Video News: ಮೊಸರ ನಾಡಿನ ಬಳಿ ರೂ. 32 ಲಕ್ಷ ದರೋಡೆ- ಲಾರಿ ಚಾಲಕ, ಕ್ಲಿನರ್ ಮೇಲೆ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ದರೋಡೆ ನಡೆದಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರ ವಲಯದಲ್ಲಿ ಶುಕ್ರವಾರ ತಡರಾತ್ರಿ ಕ್ಯಾಂಟರ್ ವಾಹವ ತಡೆದ ದುಷ್ಕರ್ಮಿಗಳು ಚಾಲಕ ಮತ್ತೋರ್ವನ ಮೇಲೆ ಖಾರದ ಪುಡಿ ಎರಚಿ ರಾಡ್ ನಿಂದ ಹಲ್ಲೆ ಮಾಡಿ ಕ್ಯಾಂಟರ್ ನಲ್ಲಿದ್ದ ರೂ. 32 ಲಕ್ಷ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ದರೋಡೆಕೋರರಿಂದ ಹಲ್ಲೆಗೀಡಾದ ಕ್ಯಾಂಟರ್ ಚಾಲಕ ಮಹಾಂತೇಶ ಕುಂಬಾರ ಹಾಗೂ ಕ್ಲೀನರ್ ಮಲ್ಲು ಕೊಡಚಿ ಅವರಿಗೆ ಕೊಲ್ಹಾರ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ […]
ಲೋಕಾಯುಕ್ತರ ಬಲೆಗೆ ಬಿದ್ದ ಲಂಚಬಾಕ ಸರ್ವೇಯರ್, ಖಾಸಗಿ ವ್ಯಕ್ತಿ
ವಿಜಯಪುರ: ಜಮೀನಿನ ತತ್ಕಾಲ್ ಪೋಡಿ ಮಾಡಲು ಲಂಚ ಪಡೆಯುತ್ತಿದ್ದ ಸರ್ವೇಯರ್ ಮತ್ತು ಖಾಸಗಿ ವ್ಯಕ್ತಿ ಲೋಕಾಯುಕ್ತರ ಬಲೆಗೆ ಸಿಲುಕಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಪ್ರಕಾಶ ಸಿಂಗೆ ಎಬುವರು ತಮ್ಮ ನಾಲ್ಕು ಎಕರೆ ಜಮೀನಿನ ತತ್ಕಾಲ ಪೋಡಿ ಮಾಡಲು ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕೆಲಸಕ್ಕಾಗಿ ಸರ್ವೇಯರ್ ಮಲ್ಲಪ್ಪ ಜಂಬಗಿ ಮತ್ತು ಖಾಸಗಿ ಸಹಾಯಕ ಗುರುದತ್ತ ಬಿರಾದಾರ ಅವರು ರೂ. 47,500 ಲಂಚ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರಕಾಶ ಸಿಂಗೆ ಲೋಕಾಯುಕ್ತರ ಮೊರೆ ಹೋಗಿದ್ದರು. ಈ ಮಧ್ಯೆ ತತ್ಕಾಲ […]
ಅಡ್ರೆಸ್ ಕೇಳುವ ನೆಪದಲ್ಲಿ ನಿವೃತ್ತ ನೌಕರನ ಬಳಿಯಿದ್ದ ರೂ. 2.20 ಲಕ್ಷ ದೋಚಿದ ಕಳ್ಳರು- ತಾಳಿಕೋಟೆಯಲ್ಲಿ ಹಾಡುಹಗಲೇ ನಡೆದ ಘಟನೆ
ವಿಜಯಪುರ: ನಿವೃತ್ತ ನೌಕರರೊಬ್ಬರ ಗಮನ ಬೇರೆಡೆ ಸೆಳೆದು ಅವರ ಬಳಿಯಿದ್ದ ರೂ. 2.20 ಲಕ್ಷ ಹಣವನ್ನು ಇಬ್ಬರು ಕಳ್ಳರು ಹಾಡುಹಗಲೇ ಎಗರಿಸಿಕೊಂಡು ಪರಾರಿಯಾದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ. ತಾಳಿಕೋಟೆ ನಿವಾಸಿ ನಾಗಪ್ಪ ಅಮ್ಮಪ್ಪ ಕೆಂಭಾವಿ(61) ಕೊಡಗಾನೂರ ಬಸವೇಶ್ವರ ಪ್ರೌಢಶಾಲೆಯಲ್ಲಿ ಎಸ್ ಡಿ ಸಿ ಆಗಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತಿಯಾಗಿದ್ದರು. ಅಲ್ಲದೇ, ಈ ವೇಳೆ ಬಂದಿದ್ದ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿದ್ದರು. ಮನೆ ಖರ್ಚಿಗಾಗಿ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣದಲ್ಲಿ ರೂ. 2.20 […]
ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ
ವಿಜಯಪುರ: ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿ ನೇಹಾ ಹಿರೇಮಠ ಕೊಲೆ ಖಂಡಿಸಿ ಮತ್ತು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಬಿಜೆಪಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಗಾಂಧಿ ಚೌಕ್, ಬಸವೇಶ್ವರ ಚೌಕ್ ಮಾರ್ಗವಾಗಿ ಡಾ. ಬಿ. ಆರ್.ಅಂಬೇಡ್ಕರ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಯಿತು. ಮೆರವಣಿಯಲ್ಲಿ ಬೋಲೋ ಭಾರತ್ ಮಾತಾ ಕೀ ಜೈ, ಮತಾಂದ್ ಶಕ್ತಿಗಳಿಗೆ ಧಿಕ್ಕಾರ, ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ಬೇಜವಾಬ್ದಾರಿ […]
ಬಿ.ಎಲ್.ಡಿ.ಇ ತಾಂತ್ರಿಕ ಮಹಾವಿದ್ಯಾಲಯದ 51 ವಿದ್ಯಾರ್ಥಿಗಳಿಗೆ ಕೆ.ಎಸ್.ಸಿ.ಎಸ್.ಟಿ ವತಿಯಿಂದ ಪ್ರಾತ್ಯಕ್ಷಿಕೆಗೆ ಅನುದಾನ
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ 51 ವಿದ್ಯಾರ್ಥಿಗಳು ಕರ್ನಾಟಕ ಸ್ಟೆಟ್ ಕೌನ್ಸಿಲ್ ಫಾರ್ ಸೈನ್ಸ್ ಆಂಡ್‌ಟೆಕ್ನಾಲಜಿ(ಕೆ.ಎಸ್.ಸಿ.ಎಸ್.ಟಿ)ಯ 2023-24ನೇ ಆರ್ಥಿಕ ವರ್ಷದ ಸೃಜನಶೀಲ, ನವೀನ ಯೋಜನೆಗಳ 14 ಅತ್ತುತಮ ಪ್ರಾತ್ಯಕ್ಷಿಕೆಗಳು ಆಯ್ಕೆಯಾಗಿವೆ. 51 ವಿದ್ಯಾರ್ಥಿಗಳಿಗೆ ರೂ.69000 ಧನ ಸಹಾಯ ಸಿಗಲಿದೆ. ಅಲ್ಲದೇ ವಿದ್ಯಾರ್ಥಿಗಳಲ್ಲಿರುವ ಸೂಪ್ತ ಪ್ರತಿಭೆಯನ್ನು ಮತ್ತು ಸಂಶೋಧನೆ ಯೋಜನೆಗಳನ್ನು ರೂಪಿಸಲು ಪ್ರೋತ್ಸಾಹ ಸಿಗಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಪದಾಧಿಕಾರಿಗಳು ಅಭಿನಂದನೆ […]
ನೇಹಾ ಹಿರೇಮಠ ಕೊಲೆ ಖಂಡಿಸಿ ವಿಜಯಪುರದಲ್ಲಿ ಜಂಗಮ ಸಮಾಜದ ವತಿಯಿಂದ ಪ್ರತಿಭಟನೆ
ವಿಜಯಪುರ: ಹುಬ್ಬಳ್ಳಿಯಲ್ಲಿ ಯುವತಿ ನೇಹಾ ನಿರಂಜನ ಹಿರೇಮಠ ಕೊಲೆ ಖಂಡಿಸಿ ಮತ್ತು ಆರೋಪಿಗೆ ಗಲ್ಲು ಶಿಕ್ಷೆ ನೀಡಿ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ನಗರದಲ್ಲಿ ಜಂಗಮ ಸಮಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಂಗಮ ಸಮಾಜ ಮುಖಂಡ ಸಂಜೀವ ಹಿರೇಮಠ ಮತ್ತು ಪ್ರಧಾನ ಕಾರ್ಯದರ್ಶಿ ಎಸ್. ಕೆ. ಸಾವಳಗಿಮಠ, ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ನಿರಂಜನ ಹಿರೇಮಠ ಅವರನ್ನು ಹಾಡು ಹಗಲೇ ಕಾಲೇಜಿನ ಆವರಣದಲ್ಲಿ ಚಾಕುವಿನಿಂದ ಹಿರಿದು ಕ್ರೂರವಾಗಿ […]
UPSC Rank: ವಿಜಯಪುರ ಯುವಕ ಸಂತೋಷ ಶ್ರೀಕಾಂತ ಶಿರಾಡೋಣ ಗೆ 641ನೇ ರ್ಯಾಂಕ್
ವಿಜಯಪುರ: ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಮತ್ತೋರ್ವ ಯುವಕ ಪಾಸ್ ಆಗುವ ಮೂಲಕ ಗಮನ ಸೆಳೆದಿದ್ದಾನೆ. ಸಂತೋಷ ಶ್ರೀಕಾಂತ ಶಿರಾಡೋಣ ದೇಶಕ್ಕೆ 641ನೇ ರ್ಯಾಂಕ್ ಪಡೆದಿದ್ದು, ಶಿರಾಡೋಣ ಕುಟುಂಬದಲ್ಲಿ ಸಂತಸ ಮೂಡಿಸಿದೆ. ವಿಜಯಪುರ ನಗರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ಒಂದರಿಂದ 5ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಯುವಕ, 6 ರಿಂದ 7ನೇ ತರಗತಿವರೆಗೆ ಗದಗ ತಾಲೂಕಿನ ಹುಲಕೋಟಿಯ ರಾಜರಾಜೇಶ್ವರಿ ಪ್ರೌಢ ಶಾಲೆಯಲ್ಲಿ ಮತ್ತು 8 ರಿಂದ 10ನೇ ತರಗತಿಯನ್ನು ವಿಜಯಪುರ ತಾಲೂಕಿನ ಕಗ್ಗೋಡದ ಸಂಗನಬಸವ ಇಂಟರ್ […]
