ಅಥಣಿಯಲ್ಲಿ ಪೊಲೀಸರ ಅಂಧಾ ದರ್ಬಾರ? ಪೊಲೀಸ್ ERSS 112 ಕಾರು ಢಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡ ತಾಯಿ ಮಗನ ವಿರುದ್ಧವೇ ಕೇಸ್- ಗಾಯಾಳುಗಳಿಂದ ದೂರು ಪಡೆಯಲು ಹಿಂದೇಟು ಆರೋಪ
ಅಥಣಿ: ಇದು ಸಾರ್ವಜನಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರ ಇನ್ನೋಂದು ಮುಖವಾಡಕ್ಕೆ ಸಾಕ್ಷಿಯಾಗಿರುವ ಘಟನೆ. ಈ ಘಟನೆಯಲ್ಲಿ ಪೊಲೀಸರ ಕಾರು ಬೈಕಿಗೆ ಢಿಕ್ಕಿ ಹೊಡೆದು ತಾಯಿ-ಮಗ ಗಂಭೀರವಾಗಿ ಗಾಯಗೊಂಡಿದ್ದರೂ ಪೊಲೀಸರು ಗಾಯಾಳುಗಳ ವಿರುದ್ಧವೇ ಕೇಸ್ ದಾಖಲಿಸಿ ಕೈತೊಳೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಸೋಮವಾರ ಮ. 12.30 ಸುಮಾರಿಗೆ ಸಂಕೋನಟ್ಟಿ ಗ್ರಾಮದ ತೋಟದ ವಸ್ತಿಯಿಂದ ತಾಯಿ ಸುಮಾರು 60 ವರ್ಷದ ವತ್ಸಲಾ ಶಂಕರ ಮುಗ್ದುಮ ಮತ್ತು ಸುಮಾರು 45 ವರ್ಷದ ಮಗ ಗುರುಲಿಂಗ ಮುಗ್ದುಮ ಬೈಕಿನಲ್ಲಿ ಅಥಣಿಯ ಕಡೆಗೆ ಹೊರಟಿದ್ದರು. […]
ಕರ್ನಾಟಕ ಮಾಧ್ಯಮ ಅಕಾಡೆಮಿಗೆ 40 ವರ್ಷ ಪೂರ್ಣ- ಲಾಂಛನ ಬಿಡುಗಡೆ ಮಾಡಿ, ಕ್ಲಬ್ ಹೌಸ್ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ 40 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಾಂಛನ ಬಿಡುಗಡೆ ಮಾಡಿ ಕ್ಲಬ್ ಹೌಸ್ ಉದ್ಘಾಟಿಸಿದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟನೆ ಬಳಿಕ ನನ್ನ ಕನಸಿನ ಕರ್ನಾಟ ವಿಷಯ ಕುರಿತು ಸಿಎಂ ಮಾತನಾಡಿದರು. ಕೈಗಾರಿಕೆಗಳ ಮೂಲಕ ಹೆಚ್ಚಿನ ಉದ್ಯೋಗ ಸೃಜನೆಗೆ ಅವಕಾಶವಿರುವುದರಿಂದ ರಾಜ್ಯದಲ್ಲಿ ಹೂಡಿಕೆ ಮಾಡುವ ಕೈಗಾರಿಕೋದ್ಯಮಗಳಿಗೆ ಉದ್ಯೋಗ ಸೃಜನೆ ಆಧಾರದಲ್ಲಿ ಪ್ರೋತ್ಸಾಹಕ ನೀಡುವ ಕುರಿತು ನೀತಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ಕರ್ನಾಟಕದಲ್ಲಿ ಕೈಗಾರಿಕೆ, ಉದ್ಯಮಗಳಿಗೆ ಸ್ವಾತಂತ್ರ್ಯ ಪೂರ್ವ […]
ಗುಮ್ಮಟ ನಗರಿಯಲ್ಲಿ 2014ರ ಕೋಮು ಗಲಭೆ ಪ್ರಕರಣ- ಯತ್ನಾಳ ಸೇರಿ ಎಲ್ಲ ಆರೋಪಿಗಳ ಖುಲಾಸೆ
