ಕೇಂದ್ರ ಮೇಕೆದಾಟು ಯೋಜನೆಗೆ ಶೀಘ್ರದಲ್ಲಿ ಅನುಮೋದನೆ ನೀಡಲಿದೆ- ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ
ಮೈಸೂರು: ಮೇಕೆದಾಟು ಯೋಜನೆಯ ಡಿ ಪಿ ಆರ್ ಗೆ ಕೇಂದ್ರ ಸರಕಾರ ಶೀಘ್ರದಲ್ಲಿ ಅನುಮೋದನೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರು ಪ್ರವಾಸದಲ್ಲಿರುವ ಅವರು, ನಾಡದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಪ್ರತಿಕ್ರಿಯೆ ಮಾತನಾಡಿದರು. ಮೇಕೆದಾಟು ಯೋಜನೆಯ ಡಿ ಪಿ ಆರ್ ಅನ್ನು ಕೇಂದ್ರ ಜಲ ಆಯೋಗಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಕಳೆದ ಬಾರಿ ದೆಹಲಿಗೆ ತೆರಳಿದ್ದಾಗ ಈ ಯೋಜನೆಗೆ ಒಪ್ಪಿಗೆ ನೀಡುವ ಭರವಸೆ ದೊರೆತಿದೆ. ಇದಕ್ಕೆ ಕೆಲವು […]
ಖಾತೆಯ ಬಗ್ಗೆ ಕ್ಯಾತೆ ತೆಗೆಯದೆ ಜನಸೇವೆಗೆ ಮಹತ್ವ ನೀಡುವುದು ಒಳ್ಳೆಯದು- ಸಚಿವೆ ಶಶಿಕಲಾ ಜೊಲ್ಲೆ
ವಿಜಯಪುರ: ಖಾತೆ ಕುರಿತು ಅಸಮಾಧಾನ ವ್ಯಕ್ತ ಪಡಿಸುವುದು ಅವರವರಿಗೆ ಬಿಟ್ಟ ವಿಚಾರ. ಕೆಲಸ ಮಾಡುವವರಿಗೆ ಯಾವ ಖಾತೆ ಯಾದರೇನು? ಎಂದು ಮುಜರಾಯಿ, ಹಜ್ ಮತ್ತು ವಕ್ಪ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ವಿಜಯಪುರದಲ್ಲಿ ಗ್ರಾಮದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ಕೆಲಸ ಮಾಡುವ ಮತ್ತು ಜನರಿಗೆ ಸ್ಪಂದನೆ ಮಾಡುವ ಇಚ್ಛೆ ಇದ್ದರೆ ಯಾವ ಖಾತೆಯಾದರೇನು? ಕೆಲಸ ಮಾಡಬಹುದು ಎಂದು ಖಾತೆ ವಿಚಾರವಾಗಿ ಅಸಮಾಧಾನಗೊಂಡಿರುವ ಸಚಿವರಿಗೆ ಸಚಿವೆ ಶಶಿಕಲಾ […]
ವಿಧಾನಸೌಧದ ಮುಂಭಾಗದಲ್ಲಿ ಜವಾಹರಲಾಲ ನೆಹರೂ ಪ್ರತಿಮೆ ಮರುಸ್ಥಾಪನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ- ನೆಹರೂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ
ಬೆಂಗಳೂರು: ಸ್ವತಂತ್ರ ಭಾರತ ದೇಶದ ಮೊದಲ ಪ್ರಧಾನಮಂತ್ರಿಯಾಗಿ ಜವಾಹರಲಾಲ್ ನೆಹರೂ ಅವರು ಭಾರತ ನಿರ್ಮಾಣದ ಕಲ್ಪನೆಯನ್ನು ಸಕಾರಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಮರುಸ್ಥಾಪನೆಯಾದ ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರೂ ಅವರ ಪ್ರತಿಮೆಯನ್ನು ಅನಾವರಣ ಮಾಡಿದ ಅವರು, ಪುಷ್ಪನಮನ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ರಾಷ್ಟ್ರದ ಆಡಳಿತದ ಚುಕ್ಕಾಣಿಯನ್ನು ಬ್ರಿಟಿಷರಿಂದ ಭಾರತಕ್ಕೆ ತೆಗೆದುಕೊಂಡು ಮುಂದಿನ ಆಡಳಿತವನ್ನು ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ ನೆಹರು […]
ಎಸ್ ಎಂ ಎನ್ ಸೌಹಾರ್ದ ಅವ್ಯವಹಾರ ಪ್ರಕರಣ- ಅಧ್ಯಕ್ಷ ಸೇರಿ ಐದು ಜನರನ್ನು ಬಂಧಿಸಿದ ಸಿಐಡಿ- ಹಣ ಸಿಗುವ ಭರವಸೆಯಲ್ಲಿ ಠೇವಣಿದಾರರು
