ಪತ್ರಕರ್ತರು ವಿಶ್ವಾಸಾರ್ಹತೆ ಬೆಳೆಸಿಕೊಳ್ಳದಿದ್ದರೆ ವೃತ್ತಿಯ ವಿಶ್ವಾಸಾರ್ಹತೆ ಉಳಿಯುವುದಿಲ್ಲ: ಕೆ. ವಿ. ಪ್ರಭಾಕರ

ದಾವಣಗೆರೆ : ಪತ್ರಕರ್ತರು ವಿಶ್ವಾಸಾರ್ಹತೆ ಬೆಳೆಸಿಕೊಳ್ಳದಿದ್ದರೆ ವೃತ್ತಿಯ ವಿಶ್ವಾಸಾರ್ಹತೆ ಉಳಿಯುವುದಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ. ವಿ. ಪ್ರಭಾಕರ ಆತಂಕ ವ್ಯಕ್ತಪಡಿಸಿದ್ದಾರೆ.   ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 38 ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಬಾಲಿವುಡ್ ನಟಿ ಪೂನಂಪಾಂಡೆ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿ ಸಾವಿನ ಬಗ್ಗೆ ವಿಶ್ಲೇಷಣೆಯನ್ನೂ ಮಾಡಿಬಿಟ್ಟರು. ಆದರೆ, ಪೂನಂ ಪಾಂಡೆ ಬದುಕೇ ಇದ್ದಾರೆ. ಸಾವಿನ ಸುದ್ದಿಯನ್ನಾದರೂ ಪ್ರಕಟಿಸುವ ಮೊದಲು ಪರಿಶೀಲಿಸಿಕೊಳ್ಳದಿದ್ದರೆ ಹೇಗೆ […]

ಗಣರಾಜ್ಯೋತ್ಸವದ ವೇಳೆ ಗಾಳಿಯಲ್ಲಿ ಗುಂಡು- ಗ್ರಾ. ಪಂ. ಅಧ್ಯಕ್ಷೆಗೆ ಗಾಯ- ಆಸ್ಪತ್ರೆಯಲ್ಲಿ ಚೇತರಿಕೆ

ವಿಜಯಪುರ: ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ಅಚಾನಕ್ಕಾಗಿ ಹಾರಿದ ಗುಂಡು ಗ್ರಾ. ಪಂ. ಅಧ್ಯಕ್ಷೆಯ ಕಾಲಿಗೆ ತಾಗಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ. 75ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮವ್ವ ಹೊಸಮನಿ ಧ್ವಜಾರೋಹಣ ಮಾಡಿ ನಿಂತಿದ್ದರು.  ಆಗ ಕಾಲಿಗೆ ಏಕಾಏಗ ಏನೋ ಬಡಿದಂತಾಗಿ ಕೆಳಗೆ ಕುಳಿತಿದ್ದಾರೆ.  ನಂತರ ಪರಿಶೀಲಿಸಿದಾಗ ಗುಂಡು ತಗುಲಿರುವುದು ಪತ್ತೆಯಾಗಿದೆ. ಇದೀಗ ಗ್ರಾ. ಪಂ. ಅಧ್ಯಕ್ಷೆ ಸೋಮವ್ವ ಹೊಸಮನಿ […]

ಎನ್ಇಪಿ ಮುಂದುವರಿಸಲು ಆಗ್ರಹ- ಪಿಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ನಿಂದ ರಾಜ್ಯಪಾಲರಿಗೆ ವರದಿ ಸಲ್ಲಿಕೆ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಮುಂದುವರೆಸುವಂತೆ ಆಗ್ರಹಿಸಿ ಪಿಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶಷನ್ ವತಿಯಿಂದ ರಾಜ್ಯಪಾಲ ಥಾವರಚಂದ ಗೆಹ್ಲೊಟ್ ಅವರಿಗೆ ವರದಿಯನ್ನು ಸಲ್ಲಿಸಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿ-2020 ಅಳವಡಿಕೆಯನ್ನು ರಾಜ್ಯದಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಫೋರಮ್ ವತಿಯಿಂದ ರಾಜ್ಯಾದ್ಯಂತ ಸಹಿ ಸಂಗ್ರಹಿಸಲಾಗಿದೆ.  34 ಶೈಕ್ಷಣಿಕ ಜಿಲ್ಲೆಗಳ 168 ತಾಲೂಕುಗಳ 2630 ಶಾಲೆಗಳು, 83600 ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು, 26980 ಪೋಷಕರು, 19327 ಆನಲೈನ್ ಮೂಲಕ ಕ್ಯಾಂಪೇನ್ ಸಹಿ, 8,88,173 ವಿದ್ಯಾರ್ಥಿಗಳು ಸೇರಿ ಒಟ್ಟು 10 […]