ವಿಜಯಪುರ: ವಿಜಯಪುರ ನಗರದಲ್ಲಿ 2014 ಮೇ 26 ರಂದು ನಡೆದಿದ್ದ ಕೋಮು ಗಲಭೆ ಪ್ರಕರಣದ ತೀರ್ಪು ಪ್ರಕಟವಾಗಿದ್ದು ಎಲ್ಲ ಆರೋಪಿಗಳನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಖುಲಾಸೆ ಮಾಡಿ ತೀರ್ತು ನೀಡಿದೆ. 2014ರ ಮೇ 26 ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಮಯದಲ್ಲಿ ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ಮಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದ್ದರು. ಈ ಮೆರವಣಿಗೆ ಗಾಂಧಿಚೌಕಿಗೆ ಬರುತ್ತಿದ್ದಂತೆ ಕಲ್ಲು ತೂರಾಟ ಮತ್ತು […]
ಬಿಜೆಪಿ ಸರಕಾರ ಅನೈತಿಕ- ಗೋವಿಂದ ಕಾರಜೋಳ ಪಾಪದ ಮಂತ್ರಿ- ಮಾಜಿ ಸಚಿವ ಎಂ. ಬಿ. ಪಾಟೀಲ ವಾಗ್ದಾಳಿ
ವಿಜಯಪುರ: ಹಾಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ಮಾಜಿ ಜಲಸಂಫನ್ಮೂಲ ಸಚಿವ ಎಂ. ಬಿ. ಪಾಟೀಲ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಕೆಪಿ ಕಾಂಗ್ರೆಸ್ಸಿನ ಪಾಪದ ಕೂಸು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಆದರೆ, ಬಿಜೆಪಿ ಸರಕಾರ ಪಾಪದ ಕೂಸು. ಅನೈತಿಕ ಸರಕಾರದಲ್ಲಿ ಗೋವಿಂದ ಕಾರಜೋಳ ಪಾಪದ ನೀರಾವರಿ ಮಂತ್ರಿಯಾಗಿದ್ದಾರೆ ಎಂದು ಎಂ. ಬಿ. ಪಾಟೀಲ ಹರಿಹಾಯ್ದರು. ಕಾರಜೋಳ ಅವರಿಗೆ ಈ ವಯಸ್ಸಿನಲ್ಲಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. […]
ಕೆ ಬಿ ಜೆ ಎನ್ ಎಲ್ ಕಚೇರಿ ಆಲಮಟ್ಟಿಗೆ ಸ್ಥಳಾಂತರ – ಭೂಸ್ವಾಧೀನ ಪರಿಹಾರ ಪಾವತಿಗೆ ರೂ. 2500 ಕೋ ರೂ. ಬಿಡುಗಡೆಗೆ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಅನುಷ್ಠಾನಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕೊನೆಯ ಹಂತದಲ್ಲಿರುವ ಪ್ರಕರಣಗಳಿಗೆ ಕೂಡಲೇ ಪರಿಹಾರ ಪಾವತಿಸಲು, ಪುನರ್ವಸತಿ ಕೇಂದ್ರಗಳ ಸ್ಥಾಪನೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 2500 ಕೋ. ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿನ್ನೀರಿನಿಂದ ಮುಳುಗಡೆಯಾಗುವ 20 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ, ಪುನರ್ವಸತಿ ಕೇಂದ್ರಗಳ ಸ್ಥಾಪನೆಗೆ ಹಾಗೂ ಮೂಲ ಸೌಕರ್ಯ […]
ಬಿಜೆಪಿ ಸಂಸದ ರಮೇಶ ಜಿಗಜಿಣಗಿ ನೋವಿನ ಮಾತು- ಎಲ್ಲಿ ಮತ್ತು ಯಾಕೆ ಗೊತ್ತಾ?
