ಮೆಕ್‌ ಡೊನಾಲ್ಡ್ಸ್‌ನಲ್ಲಿ ಮಕ್ಕಳಿಗೆ ಓದಲು ಸಿಗಲಿದೆ ಪುಸ್ತಕ

ಬೆಂಗಳೂರು: ಮೆಕ್ ಡೋನಾಲ್ಡ್ ಭಾರತಕ್ಕೆ ಕಾಲಿಟ್ಟು 25 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ವಿಶಿಷ್ಠ ಯೋಜನೆಯೊಂದನ್ನು ರೂಪಿಸಿದೆ. ಮೆಕ್‌ಡೊನಾಲ್ಡ್ಸ್‌ನಲ್ಲಿ ಈವರೆಗೆ ಕೇವಲ ತಿಂಡಿ ಖರೀದಿಸಲು ಮಾತ್ರ ಅವಕಾಶವಿತ್ತು. ಆದರೆ, ಇನ್ನು ಮುಂದೆ ಆಹಾರ ಸೇವನೆ ಜೊತೆಗೆ ಓದಲು ಪುಸ್ತಕವನ್ನೂ ಉಚಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿ ಮೆಕ್‌ಡೊನಾಲ್ಡ್ಸ್‌ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಹ್ಯಾಪಿ ಮೀಲ್ ರೀಡರ್ಸ್ ಕಾರ್ಯಕ್ರಮವನ್ನು ಪರಿಚಯಿಸುಲಾಗಿದ್ದು, ಈ ಹ್ಯಾಪಿ ಮೀಲ್ ರೀಡರ್ಸ್‌ನಲ್ಲಿ ಮಕ್ಕಳಿಗಾಗಿ ಓದಲು ಪುಸ್ತಕವನ್ನೂ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ವಿಭಿನ್ನ ರೀತಿಯಲ್ಲಿ ಮೆಕ್‌ಡೊನಾಲ್ಡ್ಸ್‌ […]

ವಿಜಯಪುರ ಡಿಸಿಯಿಂದ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ

ವಿಜಯಪುರ: ವಿಜಯಪುರ ಜಿಲ್ಲೆಯ ಮದಭಾವಿ, ಭುರಣಾಪೂರ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪರಿಸಿಲಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಹಿರೇಗೌಡರ ಅವರು ಕಾಮಗಾರಿಯ ಪ್ರಗತಿಯ ಕುರಿತು ಮಾಹಿತಿ ನೀಡಿದರು   ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-72 ವಿಮಾನಗಳ ಹಾರಾಟಕ್ಕಾಗಿ ಒಟ್ಟು ರೂ. 220 ಕೋ. ಮಂಜೂರಾಗಿದೆ. ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರನ್ನಾಗಿ(ಪಿ ಎಮ್ ಸಿ) […]

ಸಿಎಂ ಬದಲಾವಣೆ ಬೇಡ- ಬಾಯಿಗೆ ಬಂದಂತೆ ಮಾತನಾಡುವವರನ್ನು ನಿಯಂತ್ರಿಸಲು ಹೇಳಿದ್ದೇನೆ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಸಿಎಂ ಬದಲಾವಣೆ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ವಿಜಯಪುರ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಬೇಡ ಎಂಬುದು ನನ್ನ ವೈಯಕ್ತಿಕ ಮತ್ತು ಸ್ಪಷ್ಟವಾದ ನಿಲುವಾಗಿದೆ. ಇದನ್ನೇ ಎಲ್ಲರಿಗೂ ಹೇಳಿದ್ದೇನೆ. ಈ ವಿಚಾರದಲ್ಲಿ ಕೆಲವರು ಉಹಾಪೋಹ ಮಾಡುವುದು ಸರಿಯಲ್ಲ ಎಂದು ಹೇಳಿದರು. ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತಿದೆ. ಕೆಲವರಯ ಬಾಯಿಗೆ ಬಂದಂತೆ ಏನು ಬೇಕಾದರೂ ಮಾತನಾಡುತ್ತಾರೆ. ಅದನ್ನು ಬಂದ್ ಮಾಡಿಸಿ ಎಂದು ಹೇಳಿದ್ದೇನೆ. […]

