ಇಂಗಳೇಶ್ವರದಲ್ಲಿ ಬಸವೇಶ್ವರರ ಅಶ್ವಾರೂಢ ಮೂರ್ತಿ ಸ್ಥಾಪನೆಗೆ ಗ್ರಾಮದ ನಾನಾ ಸಂಘಟನೆಗಳಿಂದ ಶಾಸಕ ಶಿವಾನಂದ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಕೆ
ವಿಜಯಪುರ: ವಿಶ್ವಗುರು ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಅಣ್ಣ ಬಸವಣ್ಣನವರ ಅಶ್ವಾರೂಢ ಕಂಚಿನ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ಇಂಗಳೇಶ್ವರ ಗ್ರಾಮದ ನಾನಾ ಸಂಘಟಣೆಗಳ ಮುಖಂಡರು ಹಾಗೂ ಆಟೋ ಚಾಲಕರ ಸಂಘ ಜಂಟಿಯಾಗಿ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿತು. ವಿಜಯಪುರ ನಗರದಲ್ಲಿರುವ ಶಾಸಕರ ನಿವಾಸಕ್ಕೆ ತೆರಳಿದ ಸಂಘಟನೆಗಳ ಮುಖಂಡರು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ […]
ಸಿಂದಗಿ ಮತಕ್ಷೇತ್ರಕ್ಕೆ 5000 ಮನೆಗಳ ಮಂಜೂರು- ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ವಿ. ಸೋಮಣ್ಣ ಅವರಿಗೆ ಎಂ ಎಲ್ ಸಿ ಅರುಣ ಶಹಾಪುರ ಕೃತಜ್ಞತೆ
ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ರಾಜ್ಯ ಸರಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. ಈ ತಾಲೂಕಿನ ಬಡಜನರಿಗಾಗಿ 5000 ಮನೆಗಳನ್ನು ಮಂಜೂರು ಮಾಡಿರುವುದು ಇದಕ್ಕೆ ಸಾಕ್ಷಿ ಎಂದು ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ತಮ್ಮ ಸರಕಾರವು ಸಿಂದಗಿ ತಾಲೂಕಿನ ಬಡ ಜನರಿಗೆ ಸ್ವಂತ ಸೂರನ್ನು ನಿರ್ಮಿಸಿಕೊಳ್ಳಲು 5000 ಮನೆಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು […]
ವಿಜಯಪುರ ಜಿಲ್ಲಾಧಿಕಾರಿಗಳಿಂದ ಅಲಿಯಾಬಾದ ವಾಟರ್ ಪೆವಿಲಿಯನ್ ವೀಕ್ಷಣೆ
ವಿಜಯಪುರ: ವಿಜಯಪುರ ತಾಲೂಕಿನ ಐತಿಹಾಸಿಕ ತಾಣವಾದ ಅಲಿಯಾಬಾದ ವಾಟರ್ ಪೆವಿಲಿಯನ್ ಸ್ಮಾರಕಕ್ಕೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದಿಲಶಾಹಿ ಕಾಲದಲ್ಲಿ ನಿರ್ಮಿಸಲಾಗಿರುವ ಮತ್ತು ವಿಜಯಪುರ ನಗರದಿಂದ ಸುಮಾರು 13 ಕಿ. ಮೀ. ದೂರದಲ್ಲಿರುವ ಈ ಸ್ಮಾರಕ ಅಲಿಯಾಬಾದ ಗ್ರಾಮದ ಮಧ್ಯದ ಪ್ರಕೃತಿಯ ಮಡಿಲಿನಲ್ಲಿ ಸುಂದರವಾದ ಸ್ಮಾರಕವಾಗಿದೆ. ಈ ಪ್ರವಾಸಿ ಸ್ಮಾರಕವನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಥಳ ವೀಕ್ಷಣೆ ಮಾಡಿ ಸ್ಮಾರಕ […]
ನೆಹರು, ನಕಲಿ ಗಾಂಧಿ ಮನೆತನದಿಂದ ದೇಶ ನರಳುತ್ತಿದೆ- ಜ್ಯಾತ್ಯತೀತ ಎಂಬುದು ನಮ್ಮ ದೇಶದಲ್ಲಿ ಕೆಟ್ಟ- ಬುದ್ದಿಜೀವಿಗಳು, ಸಿನೇಮಾ ನಟರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಯತ್ನಾಳ