ಯುಜಿಸಿ- ಎನ್ ಇ ಟಿ ಪಾಸಾದ ಬಸವನಾಡಿನ ಯುವಕ ಸುದರ್ಶನ ಯಡಹಳ್ಳಿ

ವಿಜಯಪುರ: ಬಸವನಾಡಿನ ಯುವಕ ಸುದರ್ಶನ ಯಡಹಳ್ಳಿ ಎನ್ಇಟಿ ಪಾಸಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಡಿಸೆಂಬರ್ 2023ರಲ್ಲಿ ನಡೆಸಿದ ಜೆ ಆರ್ ಎಫ್- ಮತ್ತು ಅಸಿಸ್ಟಂಟ ಪ್ರೊಫೆಸರ್ ಪರೀಕ್ಷೆಯಲ್ಲಿ ಸುದರ್ಶನ ಯಡಹಳ್ಳಿ ಅವರು ಅಸಿಸ್ಟಂಟ್ ಪ್ರೊಫೆಸರ್ ಪರೀಕ್ಷೆ ಪಾಸಾಗಿದ್ದಾರೆ.  ಯುಜಿಸಿ ಪ್ರತಿ ವರ್ಷ ಎರಡು ಬಾರಿ ಆನ್ ಲೈನ್ ಮೂಲಕ ನೆಟ್ ಮತ್ತು ಜೆ ಆರ್ ಎಫ್ ಪರೀಕ್ಷೆ ನಡೆಸುತ್ತದೆ.  ಕಳೆದ ಡಿಸೆಂಬರ್ ನಲ್ಲಿ ನಡೆಸಿದ ಈ ಪರೀಕ್ಷೆಯಲ್ಲಿ ಒಟ್ಟು 9.50 […]

ತುಷಾರ ಚಲನಚಿತ್ರಕ್ಕೆ ಸಿದ್ಧನಕೊಳ್ಳದಲ್ಲಿ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಸಿದ್ದನಕೊಳ್ಳದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ನಡೆದ 2024 ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿಯ ನಟ, ನಿರ್ದೇಶಕ, ನಿರ್ಮಾಪಕ ವಿಶ್ವಪ್ರಕಾಶ ಟಿ. ಮಲಗೊಂಡ ನಟಿಸಿರುವ ತುಷಾರ ಚಲನಚಿತ್ರಕ್ಕೆ ಹಿರಿಯ ನಿರ್ದೇಶಕರು, ಕಲಾವಿದರು ಮತ್ತು ಆಯ್ಕೆದಾರರ ಸಮಿತಿ ಮೆಚ್ಚುಗೆ ಪ್ರಶಸ್ತಿ ಲಭಿಸಿದೆ. ರಾಜ್ಯದ ನಾನಾ ಗಡೆಗಳಿಂದ ನೂರಾರು ಚಲನಚಿತ್ರಗಳು ಆಯ್ಕೆಗೆ ಅರ್ಜಿ ಸಲ್ಲಿಸಿದ್ದವು.  ಈ ವೇಳೆ ಮಲಗೊಂಡ ಫಿಲಂ ಪ್ರೊಡಕ್ಷನ್ ನಡಿ ತಯಾರಾದ ತುಷಾರ್ ವನ್ನೂ ಕಳುಹಿಸಲಾಗಿತ್ತು.  ಈ ಸಿನೇಮಾ ವೀಕ್ಷಿಸಿದ ಹಿರಿಯ […]