ವಿವಿಗಳು, ಪದವಿ, ಪಿಯು ಕಾಲೇಜುಗಳಿಗೆ ಫೆ. 16ರ ವರೆಗೆ ರಜೆ ಮುಂದುವರಿಕೆ- ಆದರೆ ಆನಲೈನ್ ಕ್ಲಾಸ್ ಗಳಿಗೆ ಅನುಮತಿ

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಸರಕಾರ ಸ್ನಾತಕೋತ್ತರ, ಪದವಿ ಮತ್ತು ಪಿಯು ಕಾಲೇಜುಗಳಿಗೆ ಫೆ. 16ರ ವರೆಗೆ ರಜೆ ಮುಂದುವರಿಸಿ ಆದೇಶ ಹೊರಡಿಸಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.  ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿಶ್ವವಿದ್ಯಾಲಯಗಳು, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರಕಾರಿ, ಅನುದಾನಿತ, ಅನುದಾನ ರಹಿತ ಪದವಿ ಕಾಲೇಜುಗಳು ಮತ್ತು ಡಿಪ್ಲೋಮಾ ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಆದರೆ, ಈ […]

ಶಾಂತಿ ಸುವ್ಯವಸ್ಥೆ ಕಾಪಾಡಲು ಡಿಸಿ, ಎಸ್ಪಿಗಳಿಗೆ 20 ಅಂಶಗಳ ಬಗ್ಗೆ ಕಟ್ಟೆಚ್ಚರ ವಹಿಸಲು ಖಡಕ್ ಸೂಚನೆ ನೀಡಿದ ಸಿಎಂ- ಆ ಸೂಚನೆಗಳೇನು ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್ಪಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.  ಅಲ್ಲದೇ, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು 20 ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿ ಸೂಚನೆ ನೀಡಿದ್ದಾರೆ.  ಆ ಸೂಚನೆಗಳು ಇಂತಿವೆ. 1. ಸೋಮವಾರದಿಂದ ಪ್ರೌಢಶಾಲೆ ಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು. 2. ಸೂಕ್ಷ್ಮ ಜಿಲ್ಲೆಗಳಲ್ಲಿ ಪ್ರಮುಖ ಶಾಲೆಗಳನ್ನು […]

ವಾಯುವ್ಯ ಸಾರಿಗೆಯಿಂದ ಫೆ. 14 ರಿಂದ ಹುಬ್ಬಳ್ಳಿ- ವಿಜಯಪುರ ಮಧ್ಯೆ ಪ್ರತಿದಿನ ನಾಲ್ಕು ವೊಲ್ವೊ ಬಸ್ ಸೇವೆ ಆರಂಭ- ಪ್ರಯಾಣ ದರ ಎಷ್ಟು ಗೊತ್ತಾ?

ವಿಜಯಪುರ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಫೆ. 14 ರಂದು ಪ್ರೇಮಿಗಳ ದಿನದಿಂದ ಪ್ರತಿನಿತ್ಯ ವಿಜಯಪುರಕ್ಕೆ ವೊಲ್ವೊ ಬಸ್ ಸೇವೆ ಆರಂಭಿಸಲಿದೆ. ಈ ಕುರಿತು  ಹುಬ್ಬಳ್ಳಿ-ಧಾರವಾಡ ಇನ್ಫ್ರಾ ಟ್ವೀಟ್ ಮಾಡಿದ್ದು, ಪ್ರತಿನಿತ್ಯ ನಾಲ್ಕು ಬಸ್ಸುಗಳು ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಮತ್ತು ವಿಜಯಪುರದಿಂದ ಹುಬ್ಬಳ್ಳಿಗೆ ಸೇವೆ ಆರಂಭಿಸಲಿವೆ.  ವೊಲ್ವೊ ಮಲ್ಟಿ ಎಕ್ಸೆಲ್ ಬಸ್ ಸೇವೆ ಇದಾಗಿದ್ದು, ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಿಂದ ವಿಜಯಪುರಕ್ಕೆ ಪ್ರತಿದಿನ ಬೆ. 8ಕ್ಕೆ, 9ಕ್ಕೆ ಮತ್ತು ಸಂ. 6 ಹಾಗೂ 7ಕ್ಕೆ ಈ ಬಸ್ಸುಗಳು […]