ವಿಜಯಪುರ: ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೆಚ್ಚು ಮಾತನಾಡುವುದಿಲ್ಲ. ಅದರೆ, ಮಾತನಾಡಿದರೆ ಅದರ ಹಿಂದೆ ಉದ್ದೇಶವಂತೂ ಇದ್ದೇ ಇರುತ್ತದೆ. ಕೇಂದ್ರದಲ್ಲಿ ಸಚಿವ ಸ್ಥಾನ ತಪ್ಪಿದರೂ ಕ್ಯಾರೆ ಎನ್ನದ ರಮೇಶ ಜಿಗಜಿಣಗಿ ಈಗ ಮಾತ್ರ ಬಹಳ ಸೂಕ್ಷ್ಮವಾಗಿಯೇ ಬಿಜೆಪಿ ಹಿರಿಯ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಅವರು ಮಾತನಾಡಿರುವ ಶಬ್ದಗಳು ಸೂಕ್ಷವಾಗಿದ್ದರೂ ಹಿರಿಯ ಮತ್ತು ದಲಿತ ಸಂಸದರಾಗಿ ಇವರು ಆಡಿರುವ ಮಾತುಗಳು ಬಿಜೆಪಿಗೆ ಬಿಸಿತುಪ್ಪ ಆಗುವುದಂತೂ ಸುಳ್ಳಲ್ಲ. ವಿಜಯಪುರದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ […]
ತಾಳಿಕೋಟೆ ಬಳಿ ಕುಸಿತದ ಭೀತಿಯಲ್ಲಿ ಡೋಣಿ ನದಿ ಸೇತುವೆ-ಸಂಚಾರ ಸ್ಥಗಿತ
ವಿಜಯಪುರ: ವಿಜಯಪುರ ಜಿಲ್ಲೆಯ ತಾಳಿಕೋಟೆ ಬಳಿ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ಸಂಖ್ಯೆ 61ರಲ್ಲಿರುವ ಡೋಣಿ ಸೇತುವೆ ಕುಸಿತದ ಹಂತ ತಲುಪಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ತಾಳಿಕೋಟೆ ಪಟ್ಟಣದ ಹೊರವಲಯದ ಮಿಣಜಗಿ ಕ್ರಾಸ್ ಬಳಿ ಇರುವ ಸೇತುವೆಯ ಸ್ಪ್ಯಾನ್ ನಲ್ಲಿ ಬಿರುಕು ಬಿಟ್ಟಿದ್ದು, ಈ ಸ್ಪ್ಯಾನ್ ವಾಲಿ ಕೆಳಕ್ಕೆ ಬಿಳುವ ಸ್ಥಿತಿ ತಲುಪಿದೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗಿದ್ದು, ಸೇತುವೆ ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡುವಂತಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಈ ಸೇತುವೆಯಲ್ಲಿ […]
ಟಿಕಾಯತ್ ಪಾಕಿಸ್ತಾನದ ಏಜೆಂಟ್- ಕಾಂಗ್ರೆಸ್ ತಾಲಿಬಾನದ ಪ್ರತಿರೂಪ- ಸಿದ್ಧರಾಮಯ್ಯ ಟಿಪ್ಪು ಸುಲ್ತಾನ್ ವಂಶಸ್ಥರು- ಯತ್ನಾಳ ವಾಗ್ದಾಳಿ
ವಿಜಯಪುರ: ಸಿದ್ಧರಾಮಯ್ಯ ಟಿಪ್ಪು ಸುಲ್ತಾನ ವಂಶಸ್ಥರು. ಧರ್ಮ, ದೇಶ, ಸಂಸ್ಕೃತಿ ಬಗ್ಗೆ ಗೊತ್ತಿಲ್ಲ. ಕೇವಲ ಸ್ವಾರ್ಥಕ್ಕಾಗಿ, ಮತಬ್ಯಾಂಕ್ ಗಾಗಿ ಒಂದು ಸಮುದಾಯವನ್ನು ಸಂತೃಪ್ತಗೊಳಿಸಲು ಅವಹೇಳನಕಾರಿಯಾಗಿ ಬಿಜೆಪಿ ಬಗ್ಗೆ ಮಾತನಾಡುತ್ತಾರೆ. ಅವರು ಓರ್ವ ಮಾಜಿ ಸಿಎಂ, ಪ್ರತಿಪಕ್ಷದ ನಾಯಕರಾಗಿದ್ದಾರೆ. ಅವರ ಗೌರವಕ್ಕೆ ತಕ್ಕಂತೆ ನಡೆಯಬೇಕು. ತಾಲಿಬಾನಿಗಳೇನಿದ್ದರೂ ಕಾಂಗ್ರೆಸ್ಸಿನಲ್ಲಿದ್ದಾರೆ. ಕಾಂಗ್ರೆಸ್ ತಾಲಿಬಾನ್ ಪ್ರತಿರೂಪವಾಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದಾರೆ ವಿಜಯಪುರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ, ಬಿಜೆಪಿಯವರು […]
ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್‌ಪಾರ್ಕ್ ಉದ್ಘಾಟನೆ- ಆರ್ ಆ್ಯಂಡ್ ಡಿ ಹೊಸನೀತಿ ರೂಪಿಸಲು ಕಾರ್ಯಪಡೆ ರಚನೆ- ಸಿಎಂ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ಕೃಷಿ, ತೈಲ, ಕೈಗಾರಿಕೆ ಮತ್ತಿತರ ಎಲ್ಲಾ ರಂಗಗಳಲ್ಲಿ ಇಂದು ಸಂಶೋಧನೆ ಮತ್ತು ಅಭಿವೃದ್ಧಿ(ಆರ್ ಆ್ಯಂಡ್ ಡಿ) ಅಗತ್ಯವಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ 180 ಆರ್ ಆ್ಯಂಡ್ ಡಿ ಕೇಂದ್ರಗಳಿವೆ. ಅವುಗಳಿಗೆ ಹೆಚ್ಚು ಮಹತ್ವ ನೀಡಿ, ಕೈಗಾರಿಕೆ, ಕೃಷಿ, ಆಹಾರ ರಂಗದಲ್ಲಿ ಆರ್ ಆ್ಯಂಡ್ ಡಿ ಬಳಕೆಗೆ ಹೆಚ್ಚು ಒತ್ತು ನೀಡಲು ಸರಕಾರ ಉದ್ದೇಶಿಸಿದೆ. ಹೊಸ ಆರ್ ಆ್ಯಂಡ್ ಡಿ ನೀತಿ ರಚನೆಗೆ ಕಾರ್ಯಪಡೆ ಅಧ್ಯಕ್ಷರನ್ನಾಗಿ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಉಪಕುಲಪತಿ ಡಾ .ಅಶೋಕ […]
ಪ್ರತಿಯೊಂದು ಮಹಾನಗರಪಾಲಿಕೆಯಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗಾವಿ: ಬೆಳಗಾವಿಯ ಇ- ಗ್ರಂಥಾಲಯ ಕಾರ್ಯವೈಖರಿಯನ್ನು ಗಮನಿಸಿ ಅದು ಯಶಸ್ವಿಯಾದರೆ ಇದೇ ಮಾದರಿಯಲ್ಲಿ ಪ್ರತಿಯೊಂದು ಮಹಾನಗರ ಪಾಲಿಕೆಯಲ್ಲಿ ಇ- ಗ್ರಂಥಾಲಯ ತೆರೆಯಲು ಸರಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ದೇಶಭಕ್ತ ರವೀಂದ್ರ ಕೌಶಿಕ್ ಅವರ ಹೆಸರಿನಲ್ಲಿ ಇ- ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಡಿಜಿಟಲ್ ಗ್ರಂಥಾಲಯ ಓದುಗರಿಗೆ, ಬರಹಗಾರರಿಗೆ, ಜ್ಞಾನ ಪಡೆಯಲು ಬಯಸುವವರಿಗೆ ಜ್ಞಾನದ ರಹದಾರಿಯನ್ನು ತೆರೆದಿದೆ. ಇದರಿಂದ ಡಿಜಿಟಲ್ ಶಕ್ತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗುತ್ತದೆ. ಜ್ಞಾನ ನೀಡುವುದು ಮತ್ತು ಪಡೆಯುವುದು […]