ವಿಧಾನಸೌಧದಲ್ಲಿ ರಾಷ್ಟ್ರೀಯ ಏಕತಾ ದಿವಸ ಆಚರಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪ್ರತಿಜ್ಞಾವಿಧಿ ಬೊಧನೆ

ಬೆಂಗಳೂರು: ಮಾಜಿ ಉಪಪ್ರಧಾನಿ, ಭಾರತ ರತ್ನ ಸರ್ದಾರ ವಲ್ಲಭಬಾಯಿ ಪಟೇಲ ಅವರ ಜನ್ಮದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಪಟೇಲ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಲ್ಪಭಭಾಯಿ ಪಟೇಲ ಅವರ ಜನ್ಮದಿನದ ಅಂಗವಾಗಿ ರಾಜ್ಯ ವಿಧಾನಸಭೆ ಸಚಿವಾಲಯದ ವತಿಯಿಂದ ರಾಷ್ಟ್ರೀಯ ಏಕತಾ ದಿವಸ ಆಚರಣೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 334 ರಲ್ಲಿ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.  ನಂತರ ಅವರು ರಾಷ್ಟ್ರೀಯ […]

ಲಘು ಭೂಕಂಪನದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ- ಹೈದರಾಬಾದ ಭೂವಿಜ್ಞಾನ ತಜ್ಞರ ಹೇಳಿಕೆ

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಆಗಾಗ ಅಲ್ಲಲ್ಲಿ ಭೂಮಿ ಕಂಪಿಸಿದ ಹಾಗೂ ಭೂಮಿಯೊಳಗಿನಿಂದ ಶಬ್ಧ ಕೇಳಿದ ನಂತರ ಲಘು ಭೂಕಂಪನದ ಅನುಭವವಾಗುತ್ತಿರುವ ಹಿನ್ನೆಲೆಯಲ್ಲಿ ಹೈದರಾಬಾದಿನ ಗಣಿ ಮತ್ತು ಭೂವಿಜ್ಞಾನಿಗಳ ತಂಡ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹಿರಿಯ ಭೂವಿಜ್ಞಾನಿ ಶಶಿಧರ್ ಡಿ. ನೇತೃತ್ವದ ತಜ್ಞರ ತಂಡ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮಕ್ಕೆ ಆಗಮಿಸಿದ ಈ ತಂಡ ಮಸೂತಿ ಬಳಿ ಸಿಸ್ಮೋಮೀಟರ್(ಭೂಕಂಪನ ಮಾಪನ ಯಂತ್ರ) ಅಳವಡಿಸಿತು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, […]

ಬಸವ ನಾಡಿನಲ್ಲಿ ಮತ್ತೆ ಭೂಕಂಪನ- ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲು

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಉಂಟಾಗಿದೆ.  ಬೆಳಿಗ್ಗೆ ಭಾರಿ ಶಬ್ದದೊಂದಿಗೆ ಉಂಟಾದ ಈ ಭೂಕಂಪನದಿಂದ ನಾನಾ ಗ್ರಾಮಸ್ಥರು ತೀವ್ರ ಆಂತಕಗೊಂಡಿದ್ದಾರೆ. ಸೋಮವಾರ ಸಂಜೆಯಷ್ಟೇ ಭೂಕಂಪನ ಉಂಟಾಗಿದ್ದ ತಿಕೋಟಾ ತಾಲೂಕಿನ ನಾನಾ ಗ್ರಾಮಗಳಲ್ಲಿ ಈಗ ಮತ್ತೆ ಭೂಮಿ ಕಂಪಿಸಿದೆ.  ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ್ದರಿಂದ ಜನರು ಹೊರಗೆ ಓಡಿ ಬಂದಿದ್ದಾರೆ.  ಈ ಹಿಂದೆಯೂ ಹಲವಾರು ಬಾರಿ ಈ ಭಾಗದಲ್ಲಿ ಭೂಕಂಪನ ಅನುಭವಕ್ಕೆ ಬಂದಿದ್ದರೂ ಬೆಳಿಗ್ಗೆ 10.29ರ ಸುಮಾರಿಗೆ ಕೇಳಿ ಬಂದ ಭಾರಿ ಶಬ್ದ ಈ […]

ಸೋಮದೇವರಹಟ್ಟಿ ಬಳಿ ಭೂಕಂಪದ ಕೇಂದ್ರಬಿಂದು- ಎರಡು ಬಾರಿ ಕಂಪಿಸಿದ ಭೂಮಿ

ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಸಂಜೆ ಉಂಟಾದ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಸೋಮದೇವರಹಟ್ಟಿ ಗ್ರಾಮದಿಂದ ಆಗ್ನೆಯ ದಿಕ್ಕಿನಲ್ಲಿ 3.60 ಕಿ. ಮೀ. ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ದೃಢಪಟ್ಟಿದೆ. ಸಂ. 6.47ಕ್ಕೆ 1.5 ತೀವ್ರತೆ ಮತ್ತು ಸಂ. 7.03ಕ್ಕೆ ಎರಡನೇ ಬಾರಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 1.2 ರಷ್ಟು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದ ಮೂಲಗಳು ಬಸವ ನಾಡಿಗೆ ತಿಳಿಸಿವೆ.