ಸಿಂದಗಿಯಲ್ಲಿ ಸಿಗರೇಟ್ ಕಳ್ಳತನ ಪ್ರಕರಣ- ಓರ್ವನನ್ನು ಬಂಧಿಸಿದ ಪೊಲೀಸರು- ನಿಟ್ಟುಸಿರು ಬಿಟ್ಟ ವಾರದ ಕುಟುಂಬ

ವಿಜಯಪುರ: ಸಿಂದಗಿ‌ ಪಟ್ಟದಲ್ಲಿ ಕಳೆದ ವರ್ಷ ಡಿಸೆಂಬರ್ 24 ರಂದು ನಡೆದ ಸುಮಾರು ರೂ.‌ 42 ಲಕ್ಷ ಮೌಲ್ಯದ ಸಿಗರೇಟ್ ಕಳ್ಳತನ ಪ್ರಕರಣವನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 24 ರಂದು ನಡೆದಿದ್ದ ಮತ್ತು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣವನ್ನು ಎಸ್ಪಿ ಋಷಿಕೇಶ ಸೋನಾವಣೆ ಅವರು ಗಂಭೀರವಾಗಿ ಪರಿಗಣಿಸಿದ್ದರು.  ಅದವರ ಸೂಚನೆಯಂತೆ ನಡೆದ ಕಾರ್ಯಾಚರಣೆಯ ಬಳಿಕ ಇದೀಗ ಈ ಪ್ರಕರಣವನ್ನು ಸಿಂದಗಿ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣ ಸಂಬಂಧ ರಾಜಸ್ತಾನದ ಜಿತೇಂದ್ರಕುಮಾರ ಮಾಂಗಿಲಾಲ್ ಗೆಹ್ಲೊಟ್(26) […]

ವಿಜಯಪುರ ಜಿಲ್ಲೆಯ ಗಬಸಾವಳಗಿ ಬಳಿ ಹೊತ್ತಿ ಬೈಕಿಗೆ ಢಿಕ್ಕಿ ಹೊಡೆದು ಹೊತ್ತು ಉರಿದ ಸರಕಾರಿ ಬಸ್ಸು

ವಿಜಯಪುರ: ಬೈಕಿಗೆ ಢಿಕ್ಕಿ ಹೊಡೆದ ಸರಕಾರಿ ಬಸ್ಸೊಂದು ಹೊತ್ತು ಉರಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಬಸಾವಳಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ ನಡೆದಿದೆ. ಸಿಂದಗಿ ತಾಲೂಕಿನ ಮೊರಟಗಿಯಿಂದ ಸಿಂದಗಿಗೆ ಬರುತ್ತಿದ್ದ ಬಸ್ಸಿಗೆ ಸಿಂದಗಿಯಿಂದ ಮೊರಟಗಿಯತ್ತ ಹೊರಟಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತದ ಸಂಭವಿಸಿದೆ.  ಢಿಕ್ಕಿಯ ಬಳಿಕ ಬೈಕ್ ಬಸ್ಸಿನಡಿ ಸಿಲುಕಿದೆ.  ಆಗ ಹೊತ್ತಿದ ಬೆಂಕಿಯಿಂದಾಗಿ ಬಸ್ಸು ಸುಟ್ಟು ಭಸ್ಮವಾಗಿದೆ.  ಆದರೆ, ಅದೃಷ್ಟವಶಾತ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. KA- 28/F- 2469 ನಂಬರಿನ […]

ಹುಣಶ್ಯಾಳ ಪಿ. ಬಿ ಗ್ರಾಮದಲ್ಲಿ ಲಂಚ ಪಡೆಯುತ್ತಿದ್ದ ಪಿಡಿಓ ಲೋಕಾಯುಕ್ತರ ಬಲೆಗೆ

ವಿಜಯಪುರ: ಲಂಚ ಪಡೆಯುತ್ತಿದ್ದ ಪಿಡಿಓ ಲೋಕಾಯುಕ್ತರ ಬಲೆಗೆ ಸಿಲುಕಿದ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ. ಬಿ. ಗ್ರಾಮದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿವಿ ಗ್ರಾಮದ ಗ್ರಾಮ ಪಂಚಾಯಿತಿಯ ಪಿಡಿಓ ಸಂಗಮೇಶ ಕುಂಬಾರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಗ್ರಾಮದ ಖುಲ್ಲಾ ಜಾಗದ ವಾರಸಾ ಮಾಡಿಕೊಡಲು ರೂ. 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಂಗಮೇಶ ಕುಂಬಾರ ರೂ. 15 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ. […]

