಯಾಲಯದ ಬಳಿ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಪಿಎಸ್ ಐ ನೇಮಕಾತಿ ಹಗರಣದ ತನಿಖೆ ನಡೆಸಲು ಸಿಐಡಿಯವರಿಗೆ ಮುಕ್ತವಾದ ಅವಕಾಶವನ್ನು ನೀಡಲಾಗಿದೆ. ಸಾಕ್ಷ್ಯ ಆಧಾರಗಳ ಮೇಲೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಎಷ್ಟೇ ದೊಡ್ಡ ಅಧಿಕಾರಿಗಳಾಗಿದ್ದರೂ ನಮ್ಮ ಸರಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಹಿಂದಿನ ಸರಕಾರಗಳ ಅವಧಿಯಲ್ಲಿ […]