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ- ಈ ಬಾರಿ ಮನೆಯಿಂದ ಹೊರಗೋಡಿ ಬಂದ ಜನತೆ- ಎಲ್ಲಿ ಗೊತ್ತಾ?

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಮುಂದುವರೆದಿದೆ.  ಕಳೆದ ಹಲವು ದಿನಗಳಿಂದ ಜಿಲ್ಲೆಯ ಆಲ್ಲಲ್ಲಿ ಭಾರಿ ಶಬ್ದ ಮತ್ತು ಭೂಮಿ ಕಂಪಿಸಿದ ಅನುಭವವಾಗುತ್ತಿದ್ದು, ಜನತೆ ಭಯ ಬೀಳುವಂತಾಗಿದೆ. ಸಂ. 6.34ರ ಸುಮಾರಿಗೆ ತಿಕೋಟಾ ತಾಲೂಕಿನ ಕೆಲವು ಗ್ರಾಮಗಳಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.  ಈ ತಿಂಗಳಲ್ಲಿ ಈ ಭಾಗದಲ್ಲಿ ಎರಡನೇ ಬಾರಿ ಭೂಮಿ ಕಂಪಿಸಿದೆ.  ತಿಕೋಟಾ ತಾಲೂಕಿನ ಕಳ್ಳಕವಟಗಿ, ಘೋಣಸiಗಿ, ಬಾಬಾನಗರ, ಬಿಜ್ಜರಗಿ, ಹುಬನೂರ, ಸಿದ್ದಾಪುರ ಕೆ., ಟಕ್ಕಳಕಿ, ಸೋಮದೇವರಹಟ್ಟಿ ಮತ್ತು ಮಲಕನದೇವರಹಟ್ಟಿ ಗ್ರಾಮಗಳಲ್ಲಿ ಭೂಕಂಪದ ಅನುಭವವಾಗಿದೆ […]

ಸಿಂದಗಿ ಬೈ ಎಲೆಕ್ಷನ್- ಬಿಜೆಪಿ ಅಭ್ಯರ್ಥಿ ಪರ ಸಚಿವ ಕಾರಜೋಳ, ಸಿ ಸಿ ಪಾಟೀಲ, ಮಾಜಿ ಸಚಿವ ಲಕ್ಷ್ಮಣ ಸವದಿ, ಶಾಸಕ ನಡಹಳ್ಳಿ ಬಿರುಸಿನ‌ ಪ್ರಚಾರ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನ ಸಭೆ ಕ್ಷೇತ್ರದ ಬೈ ಎಲೆಕ್ಷನ್ ಕಾವು ಏರುತ್ತಿದ್ದು, ಬಿಜೆಪಿ ಮುಖಂಡರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಸಚಿವರಾದ ಗೋವಿಂದ ಕಾರಜೋಳ, ಸಿ. ಸಿ. ಪಾಟೀಲ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಎ. ಎಸ್. ಪಾಟೀನಲ ನಡಹಳ್ಳಿ ಸೇರಿದಂತೆ ನಾನಾ ಮುಖಂಡರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಗೋವಿಂದ ಕಾರಜೋಳ‌ ಪ್ರಚಾರ ಜಲಸಂಪಂನ್ಮೂಲ ಸಚಿವ ಗೋವಿಂದ ಕಾರಜೋಳ ಅವರು‌ ಯಂಕಂಚಿ ಮತ್ತು ಮುರಡಿ ಗ್ರಾಮಗಳಲ್ಲಿ ಬಿಜೆಪಿ […]

ಬಸವ ನಾಡಿನಲ್ಲಿ ಮತ್ತೆ 3.1 ತೀವ್ರತೆ ಭೂಕಂಪ- ಎಲ್ಲಿ ಗೊತ್ತಾ?