ವಿಜಯಪುರ: ಎಸ್ ಎಂ ಎನ್ ಕ್ರೆಡಿಟ್ ಸೌಹಾರ್ಧ ಸಹಕಾರಿ ನಿಯಮಿತ ಅವ್ಯವಹಾರ ಪ್ರಕರಣಕ್ಕೆ ಸಂಬಂಧಸಿದಂತೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಐದು ಜನರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮೂಲದ ಈ ಸೌಹಾರ್ಧ ವಿಜಯಪುರ ಜಿಲ್ಲೆಯಲ್ಲಿ 16, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 21 ಶಾಖೆಗಳನ್ನು ಹೊಂದಿದೆ. ಆದರೆ, ಈ ಸೌಹಾರ್ಧ ಅವಧಿ ಮುಗಿದರೂ ಠೇವಣಿದಾರರಿಗೆ ಹಣ ನೀಡದೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ […]
ಜನಸೇವೆಗಾಗಿ ಯಾವ ಖಾತೆಯನ್ನೂ ನಿಭಾಯಿಸುವೆ- ಹೊಸ ಖಾತೆ ಬಗ್ಗೆ ಬೇಸರವಿಲ್ಲ- ಸಚಿವೆ ಶಶಿಕಲಾ ಜೊಲ್ಲೆ
ವಿಜಯಪುರ: ಕೆಲಸ ಮಾಡುವವರಿಗೆ ಜನತೆಗೆ ನ್ಯಾಯ ಒದಗಿಸಲು ಖಾತೆ ಯಾವುದಾದರೇನು? ಎಂದು ಪ್ರಶ್ನಿಸುವ ಮೂಲಕ ಮೂಲಕ ಮುಜರಾಯಿ, ಹಜ್ ಮತ್ತು ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತಮಗೆ ನೀಡಿರುವ ಖಾತೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಭೇಟಿಯ ನಂತರ ಮಾತನಾಡಿದ ಅವರು, ಯಾವ ಖಾತೆ ಇದ್ದರೂ ಆ ಖಾತೆ ಯೋಜನೆಗಳನ್ನು ತಳಮಟ್ಟದ ಜನತೆಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎರಡು ವರ್ಷಗಳಿಂದ ಮಹಿಳಾ ಮತ್ತು […]
ಹೊಸ ಬದಲಾವಣೆ ತರಲು ಹೊಸ ಸಚಿವರಿಗೆ ದೊಡ್ಡ ಖಾತೆ ನೀಡಲಾಗಿದೆ- ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಹೊಸಬರಿಗೆ ದೊಡ್ಡ ಖಾತೆಗಳನ್ನು ನೀಡುವ ಮೂಲಕ ಹೊಸ ಬದಲಾವಣೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವರಿಗೆ ಈಗ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇನ್ನು ಮುಂದೆ ಆಯಾ ಸಚಿವರು ತಮ್ಮ ಖಾತೆಯನ್ನು ನಿಭಾಯಿಸಿ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು ಖಾತೆ ಹಂಚಿಕೆ ಬಗ್ಗೆ ಸಚಿವ ಆನಂದಸಿಂಗ್ ಅಸಮಾಧಾನ ವಿಚಾರ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆನಂದಸಿಂಗ್ ಅವರನ್ನು […]
ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ- ಕಾರಜೋಳಗೆ ನೀರಾವರಿ, ನಿರಾಣಿಗೆ ಕೈಗಾರಿಕೆ- ಉಳಿದವರಿಗೆ ಯಾವ ಖಾತೆ ಇಲ್ಲಿದೆ ಮಾಹಿತಿ