ವಿಜಯಪುರ ಡಿಡಿಪಿಐ ಎನ್. ಎಚ್. ನಾಗೂರು ಅಮಾನತು-
ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ(ಡಿಡಿಪಿಐ) ಉಪನಿರ್ದೇಶಕ ಎನ್. ಎಚ್. ನಾಗೂರ ಅವರನ್ನು ಸೇವೆಯಿಂದ ಅಮಾನತು ಮಾಡಾಲಾಗಿದೆ. ಕರ್ತವ್ಯಲೋಪ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಧಿನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಧಾರವಾಡ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಪರ ಆಯುಕ್ತರ ಶಿಫಾರಸ್ಸಿನ ಮೇಲೆ ಅಮಾನತು ಮಾಡಲಾಗಿದೆ ಎಂದು ಅಧೀನ ಕಾರ್ಯದರ್ಶಿ ಮಲ್ಲಕಾರ್ಜುನ ರಾಮಚಂದ್ರಪ್ಪ ಆದೇಶದಲ್ಲಿ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ ಸಂದರ್ಭದಲ್ಲಿ ಸಿಸಿ ಕೆಮೆರಾ ದೃಷ್ಯಾವಳಿ ಪರಿಶೀಲನೆ […]
ದ್ವಿತೀಯ ಪಿಯು ಪರೀಕ್ಷೆ: ಎಸ್. ಎಸ್. ಪಿಯು ಕಾಲೇಜಿನ ವೇದಾಂತ ನಾವಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ- ಐಎಎಸ್ ಮಾಡುವ ಇಚ್ಛೆ ವ್ಯಕ್ತಪಡಿಸಿದ ವಿದ್ಯಾರ್ಥಿ
ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ಎಸ್. ಎಸ್. ಪಿ. ಯು ಕಾಲೇಜಿನ ವಿದ್ಯಾರ್ಥಿ ವೇದಾಂತ ನಾವಿ ಇತ್ತೀಚೆಗೆ ನಡೆದ ದ್ವಿತೀಯ ಪಿಯು ಪರೀಕ್ಷೆಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಬಸವನಾಡು ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಜಿಲ್ಲಾದ್ಯಂತ ಸಂತಸ ವ್ಯಕ್ತವಾಗಿದ್ದು, ವಿದ್ಯಾರ್ಥಿಯ ಪೋಷಕರು, ಕಾಲೇಜಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ಸಾಧನೆಯ ಮೂಲಕ ಜಿಲ್ಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ […]
ಮಗು ಸಾತ್ವಿಕ ಜಿಲ್ಲಾಸ್ಪತ್ರೆಯಿಂದ ಡಿಶ್ಚಾರ್ಜ್- ಮಗುವನ್ನು ಭೇಟಿ ಮಾಡಿದ ಸಂಸದ ರಮೇಶ ಜಿಗಜಿಣಗಿ- ಲಚ್ಯಾಣದಲ್ಲಿ ಮಗುವಿಗೆ ಹೃದಯಸ್ಪರ್ಷಿ ಸ್ವಾಗತ
ವಿಜಯಪುರ: ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯಲ್ಲಿ ಸಿಲುಕಿ ಸಾವನ್ನು ಗೆದ್ದು ಬಂದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಗು ಸಾತ್ವಿಕ ಮುಜಗೊಂಡ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾನೆ. ಕಳೆದ ಮೂರು ದಿನಗಳಿಂದ ಎಲ್ಲ ಪರೀಕ್ಷೆಗಳನ್ನು ನಡೆಸಿದ ಮಕ್ಕಳ ವೈದ್ಯರು ಮಗುು ಸಂಪೂರ್ಣ ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಕಾಣಿಸದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದರು. ತಮ್ಮ ಪುತ್ರನೊಂದಿಗೆ ನಗು ನಗುತ್ತಲೆ ತಾಯಿ ಪೂಜಾ ಮತ್ತು ಸಂದೆ ಸತೀಶ ಆ್ಯಂಬ್ಯೂಲನ್ಸ್ ಮತ್ತು ಪೊಲೀಸರ ಭದ್ರತೆಯಲ್ಲಿ ತಮ್ಮ ಸ್ವಗ್ರಾಮ ಲಚ್ಯಾಣಕ್ಕೆ ತೆರಳಿದರು. […]