ಫೆ. 14 ರಿಂದ ಪ್ರೌಢ ಶಾಲೆ ಪ್ರಾರಂಭ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಫೆ. 14 ರಿಂದ ಪ್ರೌಢ ಶಾಲೆಗಳನ್ನು ಪುನಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.  ಬೆಂಗಳೂರಿನಲ್ಲಿ ಶಿಕ್ಷಣ ಮತ್ತು ಗೃಹ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಶುಕ್ರವಾರ ಉನ್ನತ ಮಟ್ಟದ ಸಭೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಸರಕಾರದ್ದಾಗಿದೆ.  ಶುಕ್ರವಾರ ಸಂಜೆ ಎಲ್ಲ ಸಚಿವರು, ಡಿಸಿ, ಎಸ್‍ಪಿ, ಸಿಇಓಗಳೊಂದಿಗೆ ಸಭೆ ನಡೆಸಲಿದ್ದು, ಜಿಲ್ಲೆಗಳಲ್ಲಿನ ವಸ್ತುಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಲಾಗುವುದು.  ನಾನು,  ಶಿಕ್ಷಣ ಹಾಗೂ […]

ಇಂಗಳೇಶ್ವರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ರೈತರಿಂದ ಆರೋಗ್ಯ ಸಚಿವರಿಗೆ ಮನವಿ

ವಿಜಯಪುರ: ವಿಶ್ವಗುರು ಬಸವಣ್ಣನವರ ಜನ್ಮ ಸ್ಥಳವಾದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ ಅವರಿಗೆ ಇಂಗಳೇಶ್ವರ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು. ಬೆಂಗಳೂರಿನಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಮುಖಂಡ ಅರವಿಂದ ಕೃಷ್ಣಾಜಿ ಕುಲಕರ್ಣಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಕೃಷ್ಣಾಜಿ ಕುಲಕರ್ಣಿ, ಇಂಗಳೇಶ್ವರ ಗ್ರಾಮವು ಐತಿಹಾಸಿಕ ಮತ್ತು […]

ಕಾಂಗ್ರೆಸ್ ತುಕಡೆ ಗ್ಯಾಂಗ್ ಗಳ ಮೂಲಕ ಹಿಜಾಬ್, ಕೇಸರಿ ಶಾಲುಗಳಂಥ ವಿವಾಧ ಸೃಷ್ಠಿಸಿ ದೇಶದಲ್ಲಿ ಅಸ್ಥಿರತೆ ತರಲು ಪ್ರಯತ್ನಿಸುತ್ತಿದೆ- ಶಾಸಕ ಯತ್ನಾಳ ಆರೋಪ

ವಿಜಯಪುರ: ದೇಶದಲ್ಲಿ ಕಾಂಗ್ರೆಸ್ ಟುಕ್ಟೆ ಗ್ಯಾಂಗ್ ಗಳ ಮೂಲಕ ಹಿಜಾಬ್, ಕೇಸರಿ ಶಾಲ್ ನಂಥ ವಿವಾದಗಳನ್ನು ಸೃಷ್ಠಿಸಿ ದೇಶದಲ್ಲಿ ಅಸ್ಥಿರತೆ ಉಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದಗಳ ಹಿಂದೆ ಕಾಂಗ್ರೆಸ್ಸಿದೆ.  ಈ ಮೂಲಕ ಕಾಂಗ್ರೆಸ್ಸಿನ ತುಕಡೆ ತುಕಡೆ ಗ್ಯಾಂಗ್ ಗಳು ದೇಶದಲ್ಲಿ ಅಸ್ಥಿರತೆ ತರಲು ಪ್ರಯತ್ನಸುತ್ತಿವೆ ಎಂದು ಆರೋಪಿಸಿದರು. ದೇಶದಲ್ಲಿ […]

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 3, 4ನೇ ಕಂತಿನ ರೂ. 731 ಕೋ. ಬಿಡುಗಡೆ- ಸಿಎಂ ಗೆ ಶಾಸಕ ದತ್ತಾತ್ರೆಯ ಪಾಟೀಲ ರೇವೂರ ಅಭಿನಂದನೆ

ಬೆಂಗಳೂರು: ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸಕ್ತ ಸಾಲಿನ 3 ಮತ್ತು 4ನೇ ಕಂತಿನ ರೂ. 731 ಕೋ. ಅನುದಾನ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಮತ್ತು ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಧನ್ಯವಾದ ಅರ್ಪಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಸಚಿವ ಗೋವಿಂದ ಕಾರಜೋಳ, ಹಾಲಪ್ಪ ಆಚಾರ, ಶಾಸಕರಾದ […]