ಜೆಜೆಎಂ ಯೋಜನೆಗೆ ಗ್ರಾ. ಪಂ. ಸಮುದಾಯ ವಂತಿಗೆ ಪಡೆಯದಂತೆ ಮಾಡಿದ ಹೋರಾಟ ಫಲ ನೀಡಿದೆ- ವಿಪ ಶಾಸಕ ಸುನೀಲಗೌಡ ಪಾಟೀಲ

ವಿಜಯಪುರ: ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಪರವಾಗಿ ನಾನು ಹೋರಾಟ ಮಾಡಿದರ ಫಲವಾಗಿ ಜಲಜೀವನ ಮಿಷನ್(ಜೆಜೆಎಂ) ಯೋಜನೆಗೆ ಗ್ರಾ. ಪಂ. ಗಳ ವತಿಯಿಂದ ನೀಡಬೇಕಿದ್ದ ಸಮುದಾಯ ವಂತಿಗೆಯನ್ನು ರದ್ದು ಪಡಿಸಲಾಗಿದೆ.  ಈಗ ಸರಕಾರವೇ ಈ ಹಣವನ್ನು ಭರಿಸುತ್ತಿದ್ದು, ಈ ದುಡ್ಡಿನಲ್ಲಿ ಗ್ರಾ. ಪಂ. ಗಳು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಿದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನ ಕಾರಜೊಳ ಗ್ರಾಮದಲ್ಲಿ ತೊನಶ್ಯಾಳ ಗ್ರಾಮದಲ್ಲಿ ರೂ. 1.47 ಕೋ. ಮತ್ತು ಕಾರಜೋಳ ಗ್ರಾಮದಲ್ಲಿ […]

ರೇಡಿಯೋ ಶಿಕ್ಷಣ, ಆರೋಗ್ಯ, ಕೃಷಿ, ವಿಜ್ಞಾನ, ಮನೊರಂಜನೆ ಒದಗಿಸುವ ಪ್ರಮುಖ ಮಾಹಿತಿ ಮಾಧ್ಯಮವಾಗಿದೆ- ಎಸ್. ಆರ್. ಮೂಗನೂರಮಠ

ಬಾಗಲಕೋಟೆ:  ರೇಡಿಯೋ ಶಿಕ್ಷಣ, ಆರೋಗ್ಯ, ಕೃಷಿ, ವಿಜ್ಞಾನ, ಮನೊರಂಜನೆ ಒದಗಿಸುವ ಪ್ರಮುಖ ಮಾಹಿತಿ  ಮಾಧ್ಯಮವಾಗಿದೆ ಎಂದು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಆರ್. ಮೂಗನೂರಮಠ ಹೇಳಿದ್ದಾರೆ. ನಗರದ ಬಿ.ವಿ.ವಿ.ಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಬಾಗಲಕೋಟೆಯ ಬಿಈಸಿ ಧ್ವನಿ 90.4 ಎಫ್.ಎಮ್.ನಲ್ಲಿ ಪ್ರತಿ ಸೋಮವಾರ ಪ್ರಸಾರವಾಗುವ ಸಂಪೂಣ೯ ಆರೋಗ್ಯಕ್ಕಾಗಿ ಹೋಮಿಯೋಪಥಿ ರೇಡಿಯೋ ಸಂವಾದ ಕಾಯ೯ಕ್ರಮದ ಭಿತ್ತಿಚಿತ್ರಪಟ ಬಿಡುಗಡೆ ಮಾಡಿ ಅವರು ಮಾತನಾಡಿದರು. ರೇಡಿಯೋ ಅತ್ಯಂತ ವ್ಯಾಪಕವಾಗಿ ಜನಸಾಮಾನ್ಯರಿಗೆ ತಲುಪುವ ಕಡಿಮೆ ವೆಚ್ಚದ […]