ವಿಜಯಪುರ: ಬುದ್ದಿ ಜೀವಿಗಳು, ನೆಹರು, ರಾಹುಲ್ ಗಾಂಧಿ, ಸ್ವಾಮೀಜಿಗಳು ಮತ್ತು ಸಿನೇಮಾ ನಟರಾದ ಖಾನ್ ತ್ರಯರ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ತಾನ ವಿಚಾರದಲ್ಲಿ ಮೌನ ವಹಿಸಿರುವ ಬುದ್ದಿಜೀವಿಗಳು, ಚಿತ್ರನಟರಾದ ಅಮಿರಖಾನ, ಶಾರುಕಖಾನ, ಸಲ್ಮಾನಖಾನ್, ರಾಹುಲ್ ಗಾಂಧಿ ಮತ್ತು ಸ್ವಾಮೀಜಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಅಪ್ಘಾನಿಸ್ತಾನ್ ವಿಚಾರದಲ್ಲಿ ಮಾತನಾಡದ ಬುದ್ಧಿ ಜೀವಿಗಳು ಬುದ್ಧಿ ಜೀವಿಗಳು ತಾಲಿಬಾನ್‌ಗೆ ಹುಟ್ಟಿದ್ದಾರೆ. ಬುದ್ಧಿ ಜೀವಿಗಳು ಲದ್ದಿ ತಿಂದಿದ್ದಾರೆ. ಬುದ್ಧಿ […]
ಆಯುಷ್ ಆಸ್ಪತ್ರೆ ವೈದ್ಯರ ಆರೈಕೆ- 2 ತಿಂಗಳ ಬಳಿಕ ಕೊರೊನಾದಿಂದ ಗುಣಮುಖರಾದ ಮಹಾರಾಷ್ಟ್ರದ ವ್ಯಕ್ತಿ- ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ ರೋಗಿಯ ಸಂಬಂಧಿಕರು
ವಿಜಯಪುರ: ಒಂದು ತಿಂಗಳುಗಳ ಕಾಲ ವೆಂಟಿಲೇಟ್ ಮೇಲೆ ಚಿಕಿತ್ಸೆ ಸೇರಿದಂತೆ ಸತತ ಎರಡು ತಿಂಗಳ ಚಿಕಿತ್ಸೆಯ ಬಳಿಕ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಗುಣಮುಖರಾಗಿ ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಿಜಯಪುರ ನಗರದ ಪ್ರತಿಷ್ಠಿತ ಆಯುಷ್ ಆಸ್ಪತ್ರೆಯ ವೈದ್ಯ ಡಾ. ನಿತೀನ ಅಗರವಾಲ ಉಸ್ತುವಾರಿಯಲ್ಲಿ ವೈದ್ಯರಾದ ಡಾ. ಸೀಮಾ, ಡಾ. ರಶ್ಮಿ ಬಿರಾದಾರ, ಡಾ. ಆರತಿ, ಸುನೀಲ ದೇವೂರ ಮತ್ತು ಸಿಬ್ಬಂದಿ ನೀಡಿದ ಚಿಕಿತ್ಸೆಯಿಂದಾಗಿ ಈ ವ್ಯಕ್ತಿ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ತಿಕ್ಕುಂಡಿ ಗ್ರಾಮದ […]
ಗಣೇಶೋತ್ಸವಕ್ಕಾಗಿ ಗುಂಡೇಟು ತಿನ್ನಲೂ ಸಿದ್ಧ- ಕೊರೊನಾ ಹೆಸರಲ್ಲಿ ನಿರ್ಬಂಧಿಗೆ ಹೆದರಲ್ಲ- ಯತ್ನಾಳ
ವಿಜಯಪುರ: ಗಣೇಶೋತ್ಸವಕ್ಜಾಗಿ ಗುಂಡೇಟು ತಿನ್ನಲೂ ಸಿದ್ಧ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕೊರೊನಾ ಹೆಸರಿನಲ್ಲಿ ನಿರ್ಬಂಧ ಹೇರಬೇಡಿ ಎಂದು ಆಲಮಟ್ಟಿಯಲ್ಲಿ ಮುಖ್ಯಮಂತ್ರಿಗಳಿಗೂ ಹೇಳಿದ್ದೇನೆ ಎಂದು ತಿಳಿಸಿದರು. ಕೊರೊನಾ ಲಸಿಕೆ ಹಾಕುವುದರಲ್ಲಿ ವಿಜಯಪುರ ನಗರ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಕೊರೊನಾ 3ನೇ ಅಲೆ ನಮ್ಮ ಮೇಲೆ ಹೆಚ್ಚಿಗೆ ಪರಿಣಾಮ ಬೀರುವುದಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಆದರೂ, ಇಲ್ಲಿ ಶನಿವಾರ ಮತ್ತು […]
ಮಾನಸಿಕ. ದೈಹಿಕ ಆರೋಗ್ಯಕ್ಕಾಗಿ ಪ್ರತಿನಿತ್ಯ ಕನಿಷ್ಠ 30 ನಿಮಿಷ ಓಟ, ವ್ಯಾಯಾಮ, ಯೋಗಾಭ್ಯಾಸ ಅಗತ್ಯ- ಐಎಎಸ್ ತರಬೇತಿ ನಿರತ ಅಧಿಕಾರಿ ರಿಷಿ ಆನಂದ
ವಿಜಯಪುರ: ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಪ್ರತಿನಿತ್ಯ ಕನಿಷ್ಠ 30 ನಿಮಿಷಗಳ ಕಾಲ ಓಟ, ವ್ಯಾಯಾಮ, ಮತ್ತು ಯೋಗಭ್ಯಾಸವನ್ನು ಮಾಡಬೇಕು ಎಂದು ಐಎಎಸ್ ತರಬೇತಿ ನಿರತ ಅಧಿಕಾರಿ ರಿಷಿ ಆನಂದ ಹೇಳಿದ್ದಾರೆ. ವಿಜಯಪುರದಲ್ಲಿ ಕೇಂದ್ರ ಸರಕಾರದ ನೆಹರು ಯುವ ಕೇಂದ್ರ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಎನ್ ಎಸ್ ಎಸ್ ಘಟಕ, ಭಾರತ ಸೇವಾ ದಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಜಯಪುರ ಯುತ್ ಮಾರ್ಶಲ್ ಆರ್ಸ್ಟ್ ಸಂಯುಕ್ತಾಶ್ರಯದಲ್ಲಿ […]