ಬೆಂಗಳೂರು: ಇಂತೂ ಇಂತು ಅಳೆದು ತೂಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಯಾರಿಗೆ ಯಾವ ಖಾತೆ ಇಲ್ಲಿದೆ ಮಾಹಿತಿ ನೂತನ ಸಚಿವರ ಪಟ್ಟಿ 1. ಬಸವರಾಜ ಬೊಮ್ಮಾಯಿ- ಡಿಪಿಎಆರ್, ಹಣಕಾಸು, ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ನಗರಾಭಿವೃದ್ಧಿ, ಹಂಚಿಕೆಯಾಗದ ಇತರ ಖಾತೆಗಳು 2. ಗೋವಿಂದ ಕಾರಜೋಳ- ಭಾರಿ ಮತ್ತು ಮಧ್ಯ ನೀರಾವರಿ 3. ಕೆ. ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ 4. ಆರ್. ಅಶೋಕ- ಕಂದಾಯ(ಮುಜರಾಯಿ […]
ತುಮಕೂರಿಗೆ ತೆರಳಿ ಶ್ರೀ ಸಿದ್ಧಗಂಗಾ ಸ್ವಾಮೀಜಿಗಳ ದರ್ಶನ ಪಡೆದ ಸಿಎಂ ಬಸವರಾಜ ಬೊಮ್ಮಾಯಿ
ತುಮಕೂರು: ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ತುಮಕೂರಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಮಠದ ಆವರಣದಲ್ಲಿರುವ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ ಅವರು, ಶ್ರೀ ಸಿದ್ದಲಿಂಗ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮಂತ್ರ ಘೋಷದೊಂದಿಗೆ ಶ್ರೀಗಳು ಮುಖ್ಯಮಂತ್ರಿಗಳಿಗೆ ಶುಭಾಶೀರ್ವಾದ ಮಾಡಿದರು. ಅಲ್ಲದೇ, ಈ ಸಂದರ್ಭದಲ್ಲಿ ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು […]
ಬೆಂಗಳೂರಿನಲ್ಲಿ ಹರಿಹರ ಪಂಚಮಸಾಲಿ ಪೀಠದ ಸ್ವಾಮೀಜಿ ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಬೆಂಗಳೂರಿನಲ್ಲಿ ಹೆಬ್ಬಾಳದಲ್ಲಿ ಶ್ರೀಗಳನ್ನು ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ, ಸ್ವಾಮೀಜಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀಗಳು ಸಿಎಂ ಅವರನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ ನಿರಾಣಿ, ಡಾ. ಕೆ ಸುಧಾಕರ, ಶಾಸಕ ರೇಣುಕಾಚಾರ್ಯ ಅವರನ್ನೂ ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವದಿಸಿದರು.
ಬಸವ ನಾಡಿನಲ್ಲಿ ಗಮನ ಸೆಳೆಯುತ್ತಿದೆ ಅಣ್ಣ-ತಂಗಿಯರ ಸಂಬಂಧವನ್ನು ಪರಿಸರದೊಂದಿಗೆ ಬೆಸೆಯುವ ವಿಕಲ ಚೇತನರ ಸಂಸ್ಥೆಯ ವಿನೂತನ ಪ್ರಯತ್ನ
ವಿಜಯಪುರ: ರಕ್ಷಾ ಬಂಧನ ಅಣ್ಣ-ತಂಗಿಯರ ಬಾಂಧವ್ಯವನ್ನು ಬೆಸೆಯುವ ಮಧುರ ಹಬ್ಬ. ಈ ರಕ್ಷಾ ಬಂಧನವನ್ನು ಪರಿಸರದೊಂದಿಗೆ ಬೆಸಯುವ ವಿನೂತನ ಪ್ರಯತ್ನಕ್ಕೆ ಬಸವ ನಾಡಿನ ವಿಕಲ ಚೇತನ ಕಲ್ಯಾಣ ಸಂಸ್ಥೆ ಮುಂದಾಗಿದೆ. ಇಲ್ಲಿ ಸ್ವ ಕಾರ್ಯದ ಜೊತೆಗೆ ಸ್ವಾಮಿ ಕಾರ್ಯ ಮಾತ್ರವಲ್ಲ ಪರಿಸರ ಕಾರ್ಯಕ್ಕೂ ಸಂಬಂಧ ಬೆಸೆಯುವ ಮೂಲಕ ಇವರು ನಡೆಸುತ್ತಿರುವ ಈ ಕಾಯಕ ಗಮನ ಸೆಳೆದಿದೆ. ರಕ್ಷಾ ಬಂಧನವೆಂದರೆ ಸಾಕು ತರಹೇವಾರಿ ರಾಖಿಗಳು ಎಲ್ಲೆಗೆ ರಾರಾಜಿಸುತ್ತಿರುವತ್ತವೆ. ಆದರೆ, ರಕ್ಷಾ ಬಂದನ ಹಬ್ಬ ಮುಗಿದ ಬಳಿಕ ಕೈಗೆ ಸಹೋದರಿಯರು […]