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಸಂಜೆ ಮಧ್ಯಾಹ್ನ ಭೂಕಂಪ ಉಂಟಾಗಿದೆ. ಸಂ. 6.22ಕ್ಕೆ ಬಸವನ ಬಾಗೇವಾಡಿ ಮತ್ತು ವಿಜಯಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಹಿಟ್ಟಿನಹಳ್ಳಿ, ಮನಗೂಳಿ ಮತ್ತು ಇತರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಭೂಕಂಪದ ಅನುಭವಾಗಿದೆ. ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿಯ ಗ್ರಾಮದ ನೈರುತ್ಯಕ್ಕೆ 2.60 ಕಿ. ಮೀ. ದೂರದಲ್ಲಿ ಈ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ. ಅಲ್ಲದೇ, ಈ ಭೂಕಂಪದ ತೀವ್ರತೆ 3.1 ರಷ್ಟು ದಾಖಲಾಗಿದೆ. ಇದು ಲಘು ಭೂಕಂಪವಾಗಿದ್ದು, ಯಾರೂ ಆತಂಕ […]

ಸಿಂದಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಬಿರುಸಿನ ಪ್ರಚಾರ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಅವರು ಮತಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಸಿಂದಗಿ ಮತಕ್ಷೇತ್ರದ ಚಿಕ್ಕಸಿಂದಗಿ ಗ್ರಾಮಕ್ಕೆ ತೆರಳಿದ ಅವರು, ತಮಗೆ ಮತ ನೀಡುವಂತೆ ಮನೆಮನೆಗೆ ತೆರಳಿ ಮತಯಾಚಿಸಿದರು. ಬಳಿಕ ಕೊಕಟನೂರ ಗ್ರಾಮಕ್ಕೆ ತೆರಳಿದ ನಾಜಿಯಾ ಶಕೀಲ ಅಂಗಡಿ ಪಾದಯಾತ್ರೆ ನಡೆಸಿ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಡಿಎಸ್ ಮುಖಂಡರಾದ ಝಹೀರುದ್ದೀನ್, ಇಮಾಮ ನದಾಫ್, ಜಟ್ಟೆಪ್ಪ ಮುಂತಾದವರು ಕೂಡ ನಾಜಿಯಾ ಶಕೀಲ ಅಂಗಡಿ […]

ಸಂಸದ ರಮೇಶ ಜಿಗಜಿಣಗಿ, ಶಾಸಕ ನಡಹಳ್ಳಿ ಅವರಿಂದ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನ ಸಭೆ ಕ್ಷೇತ್ರಕ್ಕೆ ನಡೆಯುತ್ತಿರುವ ಬೈ ಎಲೆಕ್ಷನ್ ಪ್ರಚಾರ ಚುರುಕು ಪಡೆದುಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಶಾಸಕ ರಮೇಶ ಭೂಸನೂರ ಪರ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಮತ್ತು ಮುದ್ದೇಬಿಹಾಳ ಬಿಜೆಪಿ ಶಾಸಕ ಮತ್ತು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಸಂಸದ ರಮೇಶ ಜಿಗಜಿಣಗಿ ಬಿಜೆಪಿ ಮುಖಂಡರ ಜೊತೆ ಸೇರಿಕೊಂಡು ಬನಹಟ್ಟಿ ಗ್ರಾಮಕ್ಕೆ ಭೇಟಿ […]

ಮುಖಂಡರು, ಕಾರ್ಯಕರ್ತರ ಒತ್ತಾಯದ ಹಿನ್ನೆಲೆ ಸಿಂದಗಿ ಬೈ ಎಲೆಕ್ಷನ್ ಗೆ ಅಭ್ಯರ್ಥಿ ಹಾಕಿದ್ದೇವೆ- ನಾಜಿಯಾ ಶಕೀಲ ಅಂಗಡಿ ಗೆಲ್ಲಲಿದ್ದಾರೆ- ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಿಶ್ವಾಸ

ವಿಜಯಪುರ: ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ಒತ್ತಾಯದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್‍ಗೆ ಅಭ್ಯರ್ಥಿಯನ್ನು ಹಾಕಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಸಿಂದಗಿ ಬೈ ಎಲೆಕ್ಷನ್‍ನಲ್ಲಿ ಮೊದಲು ಅಭ್ಯರ್ಥಿ ಹಾಕಬಾರದು ಎಂದುಕೊಂಡಿದ್ದೇವು. ರಾಯಚೂರ ಬೈ ಎಲೆಕ್ಷನ್‍ನಲ್ಲಿಪಕ್ಷಕ್ಕೆ ಹಿನ್ನೆಡೆಯಾದಾಗ ಸಿಂದಗಿಯಲ್ಲಿ ಅಭ್ಯರ್ಥಿ ಹಾಕಬಾರದು ಎಂದು ತೀರ್ಮಾನಿಸಲಾಗಿತ್ತು ಆದರೆ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ಒತ್ತಾಯದ ಮೆರೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು. ಮಾಜಿ ಸಚಿವ ಎಂ. ಸಿ. […]