ಭರ್ತಿಯಾದ ಆಲಮಟ್ಟಿ ಜಲಾಷಯಕ್ಕೆ ಬಾಗೀನ ಅರ್ಪಿಸಿದ ಸಿಎಂ ಬಸವರಾಜ ಬೊಮ್ಮಾಯಿ
ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರ್ತಿಯಾಗಿರುವ ಆಲಮಟ್ಟಿ ಜಲಾಷಯಕ್ಕೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಉಮೇಶ ಕತ್ತಿ, ಸಂಸದ ರಮೇಶ ಜಿಗಜಿಣಗಿ, ಪಿ. ಸಿ. ಗದ್ದಿಗೌಡರ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎಂ. ಬಿ. ಪಾಟೀಲ, ಯಶವಂತರಾಯಗೌಡ ಪಾಟೀಲ, ಶಿವಾನಂದ ಫಾಟೀಲ, ಎ. ಎಸ್. ಪಾಟೀಲ ನಡಹಳ್ಳಿ, ವಿಧಾನ ಫರಿಷತ ಸದಸ್ಯರಾದ ಅರುಣ ಶಹಾಫುರ, ಪ್ರಕಾಶ ರಾಠೋಡ, ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, […]
ಮುಖ್ಯಮಂತ್ರಿಗಳ ಮಾದ್ಯಮ ಸಂಯೋಜಕರಾಗಿ ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ಹೊಳಿಮಠ ನೇಮಕ
ಬೆಂಗಳೂರು: ಮುಖ್ಯಮಂತ್ರಿಗಳ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರನ್ನಾಗಿ ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ಹೊಳಿಮಠ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಸರಕಾರ ಆದೇಶ ಹೊರಡಿಸಿದೆ. ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗದವರಾಗಿರುವ ಗುರುಲಿಂಗಸ್ವಾಮಿ ಹೊಳಿಮಠ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ, ಕನ್ನಡದ ರಾಜ್ಯ ಮಟ್ಟದ ದಿನಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿಯೂ 1998 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಾಗಿದ್ದಾರೆ. ಇದಕ್ಕೂ ಮುಂಚೆ ಗುರುಲಿಂಗಸ್ವಾಮಿ […]
ಕೊರೊನಾ ಸಂದರ್ಭದಲ್ಲಿ ಮಾನವೀಯತೆ ಮೆರೆದ ಆಸ್ಪತ್ರೆ ಕಾರ್ಯಕ್ಕೆ ಮೆಚ್ಚುಗೆ- ಅಂಗವಿಲಕರ ಸಂಸ್ಥೆಯಿಂದ ವೈದ್ಯಕೀಯ ಸಲಕರಣೆಗಳ ಕೊಡುಗೆ
ವಿಜಯಪುರ: ಇದು ಕೊರೊನಾ ಸಂದರ್ಭದಲ್ಲಿ ಫಲಾಪೇಕ್ಷೆಯಿಲ್ಲದೇ ಜನಸೇವೆಗೆ ಪ್ರಾಧಾನ್ಯತೆ ನೀಡಿ ಸರಕಾರ ನಿಗದಿ ಪಡಿಸಿದ್ದಕ್ಕಿಂತ ಕಡಿಮೆ ಬೆಲೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಕಾರ್ಯಕ್ಕೆ ಅಂಗವಿಕಲರ ಸಂಸ್ಥೆಯೊಂದು ನೀಡಿದ ಸ್ಪೂರ್ತಿಯ ಕೊಡುಗೆ. ಫಲಾವೇಕ್ಷೆಯಿಲ್ಲದ ಕೆಲಸವನ್ನು ದೇವರು ಕೂಡ ಮೆಚ್ಚುತ್ತಾನೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೊರೊನಾ ಸಂದರ್ಭದಲ್ಲಿ ವಿಜಯಪುರದ ಪ್ರತಿಷ್ಛಿತ ಬಿ ಎಲ್ ಡಿ ಇ ಆಸ್ಪತ್ರೆ ಸರಕಾರ ನಿಗದಿ ಪಡಿಸಿದ್ದಕ್ಕಿಂತ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ನೀಡುವ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದಷ್ಟೇ ಅಲ್ಲ, ದೇಶಾದ್ಯಂತ ಇತರ ಖಾಸಗಿ ಆಸ್ಪತ್ರೆಗಳಿಗೆ […]